HOME
CINEMA NEWS
GALLERY
TV NEWS
REVIEWS
CONTACT US
ಮೂರನೆ ವಾರದಲ್ಲಿ ಗಂಡ ಊರಿಗ್ ಹೋದಾಗ
ಎಸ್.ಬಿ.ಎಲ್. ಎಂಟರ್ಪ್ರೈಸಸ್ ಸಂಸ್ಥೆಯಲ್ಲಿ ನಿರ್ಮಾಣವಾದ ‘ಗಂಡ ಊರಿಗ್ ಹೋದಾಗ’ ಚಿತ್ರ ರಾಜ್ಯದಾದ್ಯಂತ ಬಿಡುಗಡೆಯಾಗಿ ಪ್ರೇಕ್ಷಕರಿಂದ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಚಿತ್ರ ಸಮಾಜ ಮುಖಿಯಾಗಿದ್ದು ಇಂದಿನ ಯುವ ಪೀಳಿಗೆಯ ಮನಸ್ಸುಗಳನ್ನು ಒಂದು ಮಾಡುವ ನಿಟ್ಟಿನಲ್ಲಿ ಹಾಗೂ ಸಾಂಸಾರಿಕ ಜೀವನದಲ್ಲಿ ಅಹಂ ಸೇರಿದರೆ ಬದುಕು ಏನಗುತ್ತದೆ. ಹಾಗೂ ಅದನ್ನು ಹೇಗೆ ಸರಿ ಮಾಡಬಹುದು ಎಂಬುದನ್ನು ನಿರ್ದೇಶಕ ಸಾಯಿಕೃಷ್ಣ ತಮ್ಮದೇ ರೀತಿಯಲ್ಲಿ ಪ್ರೇಕ್ಷಕರ ಮುಂದಿಟ್ಟಿದ್ದಾರೆ. ಚಿತ್ರದ ಶೀರ್ಷಿಕೆಯನ್ನು ನೋಡಿ ಪ್ರೇಕ್ಷಕರಲ್ಲಿ ಗೊಂದಲ ಮೂಡಬಹುದು ಆದರೆ ಇದು ಕುಟುಂಬ ಸಮೇತ ನೊಡಬಹುದಾದ ಚಿತ್ರ ಎನ್ನುವುದರಲ್ಲಿ ಎರಡು ಮಾತಿಲ್ಲ. ಸಿನಿಮಾ ಹಾಸ್ಯ, ಸಸ್ಪೆನ್ಸ್, ಥ್ರಿಲ್ಲರ್, ಆಕ್ಷನ್, ಹಾರರ್ ಜೊತೆಗೆ ಮನರಂಜನೆಯಿಂದ ಕೂಡಿದೆ.

ಹೆಣ್ಣು ಮಕ್ಕಳಿಗೆ ಲೈಂಗಿಕ ಕಿರುಕುಳ ಕೊಡುವ ಬೀದಿ ಕಾಮಣ್ಣರಿಗೆ ಚಿತ್ರದಲ್ಲಿನ ನಾಯಕಿಯರು ಸರಿಯಾಗಿ ಒದ್ದು ಸದೆಬಡಿಯುವ ಸನ್ನಿವೇಶ ಬಹಳ ಚನ್ನಾಗಿ ಮೂಡಿ ಬಂದಿದೆ. ಚಿತ್ರವು ಮೂರನೆ ವಾರಕ್ಕ ಮುನ್ನಡೆಯುತ್ತಿದೆ. ಇತ್ತೀಚೆಗೆ ಬಿಡುಗಡೆಯಾದ ಕೆಲವು ಚಿತ್ರಗಳಿಗೆ ಪ್ರೇಕ್ಷಕರಿಲ್ಲದೇ ಪ್ರದರ್ಶನ ರದ್ದು ಮಾಡಿದ ಹಿನ್ನೆಲೆಯಲ್ಲಿ ಜಿಲ್ಲೆಗಳಲ್ಲಿನ ಚಿತ್ರಮಂದಿರದವರು ಸಿನಿಮಾವನ್ನು ತರಿಸಿಕೊಂಡು ಪ್ರದರ್ಶನ ಮಾಡುತ್ತಿದ್ದಾರೆ. ಬಿಡುಗಡೆಯ ಸಮಯದಲ್ಲಿ ದೊಡ್ಡ ಸಿನಿಮಾಗಳಿಗೆ ಸಿಕ್ಕ ಚಿತ್ರಮಂದಿರಗಳು ಸಿಗದೇ ಇದ್ದು ಪ್ರೇಕ್ಷಕರಿಗೆ ಸಿನಿಮಾ ಮುಟ್ಟುವಲ್ಲಿ ಸಫಲವಾಗಿರಲಿಲ್ಲ ಈಗ ಚಿತ್ರ ನಿದಾನವಾಗಿ ರಾಜ್ಯದಾದ್ಯಂತ ಬಿಡುಗಡೆಯಾಗುತ್ತಿರುವುದು ಚಿತ್ರ ತಂಡಕ್ಕೆ ಚೇತರಿಕೆಯನ್ನು ತಂದಿದೆ. ರೀಮೇಕ್ ಹಕ್ಕನ್ನು ಹಿಂದಿ ಭಾಷೆಗೆ ಒಳ್ಳೆಯ ಮೌಲ್ಯಕ್ಕೆ ಮಾತುಕಥೆ ನಡೆಯುತ್ತಿದೆ. ವಿ.ಸಿ.ಎನ್. ಮಂಜುರಾಜ್ ಸೂರ್ಯ , ಸಿಂಧೂರಾವ್, ಸ್ವಪ್ನ, ಅನೂಗೌಡ, ಶಾಲಿನಿ ಹಾಗೂ ರಾಧಿಕಾ ಅಭಿನಯಿಸಿದ್ದಾರೆ. ಜಗದೀಶ್ ವಡೇರಹಳ್ಳಿ, ಜಾನ್, ಕಿರಣ್ ನಿರ್ಮಾಪಕರುಗಳಾಗಿ ಗುರುತಿಸಿಕೊಂಡಿದ್ದಾರೆ.
ಸಿನಿ ಸರ್ಕಲ್.ಇನ್ ನ್ಯೂಸ್
-10/03/18

ತೆರೆ ಮೇಲೆ ಗಂಡ ಊರಿಗ್ ಹೋದಾಗ
ಗಂಡ-ಹೆಂಡತಿ ಬಾಂದವ್ಯ, ಅವರು ಹೇಗಿರಬೇಕು. ಪತಿಯಾದವನು ಪತ್ನಿಯನ್ನು ಹದ್ದುಬಸ್ತಿನಲ್ಲಿ ಇಟ್ಟುಕೊಂಡಿದ್ದರೆ, ಕಿರುಕುಳಗಳನ್ನು ನೀಡುತ್ತಿದ್ದರೆ, ಸ್ವತಂತ್ರವಾಗಿಡಲು ಬಿಡದೆ ಇವೆಲ್ಲವುಗಳನ್ನು ಸಹಿಸಿಕೊಂಡ ಆಕೆಗೆ ಕೆಲಸದ ನಿಮಿತ್ತ ಗಂಡ ಹೂರಗಡೆ ಹೋದಾಗ ಆಕೆಯ ಮನಸ್ಥಿತಿ ಯಾವ ರೀತಿ ಇರುತ್ತದೆಂದು ‘ಗಂಡ ಊರಿಗ್ ಹೋದಾಗ’ ಚಿತ್ರದಲ್ಲಿ ಸಂದೇಶದ ಮೂಲಕ ಕಾಮಿಡಿಯಾಗಿ ತೋರಿಸುವ ಪ್ರಯತ್ನ ಮಾಡಲಾಗಿದೆ. ಹಾಗಂತ ಡಬ್ಬಲ್ ಮೀನಿಂಗ್ ಡೈಲಾಗ್‍ಗಳಿಗೆ ಅವಕಾಶ ನೀಡಿಲ್ಲವಂತೆ. ಗಂಡ ಇಲ್ಲದಿದ್ದಾಗ ಗೆಳೆತಿಯರ ಜೊತೆ ಒಂದು ಒಳ್ಳೆ ಕೆಲಸಕ್ಕಾಗಿ ಹೊರಗಡೆ ಹೋದ ಸಂದರ್ಭದಲ್ಲಿ ಸಮಾಜವು ಹೆಂಗಸರನ್ನು ಯಾವ ರೀತಿ ನೋಡುತ್ತದೆ ಎಂಬುದನ್ನು ಹೇಳಿದ್ದಾರೆ. ಸನ್ನಿವೇಶದಲ್ಲ ಕುಡಿಯುವ ದೃಶ್ಯ ಇರುವುದರಿಂದ ಸೆನ್ಸಾರ್‍ನವರು ಎ ಪ್ರಮಾಣ ಪತ್ರ ನೀಡಿದ್ದಾರೆ. ಕಳೆದ ತಿಂಗಳು ಹಾಡುಗಳನ್ನು ಯೂ ಟ್ಯೂಬ್‍ನಲ್ಲ ಬಿಡಲಾಗಿದ್ದು ಇಲ್ಲಿಯವರೆವಿಗೂ ಹದಿನಾಲ್ಕು ಲಕ್ಷ ವೀಕ್ಷಕರು ನೋಡಿರುವುದು ಪ್ಲಸ್ ಪಾಯಿಂಟ್ ಆಗಿದೆ.

ತಾರಬಳಗದಲ್ಲಿ ಸಿಂಧೂರಾವ್, ಸ್ವಪ್ನ, ರಾಧಿಕಾಶ್ಯಾಂ, ಅನುಗೌಡ, ಶಾಲಿನಿ. ಕಾರ್ಯಕಾರಿ ನಿರ್ಮಾಪಕ ಹಾಗೂ ಸಿನಿಮಾ ಪತ್ರಕರ್ತ ವಿಸಿಎನ್.ಮಂಜುನಾಥ್, ನಿರ್ಮಾಪಕ ಜಗದೀಶ್.ಪಿ. ವಡೆಯರಹಳ್ಳಿ ಗಂಡನ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಹೆಂಗಸರ ಮೇಲಿನ ಮೂರು ಹಾಡುಗಳಿಗೆ ಪವನ್ ಸಾಹಿತ್ಯ, ಗಾಯಕಿಯರಾದ ಪಲ್ಲವಿ,ಜೋಗಿಸೋನು, ಅನುರಾಧಭಟ್ ಕಂಠದಾನಕ್ಕೆ ಅರುಣ್‍ಆಂಡ್ರೂ ಸಂಗೀತವಿದೆ. ರಾಧಕೃಷ್ಣ ನಿರ್ದೇಶನ, ಜಾನ್ ಮತ್ತು ಕಿರಣ್‍ರಾಜ್ ನಿರ್ಮಾಪಕರು. ಇವರೆಲ್ಲರಿಗೂ ಚಿತ್ರರಂಗ ಹೊಸ ಅನುಭವ. ಹೆಸರಾಂತ ವಿತರಕ ಪಾಲ್‍ಚಂದಾನಿ ಬಳಿ ಕೆಲಸ ಮಾಡಿರುವ ಪಾಲ್‍ಬಾಬು ಸುಮಾರು 35 ಕೇಂದ್ರಗಳಲ್ಲಿ ಚಿತ್ರವನ್ನು ಇದೇ ಶುಕ್ರವಾರದಂದು ಬಿಡುಗಡೆ ಮಾಡುತ್ತಿದ್ದಾರೆ.
ಚಿತ್ರಗಳು; ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
-20/02/18
ಗಂಡ ಊರಿಗೆ ಹೋದಾಗ ಗೀತೆಗಳು
ಗಂಡ ಕೆಲಸದ ನಿಮಿತ್ತ ಹೊರಗೆ ಹೋದರೆ ಪತ್ನಿ ಹೆದರಿಕೊಳ್ಳುವುದು ಸಹಜ ಎನ್ನುತ್ತಾರೆ. ಕಾಲ ಬದಲಾಗಿದೆ, ಹೆಂಡತಿ ಬದಲಾಗಿದ್ದಾರೆ. ಎಂಬುದಾಗಿ ‘ಗಂಡ ಊರಿಗೆ ಹೋದಾಗ’ ಸಿನಿಮಾದಲ್ಲಿ ತೋರಿಸುವ ಪ್ರಯತ್ನ ಮಾಡಲಾಗಿದೆ. ಶೀರ್ಷಿಕೆ ಕೇಳಿದಾಗ ಇದೊಂದು ಆ ತರಹದ ಚಿತ್ರ ಅಂದುಕೊಳ್ಳಬೇಡಿ ಎನ್ನುತ್ತಾರೆ. ಮೊದಲಬಾರಿ ರಚಿಸಿ ನಿರ್ದೇಶನ ಮಾಡಿರುವ ಸಾಯಿಕೃಷ್ಣ. ಹಾಸ್ಯ ಕವಿ ಬೀಚಿ ಅವರ ಒಂದು ಸಾಲು ಕತೆ ಬರೆಯಲು ಸ್ಪೂರ್ತಿಯಾಗಿದೆಯಂತೆ. ಅರ್ಥಪೂರ್ಣ ಸಂದೇಶ ಇರಲಿದ್ದು ಅದನ್ನು ಹೇಳಿದರೆ ಕತೆಯ ಸಾರ ಬಿಟ್ಟುಕೊಟ್ಟಂತೆ ಆಗುತ್ತದೆ. ದಯಮಾಡಿ ಚಿತ್ರಮಂದಿರಕ್ಕೆ ಬನ್ನಿ ಎಂಬ ಕೋರಿಕೆ ಬರುತ್ತದೆ. ಸಿಂಧೂರಾವ್, ರಾಧಿಕಾರಾಮ್, ಅನು, ಶಾಲಿನಿ, ಸ್ವಪ್ನ ಐವರು ನಾಯಕಿಯರಾಗಿ ಕಾಣ ಸಿಕೊಂಡಿದ್ದು ಎಲ್ಲರೂ ನಮ್ಮದು ಕುಟುಂಬ ಸಮೇತ ನೋಡಬಹುದಾದ ಚಿತ್ರವೆಂದು ಒಕ್ಕರೂಲವಾಗಿ ಬಣ ್ಣಸಿಕೊಳ್ಳುತ್ತಾರೆ.

ಧ್ವನಿಸಾಂದ್ರಿಕೆ ಲೋಕಾರ್ಪಣೆ ಮಾಡಿದ ನಿರ್ಮಾಪಕ ಬಿ.ಕೆ.ಶ್ರೀನಿವಾಸ್ ಮಾತನಾಡುತ್ತಾ ಗಾಂಧಿನಗರ ಎಂಬ ಮಾಯೆಯಲ್ಲಿ ಯಾರು ಎಲ್ಲಿಗೆ ಹೋಗುತ್ತಾರೆಂದು ತಿಳಿಯುವುದಿಲ್ಲ. ಮಾದ್ಯಮದವರಿಂದ ಕಲಾವಿದರು ಎತ್ತರಕ್ಕೆ ಬೆಳೆದಿದ್ದಾರೆ. ಆದರೂ ಅವರು ಹಾಳಾಗಿದ್ದು ಅವರ ಅಹಂಕಾರ ಕಾರಣವಾಗಿದೆ. ಗ್ಯಾಂಬ್ಲಿಂಗ್, ಶೋಕಿಗೋಸ್ಕರ ಸಿನಿಮಾ ಮಾಡೋಲ್ಲ. ನಿರ್ಮಾಪಕರು ಉತ್ತಮ ಚಿತ್ರ ನೀಡಿದಲ್ಲಿ ಚಿತ್ರರಂಗ ಬೆಳಿತದೆ. ವಾರಕ್ಕೆ ಹಚ್ಚು ಸಿನಿಮಾಗಳು ತೆರೆಗೆ ಬರುತ್ತಿರುವುದಕ್ಕೆ ವಾಣ ಜ್ಯ ಮಂಡಳಿ ನಿಯಮ ರೂಪಿಸಬೇಕು. ಮಗ ನಟನೆ ತರಭೇತಿ ಪಡೆದುಕೊಂಡಿದ್ದಾನೆ. ಅವನನ್ನು ಇದೇ ವರ್ಷ ಅದ್ದೂರಿಯಾಗಿ ಪರಿಚಯಿಸಲು ಸಿದ್ದತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದರು. ಪತ್ರಕರ್ತ ವಿಸಿ.ಎನ್.ಮಂಜುರಾಜ್ ಕಾರ್ಯಕಾರಿ ನಿರ್ಮಾಪಕರ ಜೊತೆಗೆ ಒಬ್ಬರಿಗೆ ಪತಿಯಾಗಿ ನಟನೆ ಮಾಡಿದ್ದಾರೆ. ಜಗದೀಶ್.ಪಿ.ವಡೆಯರ ಹಳ್ಳಿ, ಜಾನ್ ಮತ್ತು ಕಿರಣ್‍ರಾಜ್ ನಿರ್ಮಾಣ ಮಾಡಿದ್ದಾರೆ.
-18/01/18
For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore