HOME
CINEMA NEWS
GALLERY
TV NEWS
REVIEWS
CONTACT US
ಈಗಿನ ನಿರ್ದೇಶಕರು ಕಂಪ್ಯೂಟರ್ ಮುಂದೆ ಆಕ್ಷನ್ ಕಟ್ ಹೇಳ್ತಾರೆ – ಅನಂತನಾಗ್
ಶನಿವಾರ ಮಾದ್ಯಮದವರು ‘ಗೌಡ್ರು ಹೋಟೆಲ್’ ಚಿತ್ರದ ಧ್ವನಿಸಾಂದ್ರಿಕೆ ಅನಾವರಣಕ್ಕೆ ಹಾಜರಾಗಿದ್ದರು. ಮೂರು ಚಿತ್ರದ ಕಾರ್ಯಕ್ರಮಗಳು ಒಂದೇ ಆಗಿರುವುದು ಕಾಕತಾಳಿಯವಾಗಿತ್ತು. ಪಂಚತಾರಾ ಹೋಟೆಲ್‍ನಲ್ಲಿ ಚಿಣ್ಣರುಗಳು ಹೆಜ್ಜೆ ಹಾಕಿ ತಂಡದ ಮುಖ್ಯಸ್ಥರುಗಳನ್ನು ವೇದಿಕೆಗೆ ಕರೆತರಲಾಯಿತು. ನಿರೂಪಕಿ ಉತ್ರೇಕ್ಷೆ ಮಾತುಗಳಂತೆ ಮೈಕ್ ಎಲ್ಲರಿಗೂ ತಲುಪುತ್ತಿತ್ತು. ನಾಯಕಿ ವೇದಿಕೆ ಮಾತನಾಡುತ್ತಾ ಕಲಾವಿದರು, ತಂತ್ರಜ್ಘರನ್ನು ಹೊಗಳಿ ಎಲ್ಲಾ ಹಾಡುಗಳು ಕೇಳುವಂತಿವೆ ಎಂದಷ್ಟೇ ಹೇಳಿದರು. ಬಂದಿರುವುದರಲ್ಲಿ ಅರ್ಧ ಕುಟುಂಬವೆ ಇರುವುದರಿಂದ ದುಗಡ ಇದೆ ಎಂದು ನಗೆ ಚೆಲ್ಲಿದ ನಾಯಕ ರಚನ್‍ಚಂದ್ರ ನಾನೇ ಪಾತ್ರಕ್ಕೆ ಸೂಟ್ ಆಗುತ್ತೆನೆಂದು ನಿರ್ದೇಶಕರು ವರಾತ ಮಾಡಿದಾಗ ನಂಬಲಿಕ್ಕೆ ಆಗಲಿಲ್ಲ. ಅಪ್ಪನಿಗೆ ಸುಳ್ಳು ಹೇಳಿ ನಟಿಸಿದ್ದೆ ಕ್ಯಾಮಾರ ಮುಂದೆ ಸುಲಭವಾಗಿ ಅಭಿನಯಿಸುವಂತಾಯಿತು. ವಿದೇಶದಲ್ಲಿ ಹುಟ್ಟಿ ಬೆಳದ ಕಾರಣ ಅನಂತ್ ಸರ್ ಮೂರು ಚಿತ್ರಗಳನ್ನು ಮಾತ್ರ ನೋಡಿದ್ದೇನೆ. ಇಂದು ಅವರೊಂದಿಗೆ ನಟಿಸಿದ್ದು ಖುಷಿ ಬಂತು ಎಂದರು. ಪಾತ್ರ ಚಿಕ್ಕದು ಆಗಿದ್ದರೂ ಕತೆಗೆ ಮುಖ್ಯವಾಗಿದೆ. ಇಂತಹ ನಟ, ನಿರ್ಮಾಪಕರು ಉದ್ಯಮಕ್ಕೆ ಬಂದಲ್ಲಿ ಒಳ್ಳೆಯದು ಆಗುತ್ತದೆ. ನಮ್ಮ ಕಾಲದಲ್ಲಿ ನಿರ್ದೇಶಕನಾದವನು ಕಲಾವಿದನ ಮುಂದೆ ನಿಂತು ಎಲ್ಲವನ್ನು ಗಮನಿಸಿ ಕೊನೆಗೆ ಓಕೆ ಎನ್ನುತ್ತಿದ್ದರು. ಕಾಲ ಬದಲಾದಂತೆ ಈಗಿನ ನಿರ್ದೇಶಕರು ನಟನೆ ಮಾಡುವ ಕಲಾವಿದರನ್ನು ನೋಡದೆ ಕಂಪ್ಯೂಟರ್ ಮುಂದೆ ಕಟ್ ಹೇಳುವ ಪದ್ದತಿ ಚಾಲ್ತಿಯಲ್ಲಿದೆ. ಆದರೆ ಇಲ್ಲಿ ಅವರು ನಮ್ಮ ಮುಂದೆ ನಿಂತುಕೊಂಡು ಪಾದರಸದಂತೆ ಓಡಾಡುತ್ತಿದ್ದುದನ್ನು ನೋಡಿದಾಗ ಹಳೆಯದೆಲ್ಲ ನೆನಪಿಗೆ ಬಂತು. ಎಲ್ಲರು ಚೆನ್ನಾಗಿ ಅಭಿನಯಿಸಿದ್ದಾರೆ. ವೇದಿಕೆಗೆ ನನ್ನ ಜೊತೆ ತೆರೆ ಹಂಚಿಕೊಳ್ಳುವ ಅವಕಾಶ ಸಿಕ್ಕಿಲ್ಲವೆಂದು ಹೇಳಿದ್ದಾರೆ. ಮುಂದಿನ ಸಿನಿಮಾದಲ್ಲಿ ಬರಬಹುದು ಅಂತ ಸಣ್ಣಗೆ ನಕ್ಕರು ಅನಂತ್‍ನಾಗ್.

ಅಪ್ಪ ಸಂಗೀತವನ್ನು ಕಲಿತಿದ್ದು ಕನ್ನಡಿಗರಾದ ಜಿ.ಕೆ.ವೆಂಕಟೇಶ್ ಅವರಿಂದ. ಅಂದಿನಿಂದ ವಿಶೇಷ ಅಭಿಮಾನ ಇಲ್ಲಿದೆ ಅಂತ ಹೇಳಿಕೊಂಡಿದ್ದು ಮೊದಲ ಬಾರಿ ಸಂಗೀತ ಸಂಯೋಜಿಸಿರುವ ಯುವನ್‍ಶಂಕರ್‍ರಾಜ. ನಿರ್ಮಾಪಕ ಸತೀಶ್‍ರೆಡ್ಡಿ, ಸಹ ನಿರ್ಮಾಪಕರುಗಳಾದ ರಮೇಶ್‍ಶಿವ,ಸತ್ಯನ್.ಎಸ್.ಪಿ ಚುಟುಕು ಮಾತಿಗೆ ವಿರಾಮ ಹಾಕಿದರು. ನಾನು ಎರಡು ನಿಮಿಷ ಹೆಚ್ಚು ಸಮಯ ತೆಗೆದುಕೊಳ್ಳುತ್ತೇನೆಂದು ಅನುಮತಿ ಪಡೆದುಕೊಂಡ ನಿರ್ದೇಶಕ ಪಿ.ಕುಮಾರ್ ರಚನ್‍ಚಂದ್ರ ಅವರ ಮಾನವೀಯ ಗುಣಗಳು, ವೇದಿಕಾರ ಸರಳತೆಯನ್ನು ನೆನಪು ಮಾಡಿಕೊಂಡರು. ವಯಸ್ಸಾದ ಪಾತ್ರವಾಗಿರುವುದರಿಂದ ಬಿಳಿದಾಡಿಯನ್ನು ಮೇಕಪ್ ಮೂಲಕ ಮಾಡಿಸಿದರಾಯಿತು ಅಂದುಕೊಂಡಿದ್ದೆ. ಆದರೆ ಪ್ರಕಾಶ್‍ರೈರವರು ಹತ್ತು ದಿನದಿಂದ ಶೇವ್ ಮಾಡದೆ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಅನಂತ್ ಸರ್ ನಿರ್ದೇಶಕರ ನಟ. ದ್ವಾರಕೀಶ್, ಟೆನ್ನಿಸ್‍ಕೃಷ್ಣ, ಸಿಹಿಕಹಿಚಂದ್ರು, ಕಡ್ಡಿಪುಡಿಚಂದ್ರು, ನಟನೆ ಇದೆ. ನಾಲ್ಕು ಹಾಡುಗಳನ್ನು ಈಗ ಬಿಡುಗಡೆ ಮಾಡಲಾಗುತ್ತಿದ್ದು. ಒಂದು ವಿಶೇಷ ಹಾಡನ್ನು ನಂತರ ಲೋಕಾರ್ಪಣೆ ಮಾಡಲಾಗುವುದು. ಪ್ರಾರಂಭದಲ್ಲಿ ಕನ್ನಡ ಮಾತನಾಡಲು ಬರುತ್ತಿರಲಿಲ್ಲ. ಈ ಭಾಷೆಯನ್ನು ಚೆನ್ನಾಗಿ ಕಲಿತುಕೊಂಡಿದ್ದರಿಂದ 6ನೇ ಚಿತ್ರಕ್ಕೆ ಕೆಲಸ ಮಾಡಲು ಅವಕಾಶ ಸಿಕ್ಕಿದೆ. ನನ್ನ ಪಾಲಿಗೆ ಜನರೇ ದೇವರು, ಮಾದ್ಯಮದವರು ಎಂದು ಹೇಳುವುದರೊಂದಿಗೆ ರಾತ್ರಿಯ ಸುಂದರ ಸಮಾರಂಭಕ್ಕೆ ತೆರೆಬಿತ್ತು.
-Cine Circle News
-11/09/17

GOWDRU HOTEL’ LAUNCHED
K
annada film ‘Gowdru Hotel’, a remake of Malayalam hit ‘Ustad Hotel’ mounted the sets on Sunday morning at a plush hotel in Bengaluru. The film is produced by Satish Reddy, Ramesh Shiva and Satyan. The film is directed by P Kumar. Shiva is the cameraman. The film stars Rachan Chandra, Vedika and Prakash Rai among others.  

Director Kumar told reporters that it was planned to do this film about a year back. The Malayalam film stars Mammotty’s son Dulquer Salman and Nitya Menen in lead roles. He said the rights of the film were acquired to remake it into Kannada. He said the film will be shot in Bengaluru, Kundapura and Mysuru.  

Yuvan Shankar Raja, son of music maestro Ilayaraja will be scoring the music for the movie. He said he had an emotional connect with Kannada film land as his father got introduced as a composer here and had worked in many Kannada films. He said his music will do the talking.  

Vedika said she is happy to be back acting in her third Kannada film. Rachan Chandra said he is doing his first movie after completing his engineering graduation. Prakash Rai will be seen in the film playing the role of a grandfather.
-15/03/17For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore