HOME
CINEMA NEWS
GALLERY
TV NEWS
REVIEWS
CONTACT US
ನೆಮ್ಮದಿಗಾಗಿ ಹುಡುಕಾಟ
ಕಂಪ್ಯೂಟರ್‍ನಲ್ಲಿ ‘ಗೂಗಲ್’ ಎಲ್ಲವನ್ನು ಹುಡುಕಲು ಸಹಕಾರಿಯಾಗಿರುತ್ತದೆ. ಅದೇ ರೀತಿ ‘’ಗೂಗಲ್’ ಸಿನಿಮಾದಲ್ಲಿ ಸುಖದ ಹುಡುಕಾಟಕ್ಕಾಗಿ ಇದನ್ನು ಬಳಕೆ ಮಾಡಲಾಗಿದೆ. ದಂಪತಿಗಳ ಮದ್ಯೆ ಸರಸ-ವಿರಸ ಇದ್ದರೇನೇ ಚೆಂದ. ಆದರೆ ಅದು ಅನ್ಯೋನ್ಯತೆಗೆ ಕುಂದು ಬಾರದಂತೆ ನೋಡಿಕೊಳ್ಳುವುದು ಮುಖ್ಯ. ಗಂಡನಾದವನು ಸಣ್ಣ ಸಣ್ಣ ಆಸೆಗಳನ್ನು ಪೂರೈಸದೆ ಇರುವಾಗ ಆಕೆ ಯಾವ ಹಂತಕ್ಕೆ ಹೋಗುತ್ತಾಳೆ ಎಂಬುದನ್ನು ಸಹ ತೋರಿಸುವ ಪ್ರಯತ್ನ ಮಾಡಿದ್ದಾರೆ. ಸನ್ನವೇಶಗಳನ್ನು ನೋಡುವಾಗ ಕೆಲವು ದೃಶ್ಯಗಳು ನಮ್ಮ ನಡುವೆ ನಡೆದಿರುವಂತೆ ಭಾಸವಾಗುತ್ತದೆ. ಖಾಸಗಿ ಕಂಪನೆಯಲ್ಲಿ ಕೆಲಸ ಮಾಡುವ ಆತನಿಗೆ ಮದ್ದಾದ ಹೆಂಡ್ತಿ, ಪುಟ್ಟ ಮಗಳೊಂದಿಗೆ ಸುಖ ಸಂಸಾರ. ಕಷ್ಟಪಟ್ಟು ಹಗಲಿರುಳು ದುಡಿದು, ಕಚೇರಿ ಒತ್ತಡದಿಂದ ಪತ್ನಿಯ ಆಸೆಗಳನ್ನು ನಿವಾರಿಸಲು ಮರೆಯುತ್ತಾನೆ. ಇದರಿಂದ ನೊಂದ ಆಕೆಯು ಪರಪುರುಷನೊಂದಿಗೆ ಬಾಳ್ವೆ ಮಾಡಲು ಹೋಗುತ್ತಾಳೆ. ಇದರಿಂದ ಆಕೆಯ ಹುಡುಕಾಟ ಮಾಡುತ್ತಿರುವಾಗ ಕರ್ನಾಟಕದಲ್ಲಿರುವ ಕಾಲ್ಪನಿಕ ಊರು ಗೂಗಲ್ ಸಿಗುತ್ತದೆ. ಈ ಊರಿನಲ್ಲ ಏನೇನು ಉಪಕತೆಗಳು ನಡೆಯುತ್ತವೆ ಅಂತ ಚಿತ್ರ ನೋಡಿದರೆ ಗೊತ್ತಾಗುತ್ತದೆ.

ಮುದ್ದಾದ ಹಾಡುಗಳನ್ನು ಬರೆದು ಹೆಸರು ಮಾಡಿರುವ ಡಾ.ನಾಗೇಂದ್ರಪ್ರಸಾದ್ ದೀರ್ಘ ಗ್ಯಾಪ್ ನಂತರ ಚಿತ್ರಕ್ಕೆ ಕತೆ,ಚಿತ್ರ,ಕತೆ, ಸಂಭಾಷಣೆ, ಹಾಡಗಳು, ನಿರ್ದೇಶನ ಜೊತೆಗೆ ಮೊದಲಬಾರಿ ನಾಯಕ, ನಿರ್ಮಾಪಕನಾಗಿ ಕಾಣ ಸಿಕೊಂಂಡಿರುವುದು ವಿಶೇಷ ಎನ್ನಬಹುದು. ಎರಡು ಹಾಡುಗಳು ಕೇಳವಂತಿದೆ ಅಲ್ಲದೆ ನಾಯಕನಾಗಿ ಸಮರ್ಥನೆಂದು ತೋರಿಸಿಕೊಟ್ಟಿದ್ದಾರೆ. ಗೃಹಿಣ ಯಾಗಿ ನಟಿಸಿರುವ ಶುಭಪೂಂಜಾ ಪಾತ್ರಕ್ಕೆ ತಕ್ಕ ಅಭಿನಯವಿದೆ. ಯುವ ಜೋಡಿಗಳಾಗಿ ದೀಪಕ್, ಅಮೃತರಾವ್ ಇಬ್ಬರಿಗೂ ಹೆಚ್ಚು ಸ್ಕೋಪ್ ಸಿಕ್ಕಿಲ್ಲ. ಪಯಣದಲ್ಲಿ ನಾಯಕನಿಗೆ ಸಾಥ್ ನೀಡುವ ಶೋಭರಾಜ್, ಮುನಿ, ಜೈದೇವ್, ಸಂಪತ್ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಪ್ರಚಲಿತ ಸಮಾಜದಲ್ಲಿ ಅನೈತಿಕ ಸಂಬಂದಗಳಿಂದ ಆಗುವ ಪರಿಣಾಮಗಳೇನು ಎಂದು ಹೇಳಿರುವ ನಿರ್ದೇಶಕ ಶ್ರಮವನ್ನು ಶ್ಲಾಘಿಸಬಹುದು.
ಸಿನಿ ಸರ್ಕಲ್.ಇನ್ ನ್ಯೂಸ್
-17/02/18

ಹದಿನಾರರಿಂದ ಗೂಗಲ್ ಪಯಣ
ಹೆಸರಾಂತ ಸಾಹಿತಿ ಡಾ.ನಾಗೇಂದ್ರಪ್ರಸಾದ್ ‘ಗೂಗಲ್’ ಅಡಿಬರಹದಲ್ಲಿ ಈ ಭೂಮಿ ಬಣ್ಣದ ಬುಗುರಿ ಚಿತ್ರಕ್ಕೆ ಕತೆ,ಚಿತ್ರಕತೆ,ಸಂಭಾಷಣೆ, ಸಾಹಿತ್ಯ, ಸಂಗೀತ, ನಿರ್ದೇಶನ, ನಿರ್ಮಾಣದ ಜೊತೆಗೆ ಮೊದಲಬಾರಿ ನಾಯಕನಾಗಿ ನಟಿಸಿದ್ದಾರೆ. ಅವರು ಹೇಳುವಂತೆ ಎಂಟು ವರ್ಷಗಳ ಕೆಳಗೆ ಒಂದು ಘಟನೆ ನೋಡಿದಂತೆ ಕತೆ ರಚಿಸಲಾಗಿದೆ. ಸಮಾಜವನ್ನು ನೋಡಬಹುದಾದ, ನೋಡಿರುವ ಸಂಗತಿಗಳು ಮರುಕಳಿಸುತ್ತವೆ. ನಾಯಕನಿಗೆ ಇಮೇಜ್ ಅಂತ ತೋರಿಸದೆ ಎಲ್ಲಾ ಪಾತ್ರಗಳಿಗೂ ಅದರದೆ ಆದ ಮಹತ್ವ ಇದೆ. ಬದುಕಿನ ಅಂತರಂಗದ ಹುಡುಕಾಟದಲ್ಲಿ ಸಂಗತಿಗಳನ್ನು ಅಲ್ಲಗೆಳೆದರೆ ಧಪ್ಪನೆ ಎದ್ದು ನಿಲ್ಲುತ್ತವೆ. ಅದನ್ನು ಹುಡುಕಲು ಹೋದಾಗ ಏನೇನು ಆಗುತ್ತದೆ ಎಂಬುದನ್ನು ಸಿನಿಮಾ ನೋಡಬೇಕು. ಪಾಂಡಿಚೇರಿ, ಗುರೂರು, ಹಾಸನ, ದೇವರಾಯುನದುರ್ಗ ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಚಿತ್ರಮಂದಿರದಿಂದ ಹೊರಬರುವಾಗ ಪ್ರೇಕ್ಷಕ ಭಾರವಾದ ಮನಸ್ಸನ್ನು ಹೊತ್ತುಕೊಳ್ಳುವುದು ಅಲ್ಲದೆ ಸಣ್ಣ ಪರಿವರ್ತನೆ ಆಗುತ್ತಾನೆ. ಬೇಬಿ ವೈಷ್ಣವಿ ನಟನೆ ಚೆನ್ನಾಗಿದೆ. ಜೋಜೋ ಲಾಲಿ ಹಾಡು ಸಾಮಾಜಿಕ ಜಾಲತಾಣದಲ್ಲಿ ಹಿಟ್ ಆಗಿರುವುದು ಪ್ಲಸ್ ಪಾಯಿಂಟ್ ಆಗಿದೆ. ಚಲನಚಿತ್ರ ಛಾಯಗ್ರಾಹಕರಾದ ಮನೋಹರ್, ಮೋಕ್ಷೇಂದ್ರ ಅವರ ಶಿಪಾರಸ್ಸು ಮೇರೆಗೆ ಅಮೃತರಾವ್ ಆಯ್ಕೆಯಾದರು ಎಂದು ವಿವಿರ ಬಿಚ್ಚಿಟ್ಟರು .

ನಾಲ್ಕು ರೀತಿಯಲ್ಲಿ ಪಾತ್ರಗಳು ಬರುವಾಗ ಅನೂಹ್ಯ ಕತೆಗಳು ಹುಟ್ಟಿಕೊಳ್ಳುತ್ತವೆ. ಗೃಹಿಣ ಯಾಗಿ ಕಾಣ ಸಿಕೊಂಡಿದ್ದೇನೆ ಎಂದಷ್ಟೇ ಹೇಳಿಕೊಂಡಿದ್ದು ನಾಯಕಿ ಶುಭಾಪೂಂಜಾ. ಯುವನಟ ದೀಪಕ್‍ಗೆ ಪ್ರಥಮ ಅವಕಾಶ. ಗೆಳಯನಾಗಿ ಮುನಿ, ವಿಭಿನ್ನ ಪಾತ್ರಕ್ಕೆ ಶೋಭರಾಜ್ ಉಳಿದಂತೆ ಸಂಪತ್, ಜಯದೇವ್, ಗಾಯಿತ್ರಿ ಅಭಿನಯಿಸಿದ್ದಾರೆ. ಎನ್.ಶ್ರೀಧರ್, ಎಲ್.ಅಶ್ವತ್‍ನಾರಾಯಣ ನಿರ್ಮಾಣದಲ್ಲಿ ಪಾಲುದಾರರು. ಶುಕ್ರವಾರದಂದು ರಾಜ್ಯದ್ಯಂತ ಗೂಗಲ್ ಸಂಚರಿಸಲಿದೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
-13/02/18ಮೂವರು ದಿಗ್ಗಜರ ಸಮ್ಮುಖದಲ್ಲಿ ಗೂಗಲ್ ಟ್ರೈಲರ್ ಲೋಕಾರ್ಪಣೆ
ಚಂದನವನದಲ್ಲಿ ಜನರಿಗೆ ಚಿತ್ರದ ಮಾಹಿತಿಗಳನ್ನು ನೀಡಲು ವಿನೂತನ ಪ್ರಚಾರಗಳನ್ನು ಕೈಗೊಳ್ಳುತ್ತಾರೆ. ಅದರಂತೆ ಸಾಹಿತಿ ಡಾ.ನಾಗೇಂದ್ರಪ್ರಸಾದ್ ರಚನೆ, ನಿರ್ದೇಶನ ಹಾಗೂ ನಿರ್ಮಾಣ ಮಾಡಿರುವ ‘ಗೂಗಲ್’ ಚಿತ್ರದ ಹಾಡುಗಳನ್ನು ಅಂಬರೀಷ್ ಬಿಡುಗಡೆ ಮಾಡಿ ಶುಭ ಹಾರೈಸಿದ್ದರು. ಈಗ ಟ್ರೈಲರ್‍ನ್ನು ಸೆಲೆಬ್ರಿಟಿಗಳಿಂದ ಅನಾವರಣ ಮಾಡಿಸಲು ಯೋಜನೆ ಹಾಕಿದ್ದರಂತೆ. ಒಮ್ಮೆ ಕಮಲಾನಗರದ ರಾಜರಾಜೇಶ್ವರಿ ಉದ್ಯಾನವನದಲ್ಲಿ ವಿಶ್ವದಾದ್ಯಂತ ಅಭಿಮಾನಿ ಬಳಗವನ್ನು ಹೊಂದಿರುವ ಡಾ.ರಾಜ್‍ಕುಮಾರ್, ಡಾ.ವಿಷ್ಣುವರ್ಧನ್ ಮತ್ತು ಶಂಕರ್‍ನಾಗ್ ಪುತ್ತಳಿಗಳು ಇರುವುದು ಇವರ ಗಮನಕ್ಕೆ ಬಂದಿದೆ. ಮೂವರು ದಿಗ್ಗಜರು ಒಂದೇ ಕಡೆ ಇರುವುದು ರಾಜ್ಯದಲ್ಲಿ ಪ್ರಥಮ ಎನ್ನಬಹುದಾಗಿದೆ. ಇಂದು ಕನ್ನಡ ಚಿತ್ರಗಳನ್ನು ಮೊದಲನೆ ದಿನದ ಬೆಳಗಿನ ಆಟಗಳನ್ನು ವೀಕ್ಷಿಸುವುದು ಆಟೋ ಚಾಲಕರು, ಹೋಟೆಲ್ ಕಾರ್ಮಿಕರು, ಶ್ರಮಿಕ ವರ್ಗದವರು ಚಿತ್ರರಂಗವನ್ನು ಪ್ರತಿನಿಧಿಸುತ್ತಿದ್ದಾರೆ.

ಇವರಿಂದಲೇ ಏಕೆ ಮಾಡಿಸಬಾರದೆಂದು ಯೋಚನೆ ಮಾಡಿದಂತೆ ಭಾನುವಾರ ಅದೇ ಸ್ಥಳದಲ್ಲಿ ಕನ್ನಡ ಪರ, ಜನಪರ ಹೋರಾಟಗಾರರ ಜೊತೆಗೆ ಎಲ್ಲರನ್ನು ಸೇರಿಸಿಕೊಂಡು ಟ್ರೈಲರ್ ಬಿಡುಗಡೆ ಮಾಡಿ ಅರ್ಥಪೂರ್ಣವಾಗಿಸಿದ್ದಾರೆ. ಚಿತ್ರವು ನಾಯಕ-ನಾಯಕಿ ಇರದೆ ವಿಭಿನ್ನ ಕತೆಯಾಗಿದೆ. ಮುಖ್ಯ ಪಾತ್ರದಲ್ಲಿ ಡಾ.ನಾಗೇಂದ್ರಪ್ರಸಾದ್‍ಗೆ ಜೋಡಿಯಾಗಿ ಶುಭಾಪೂಂಜಾ, ಯುವ ಜೋಡಿಗಳಾಗಿ ದೀಪಕ್-ಅಮೃತಾ ಮುಂತಾದವರು ನಟಿಸಿದ್ದಾರ. ಸಿನಿಮಾವು ಫೆಬ್ರವರಿಯಲ್ಲಿ ತೆರೆಕಾಣುವ ಸಾದ್ಯತೆ ಇರುವುದರಿಂದ ಇಂದಿನಿಂದಲೇ ಪ್ರಚಾರ ಕೆಲಸವನ್ನು ಶುರು ಮಾಡುತ್ತಿರುವುದಾಗಿ ನಿರ್ಮಾಪಕರು ಹೇಳಿಕೊಂಡಿದ್ದಾರೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್ ಡಾಟ್ ಇನ್ ನ್ಯೂಸ್
-11/01/18

ಬದುಕಿನ ಅಂತರಂಗದ ಹುಡುಕಾಟ
ಹೆಸರಾಂತ ಸಾಹಿತಿ ಡಾ.ನಾಗೇಂದ್ರಪ್ರಸಾದ್ ‘ಗೂಗಲ್’ ಅಡಿಬರಹದಲ್ಲಿ ಈ ಭೂಮಿ ಬಣ್ಣದ ಬುಗುರಿ ಚಿತ್ರಕ್ಕೆ ಕತೆ,ಚಿತ್ರಕತೆ,ಸಂಭಾಷಣೆ, ಸಾಹಿತ್ಯ, ಸಂಗೀತ, ನಿರ್ದೇಶನ, ನಿರ್ಮಾಣದ ಜೊತೆಗೆ ಮೊದಲಬಾರಿ ನಾಯಕನಾಗಿ ನಟಿಸಿದ್ದಾರೆ. ಕಳೆದ ವರ್ಷ ಯಾವುದೋ ಕಾರಣಕ್ಕೆ ಮಾದ್ಯಮದವನ್ನು ಭೇಟಿ ಮಾಡಲಾಗಿದ್ದು, ಈ ಬಾರಿ ಸಿನಿಮಾದ ವಿಷಯವನ್ನು ತಿಳಿಸುವ ಸಲುವಾಗಿ ಎರಡನೆ ಬಾರಿ ಪತ್ರಕರ್ತರ ಮುಂದೆ ತಂಡವು ಹಾಜರಿತ್ತು. ಅವರು ಹೇಳುವಂತೆ ಎಂಟು ವರ್ಷಗಳ ಕೆಳಗೆ ಒಂದು ಘಟನೆಯನ್ನು ನೋಡಿ, ಅದರಲ್ಲಿ ಭಾಗವಹಿಸಿದಾಗ ಆ ಸಮಯದಲ್ಲೆ ಇದರ ಕುರಿತು ಸಿನಿಮಾ ಮಾಡಲು ನಿರ್ಧರಿಸಲಾಯಿತು. ಅದು ಇಲ್ಲಿಯವರೆವಿಗೂ ತಂದು ನಿಲ್ಲಿಸಿದೆ. ಕತೆಯ ಕುರಿತು ಹೇಳುವುದಾದರೆ ಸಮಾಜವನ್ನು ನೋಡಬಹುದಾದ, ನೋಡಿರುವ ಸಂಗತಿಗಳು ಮರುಕಳಿಸುತ್ತವೆ. ಮೂರು ಕಾರಣಗಳಿಗಾಗಿ ಸಿನಿಮಾ ಗೆಲ್ಲುವ ಭರವಸೆ ಇದೆ. ಮೊದಲನೆಯದು ಕತೆ, ಕ್ಲೈಮಾಕ್ಸ್ ಕೊನೆಯದಾಗಿ ಹೇಳುವುದಾದರೆ ಶುಭಪೂಂಜ ನಟನೆ. ಇಲ್ಲಿಯವರೆವಿಗೂ ಗ್ಲಾಮರಸ್ ಆಗಿ ಕಾಣ ಸಿಕೊಂಡಿದ್ದ ಅವರು ಇದರಲ್ಲಿ ವಿಭಿನ್ನ ಪಾತ್ರದಲ್ಲಿ ಸಿನಿಮಾ ಪೂರ್ತಿ ಸೀರೆಯಲ್ಲಿ ಅಪ್ಪಟ ಗೃಹಿಣ ಯಾಗಿ ಕಾಣ ಸಿಕೊಂಡಿದ್ದಾರೆ. ನಾಯಕನಿಗೆ ಇಮೇಜ್ ಅಂತ ತೋರಿಸದೆ ಎಲ್ಲಾ ಪಾತ್ರಗಳಿಗೂ ಅದರದೆ ಆದ ಮಹತ್ವ ಇದೆ. ಬದುಕಿನ ಅಂತರಂಗದ ಹುಡುಕಾಡದಲ್ಲಿ ಸಂಗತಿಗಳನ್ನು ಅಲ್ಲಗೆಳೆದರೆ ಧಪ್ಪನೆ ಎದ್ದು ನಿಲ್ಲುತ್ತವೆ. ಅದನ್ನು ಹುಡುಕಲು ಹೋದಾಗ ಏನೇನು ಆಗುತ್ತದೆ ಎಂಬುದನ್ನು ಸಿನಿಮಾ ನೋಡಬೇಕು. ಪಾಂಡಿಚೇರಿ, ಗುರೂರು, ಹಾಸನ, ದೇವರಾಯುನದುರ್ಗ ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಚಿತ್ರಮಂದಿರದಿಮದ ಹೊರಬರುವಾಗ ಪ್ರೇಕ್ಷಕ ಭಾರವಾದ ಮನಸ್ಸನ್ನು ಹೊತ್ತುಕೊಳ್ಳುವುದು ಅಲ್ಲದೆ ಸಣ್ಣ ಪರಿವರ್ತನೆ ಆಗುತ್ತಾನೆ. ಬೇಬಿ ವೈಷ್ಣವಿ ಚಿತ್ರಕ್ಕೆ ಜೀವಾಳವೆಂದು ಪುಟಾಣ ಯನ್ನು ಪರಿಚಯಿಸಿ, ಚಿತ್ರೀಕರಣ ಮುಗಿದಿದೆ, ಕುಂಬಳಕಾಯಿ ಒಡೆದಿಲ್ಲ ಎಂದು ನಕ್ಕರು .

ಇಂತಹ ಪಾತ್ರ. ಮುಂದೆ ಮಾಡುತ್ತೇನೋ ಗೊತ್ತಿಲ್ಲ. ಹೀಗೆ, ಹಿಂಗೇ ಅಂತ ಹೇಳುವುದಕ್ಕೆ ಬರೋಲ್ಲ. ನಾಲ್ಕು ರೀತಿಯಲ್ಲಿ ಪಾತ್ರಗಳು ಬರುವಾಗ ಅನೂಹ್ಯ ಕತೆಗಳು ಹುಟ್ಟಿಕೊಳ್ಳುತ್ತವೆ. ಪಾತ್ರದ ವಿವರ ಹೇಳಿದರೆ ತಿರುಳು ಬಿಟ್ಟುಕೊಟ್ಟಂತೆ ಆಗುವುದೆಂದು ಗೌಪ್ಯವಾಗಿಟ್ಟರು ನಾಯಕಿ ಶುಭಾಪೂಂಜಾ. ಯುವನಟ ದೀಪಕ್‍ಗೆ ಪ್ರಥಮ ಅವಕಾಶ. ಇವರಿಗೆ ಜೋಡಿಯಾಗಿ ಅಮೃತರಾವ್ ಇದ್ದಾರೆ. ಗೆಳಯನಾಗಿ ಮುನಿ, ವಿಭಿನ್ನ ಪಾತ್ರಕ್ಕೆ ಶೋಭರಾಜ್ ಉಳಿದಂತೆ ಸಂಪತ್, ಜಯದೇವ್, ಗಾಯಿತ್ರಿ ನಟನೆ ಇದೆ. ಸಹ ನಿರ್ಮಾಪಕರುಗಳಾದ ಎನ್.ಶ್ರೀಧರ್, ಎಲ್.ಅಶ್ವತ್‍ನಾರಾಯಣ ಮಾತನಾಡಲಿಲ್ಲ. ಆರು ಹಾಡುಗಳು ಇರಲಿದ್ದು ನಾಗೇಂದ್ರಪ್ರಸಾದ್ ಒಡೆತನದ ಮ್ಯೂಸಿಕ್ ಬಜಾರ್ ಮೂಲಕ ಆಡಿಯೋ ಸಿಡಿಯನ್ನು ಹೊರತರಲಾಗಿದೆ. ಚಿತ್ರವನ್ನು ನವೆಂಬರ್‍ದಲ್ಲಿ ಬಿಡುಗಡೆ ಮಾಡಲು ಸಿದ್ದತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ನಿರ್ಮಾಪಕರು ತಿಳಿಸಿದರು.
-28/09/17
ಗೂಗಲ್ ಹಾಡುಗಳ ಸಮಯ
1999ರಲ್ಲಿ ಚಿತ್ರರಂಗಕ್ಕೆ ಪಾದಾರ್ಪಣೆ, 800 ಚಿತ್ರಗಳು, 2000 ಗೀತೆಗಳು, ಸಿನಿಮಾಕ್ಕೆ ಕತೆ,ಚಿತ್ರಕತೆ, ಸಂಭಾಷಣೆ, ಸಾಹಿತ್ಯ, ಸಂಗೀತ, ನಿರ್ದೇಶನ, ನಿರ್ಮಾಣ ಹಾಗೂ ಮೊದಲಬಾರಿ ನಾಯಕನಾಗಿ ನಟಿಸಿದ್ದಾರೆಂದು ನಿರೂಪಕಿ ಡಾ.ನಾಗೇಂದ್ರಪ್ರಸಾದ್‍ರವರ ಸಂಪೂರ್ಣ ವಿವರವನ್ನು ಹೇಳುತ್ತಿರುವಾಗ ಅಂಬರೀಷ್ ಆಗಮನ ಕಾರ್ಯಕ್ರಮ ರಂಗೇರಿತು. ಗಾಯಕಿ ಅನುರಾಧಭಟ್, ಗಾಯಕರಾದ ಶಶಾಂಕ್‍ಶೇಷಗಿರಿ, ಸಂತೋಷ್‍ವೆಂಕಿ ಹಾಗೂ ಕಲಾಲಯ ತಂಡದವರು ಸಾಹಿತಿ ರಚಿಸಿದ ಹಾಡಿಗೆ ನೃತ್ಯ ಮಾಡಿದರು. ಗೂಗಲ್ ಎಲ್ಲರಿಗೂ ತಿಳಿದಿರುವ ವಿಷಯ. ಪ್ರಪಂಚದ ಯಾವುದೇ ಮಾಹಿತಿಯನ್ನು ಇದರಲ್ಲಿ ಹುಡುಕಬಹುದು. ಎಲ್ಲೆ ಹೋದರೂ ನಮ್ಮ ಸಂಸ್ಕ್ರತಿಯನ್ನು ಮರೆಯಬಾರದು. ನಾಗೇಂದ್ರಪ್ರಸಾದ್ ನಾನು ಮಂಡ್ಯಾದವರು ಆಗಿರುವುದರಿಂದ ನಮ್ಮಬ್ಬರಿಗೂ ಹತ್ತಿರದ ಹೋಲಿಕೆ ಇದೆ. ಅದಕ್ಕೆ ನಾವಿಬ್ಬರು ಮಂಡ್ಯದ ಗಂಡು ಅಂತ ಹೇಳಬಹುದು. ಚಿತ್ರವು ಯಶಸ್ವಿಯಾಗಲಿ ಎಂದರು ಅಂಬರೀಷ್. ಹಂಸಲೇಖಾರವರು ನನಗೆ ಮಾನಸ ಗುರುಗಳು. ಪ್ರಾರಂಭದಲ್ಲಿ ನಾನು ಅವರಂತೆ ಆಗಬೇಕೆಂಬ ತುಡಿತದಲ್ಲಿದ್ದೆ. ಇಂದು ಈ ಸ್ಥಿತಿಗೆ ಬಂದಿದ್ದೇನೆ ಎಂದರೆ ಅದಕ್ಕೆ ಪ್ರೇರಕ ಶಕ್ತಿ ಸರ್. ಹಾಡುಗಳನ್ನು ಕೇಳಿಸಿದಾಗ ಬೈದರು,ಶ್ರಮವನ್ನು ಹೊಗಳಿದರು. ಅವರು ಬೈಯ್ತಾ ಇರಬೇಕು. ನಾನು ಬರೀತಾ ಇರಬೇಕು. ಅವಾಗಲೆ ಬೆಳಯಲು ಸಾಧ್ಯವೆಂದು ನಾಗೇಂದ್ರಪ್ರಸಾದ್ ಹೇಳಿದರು.

ನಮ್ಮ ಹುಡುಗನಿಗೆ ನಾವು ಬೆನ್ನು ತಟ್ಟದೆ ಹೋದರೆ ಬೇರೆ ಯಾರು ತಟ್ಟುತ್ತಾರೆ. ಡಾಕ್ಟರ್ ಪದವಿ ಪಡೆದು ಬೇರು ಕೊಡುವ ಬದಲು ಚಿತ್ರರಂಗಕ್ಕೆ ನೀರು ಕೊಡುತ್ತಿದ್ದೀಯಾ. ನಮ್ಮ ಕಾಲದಲ್ಲಿ ಕ್ರೇನ್ ಬಳಸುತ್ತಿದ್ದರು. ನಿಮ್ಮ ಕಾಲ ದ್ರೋಣ್ ಕ್ಯಾಮಾರ ಆಗಿ ಎಲ್ಲವನ್ನು ಎಷ್ಟು ಎತ್ತರದಿಂದ ಬೇಕಾದರೂ ಶೂಟ್ ಮಾಡಬಹುದು. ಸುದೀಪ್‍ರಂತೆ ಫೈಟ್ ಮಾಡಬೇಡ, ದರ್ಶನ್‍ರಂತೆ ಬೈಕ್ ಓಡಿಸಬೇಡ, ಪುನೀತ್‍ರಂತೆ ಡ್ಯಾನ್ಸ್ ಮಾಡಬೇಡ. ನಿನ್ನ ಶಕ್ತಿಯನ್ನು ಪೆನ್ನಿನ ಮೂಲಕ ತೋರಿಸು. ಅದಕ್ಕೆಂದೆ ಬೇರೆಯವರು ಇದ್ದಾರೆ. ಭಾರತ ನಾಡನ್ನು ಪೆನ್ನಿನ ಮೂಲಕ ಬೆಳಗಿಸು. ರಾಜ್‍ಕುಮಾರ್,ಇಳಯರಾಜ ಶಿಸ್ತನ್ನು ಪಾಲಿಸು. ಶಿಸ್ತು ಇದ್ದಲ್ಲಿ ಅರ್ಧ ಗೆದ್ದಂಗೆ. ಮನೋಹರ್ ರಚಿಸಿರುವ ಹಾಡು ಕೊರಿಯಾ ದೇಶದ ರಾಷ್ಟ್ರ ಗೀತೆಯಾಗಿದೆ. ಇದು ಕನ್ನಡಿಗರಿಗೆ ಸಂದ ಗೌರವ ಎನ್ನುವಾಗ ಅನೂಪ್‍ಸೀಳನ್, ಶ್ರೀಧರ್‍ಸಂಭ್ರಮ್ ಗುರುಗಳ ಮಾತನ್ನು ಆಲಿಸುತ್ತಿದ್ದರು. ಚಿತ್ರದಲ್ಲಿ ನಾನು ಡ್ಯಾನ್ಸ್, ಫೈಟ್ ಮಾಡಿಲ್ಲ ಅಂತ ಸ್ಪಷ್ಟನೆ ನೀಡಿ, ನಿರ್ಮಾಪಕನಾಗಿ ಮೊದಲ ಸಿನಿಮಾ ಎಂದರು ನಾಗೇಂದ್ರಪ್ರಸಾದ್. ಕೊಚ್ಚಿನ್‍ನವರಾದ ಅಭಿಜಿತ್‍ಕೊಲ್ಲಮ್ ಧ್ವನಿ ಚೆನ್ನಾಗಿದ್ದರಿಂದ ಎರಡು ಹಾಡುಗಳಿಗೆ ಅವಕಾಶ ಮಾಡಿಕೊಟ್ಟಂತೆ ಒಂದು ಗೀತೆಯನ್ನು ಹಾಡಿ ರಂಜಿಸಿದರು. ಸಹ ನಿರ್ಮಾಪಕರಾದ ಎನ್.ಶ್ರೀಧರ್, ಎಲ್.ಅಶ್ವತ್‍ನಾರಾಯಣ, ನಾಯಕಿ ಶುಭಪೂಂಜಾ, ಅಮೃತರಾವ್, ದೀಪಕ್‍ಗೆ ಮೈಕ್ ಸಿಗಲಿಲ್ಲ. ಅವಸಾನದಲ್ಲಿ ಎರಡು ಹಾಡುಗಳನ್ನು ತೋರಿಸಲಾಯಿತು. ‘ಗೂಗಲ್’ ಚಿತ್ರದ ಧ್ವನಿಸಾಂದ್ರಿಕೆ ಅನಾವರಣ ಕಾರ್ಯಕ್ರಮದಲ್ಲಿ ಮೇಲಿನ ಎಲ್ಲಾ ಮಾಹಿತಿಗಳು ಲಭ್ಯವಾದವು.
-28/09/17
For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore