HOME
CINEMA NEWS
GALLERY
TV NEWS
REVIEWS
CONTACT US
ಯುವಮನಸ್ಸುಗಳ ಗಂಟುಮೂಟೆ
ಸಿನಿಮಾದ ಹಾಗೆಯೇ ಜೀವನ ಇರುವುದಿಲ್ಲವೆಂದು ‘ಗಂಟುಮೂಟೆ’ ಚಿತ್ರದಲ್ಲಿ ಹೇಳುವ ಪ್ರಯತ್ನ ಮಾಡಿದ್ದಾರೆ. ಅದಕ್ಕಾಗಿ ಆಗಿನ ಕಾಲಕ್ಕೆ ತಕ್ಕಂತೆ ಸ್ಥಳಗಳಾದ ಬೆಂಗಳೂರು, ಮೈಸೂರು ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಎಸ್‍ಎಸ್‍ಎಲ್‍ಸಿ ಓದುತ್ತಿರುವ ಹದಿನಾರರ ಹುಡುಗಿಯ ದೃಷ್ಟಿಕೋನದಲ್ಲಿ ಹೆಣೆದ ನವಿರಾದ, ನೈಜ ಹಾಗೂ ಅಷ್ಟೇ ತೀವ್ರತೆಯಿಂದ ಕೂಡಿದ ಭಾವದ ತುಡಿತಗಳ ಸಮ್ಮಿಲನ ಒಂದು ಏಳೆಯ ಕತೆಯಾಗಿದೆ. ವಿದ್ಯಾಭ್ಯಾಸದ ಒತ್ತಡ, ಶಾಲೆಯ ವಾತವರಣ, ಅಂಕ ಪಡೆಯಲು ಸ್ಪರ್ಧೆ, ತರಲೆ, ಪಾರದರ್ಶಕ ರೀತಿಯ ಗಲಾಟೆ. ಇವುಗಳ ನಡುವೆ ಕಾಡುವ ಮೊದಲ ಉತ್ಕಟ ಪ್ರೇಮ. ಇವೆಲ್ಲವು ಸಿನಿಮಾದಲ್ಲಿ ಸನ್ನಿವೇಶಗಳಾಗಿ ಮೂಡಿ ಬಂದಿದೆ.

ಟೆಂಟ್ ಸಿನಿಮಾ ವಿದ್ಯಾರ್ಥಿ ತೀರ್ಥಹಳ್ಳಿ ಮೂಲದ ನಿಶ್ವಿತ್‍ಕೊರೋಡಿ, ಹಿರಿಯ ನಟ ಪ್ರಕಾಶ್‍ಬೆಳವಾಡಿ ಕಿರಿ ಪುತ್ರಿ ತೇಜುಬೆಳವಾಡಿ ವಿದ್ಯಾರ್ಥಿಗಳಾಗಿ ಮುಖ್ಯ ಪಾತ್ರದಲ್ಲಿ ನಟಿಸಿರುವುದು ಮೊದಲ ಅನುಭವ. ಉಳಿದಂತೆ ಭಾರ್ಗವ್‍ರಾಜು, ಸೂರ್ಯವಸಿಷ್ಟ, ಶರತ್‍ಗೌಡ, ಶ್ರೀರಂಗ, ಅರ್ಚನಾಶ್ಯಾಮ್, ಚಂದನ, ನಮಿತ್ ನಟಿಸಿದ್ದಾರೆ. ಐಟಿ ಉದ್ಯೋಗ ತ್ಯಜಿಸಿ, ಚಿತ್ರರಂಗದ ಮೇಲಿನ ಪ್ರಭಾವದಿಂದ ವಿದೇಶದಲ್ಲಿ ಇದರ ಕುರಿತಂತೆ ತರಭೇತಿ ಪಡೆದಿರುವ ರೂಪರಾವ್ ಕತೆ, ನಿರ್ದೇಶನ ಅಲ್ಲದೆ ನಿರ್ಮಾಣದಲ್ಲಿ ಪಾಲುದಾರರಾಗಿದ್ದಾರೆ. ಸಂಗೀತ ಅಪ್ರಜಿತ್‍ಸ್ರಿಸ್, ಸಂಕಲನ ಪ್ರದೀಪ್‍ನಾಯಕ್, ಛಾಯಾಗ್ರಹಣ ಮತ್ತು ನಿರ್ಮಾಪಕ ಸಹದೇವ್‍ಕೆಲ್ವಾಡಿ ಅವರದಾಗಿದೆ. ಚಿತ್ರವು ಈಗಾಗಲೇ ನ್ಯೂಯಾರ್ಕ್,ಟೊರೆಂಟೊದ ವೆಬ್ ಫೆಸ್ಟ್‍ದಲ್ಲಿ ಪಾಲ್ಗೋಂಡು ಹಲವು ವಿಭಾಗಗಳಲ್ಲಿ ಪ್ರಶಸ್ತಿಯನ್ನು ಗಳಿಸಿ, ಪ್ರಸಕ್ತ ಓಟ್ವಾ ಇಂಡಿಯನ್ ಫಿಲಿಂ ಫೆಸ್ವಿವಲ್ 2019ರ ಪ್ರದರ್ಶನಕ್ಕೆ ಆಯ್ಕಯಾಗಿದೆ. ಇದರಿಂದ ಖುಷಿಯಾಗಿರುವ ತಂಡವು ಸದ್ಯದಲ್ಲೆ ಜನರಿಗೆ ತೋರಿಸಲು ಯೋಜನೆ ಹಾಕಿಕೊಂಡಿದ್ದಾರೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
10/06/19

For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore