HOME
CINEMA NEWS
GALLERY
TV NEWS
REVIEWS
CONTACT US
ಕಾಲೇಜು ಹುಡುಗರ ಗೂಸಿ ಗ್ಯಾಂಗ್
ಕಾಮಿಡಿ, ಆಕ್ಷನ್ ಕುರಿತ ‘ಗೂಸಿ ಗ್ಯಾಂಗ್’ ಸಿನಿಮಾವು ಸದ್ಯ ಚಿತ್ರೀಕರಣೋತ್ರರ ಕೆಲಸದಲ್ಲಿ ಬ್ಯುಸಿ ಇದೆ. ಶೀರ್ಷಿಕೆ ಹೇಳುವಂತೆ ಹಳ್ಳಿಯಿಂದ ಪಟ್ಟಣಕ್ಕೆ ಮೂವರು ಮುಗ್ದ ಹುಡುಗರು ವ್ಯಾಸಾಂಗ ಮಾಡಲು ಬರುತ್ತಾರೆ. ಅದೇ ಕಾಲೇಜಿನಲ್ಲಿರುವ ಪುಂಡರು ಇವರನ್ನು ಕೆಟ್ಟ ದಾರಿಗೆ ಬಳಸಿಕೊಂಡಾಗ ಏನೇನು ಅವಾಂತರಗಳು ನಡೆಯುತ್ತವೆ. ಗೊತ್ತಿಲ್ಲದೆ ಮಾಫಿಯಾ ಲೋಕಕ್ಕೆ ಪ್ರವೇಶ ಮಾಡಿ ಹೇಗೆ ಹೊರಗೆ ಬರುತ್ತಾರೆ ಎಂಬುದು ಒಂದು ಏಳೆಯ ಸಾರಾಂಶವಾಗಿದೆ. ಅಲ್ಲದೆ ಆರ್ಥಪೂರ್ಣ ಸಂದೇಶವನ್ನು ಹೇಳಲಾಗಿದೆ. ಮೈಸೂರು, ಬೆಂಗಳೂರು, ಮಂಡ್ಯಾ, ಟಿ.ನರಸಿಪುರ ತಟಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಕೆ.ಕಲ್ಯಾಣ್ 3 ಮತ್ತು ರಾಜುದೇವಸಂದ್ರ ಸಾಹಿತ್ಯದ ಒಟ್ಟು ನಾಲ್ಕು ಹಾಡುಗಳಿಗೆ ಇಳಯರಾಜ ಬಳಿ ಕೆಲಸ ಮಾಡಿರುವ ಹಾಗೂ ಹಂಸಲೇಖಾ ಶಿಷ್ಯ ಆರವ್‍ಕೌಶಿಕ್ ಸಂಗೀತ ಸಂಯೋಜಿಸಿದ್ದಾರೆ. ವಿಜಯಪ್ರಕಾಶ್, ಅವಿನಾಶ್‍ಚಬ್ಬಿ, ಅನುರಾಧಭಟ್ ಗೀತೆಗಳಿಗೆ ಧ್ವನಿಯಾಗಿದ್ದಾರೆ.

ಭಿಕ್ಷೆ ಬೇಡೋದು ತಪ್ಪು ಎಂಬ ಕೆಲವು ನಿಮಿಷದ ಚಿತ್ರ ಮಾಡಿರುವ ಎರಡನೆ ಪಿಯುಸಿ ಓದುತ್ತಿರುವ ಅಜಯ್‍ಕಾರ್ತಿಕ್ ಮತ್ತು ಜಗ್ಗೇಶ್ ಎರಡನೆ ಮಗ ಯತಿರಾಜ್‍ಜಗ್ಗೇಶ್ ಮುಖ್ಯ ಪಾತ್ರದಲ್ಲಿ ಕಾಣ ಸಿಕೊಂಡಿದ್ದಾರೆ. ಗೆಳಯನಾಗಿ ರೋಹಿತ್ ಉಳಿದಂತೆ ತಂದೆ ಪಾತ್ರದಲ್ಲಿ ಬ್ಯಾಂಕ್‍ಜನಾರ್ಧನ್, ಖಳನಾಗಿ ಅಪ್ಪುವೆಂಕಟೇಶ್, ಕಿಲ್ಲರ್‍ವೆಂಕಟೇಶ್, ಬಿರಾದಾರ್, ಮೈಕೆಲ್‍ಮಧು, ಸುಚಿತ್ರಾ, ಕಾವ್ಯಪ್ರಕಾಶ್, ಅನ್ನಪೂರ್ಣ, ಗಿರೀಶ್ ಮುಂತಾದವರ ನಟನೆ ಇದೆ. ಮೋನಿಕಾ, ಅನುಷಾ, ಸೋನುಪಾಟೀಲ್ ನಾಯಕಿಯರು. ಅಕ್ಷತೆ ನಿರ್ದೇಶಿಸಿರುವ ರಾಜುದೇವಸಂದ್ರ ಸಂಭಾಷಣೆ ಜೊತೆಗೆ ಆಕ್ಷನ್ ಕಟ್ ಹೇಳಿದ್ದಾರೆ. ಛಾಯಗ್ರಹಣ ಹಾಲೇಶ್, ಸಂಕಲನ ಕುಮಾರ್ ಅವರದಾಗಿದೆ. ಹರೆರಾಮ ಹರೇ ಕೃಷ್ಣ ನಿರ್ಮಾಣ ಮಾಡಿದ್ದ ಮೈಸೂರಿನ ಕಂಟ್ರಾಕ್ಟರ್ ಶಿವಕುಮಾರ್.ಕೆ. ಮಗ ಅಜಯ್‍ಕಾರ್ತಿಕ್ ಸಿನಿಮಾಸೆಳೆತವನ್ನು ಗಮನಿಸಿ ಅವನ ಆಸೆಯಂತೆ ಕತೆ ಬರೆದು ಶ್ರೀ ಲಕ್ಷೀ ವೆಂಕಟೇಶ್ವರ ಸಿನಿಮಾಸ್ ಹುಟ್ಟು ಹಾಕಿ ಚಿತ್ರಕ್ಕೆ ಹಣ ಹೂಡಿದ್ದಾರೆ. ಹುಡುಗರ ತುಂಟಾಟವನ್ನು ಮುಂದಿನ ತಿಂಗಳು ನೋಡಬಹುದು.
ಸಿನಿ ಸರ್ಕಲ್.ಇನ್ ನ್ಯೂಸ್
8/03/18
For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore