HOME
CINEMA NEWS
GALLERY
TV NEWS
REVIEWS
CONTACT US
ರಾಮು ನಿರ್ಮಾಣದಲ್ಲಿ ಗಣೇಶ್ ಚಿತ್ರ
ಶುಕ್ರವಾರ ಗಣೇಶ್ ಅಭಿನಯದ ‘ಆರೆಂಜ್’ ಬಿಡುಗಡೆಯಾಗುತ್ತಿದ್ದಂತೆ, ಹೊಸ ಚಿತ್ರ ‘99’ ಕ್ಕೆ ಸಹಿ ಹಾಕಿದ್ದಾರೆ. ತಮಿಳಿನಲ್ಲಿ ವಿಜಯ್‍ಸೇತುಪತಿ,ತ್ರಿಶಾ ಅಭಿನಯಿಸಿದ್ದ ‘96’ ಚಿತ್ರವು ಸ್ಯಾಂಡಲ್‍ವುಡ್‍ನಲ್ಲಿ 99 ನಾಮಕರಣದೊಂದಿಗೆ ಸೆಟ್ಟೇರುತ್ತಿದೆ. ಹೊಸ ಬಗೆಯ ಕತೆಯೊಂದಿಗೆ ಚಿತ್ರವು ಗಮನ ಸೆಳೆದಿದ್ದು ಬಾಕ್ಸ್ ಆಫೀಸಿನಲ್ಲಿ ಹಿಟ್ ಅನಿಸಿಕೊಂಡಿತ್ತು. ಇದನ್ನೆ ಕ್ಯಾಚ್ ಮಾಡಿಕೊಂಡ ನಿರ್ಮಾಪಕ ರಾಮು ಅದರ ಹಕ್ಕುಗಳನ್ನು ಪಡೆದುಕೊಂಡು ಮೂಲ ಚಿತ್ರದ ಕತೆಯನ್ನು ಉಳಿಸಿಕೊಂಡು, ಉಳಿದಂತೆ ಇಲ್ಲಿನ ನೇಟಿವಿಟಿ ತಕ್ಕಂತೆ ಚಿತ್ರಕತೆಯನ್ನು ಸಿದ್ದಪಡಿಸಲಾಗುತ್ತಿದೆ ಅಂತ ಅವರ ಕಚೇರಿಯಿಂದ ಸುದ್ದಿ ಬಂದಿದೆ. ನಿರ್ದೇಶಕ ಪ್ರೀತಂಗುಬ್ಬಿ, ಗಣೇಶ್ ಕಾಂಬಿನೇಷನ್‍ದಲ್ಲಿ ಇದು ಮೂರನೆ ಚಿತ್ರವಾಗಿದೆ. ಹಾಡುಗಳಿಗೆ ಅರ್ಜುನ್‍ಜನ್ಯಾ ರಾಗ ಒದಗಿಸುತ್ತಿದ್ದರೆ, ಸುಂದರ ತಾಣಗಳನ್ನು ಸೆರೆಹಿಡಿಯಲು ಸಂತೋಷ್‍ರೈ ಪಾತಾಜೆ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಇದೇ ತಿಂಗಳು 8ರಂದು ನಡೆಯಲಿರುವ ಮಹೂರ್ತ ಸಮಾರಂಭದಲ್ಲಿ ಹೆಚ್ಚಿನ ಮಾಹಿತಿ ಸಿಗಲಿದೆ.
ಸಿನಿ ಸರ್ಕಲ್.ಇನ್ ನ್ಯೂಸ್
6/12/18
For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore