HOME
CINEMA NEWS
GALLERY
TV NEWS
REVIEWS
CONTACT US

ಗೆಲುವಿನ ಹಾದಿಯಲ್ಲಿಗೀತಾ
ಮೊದಲವಾರದಲ್ಲೆ ಕೋಟಿಗಳನ್ನು ಬಾಚಿರುವ‘ಗೀತಾ’ ಸಿನಿಮಾದ ನಿರ್ಮಾಪಕ ಸೈಯದ್‍ಸಲಾಂ ನಮ್ಮ ನಿರೀಕ್ಷೆ ಮಟ್ಟತಲುಪಿಲ್ಲವೆಂದುಒಪ್ಪಿಕೊಂಡರು. ನಟಿ ಶಾನ್ವಿಶ್ರೀವಾತ್ಸವ್ ಸಾಮಾಜಿಕಜಾಲತಾಣದಲ್ಲಿ ಬರೆದಿರುವ ಬೇಸರದ ಪತ್ರಕ್ಕೆ ಸಮಂಜಸಉತ್ತರ ನೀಡಿದರು. ಚಿತ್ರದಲ್ಲಿಗಣೇಶ್, ಅವರೊಂದಿಗೆಇರಲಾದಡ್ಯುಯೆಟ್ ಹಾಡು ಸಿನಿಮಾ ಲೆಂಥ್ ಜಾಸ್ತಿಯಾಗಿದೆ ಎಂದು ಸೇರಿಸಿಲ್ಲ. ಇದಕ್ಕಾಗಿ 35 ಲಕ್ಷಖರ್ಚು ಮಾಡಲಾಗಿತ್ತು. ಲಕ್ಷಖರ್ಚು ಮಾಡಿದ ಹಾಡನ್ನುತೆಗೆದುಹಾಕಿದ್ದು ನಮಗೂ ನೆಮ್ಮದಿ ತಂದಿಲ್ಲ. ಅವರು ಈ ರೀತಿ ಹೇಳಿಕೊಂಡಿದ್ದು ತಪ್ಪಿಲ್ಲ.ಅಲ್ಲದೆಗಣೇಶ್ ಹಾಡಿಗೂಕತ್ತರಿ ಹಾಕಿ ಕೇವಲ ಬಿಟ್‍ಉಪಯೋಗಿಸಲಾಗಿದೆ.ಇವೆಲ್ಲವು ಸಿನಿಮಾಗಾಗಿ ಮಾತ್ರ.ಶಾನ್ವಿ ಹಾಡುತೆಗೆದಿದ್ದನ್ನುಅವರಿಗೆ ತಿಳಿಸಬೇಕಿತ್ತು.ಅವರ ಹೇಳಿಕೆಗೆ ನಮ್ಮದೇನು ವಿರೋಧವಿಲ್ಲ. ಎಲ್ಲರೂಚೆನ್ನಾಗಿ ಕೆಲಸ ಮಾಡಿದ್ದಾರೆಎಂದುತಂಡವನ್ನು ಶ್ಲಾಘಿಸಿದರು.

ನೂರು ಕೇಂದ್ರಗಳಲ್ಲಿ ಪ್ರದರ್ಶನವಾಗುತ್ತಿದ್ದರೂಜಾಹಿರಾತುದಲ್ಲಿ ಮೂರು ಕೇಂದ್ರಗಳೆಂದು ತಪ್ಪಾಗಿ ಮುದ್ರಿತವಾಗಿದೆ.ಎರಡನೇ ವಾರದಿಂದ ಮತ್ತಷ್ಟು ಹೆಚ್ಚಾಗುವ ಸಾದ್ಯತೆಇದೆ, ಕತೆಯ ಪರಿಕಲ್ಪನೆ, ಗೋಕಾಕ್ ಚಳುವಳಿ ಸನ್ನಿವೇಶಗಳು ಚೆನ್ನಾಗಿರುವಕಾರಣಎಲ್ಲಾ ಕಡೆಗಳಿಂದ ಉತ್ತಮ ಪ್ರಶಂಸೆ ವ್ಯಕ್ತವಾಗುತ್ತಿದೆ. ಸದ್ಯಯೋಗರಾಜ್‍ಭಟ್‍ಅವರೊಂದಿಗೆ ‘ಗಾಳಿಪಟ-2, ಸಿಂಪಲ್‍ಸುನಿ ಅವರಚಿತ್ರದಲ್ಲಿ ನಟಿಸಲುಒಂದು ಸುತ್ತು ಮಾತುಕತೆ ನಡೆಸಲಾಗಿದೆಎಂದುಗಣೇಶ್ ಸಂತಸ ಹಂಚಿಕೊಂಡರು. ಮೊದಲ ನಿರ್ದೇಶನದಲ್ಲೆ ಮಾದ್ಯಮದ ಸಹಕಾರದಿಂದಸಿನಿಮಾವುಜನರಿಗೆತಲುಪಿದೆ.ಅದಕ್ಕಾಗಿಥ್ಯಾಂಕ್ಸ್‍ಎಂದರುವಿಜಯ್‍ನಾಗೇಂದ್ರ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
05/10/19


ಕನ್ನಡತನ+ಪ್ರೀತಿ=ಗೀತಾ
ಗೋಕಾಕ್ ಚಳಿವಳಿ ಮಾಹಿತಿ, ಸುಂದರ ಮುಗ್ದ ಪ್ರೀತಿಕತೆ ‘ಗೀತಾ’ ಚಿತ್ರದಲ್ಲಿ ಸೊಗಸಾಗಿ ಮೂಡಿಬಂದಿದೆ.ಗೋಕಾಕ್ ವರದಿ ಸನ್ನಿವೇಶಗಳು ಚಿತ್ರದಅರ್ಧ ಭಾಗ ಕಾಣಿಸಿಕೊಳ್ಳುತ್ತದೆ. ಇಂದಿನ ಯುವಜನಾಗಂಕ್ಕೆಇದರ ಬಗ್ಗೆ ಮಾಹಿತಿಇಲ್ಲ. ವಿಷಯದಬಗ್ಗೆ ಆಸಕ್ತಿ ಇರುವವರುಚಿತ್ರ ನೋಡಬಹುದು. ಸಿನಿಮಾದಲ್ಲಿಚೌಕಟ್ಟು ಮೀರದ ಪಾತ್ರಗಳು ಇರಲಿದೆ. ನೋಡುಗನಿಗೆಅರ್ಥವಾಗುವಂತೆಚಿತ್ರಕತೆಇರುವುದು ಪ್ಲಸ್ ಪಾಯಿಂಟ್‍ಆಗಿದೆ. ಕತೆಯಲ್ಲಿಕನ್ನಡದ ಭಾಷಾಭಿಮಾನ, ಪ್ರೀತಿ, ನೋವು-ನಲಿವು, ದುಗುಡಇತ್ಯಾದಿ ಅಂಶಗಳು ಚಿತ್ರದ ವೇಗವನ್ನುಎತ್ತಿ ಹಿಡಿದಿದೆ.ಮೊದಲರ್ಧಗೋಕಾಕ್ ಚಳುವಳಿ ವಾಸ್ತವದ ನೆನಪುಗಳನ್ನು ತೆರೆದಿಟ್ಟಿದೆ.

ಗಣೇಶ್‍ಮೊದಲ ಬಾರಿಆ್ಯಂಗ್ರ್ರಿಯಂಗ್ ಮ್ಯಾನ್‍ಆಗಿಗಮನ ಸೆಳೆಯುತ್ತಾರೆ.ಚಳುವಳಿ ಹೋರಾಟಗಾರ, ಪ್ರೀತಿಯಲ್ಲಿ ಬೀಳುವ ಮುಗ್ದನಾಗಿ ಎರಡು ಶೇಡ್‍ಗಳಲ್ಲಿ ಸುಲಲಿತವಾಗಿ ನಟನೆ ಮಾಡಿದ್ದಾರೆ. ಶಾನ್ವಿಶ್ರೀವಾತ್ಸವ್ ಎರಡುಕಾಲದಲ್ಲಿಚೆನ್ನಾಗಿ ನಟಿಸಿದ್ದಾರೆ.ಪ್ರಯಾಗ್‍ರಾವ್, ಪಾರ್ವತಿಅರುಣ್, ಸುಧಾರಾಣಿ, ದೇವರಾಜ್‍ಗೆ ಹೆಚ್ಚು ಸ್ಕೋಪ್ ಸಿಕ್ಕಿದೆ.ಅಚ್ಯುತಕುಮಾರ್, ರಂಗಾಯಣರಘುಅವರಿಗೆಕಡಿಮೆ ಅವಕಾಶ. ಸಂತೋಷ್‍ಆನಂದ್‍ರಾಮ್‍ಅವರ ‘ಕನ್ನಡಕನ್ನಡ’ ಗೀತೆಗೆಇಂಪಾದ ಸಂಗೀತ ಒದಗಿಸಿರುವ ಅನುಪ್‍ರುಬೆನ್ಸ್‍ಹಾಡುಗಳು ಪ್ಲಸ್ ಪಾಯಿಂಟ್‍ಆಗಿದೆ.
ನಿರ್ಮಾಣ: ಶಿಲ್ಪಗಣೇಶ್-ಸೈಯದ್‍ಸಲಾಂ
ಸಿನಿ ಸರ್ಕಲ್.ಇನ್ ವಿಮರ್ಶೆ
***
28/09/19

ಪರ ಭಾಷಾ ಚಿತ್ರಗಳಿಗೆ ಗಣೇಶ್‍ಖಡಕ್‍ಎಚ್ಚರಿಕೆ
‘ಗೀತಾ’ ಚಿತ್ರಮಹಿಳಾ ಪ್ರಧಾನಕತೆಯು 80ರ ಕಾಲಘಟ್ಟದಿಂದ ಪ್ರಸಕ್ತಕಾಲದವರೆಗೂ ಕಾಣಿಸಿಕೊಳ್ಳುತ್ತದೆ.ಬಿಡುಗಡೆಪೂರ್ವ ಸುದ್ದಿಗೋಷ್ಟಿಯಲ್ಲಿ ಮಾತನಾಡಿದಗಣೇಶ್‍ನಿರ್ದೇಶಕರು ಹೇಳಿದ ಒನ್ ಲೈನ್‍ಕತೆ ಮಿಂಚು ಬಂದಂತೆಆಯಿತು.ಶಂಕರ್‍ನಾಗ್ ನಟಿಸಿದ ಚಿತ್ರದ ಹೆಸರುಇಡಲಾಗಿದೆ.ಕರ್ನಾಟಕದಲ್ಲಿಕನ್ನಡಿಗನೇಯಜಮಾನ, ಸಾರ್ವಭೌಮ.ಯುವಕನಾಗಿದ್ದಾಗಕನ್ನಡ ಚಳುವಳಿ ನಾಯಕ.ಮೊದಲಬಾರಿಆ್ಯಂಗ್ರಿಯಂಗ್‍ಮ್ಯಾನ್ ಆಗಿ ಕಾಣಸಿಕೊಂಡಿದ್ದೇನೆ. ಅಂದುಘಟನೆ ನಡೆದಿದ್ದು ಸತ್ಯ.ಸನ್ನಿವೇಶವನ್ನುಕಾಲ್ಪನಿವಾಗಿ ತೆಗೆದುಕೊಳ್ಳಲಾಗಿದೆ.ಡಾ.ರಾಜ್‍ಕುಮಾರ್ ಭಾಷಣ ಮಾಡುತ್ತಿದ್ದಾಗಅವರ ಪಕ್ಕದಲ್ಲಿಇದ್ದಂತೆ ನಟಿಸಲಾಗಿದೆ.ನಾಗೇಂದ್ರಅವರ ಸಂಭಾಷಣೆದೃಶ್ಯಕ್ಕೆಚೆನ್ನಾಗಿ ಹೊಂದಿಕೊಳ್ಳುತ್ತದೆ. ಸದರಿ ವಿಷಯವುಐವತ್ತೈದು ನಿಮಿಷ ಬರುತ್ತದೆ. ಹದಿನೆಂಟು ತಿಂಗಳ ಶ್ರಮ, ನಮ್ಮ ಭಾಷೆಯಕುರಿತಚಿತ್ರವಾಗಿದ್ದರಿಂದ ಪರಭಾಷೆಯವರು ಈ ಚಿತ್ರಕ್ಕೆತೊಂದರೆಕೊಡಬಾರದೆಂದುಖಡಕ್‍ಎಚ್ಚರಿಕೆ ನೀಡುತ್ತಿದ್ದೇನೆ. ಇದನ್ನು ಮೀರಿ ಮುಂದುವರೆದಲ್ಲಿಚಿತ್ರಮಂದಿರ ಮುಂದೆಉಗ್ರ ಹೋರಾಟ ಮಾಡುವುದಾಗಿಹೇಳಿದರು.

ಪ್ರೀತಿ ಮತ್ತುಗೋಕಾಕ್‍ಘಟನೆ ಹೀಗೆ ಎರಡುತಲೆಮಾರಿನಲ್ಲಿಚಿತ್ರವು ಸಾಗುತ್ತದೆ. ಹಳೇ ಗೀತಾ ಹಾಡನ್ನು ಬಳಸಲಾಗಿದೆ. ಹಿರಿಯ ನಟಿ ಸುಧಾರಾಣಿ ಸೇರಿದಂತೆ ಶಾನ್ವಿಶ್ರೀವಾತ್ಸವ್ ಎರಡು ಪಾತ್ರ, ಮೂರು ಶೇಡ್‍ಗಳಲ್ಲಿ ಬರುತ್ತಾರೆ. ಉಳಿದಂತೆ ಪ್ರಯೋಗ್‍ಮಾಲ್ಟಿನ್, ಪಾರ್ವತಿಅರುಣ್ ನಾಯಕಿಯರು.ಇವರೊಂದಿಗೆದೇವರಾಜ್, ರಂಗಾಯಣರಘುಅಚ್ಯುತಕುಮಾರ್ ನಟಿಸಿದ್ದಾರೆ. ಕನ್ನಡಅಂತ ಬಂದಾಗ ವಿಷಯವುಗಂಭೀರವಾಗುತ್ತದೆ.ಇಂತಹುದೆ ಸನ್ನಿವೇಶಗಳು ಇರಲಿದೆಎಂದು ನಿರ್ದೇಶಕ ವಿಜಯ್‍ನಾಗೇಂದ್ರಚಿತ್ರದಕುರಿತಂತೆ ವ್ಯಾಖ್ಯಾನ ಬಿಚ್ಚಿಟ್ಟರು.

ಪೈರಸಿ ತಡೆಯಲು ವಿಶೇಷ ಯೋಜನೆ ಹಾಕಲಾಗಿದೆ. ಮುಂಜಾಗ್ರತಕ್ರಮವಾಗಿ ಪೋಲೀಸ್‍ಆಯುಕ್ತರಿಗೆದೂರು ನೀಡಲಾಗಿದ್ದು, ಪೈರಸಿ ಆದತಕ್ಷಣಇದನ್ನುತೆಗೆದುಹಾಕಲು ಸಂಸ್ಥೆಯೊಂದಿಗೆಒಪ್ಪಂದ ಮಾಡಿಕೊಳ್ಳಲಾಗಿದೆ. ವಿದೇಶದಲ್ಲಿ ಪ್ರದರ್ಶನ ಹಾಕಿದರೂ ಶೇಕಡ ಹದಿನೈದರಷ್ಟು ಲಾಭ ಬರುತ್ತದೆ.ಆದರೆ ಏಕಕಾಲಕ್ಕೆ ಅಲ್ಲಿ ಬಿಡುಗಡೆ ಮಾಡಿದರೆ ನಕಲು ಮಾಡುವ ಸಂದೇಹ ಬರುತ್ತದೆ.ಅದರಿಂದಲೇ ಮೂರು ವಾರದ ನಂತರಜನರಿಗೆತೋರಿಸಲಾಗುವುದುಎನ್ನುತ್ತಾರೆ ನಿರ್ಮಾಪಕ ಸೈಯ್ಯದ್‍ಸಲಾಂ.ಸಂಗೀತ ನಿರ್ದೇಶಕಅನೂಪ್‍ರುಬೆನ್ಸ್, ಶಾನ್ವಿಶ್ರೀವಾತ್ಸವ್, ಸುಧಾರಾಣಿ, ಛಾಯಾಗ್ರಾಹಕ ಶ್ರೀಷಾ, ಆನಂದ್‍ಆಡಿಯೋದ ಶ್ಯಾಂ, ನಿರ್ಮಾಪಕಿ ಶಿಲ್ಪಗಣಪತಿ, ಸಂತೋಷ್‍ಆನಂದರಾಮ್ ಉಪಸ್ತಿತರಿದ್ದು ಮಾಹಿತಿ ಹಂಚಿಕೊಂಡರು. 150 ಚಿತ್ರಮಂದಿರಗಳು, 60 ಮಲ್ಟಿಪ್ಲೆಕ್ಸ್‍ಗಳಲ್ಲಿ ಶುಕ್ರವಾರದಂದು ಬರಲಿದೆಎಂಬುದಾಗಿ ವಿತರಕಜಾಕ್‍ಮಂಜು ವಿವರ ಒಪ್ಪಿಸಿದರು.
ಸಿನಿ ಸರ್ಕಲ್.ಇನ್ ನ್ಯೂಸ್
24/09/19


ಗಣೇಶ್ ಮುಂದಿನ ಚಿತ್ರ ಗೀತಾ
ಗಣೇಶ್ ಸಾಲು ಸಾಲು ಚಿತ್ರಗಳಿಗೆ ಸಹಿ ಹಾಕುತ್ತಿದ್ದಾರೆ. ಅದರ ಸಾಲಿಗೆ ‘ಗೀತಾ’ ಚಿತ್ರವು ಸೇರ್ಪಡೆಯಾಗಿದೆ. ಶೀರ್ಷಿಕೆ ಕೇಳಿದಾಗ ಶಂಕರ್‍ನಾಗ್ ಮತ್ತು ನಾಯಕಿಯಾಗಿ ಪತ್ನಿ ತಂಗಿ ಅಕ್ಷತರಾವ್ ಅಭಿನಯದಲ್ಲಿ ಇದೇ ಹೆಸರಿನ ಚಿತ್ರವೊಂದು ತೆರೆಕಂಡಿತ್ತು. ಇಳಯರಾಜ ಸಂಗೀತದ ಎಲ್ಲಾ ಹಾಡುಗಳು ಸೂಪರ್ ಹಿಟ್ ಆಗಿ ಇಂದಿಗೂ ಗುನುಗುವಂತೆ ಮಾಡಿದೆ. ಹಾಗಂತ ಆ ಚಿತ್ರಕ್ಕೂ ಇದರ ಕತೆಗೂ ಸಂಬಂದವಿಲ್ಲ. ಮಿಸಸ್ ಅಂಡ್ ಮಿಸ್ಟರ್ ರಾಮಚಾರಿ ಮತ್ತು ರಾಜಕುಮಾರ ಚಿತ್ರಗಳಿಗೆ ಸಹಾಯಕರಾಗಿದ್ದ ವಿಜಯ್‍ನಾಗೇಂದ್ರ ಮೊದಲಬಾರಿ ಕತೆ ಬರೆದು ನಿರ್ದೇಶನದ ಚುಕ್ಕಾಣಿ ಹಿಡಿಯಲಿದ್ದಾರೆ. ಖ್ಯಾತ ನಟ,ನಟಿಯರು ನಟಿಸಲಿದ್ದು, ಇನ್ನು ಯಾರು ಆಯ್ಕೆಯಾಗಿಲ್ಲ. ಚಿತ್ರದ ಫಸ್ಟ್ ಲುಕ್‍ನಲ್ಲಿ ಕ್ಯಾಪ್, ಕುರುಚಲು ಗಡ್ಡದೊಂದಿಗೆ ಇರುವ ಸ್ಟಿಲ್ ನೋಡಿದಾಗ ಶಂಕರ್‍ನಾಗ್ ನೆನಪಿಗೆ ಬರುತ್ತಾರೆ. ಜೊತೆಗೆ ಶರ್ಟ್ ಮೇಲೆ ಕನ್ನಡದ ಬಾವುಟದ ಸಂಕೇತ ಇರುವುದು ವಿಶೇಷವಾಗಿದೆ. ಮುಗುಳುನಗೆ ಚಿತ್ರವನ್ನು ಸೈಯದ್‍ಸಲಾಂ ಮತ್ತು ಶಿಲ್ಪಗಣೇಶ್ ಜಂಟಿಯಾಗಿ ನಿರ್ಮಾಣ ಮಾಡಿದ್ದರು. ಈಗ ಇದೇ ಜೋಡಿಯಲ್ಲಿ ಗೀತಾ ಸೆಟ್ಟೇರಿದ್ದು, ಸೆಪ್ಟಂಬರ್‍ನಿಂದ ಚಿತ್ರೀಕರಣ ಶುರವಾಗಲಿದೆ. ಸಂಗೀತ ವಿ.ಹರಿಕೃಷ್ಣ, ಛಾಯಗ್ರಹಣ ಶ್ರೀಶಕುದುವಳ್ಳಿ ನಿರ್ವಹಿಸುತ್ತಿದ್ದಾರೆ. ಜುಲೈ 2 ಗಣೇಶ್ ಹುಟ್ಟುಹಬ್ಬ ಪ್ರಯುಕ್ತ ಫೋಟೋ ಶೂಟ್ ನಡೆಸಲಾಗಿದೆ ಎಂದು ತಂಡವು ಹೇಳಿಕೊಂಡಿದೆ.
ಸಿನಿ ಸರ್ಕಲ್.ಇನ್ ನ್ಯೂಸ್
1/07/18

For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore