HOME
CINEMA NEWS
GALLERY
TV NEWS
REVIEWS
CONTACT US

ಗಂಡುಲಿ ಫಸ್ಟ್ ಲುಕ್
ಬಿಡುಗಡೆಯಾಗದ ‘ಇಂಜಿನಿಯರ್ಸ್’ ಸಿನಿಮಾತಂಡವುಎರಡನೇ ಪ್ರಯತ್ನಎನ್ನುವಂತೆ ‘ಗಂಡುಲಿ’ ಸಿನಿಮಾ ಮುಗಿಸಿದ್ದು, ಸದ್ಯಚಿತ್ರೀಕರಣೋತ್ತರದಲ್ಲಿ ಬ್ಯುಸಿ ಇದೆ. ಒಂದುಕಾಲದಲ್ಲಿತಾಯಿ-ಮಗ ಇರುವಕುಟುಂಬವೊಂದು ಶ್ರೀಮಂತವಾಗಿ ಬದುಕನ್ನುಕಂಡಿದ್ದು, ಈಗ ಸಾಮಾನ್ಯರಂತೆಜೀವನ ಸಾಗಿಸುತ್ತಿದ್ದಾರೆ. ಇದರ ಏಳೆಯೊಂದಿಗೆ ಹಳ್ಳಿ ಹಿನ್ನಲೆಯಕತೆಯು ಸೆಸ್ಪನ್ಸ್, ಥ್ರಿಲ್ಲರ್ ಮಾದರಿಯಲ್ಲಿ ಸಾಗಲಿದೆ.ವಿನಯ್‍ರತ್ನಸಿದ್ದಿ ನಿರ್ದೇಶಕ ಮತ್ತು ನಾಯಕ.ಅಮ್ಮನಾಗಿ ಸುಧಾನರಸಿಂಹರಾಜು.ಛಾಯಾದೇವಿ ನಾಯಕಿ. ಉಳಿದಂತೆ ಧರ್ಮೇಂದ್ರಅರಸ್, ಸುಬ್ಬೇಗೌಡ್ರು, ರಾಮಣ್ಣ, ಶಿವು, ರಾಜಶೇಖರ್, ಪುನೀತ್.ಹೆಚ್.ಜಿ, ರಂಜಿತ್ ಮತ್ತು ಶರತ್ ನಟಿಸಿದ್ದಾರೆ.

ರವಿದೇವ್‍ಸಂಗೀತಕ್ಕೆ ವಿಜಯ್‍ಪ್ರಕಾಶ್, ಅನುರಾಧಭಟ್ ಮೂರು ಹಾಡುಗಳಿಗೆ ಧ್ವನಿಯಾಗಿದ್ದಾರೆ. ಛಾಯಾಗ್ರಹಣ ರಾಜುಶಿವಶಂಕರ್-ಶ್ಯಾಮ್, ಸಂಕಲನ ಸತೀಶ್‍ಚಂದ್ರಯ್ಯ, ಐದು ಸಾಹಸಕ್ಕೆ ಸುರೇಶ್ ಕೆಲಸ ಮಾಡಿದ್ದಾರೆ. ನಿರ್ದೇಶಕರು ನೃತ್ಯ ಶಾಲೆ ನಡೆಸುತ್ತಿದ್ದು, ಅದರನ್ವಯ ಮಕ್ಕಳ ಕಾರ್ಯಕ್ರಮ ಸಂದರ್ಭದಲ್ಲಿಚಿತ್ರದ ಫಸ್ಟ್ ಲುಕ್ ಹಾಗೂ ಟೀಸರ್‍ನ್ನು ಅನಾವರಣಗೊಳಿಸಲಾಯಿತು.ಮುಂದಿನ ದಿನಗಳಲ್ಲಿ ಟ್ರೈಲರ್, ಹಾಡುಗಳ ಬಿಡುಗಡೆ ಸಮಾರಂಭವನ್ನುಏರ್ಪಡಿಸಲಾಗುವುದು.ಅಮರೇಂದ್ರ,ಚಂದನ, ಪುನೀತ್.ಕೆ.ಎಂ ನಿರ್ಮಾಣ ಮಾಡಿದ್ದು, ಸುಬ್ಬೇಗೌಡ್ರು, ಬಸವರಾಜು, ಧನಂಜಯ್ ಸಹ ನಿರ್ಮಾಪPರು.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
8/02/20

ಚಂದನವನಕ್ಕೆ ಮತ್ತೋಂದು ಹುಲಿ ಸೇರ್ಪಡೆ
ರಾಜಾಹುಲಿ, ಪಡ್ಡೆಹುಲಿ, ಬಾನುಲಿ ಇವುಗಳ ಸಾಲಿಗೆ ‘ಗಂಡುಲಿ’ ಚಿತ್ರವೊಂದು ಸೇರಿಕೊಂಡಿದೆ. ಹಾಗಂತ ಇದು ಮಾಸ್ ಚಿತ್ರವಾಗಿರದೆ, ಸೆಸ್ಪನ್ಸ್. ಥ್ರಿü್ರಲ್ಲರ್ ಕತೆಯಾಗಿದೆ. ಹಳ್ಳಿ ಹಿನ್ನಲೆಯಲ್ಲಿ ನಡೆಯಲಿದ್ದು, ಯುವಕರ ಗುಂಪೊಂದು ತುಂಟತನಗಳನ್ನು ಒಳ್ಳೆಯ ಹಾಗೂ ಕೆಟ್ಟ ರೀತಿಯಲ್ಲಿ ಮಾಡುತ್ತಾ, ಮತ್ತೋಂದು ಕಡೆ ಹಳ್ಳಿಯ ಅಭಿವೃದ್ದಿಗಾಗಿ ಹೋರಾಟ ಮಾಡುತ್ತಿರುತ್ತಾರೆ. ಮುಂದೇನು ಎಂಬುದನ್ನು ಸಿನಿಮಾ ನೋಡಬೇಕಂತೆ. ಬಿಡುಗಡೆಯಾಗದಿರುವ ಎರಡು ಚಿತ್ರಗಳಲ್ಲಿ ನಾಯಕನಾಗಿ ನಟಿಸಿರುವ ವಿನಯ್‍ರತ್ನಸಿದ್ದಿ ನಟನೆ ಜೊತೆಗೆ ನಿರ್ದೇಶನದ ಚುಕ್ಕಾಣಿ ಹಿಡಿಯಲಿದ್ದಾರೆ. ಪಟ್ಟಣದಲ್ಲಿ ಎಂಬಿಬಿಎಸ್ ಮುಗಿಸಿ ಹಳ್ಳಿಗೆ ಹೋಗಿ ಸೇವೆ ಮಾಡುವ ವೈದ್ಯೆಯಾಗಿ ಬೆಂಗಳೂರಿನ ಛಾಯಾದೇವಿ ನಾಯಕಿ. ಇವರೊಂದಿಗೆ ಧರ್ಮೇಂದ್ರಅರಸ್, ಸುಧಾಬೆಳವಾಡಿ, ಗೌತಮ್, ವಿಜಯ್, ಪ್ರಜ್ವಲ್, ಶಿವು, ಸಂತೋಷ್ ತಾರಬಳಗದಲ್ಲಿ ಇದ್ದಾರೆ.

ಕತೆ ಸತೀಶ್, ನಾಲ್ಕು ಹಾಡುಗಳಿಗೆ ರವಿದೇವ್ ಬ್ಯಾಂಡ್ ಬಜಾಯಿಸುತ್ತಿದ್ದಾರೆ. ಛಾಯಗ್ರಹಣ ರಾಜುಶಿವಶಂಕರ್-ಮನು, ಚಿತ್ರಕತೆ,ಸಂಭಾಷಣೆ ಸತೀಶ್-ಅರವಿಂದ್‍ಮನುಕುಮಾರ್, ನೃತ್ಯ ಸತೀಶ್‍ಬೃಹ್ಮಾವರ್ ಅವರದಾಗಿದೆ. ತುಮಕೂರು, ಸಕಲೇಶಪುರ, ಕೆ.ಆರ್.ಪೇಟೆ ಕಡೆಗಳಲ್ಲಿ ಕ್ಯಾಮಾರ ಓಡಾಡಲಿದೆ. ವಿ.ಆರ್. ಫಿಲ್ಮ್ ಪ್ರೊಡಕ್ಷನ್ಸ್ ಮೂಲಕ ನಿರ್ಮಾಣವಾಗುತ್ತಿರುವ ಚಿತ್ರಕ್ಕೆ ಅಮರೇಂದ್ರ, ಬಸವರಾಜು, ಪುನೀತ್‍ಕುಮಾರ್, ಉಮೇಶ್, ಸುಬ್ಬೇಗೌಡ, ಪ್ರಭು, ಸುಮ ಮತ್ತು ಚಂದನ್ ಸಹ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ. ಏಕಾದಶಿ ದಿನದಂದು ಆರ್.ಟಿ.ನಗರದ ಗಣೇಶ ಮಂದಿರದಲ್ಲಿ ಸರಳವಾಗಿ ಮಹೂರ್ತ ಆಚರಿಸಿಕೊಂಡಿದೆ.
ಸಿನಿ ಸರ್ಕಲ್.ಇನ್ ನ್ಯೂಸ್
10/07/18
For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore