HOME
CINEMA NEWS
GALLERY
TV NEWS
REVIEWS
CONTACT US
ಶ್ರೀಲಂಕಾದಲ್ಲಿ ಚಿತ್ರೀಕರಣ ಮುಗಿಸಿದ ಗಿಮಿಕ್
ನಾಯಕ ಗಣೇಶ್ ಮತ್ತು ನಾಯಕಿ ರೋನಿಕಾಸಿಂಗ್ ಅವರ ಮಾತಿನ ಭಾಗ ಮತ್ತು ಒಂದು ಗೀತೆಯನ್ನು ‘ಗಿಮಿಕ್’ ಚಿತ್ರದ ಸಲುವಾಗಿ ಶ್ರೀಲಂಕಾದ ಸುಂದರ ತಾಣಗಳಲ್ಲಿ 20 ದಿವಸಗಳ ಕಾಲ ಯಶಸ್ವಿಯಾಗಿ ಚಿತ್ರೀಕರಣ ಮುಗಿಸಿದೆ. ಎರಡನೆ ಹಂತದ ಶೂಟಿಂಗ್ ಬೆಂಗಳೂರು ಸುತ್ತಮುತ್ತ ಭರದಿಂದ ಸಾಗಿದೆ. ಗಣೇಶ್‍ಗೆ ಹಾರರ್ ಚಿತ್ರದಲ್ಲಿ ನಟಿಸುತ್ತಿರುವುದು ಹೊಸ ಅನುಭವ. ಸಂಗೊಳ್ಳ್ಳಿ ರಾಯಣ್ಣ, ಕುರುಕ್ಷೇತ್ರ ಚಿತ್ರಗಳ ಖ್ಯಾತಿಯ ನಾಗಣ್ಣ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇಬ್ಬರ ಕಾಂಬಿನೇಶನ್‍ದಲ್ಲಿ ಚೂಚ್ಚಲಬಾರಿ ಮೂಡಿಬರುತ್ತಿರುವುದು ವಿಶೇಷ. ಮಾತುಗಳಿಗೆ ನಂಜುಂಡಿ, ಸಾಹಿತ್ಯಕ್ಕೆ ಕವಿರಾಜ್ ಪೆನ್ನು ಕೆಲಸ ಮಾಡುತ್ತಿದೆ. ಅರ್ಜುನ್‍ಜನ್ಯಾ ಸಂಗೀತ, ವಿಘ್ನೇಶ್ ಛಾಯಗ್ರಹಣ, ಸುರೇಶ್ ಕಲೆ, ಮುರಳಿ ನೃತ್ಯ, ಸುರೇಶ್‍ಅರಸ್ ಸಂಕಲನ, ನಾರಾಯಣ್ ನಿರ್ದೇಶನ ಸಹಕಾರ ಮತ್ತು ರಾಮಣ್ಣ ನಿರ್ಮಾಣ ನಿರ್ವಹಣೆ ಇದೆ. ತಾರಗಣದಲ್ಲಿ ಸುಂದರರಾಜ್, ಶೋಭರಾಜ್, ಮಂಡ್ಯಾರಮೇಶ್, ಚಿ.ಗುರುದತ್, ರವಿಶಂಕರ್‍ಗೌಡ, ಸಂಗೀತ, ಶ್ವೇತಾ ಮುಂತಾದವರ ನಟನೆ ಇದೆ. ಸಾಯಿ ಪಿಕ್ಚರ್ಸ್ ಲಾಂಛನದಲ್ಲಿ ದೀಪಕ್ ಚಿತ್ರಕ್ಕೆ ಹಣ ಹೂಡುತ್ತಿದ್ದಾರೆ.
ಸಿನಿ ಸರ್ಕಲ್.ಇನ್ ನ್ಯೂಸ್
3/12/18
For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore