HOME
CINEMA NEWS
GALLERY
TV NEWS
REVIEWS
CONTACT US
ಗಿಣಿ ಹೇಳಿದ ವ್ಯಥೆ, ಕಥೆ
ಆ ಹುಡುಗಿ ಹಿಂದೆ ಹೋದರೆ ಅಪಾಯ ಅಂತ ಗಿಣಿ ಶಾಸ್ತ್ರದವನು ಆತನಿಗೆ ಹೇಳುತ್ತಾನೆ. ಆದರೆ ಅದನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆ ಅವಳ ಪ್ರೀತಿಯನ್ನು ದಕ್ಕಿಸಿಕೊಳ್ತಾನೋ ಇಲ್ಲವೋ ಎಂಬುದು ‘ಗಿಣಿ ಹೇಳಿದ ಕತೆ’ ಚಿತ್ರದ ಸಾರಾಂಶವಾಗಿದೆ. ಕಥಾನಾಯಕ ಒಬ್ಬ ಟಾಕ್ಸಿ ಡ್ರೈವರ್. ತನಗಿಂತ ಅನುಕೂಲಸ್ಥ ದುಡ್ಡು ಇರುವ ಹುಡುಗಿಯನ್ನು ಪ್ರೀತಿಸಿ, ಮದುವೆ ಆಗಲು ಪ್ರಯತ್ನ ಪಡುತ್ತಾನೆ. ಅಂದುಕೊಂಡಷ್ಟು ಸುಲಭವಲ್ಲ. ಬಡ್ಡಿ ಜಯಮ್ಮನ ಮಗಳು ಅಷ್ಟು ಸುಲಭವಾಗಿ ಸಿಗುವುದಿಲ್ಲ. ಬಯಸಿದ್ದನ್ನು ಪಡದೇ ತೀರುತ್ತೇನೆಂದು ಹೊರಟವನಿಗೆ ಕೊನೆಗೆ ಸಿಕ್ಕಿದ್ದು ವ್ಯಥೆ, ದುಖ:, ನೋವು . ಅದು ಹೇಗೆ ಎನ್ನುವುದನ್ನು ಕ್ಲೈಮಾಕ್ಸ್‍ದಲ್ಲಿ ಸುಂದರವಾಗಿ ತೋರಿಸಿದ್ದಾರೆ. ಕೆಲವು ಭಾವನಾತ್ಮಕ ಸನ್ನಿವೇಶಗಳು ನೋಡುಗರ ಮನಸ್ಸನ್ನು ಕದಡುತ್ತದೆ. ಇವಿಷ್ಟನ್ನು ಗಿಣಿ ಹೇಳಿದೆ ಎಂದು ನಿರ್ದೇಶಕರು ಅದ್ಬುತವಾಗಿ ಅರ್ಥವಾಗುವಂತೆ ತೋರಿಸಿರುವುದು ಪ್ಲಸ್ ಪಾಯಿಂಟ್ ಆಗಿದೆ.

ರಂಗಭೂಮಿಯಿಂದ ಬಂದವನಾಗಿದ್ದರಿಂದ ನಾಯಕ ದೇವ್ ಅಲ್ಲಿನವರಿಗೆ ಹೆಚ್ಚು ಅವಕಾಶ ಮಾಡಿಕೊಟ್ಟಿದ್ದಾರೆ. ಲಾಂಗ್ ಹಿಡಿದು ಹೀರೋ ಆಗೋದಲ್ಲ, ಟ್ಯಾಲೆಂಟ್ ಇದ್ದು ಹೀರೋ ಆಗಬೇಕು ಎನ್ನುವ ಮಾಸ್ ಡೈಲಾಗ್‍ನಲ್ಲಿ ಚೆನ್ನಾಗಿ ಕದರ್ ತೋರಿಸಿದ್ದಾರೆ. ನಾಯಕಿ ಗೀತಾಂಜಲಿ ನಗುವಿನಲ್ಲೆ ಎಲ್ಲವನ್ನು ಪ್ರದರ್ಶಸಿದ್ದಾರೆ. ಉಳಿದಂತೆ ಮಾಲತೇಶ್, ನೀತುರಾಯ್, ಹಾವೇರಿಶ್ರೀಧರ್ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ನಾಗರಾಜ್‍ಉಪ್ಪುಂದ ನಿರ್ದೇಶನ ಮತ್ತು ಛಾಯಗ್ರಹಣದ ಜವಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿರುವುದು ಪರದೆ ಮೇಲೆ ಕಾಣಿಸುತ್ತದೆ. ಬೆಂಗಳೂರಿನಿಂದ ಮಡೆಕೇರಿವರೆಗೆ ನಡೆಯುವ ಕತೆಯಾಗಿದ್ದರಿಂದ ಸುಂದರ ತಾಣಗಳು ಕಣ್ಣಿಗೆ ತಂಪು ಕೊಡುತ್ತದೆ. ಹಿತನ್‍ಹಾಸನ್ ಸಂಗೀತದಲ್ಲಿ ಎರಡು ಹಾಡುಗಳು ಮೆಲುಕು ಹಾಕುವಂತಿದೆ. ಸಿ.ರವಿಚಂದ್ರಕುಮಾರ ಸಂಕಲನ ಇದಕ್ಕೆ ಪೂರಕವಾಗಿದೆ. ನಾಯಕ ಮತ್ತು ನಿರ್ಮಾಣವನ್ನು ಮಾಡಿರುವ ದೇವರಾಜ್ ಎರಡು ಪ್ರಯತ್ನದಲ್ಲಿ ಸಪಲರಾಗುವ ಲಕ್ಷಣಗಳು ಇದೆ ಎನ್ನಬಹುದು.
ಸಿನಿ ಸರ್ಕಲ್.ಇನ್ ವಿಮರ್ಶೆ
***
20/01/19

ಗಿಣಿÂ ಕತೆ ನೋಡಲು ಬನ್ನಿ
ಹೊಸಬರ ‘ಗಿಣಿ ಹೇಳಿದ ಕಥೆ’ ಸಿನಿಮಾವು ಪ್ರಯಾಣದ ಕತೆಯಾಗಿದೆ. ನಾಯಕ ಚಾಲಕನಾಗಿದ್ದು, ಒಮ್ಮೆ ಗ್ರಾಹಕರನ್ನು ಕರೆದುಕೊಂಡು ದಾರಿಯಲ್ಲಿ ತನ್ನ ಪ್ರೀತಿಯ ಕತೆಯನ್ನು ಹೇಳುತ್ತಿರುವಾಗ, ಕಾಕತಾಳೀಯ ಎನ್ನುವಂತೆ ಅವರದು ಅದೇ ರೀತಿ ಇರುತ್ತದೆ. ಕತೆಯಲ್ಲಿ ರಿಯಲ್ ಗಿಣಿಯೊಂದು ಪಾತ್ರ ನಿರ್ವಹಿಸಿದೆ. ಅದು ಏನು ಹೇಳುತ್ತೆ. ಯಾವ ವಿಷಯವನ್ನು ಹೇಳಹೊರಟಿದೆ ಅದರ ಮುಖಾಂತರ ಚಿತ್ರ ತಿರುವು ಪಡೆದುಕೊಳ್ಳುತ್ತದೆ. ಹುಡುಗಿ ಪಾರಿವಾಳ ಲುಕ್ ಇದ್ದರೆ, ಹುಡುಗ ತೆರೆದ ಪುಸ್ತಕದಂತೆ ಇರುತ್ತಾನೆ. ಮನಸಿನ ಭಾವನೆಗಳನ್ನು ಹೇಳುವ ಪ್ರಯತ್ನವನ್ನು ಮಾಡಲಾಗಿದೆ. ಒಮ್ಮೆಯೂ ಅವಳನ್ನು ಮುಟ್ಟದೆ ಪ್ರೀತಿಸುವುದು ವಿಶೇಷ ಎನ್ನಬಹುದು. ಬುದ್ದಿವಾದ, ತತ್ವಗಳನ್ನು ರಂಗಭೂಮಿ ತಂತ್ರದಂತೆ ಹಾಸ್ಯದ ಮೂಲಕ ಹೇಳಲಾಗಿದೆ.

ಸಂಪ್ರದಾಯಸ್ಥ ಕುಟುಂಬದ ಮಗಳು, ಶಿಕ್ಷಕಿ ಪಾತ್ರದಲ್ಲಿ ನಾಯಕಿಯಾಗಿ ಗೀತಾಂಜಲಿ. ಹತ್ತೋಂಬತ್ತು ವರ್ಷಗಳ ಕಾಲ ಕಿರುತೆರೆ, ಹಿರಿತೆರೆಗಳಲ್ಲಿ ಕೆಲಸ ಮಾಡಿರುವ ನಾಗರಾಜಉಪ್ಪಂದ ಚೊಚ್ಚಲಬಾರಿ ಆಕ್ಷನ್ ಕಟ್ ಹೇಳಿದ್ದಾರೆ. ಬೆಂಗಳೂರು, ಬಿಡದಿ, ರಾಮನಗರ, ಚೆನ್ನಪಟ್ಟಣ, ಮಂಡ್ಯಾ, ಮೈಸೂರು, ಪಿರಿಯಾಪಟ್ಟಣ, ಮಡಕೇರಿಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಪ್ರಯಾಣ ಎಲ್ಲಿಗೆ ಅಂತ್ಯಗೊಳ್ಳುತ್ತೆ, ಕ್ಲೈಮಾಕ್ಸ್ ಏನಾಗುತ್ತೆ ಎಂಬುದನ್ನು ಸಿನಿಮಾ ನೋಡಿದರೆ ತಿಳಿಯುತ್ತದಂತೆ. ನಾಯಕ ಮತ್ತು ನಿರ್ಮಾಪಕ ವಿ.ದೇವರಾಜು ರಂಗಭೂಮಿ ಕಲಾವಿದ ಆಗಿದ್ದ ಕಾರಣ ನೂರಕ್ಕೂ ಹೆಚ್ಚು ಇದೇ ರಂಗದಲ್ಲಿರುವವರಿಗೆ ಅವಕಾಶ ಮಾಡಿಕೊಟ್ಟಿದ್ದಾರೆ. ನಾಲ್ಕು ಹಾಡುಗಳಿಗೆ ಸಂಗೀತ ಸಂಯೋಜಿಸಿ, ಎರಡು ಗೀತೆಗೆ ಧ್ವನಿಯಾಗಿರುವ ಹಿತನ್‍ಹಾಸನ್, ಸಾಹಿತ್ಯ ರಾಜಶೇಖರರಾವ್, ಸಂಕಲನ ಸಿ.ರವಿಚಂದ್ರಕುಮಾರ್, ಸಾಹಸ ಜಾಗ್ವಾರ್‍ಸಣ್ಣಪ್ಪ ನಿರ್ವಹಿಸಿದ್ದಾರೆ. ತಮ್ಮದೆ ವೃತ್ತಿಯಲ್ಲಿ ಇರುವವರು ಹೀರೋಗಳು ಅಂತ ಹೇಳುವ ಗೀತೆ ಇರಲಿದೆ. ಗೆಳೆಯರ ಸಹಕಾರ ಹಾಗೂ ಕೂಡಿಟ್ಟ ಹಣದಿಂದ ಧೈರ್ಯ ಮಾಡಿ ಅರವತ್ತು ಲಕ್ಷದಲ್ಲಿ ಚಿತ್ರ ಮುಗಿಸಿದ್ದಾರಂತೆ. ವಿತರಕ ದೀಪಕ್‍ಗಂಗಾಧರ್ ಮುಖಾಂತರ ಜನವರಿ 11ರಂದು ಸುಮಾರು 60 ಕೇಂದ್ರಗಳಲ್ಲಿ ಚಿತ್ರವು ಬಿಡುಗಡೆಯಾಗುತ್ತಿದೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
9/01/19
ಗಿಣಿÂ ಹೇಳುವ ಪ್ರೇಮ ಕತೆ

ಹೊಸಬರೇ ಸೇರಿಕೊಂಡು ಸಿದ್ದಪಡಿಸಿರುವ ‘ಗಿಣಿ ಹೇಳಿದ ಕಥೆ’ ಸಿನಿಮಾದ ಆಡಿಯೋ ಸಿಡಿಯು ಎಸ್‍ಆರ್‍ವಿದಲ್ಲಿ ಲೋಕಾರ್ಪಣೆಗೊಂಡಿತು. ನಾಯಕ, ನಿರ್ಮಾಪಕ ವಿ.ದೇವರಾಜ್ ಮಾತನಾಡುತ್ತಾ, ಚಿತ್ರರಂಗಕ್ಕೆ ಬರುವ ಮುನ್ನ ಪತ್ರಿಕೆಗೆ ಅಂಕಣ ಬರೆಯಲಾಗುತ್ತಿತ್ತು. ರಂಗಭೂಮಿಯಲ್ಲಿ ಬಾಲಕಲಾವಿದನಾಗಿ, ರಸಮಂಜರಿಯಲ್ಲಿ ಡ್ಯಾನ್ಸ್ ಮಾಡುತ್ತಿದ್ದೆ. ಆ ಸಮಯದಲ್ಲೆ ನಟನಾಗಬೇಕೆಂಬ ಸಣ್ಣದೊಂದು ಆಸೆ ಚಿಗುರಿತು. ಕತೆ ಸಿದ್ದ ಪಡಿಸಿಕೊಂಡು ಹಲವು ನಿರ್ದೇಶಕರು, ನಿರ್ಮಾಪಕರು ಭೇಟಿ ಮಾಡಿದಾಗ ನೋಡುವ ಅಂತ ಅಸಡ್ಡೆ ತೋರಿಸುತ್ತಿದ್ದರು. ಮುಂದೆ ರಂಗ ಗೆಳಯರ ಸಹಕಾರ, ಕೂಡಿಟ್ಟ ಹಣದಿಂದ ಧೈರ್ಯ ಮಾಡಿ ಅರವತ್ತು ಲಕ್ಷದಲ್ಲಿ ಚಿತ್ರ ಮುಗಿಸಲಾಗಿದೆ. ಪ್ರಯಾಣದ ಕತೆಯಲ್ಲಿ ಚಾಲಕನಾಗಿದ್ದು, ಒಮ್ಮೆ ಗ್ರಾಹಕರನ್ನು ಕರೆದುಕೊಂಡು ದಾರಿಯಲ್ಲಿ ತನ್ನ ಪ್ರೀತಿಯ ಕತೆಯನ್ನು ಹೇಳುತ್ತಿರುವಾಗ, ಕಾಕತಾಳೀಯ ಎನ್ನುವಂತೆ ಅವರದು ಅದೇ ರೀತಿ ಇರುತ್ತದೆ. ಕತೆಯಲ್ಲಿ ರಿಯಲ್ ಗಿಣಿಯೊಂದು ಪಾತ್ರ ನಿರ್ವಹಿಸಿದೆ. ಅದು ಏನು ಹೇಳುತ್ತೆ. ಯಾವ ವಿಷಯವನ್ನು ಹೇಳಹೊರಟಿದೆ ಅದರ ಮುಖಾಂತರ ಚಿತ್ರ ತಿರುವು ಪಡೆದುಕೊಳ್ಳುತ್ತದೆ. ಹುಡುಗಿ ಪಾರಿವಾಳ ಲುಕ್ ಇದ್ದರೆ, ಹುಡುಗ ತೆರೆದ ಪುಸ್ತಕದಂತೆ ಇರುತ್ತಾನೆ. ಮನಸಿನ ಭಾವನೆಗಳನ್ನು ಹೇಳುವ ಪ್ರಯತ್ನವನ್ನು ಮಾಡಲಾಗಿದೆ. ಒಮ್ಮೆಯೂ ಅವಳನ್ನು ಮುಟ್ಟದೆ ಪ್ರೀತಿಸುವುದು ವಿಶೇಷ ಎನ್ನಬಹುದು. ಬುದ್ದಿವಾದ, ತತ್ವಗಳನ್ನು ರಂಗಭೂಮಿ ತಂತ್ರದಂತೆ ಹಾಸ್ಯದ ಮೂಲಕ ಹೇಳಲಾಗಿದೆ ಎಂದರು.

ಶಿಕ್ಷಕಿಯಾಗಿ ಗೀತಾಂಜಲಿ ನಾಯಕಿ. ಕಿರುತೆರೆ, ಹಿರಿತೆರೆಗಳಲ್ಲಿ ಕೆಲಸ ಮಾಡಿರುವ ನಿರ್ದೇಶಕ ನಾಗರಾಜಉಪ್ಪಂದ ಹೇಳುವಂತೆ ಬೆಂಗಳೂರು, ಬಿಡದಿ, ರಾಮನಗರ, ಚೆನ್ನಪಟ್ಟಣ, ಮಂಡ್ಯಾ, ಮೈಸೂರು, ಪಿರಿಯಾಪಟ್ಟಣ, ಮಡಕೇರಿಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಪ್ರಯಾಣ ಎಲ್ಲಿಗೆ ಅಂತ್ಯಗೊಳ್ಳುತ್ತೆ, ಕ್ಲೈಮಾಕ್ಸ್ ಏನಾಗುತ್ತೆ ಎಂಬುದನ್ನು ಸಿನಿಮಾ ನೋಡಿ ಎಂದು ಅಲವತ್ತು ಮಾಡಿಕೊಂಡರು. ನಾಲ್ಕು ಹಾಡುಗಳಿಗೆ ಸಂಗೀತ ಸಂಯೋಜಿಸಿ, ಎರಡು ಗೀತೆಗೆ ಧ್ವನಿಯಾಗಿರುವ ಹಿತನ್‍ಹಾಸನ್, ಲಹರಿ ಸಂಸ್ಥೆಯ ಆನಂದ್, ಸಾಹಿತಿ ರಾಜಶೇಖರರಾವ್ ಸಿಡಿ ಬಿಡುಗಡೆಗೆ ಸಾಕ್ಷಿಯಾಗಿದ್ದರು. ಇದಕ್ಕೂ ಮುನ್ನ ಸಿನಿಮಾದ ಮೋಷನ್ ಪೋಷ್ಟರ್, ಟೀಸರ್ ಮತ್ತು ಎರಡು ಹಾಡುಗಳು ಪರದೆ ಮೇಲೆ ಬಿತ್ತರಗೊಂಡಿತು.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
14/11/18
For advertisements contact editor
K N Nagesh Kumar, Photo Journalist
Website Desined by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore