HOME
CINEMA NEWS
GALLERY
TV NEWS
REVIEWS
CONTACT US
ಮನಸ್ತಾಪಗಳು ಬಂದರೆ ಸಂಬಂದಗಳು ಗಟ್ಟಿಯಾಗೋದು - ಶಿವರಾಜ್‍ಕುಮಾರ್
ವಿನಯ್‍ರಾಜ್‍ಕುಮಾರ್ ಮೂರನೇ ಚಿತ್ರ ‘ಗ್ರಾಮಾಯಣ’ ದಲ್ಲಿ ಹಲವು ವಿಶೇಷತೆಗಳು ತುಂಬಿಕೊಂಡಿದೆ. ಪದ್ಮಭೂಷಣ ಡಾ.ರಾಜ್‍ಕುಮಾರ್ ಹುಟ್ಟಿ, ನಲಿದಾಡಿದ ಗಾಜನೂರು ಗ್ರಾಮದಲ್ಲಿ ಚಿತ್ರೀಕರಣ ನಡೆಯಲಿದೆ. ಹಳ್ಳಿಯ ಸೊಗಡು, ಅಲ್ಲಿನ ನೆಲದ ಬೇರಿನ ಗಟ್ಟಿತನವನ್ನು ತೋರಿಸುವ ಪ್ರಯತ್ನ ಮಾಡಲಾಗುತ್ತಿದೆ. ಹಳ್ಳಿಯಿಂದ ಪಟ್ಟಣಕ್ಕೆ ಬಂದವರು, ಈ ಸಿನಿಮಾ ನೋಡಿ ಹಳ್ಳಿಗೆ ಹೋಗುವಂತೆ ಮಾಡುತ್ತದಂತೆ. ಚಿತ್ರದ ಟೀಸರ್ ಇತ್ತೀಚೆಗೆ ಕಲಾವಿದರ ಸಂಘದಲ್ಲಿ ಅನಾವರಣಗೊಂಡಿತು.
ಶೀರ್ಷಿಕೆಯಲ್ಲೆ ಸೊಗಡು, ವೈಬ್‍ರೇಶನ್ ತುಂಬಿಕೊಂಡಿದ್ದು, ಹಳ್ಳಿನ ನೆನಪುಗಳು ಕಣ್ಣ ಮುಂದೆ ಬರುತ್ತದೆ. ಡಾ.ರಾಜ್ ಆದರ್ಶ ಗುಣಗಳು ಮೂರು ಮಕ್ಕಳಲ್ಲಿ ತುಂಬಿಕೊಂಡಿದೆ. ರಾಮಾಯಣದಂತೆ ರಸಪೂರ ಗ್ರಾಮಯಾಣ ಇದೆ ಅಂತ ವಾಣಿಜ್ಯ ಮಂಡಳಿ ಅಧ್ಯಕ್ಷ ಎಸ್.ಎ.ಚಿನ್ನೆಗೌಡ ಬಣ್ಣಸಿದರು. ಟೀಸರ್‍ನ್ನು ತಾತನ ಮನೆಯಲ್ಲಿ ಚಿತ್ರೀಕರಣ ನಡೆಸಿದ್ದು ಖುಷಿ ನೀಡಿತು. 6ನೇ ಸೆನ್ಸ್ ಸೀನನಾಗಿ ಕಾಣಿಸಿಕೊಳ್ಳಲಿದ್ದೇನೆ. ಕತೆ ಕೇಳಿ ಎರಡು ದಿನ ಕಾಡಿತು ಎನ್ನುತ್ತಾರೆ ವಿನಯ್‍ರಾಜ್‍ಕುಮಾರ್. ನಾವಿಬ್ಬರೂ ಒಂದೇ ಕಾಲೇಜ್‍ದಲ್ಲಿ ಓದಿದ್ದು, ಇಂದು ಅವರಿಗೆ ನಾಯಕಿಯಾಗಿ ನಟಿಸುತ್ತಿದ್ದೇನೆ ಎಂದಷ್ಟೇ ಹೇಳಿದ್ದು ಅಮೃತಐಯ್ಯರ್.

ಪೂರ್ವಿಕರು ನಡೆದಾಡಿದ ಜಾಗವೆಂದು ಅಪ್ಪಾಜಿ ಗಾಜನೂರಿಗೆ ಬಂದಾಗ ಚಪ್ಪಲಿ ಹಾಕದೆ ನಡೆದಾಡುತ್ತಿದ್ದರು. ಸಿನಿಮಾ ನೋಡಿದರೆ ಮತ್ತೆ ಹಳ್ಳಿಗೆ ಹೋಗುವಂತೆ ಭಾಸವಾಗುತ್ತದೆ ಎಂಬುದು ರಾಘವೇಂದ್ರರಾಜ್‍ಕುಮಾರ್ ನುಡಿ. ನಾವುಗಳು ಬೇರೆ ಮನೆಯಲ್ಲಿ ಇದ್ದರೂ ಮನಸ್ಸು ಮಾತ್ರ ಒಂದೇಯಾಗಿದೆ. ನಾವು ಯಾವತ್ತು ಕಿತ್ತಾಡಿಲ್ಲ. ಮನಸ್ತಾಪ ಇದ್ದರೂ ತೋರಿಸಿಕೊಟ್ಟಿಲ್ಲ. ಅದು ಇದ್ದರೆ ಸಂಬಂದಗಳು ಗಟ್ಟಿಯಾಗುತ್ತವೆ. ವಿನಯ್‍ಗೆ ಇದರಿಂದ ಗೆಲುವು ಕಾಣುತ್ತೆ. ಹಳ್ಳಿಯನ್ನು ಮರೀಬೇಡಿ. ನಿಮ್ಮ ಕುಟುಂಬಕ್ಕೆ ನೀವಾಗಿ ಇರಿ ಅಂತ ಬಾಲ್ಯದ ನೆನಪುಗಳನ್ನು ಬಿಚ್ಟಿಟ್ಟರು ಶಿವರಾಜ್‍ಕುಮಾರ್.

ತುಣುಕುಗಳನ್ನು ಹಳ್ಳಿಯ ನೆನಪುಗಳು ಕಣ್ಣ ಮುಂದೆ ಬರುತ್ತದೆ. ಇಲ್ಲಿ ತೋರಿಸಿದಂತೆ ಸಿನಿಮಾವನ್ನು ಚೆನ್ನಾಗಿ ತೋರಿಸಿ ಎಂದು ನಿರ್ದೇಶಕರಿಗೆ ಕಿವಿಮಾತನ್ನು ಪುನೀತ್‍ರಾಜ್‍ಕುಮಾರ್ ಹೇಳಿದರು. ಕೊನೆಯಲ್ಲಿ ಮೈಕ್ ತೆಗೆದುಕೊಂಡ ನಿರ್ದೇಶಕ ದೇವನೂರುಚಂದ್ರು ಮಾತನಾಡಿ ರಾಘಣ್ಣರಿಗೆ ನಾಲ್ಕು ಬಾರಿ ಕತೆ ಹೇಳಲಾಯಿತು. ಶ್ರದ್ದೆ, ಭಕ್ತಿಯಿಂದ ಚಿತ್ರ ಮಾಡುತ್ತೇನೆಂಬ ಭರವಸೆ ಕೊಡುತ್ತೇನೆ. ಸದ್ಯಕ್ಕೆ ಇಷ್ಟು ಸಾಕು ಅಂತಾರೆ. ಸ್ವಾಮಿಯಾಗಿ ಕಾಣಿಸಿಕೊಳ್ಳುತ್ತಿರುವ ಸಂಪತ್, ಸೀತಾಕೋಟೆ ಪಾತ್ರದ ಪರಿಚಯ ಮಾಡಿಕೊಂಡರು. ನಾಯಕನ ತಾಯಿ ತಿಮ್ಮಕ್ಕನಾಗಿ ನಟಿಸುತ್ತಿರುವ ಅರ್ಪಣ ಚಂದವಾಗಿ ನಿರೂಪಣೆ ಮಾಡಿದರು. ನಿರ್ಮಾಪಕ ಎಲ್.ಎಲ್.ಎನ್.ಮೂರ್ತಿ ಅಣ್ಣಾವ್ರರ ಅಭಿಮಾನಿಯಾಗಿದ್ದು, ಅವರ ಮೊಮ್ಮಗನ ಸಿನಿಮಾ ಮಾಡುತ್ತಿರುವುದು ನೆಮ್ಮದಿ ತಂದಿದೆಯಂತೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
7/09/18For advertisements contact editor
K N Nagesh Kumar, Photo Journalist
Website Desined by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore