HOME
CINEMA NEWS
GALLERY
TV NEWS
REVIEWS
CONTACT US
ವಿನೂತನ ಮಕ್ಕಳ ಚಿತ್ರ ಗಿರ್ಮಿಟ್
ಒಟ್ಟು 280 ಮಕ್ಕಳು ಅಭಿನಯಿಸಿರುವ ‘ಗಿರ್ಮಿಟ್’ ಚಿತ್ರದ ಟೀಸರ್‍ನ್ನು ಪುನೀತ್‍ರಾಜ್‍ಕುಮಾರ್ ಬಿಡುಗಡೆ ಮಾಡಿದರು. ಅವರು ಮಾತನಾಡುತ್ತಾ ಪುಣಾಣಿಗಳು ನಾಯಕ, ನಾಯಕಿಯಾಗಿ ನಟಿಸಿರುವುದು ಖುಷಿ ನೀಡಿದೆ. ಇಂತಹ ಪ್ರಯತ್ನವನ್ನು ನಿರ್ದೇಶಕರು ವಹಿಸಿಕೊಂಡಿರುವುದಕ್ಕೆ, ಹಣ ಹೂಡಿರುವ ನಿರ್ಮಾಪಕರ ಧೈರ್ಯವನ್ನು ಮೆಚ್ಚಲೇಬೇಕು. ಸಾಮಾನ್ಯವಾಗಿ ಕಾರ್ಟೂನ್, ಸಾಕ್ಷಚಿತ್ರಗಳಿಗೆ ಪ್ರಸಿದ್ದ ಕಲಾವಿದರು ಹಿನ್ನಲೆಧ್ವನಿ ನೀಡುತ್ತಾರೆ. ಹೊಸ ಪ್ರಯೋಗ ಎನ್ನುವಂತೆ ಈ ರೀತಿ ಮಾಡಿರುವುದು ಇತರರಿಗೆ ನಾಂದಿಯಾಗಿದೆ. ಯಶ್-ರಾಧಿಕಾಪಂಡಿತ್‍ಗೆ ಥ್ಯಾಂಕ್ಸ್ ಹೇಳಬೇಕು. ನೋಡುಗರಿಗೆ ಮನರಂಜನೆ ನೀಡಲಿ, ಇದರಿಂದ ಮಕ್ಕಳಿಗೆ ಅಭಿಮಾನಿಗಳು ಹುಟ್ಟಿಕೊಳ್ಳಲಿ. ಒಳ್ಳೆ ಕಾರಣಕ್ಕೆ ನಾವುಗಳು ಸಹಕಾರ ನೀಡಬೇಕೆಂದು ತಂಡಕ್ಕೆ ಶುಭ ಹಾರೈಸಿದರು.

ನಿರ್ದೇಶನ,ಸಂಗೀತ, ಸಂಕಲನ ಮತ್ತು ಹಾಡಿಗೆ ಸಾಹಿತ್ಯ ಒದಗಿಸಿರುವ ಕೆಜಿಎಫ್ ಖ್ಯಾತಿಯ ರವಿಬಸ್ರೂರು ಹೇಳುವಂತೆ ಮಾದ್ಯಮದವರು, ಕಾಮಿಡಿ ಕಿಲಾಡಿಗಳು, ಜಾಹಿರಾತು ಇವೆಲ್ಲವು ಕತೆ ಬರೆಯಲು ಸ್ಪೂರ್ತಿಯಾಗಿತ್ತು. ಆಂಗ್ಲ ಚಾಲನ್‍ಗಳಲ್ಲಿ ಕಾರ್ಟೂನ್, ಧಾರವಾಹಿಗಳಿಗೆ ಹೆಸರಾಂತ ಕಲಾವಿದರು ಕಂಠದಾನ ಮಾಡುತ್ತಾರೆ. ಅದರಂತೆ ನಾಯಕ ಮಾಸ್ಟರ್ ರಾಜ್‍ಗೆ ಯಶ್, ನಾಯಕಿ ಪುಟಾಣಿ ರಶ್ಮಿಗೆ ರಾಧಿಕಾಪಂಡಿತ್ ಡಬ್ಬಿಂಗ್ ಮಾಡಿರುವುದು ವಿಶೇಷ. ಉಳಿದಂತೆ ಪೋಷಕ ಪಾತ್ರಗಳಿಗೆ ರಂಗಾಯಣರಘು, ಸಾಧುಕೋಕಿಲ, ತಾರ, ಅಚ್ಯುತಕುಮಾರ್, ಕಾಮಿಡಿ ಕಿಲಾಡಿಗಳು ಕಲಾವಿದರು ಧ್ವನಿ ಒದಗಿಸಿರುವುದು ಮತ್ತೋಂದು ಹಿರಿಮೆಯಾಗಿದೆ. ಚಿಣ್ಣರುಗಳನ್ನು ಕಮರ್ಷಿಯಲ್ ರೀತಿಯಲ್ಲಿ ತೋರಿಸಬಹುದು ಎನ್ನುವುದಕ್ಕೆ ಸಾಕ್ಷಿಯಾಗಿ ಇದನ್ನು ಸಿದ್ದಪಡಿಸಲಾಗಿದೆ ಎನ್ನುತ್ತಾರೆ.

ಛಾಯಾಗ್ರಹಣ ಸಚಿನ್‍ಬಸ್ರೂರ್, ಚಿತ್ರಕತೆ-ಸಂಭಾಷಣೆ ಪ್ರಮೋದ್‍ಮರವಂತೆ,ಕಿನ್ನಾಳ್ ರಾಜ್, ಸಂದೀಪ್‍ಸಿರ್ಸಿ, ಬಿ.ಮಂಜುನಾಥ್ ಮತ್ತು ಸೂಚನ್‍ಶೆಟ್ಟಿ. ನಾಲ್ಕು ಗೀತೆಗಳಿಗೆ ನವೀನ್‍ಸಜ್ಜು, ಪುನೀತ್‍ರಾಜ್‍ಕುಮಾರ್, ಸಂತೋಷ್‍ವೆಂಕಿ, ಆರುಂಧತಿ ಹಾಡಿದ್ದಾರೆ. ಕುಂದಾಪುರ, ಬಸ್ರೂರು ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ. ಎನ್.ಎಸ್.ರಾಜಕುಮಾರ್ ನಿರ್ಮಾಣ ಮಾಡಿರುವ ಚಿತ್ರಕ್ಕೆ ಎನ್.ಸೂರಜ್‍ಚೌದರಿ, ಎನ್,ನರೇನ್‍ಚಂದ್ರಚೌಧರಿ ಸಹ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ. ಕನ್ನಡ, ತೆಲುಗು, ಹಿಂದಿ, ತಮಿಳು ಮತ್ತು ಮಲೆಯಾಳಂ ಸಿದ್ದಗೊಂಡಿರುವ ಚಿತ್ರವು ಸನಿಹದಲ್ಲಿ ತೆರೆ ಕಾಣುವ ಸಾದ್ಯತೆ ಇದೆ.
ಸಿನಿ ಸರ್ಕಲ್.ಇನ್ ನ್ಯೂಸ್
-10/05/19For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore