HOME
CINEMA NEWS
GALLERY
TV NEWS
REVIEWS
CONTACT US
ಹಾಸ್ಯಚಿತ್ರಗೋವಿಂದಗೋವಿಂದ
ಹಾಸ್ಯಚಿತ್ರ ‘ಗೋವಿಂದಗೋವಿಂದ’ ಶೇಕಡ 75 ರಷ್ಟುಚಿತ್ರೀಕರಣವನ್ನು ಬಿಜಾಪುರ, ಚಿಂತಾಮಣಿ, ಏಕಶಿಲಾಬೆಟ್ಟ, ಚಿಂತಾಮಣಿ ಮತ್ತು ಬೆಂಗಳೂರಿನಲ್ಲಿ ನಡೆಸಿ, ಬಾಕಿ ಮಾತಿನ ಭಾಗ, ಎರಡು ಹಾಡುಗಳನ್ನು ಸದ್ಯದಲ್ಲೆ ಮುಗಿಸಲು ಯೋಜನೆ ಹಾಕಿಕೊಂಡಿದ್ದಾರೆ. ಕಥೆಯೊಳಗೊಂದು ಕಥೆಇರಲಿದ್ದು, ನಿರ್ದೇಶಕನಾಗುವ ಹಂಬಲದೊಂದಿಗೆ ನಿರ್ಮಾಪಕನಿಗೆಕಥೆ ಹೇಳುತ್ತಾ ತಾನು ಮಾಡಿದಕಿರುಚಿತ್ರ ತೋರಿಸಿ ಇಂಪ್ರೆಸ್ ಮಾಡುವುದರಿಂದಸನ್ನಿವೇಶಗಳು ತೆರೆದುಕೊಳ್ಳುತ್ತದೆ. ಗೋಲುಗಳೇ ಇಲ್ಲದ ಹುಡುಗರು ನಾಯಕಿಯನ್ನುಡ್ಯಾನ್ಸರ್ ಮಾಡುವ ಕನಸಿನೊಂದಿಗೆ ಅಪಹರಿಸಿ, ಆಕೆಯತಂದೆಯೊಂದಿಗೆ ಹಣ ವಸೂಲು ಮಾಡಿ ಸಿಟಿಗೆ ಕಳುಹಿಸಿ ಸಹಾಯ ಮಾಡುವಯೋಜನೆ ಹಾಕಿಕೊಳ್ಳುತ್ತಾರೆ.ಆದರೆ ನಿಜವಾಗಿಯೂಅಪಹರಣವಾಗಿಬಂದಿತಳಾಗುತ್ತಾಳೆ. ಅವಳನ್ನು ಬಿಡುಗಡೆ ಮಾಡಿಸುವ ಸಲುವಾಗಿ ಹಣ ಹೊಂದಿಸಲು ಪರದಾಟುವ ಸಂಕಟಗಳು ಒಂದೊಂದೇ ಪಾತ್ರಗಳ ಮೂಲಕ ಸಂದಿಸುತ್ತಾ ಸಾಗುತ್ತದೆ.ಎಲ್ಲಾ ಪಾತ್ರಧಾರಿಗಳು ಗೋವಿಂದನ ನಾನಾ ಹೆಸರಿನಲ್ಲಿಇರುವುದರಕಾರಣಇದೇ ಶೀರ್ಷಿಕೆಯನ್ನು ಇಡಲಾಗಿದೆಯಂತೆ. ಕಿರುತೆರೆಗೆ ಸಾಕಷ್ಟು ಯಶಸ್ವಿ ಧಾರವಾಹಿಗಳಿಗೆ ಆಕ್ಷನ್‍ಕಟ್ ಹೇಳಿರುವ ತಿಲಕ್ ಹೊಸ ಅನುಭವಎನ್ನುವಂತೆ ಹಿರಿತೆರೆಗೆ ನಿರ್ದೇಶಕನಾಗಿ ಗುರುತಿಸಿಕೊಂಡಿದ್ದಾರೆ. ನಾಲ್ಕು ಹಾಡುಗಳಿಗೆ ಹಿತನ್‍ಹಾಸನ್ ಸಂಗೀತವಿದೆ.

ಪಿಯುಸಿ ವಿದ್ಯಾರ್ಥಿಯಾಗಿ ಸುಮಂತ್‍ಶೈಲೇಂದ್ರ ನಾಯಕನಾಗಿ ಏಳನೇ ಚಿತ್ರ.ಕಡಿಮೆ ಮಾತುಗಳಲ್ಲೇ ಭಾವನೆಗಳನ್ನು ವ್ಯಕ್ತಪಡಿಸುವಕವಿತಾಗೌಡ ನಾಯಕಿ.ಉಡಾಳ ಗೆಳೆಯರುಗಳಾಗಿ ವಿಜಯ್‍ಚಂಡೂರ್, ಪವನ್‍ಕುಮಾರ್, ಮತ್ತೋಂದು ಮುಖ್ಯ ಪಾತ್ರದಲ್ಲಿ ಭಾವನಾಮೆನನ್ ನಟಿಸಿದ್ದಾರೆ.ತಾರಗಣದಲ್ಲಿರೂಪೇಶ್‍ಶೆಟ್ಟಿ, ಅಚ್ಯುತ್‍ಕುಮಾರ್, ಶೋಭರಾಜ್, ಪದ್ಮವಾಸಂತಿ, ಗೋವಿಂದೇಗೌಡ, ಶ್ರೀನಿವಾಸಪ್ರಭು, ಸುನೇತ್ರಪಂಡಿತ್ ಬಣ್ಣ ಹಚ್ಚಿದ್ದಾರೆ. ಛಾಯಾಗ್ರಹಣಕೆ.ಎಸ್.ಚಂದ್ರಶೇಖರ್, ಸಂಕಲನ ಸಿ.ರವಿಚಂದ್ರನ್, ಸಾಹಸ ಥ್ರಿಲ್ಲರ್‍ಮಂಜುಅವರದಾಗಿದೆ. ಎಸ್.ಶೈಲೇಂದ್ರಬಾಬು, ರವಿ.ಆರ್.ಗರಣಿ ಮತ್ತು ಕಿಶೋರ್.ಎಂ.ಕೆ.ಮಧುಗಿರಿಜಂಟಿಯಾಗಿ ನಿರ್ಮಾಣ ಮಾಡಿದ್ದಾರೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
8/01/20




For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore