HOME
CINEMA NEWS
GALLERY
TV NEWS
REVIEWS
CONTACT US
ಬೆಂಗಳೂರಿನಲ್ಲಿ ಗಿರಿಗಿಟ್‍ಸದ್ದು ಮಾಡಿತು
ಕಾಲಿವುಡ್,ಟಾಲಿವುಡ್, ಬಾಲಿವುಡ್, ಮಾಲಿವುಡ್ ಚಿತ್ರಗಳು ಹೆಚ್ಚಾಗಿ ಬೆಂಗಳೂರಿನಲ್ಲಿ ತೆರೆಕಾಣುತ್ತವೆ. ಆ ಸಾಲಿಗೆ ಕೋಸ್ಟಲ್‍ವುಡ್‍ನ ತುಳು ಚಿತ್ರವು ಸೇರಿಕೊಂಡಿದೆ. ಅಪರೂಪಕ್ಕೆಎನ್ನುವಂತೆಒಂದುಕಡೆ ಈ ಭಾಷೆಯ ಸಿನಿಮಾ ಬಿಡುಗಡೆಗೊಂಡು ಸುದ್ದಿಯಾಗದೆ ಮಾಯವಾಗುತ್ತಿತ್ತು. ಈಗ ಮಂಜುನಾಥ್ ಹತ್ತಾವರ್ ನಿರ್ಮಾಣದ ‘ಗಿರಿಗಿಟ್’ಎನ್ನುವ ಹಾಸ್ಯ ತುಳು ಸಿನಿಮಾವು ಕಳೆದ ವಾರ ಬೆಂಗಳೂರಿನ 11 ಕೇಂದ್ರಗಳಲ್ಲಿ ವಿತರಕಜಯಣ್ಣ ಶಿಪಾರಸ್ಸಿನ ಮೇರೆಗೆತೆರೆಕಂಡಿತ್ತು. ಮಾಲ್‍ಗಳು ಒಲ್ಲದ ಮನಸ್ಸಿನಿಂದ ಬಿಡುಗಡೆ ಮಾಡಿದ್ದರು.ಮುಂದೆಇದರ ಫಲಿತಾಂಶ ನೋಡಿ ಸೋಜಿಗಗೊಂಡು 26 ಪ್ರದರ್ಶನಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ.ಎಲ್ಲಾ ಪ್ರದರ್ಶನಗಳು ಹೌಸ್‍ಫುಲ್ ಮತ್ತುಒಂದುಕೋಟಿಕ್ಲಬ್‍ಗೆ ಸೇರಿದೆ. ತುಳುಎಂದರೆಉಡುಪಿ, ಮಂಗಳೂರು, ಕಾರವಾರಎಂದೇ ಸೀಮಿತವಾಗಿದ್ದು, ಅದು ಬೆಂಗಳೂರಿಗೂ ವಿಸ್ತಾರಗೊಂಡಿದೆ. ಆ ಭಾಗದಲ್ಲಿಕನ್ನಡ ಸಿನಿಮಾಗಳು ಚೆನ್ನಾಗಿ ಹಣ ಮಾಡುತ್ತಿರುವುದಕ್ಕೆಅಲ್ಲಿನವರುವೀಕ್ಷಿಸುತ್ತಿರುವುದುಕಾರಣವಾಗಿದೆ.ಇಂತಹ ಬೆಳವಣಿಗೆಯಿಂದ ಕರ್ನಾಟಕದ ಭಾಷೆಗೆ ಪ್ರಾಮುಖ್ಯತೆ ನೀಡಿದಂತೆಆಗುತ್ತದೆಎನ್ನುತ್ತಾರೆರಿಶಬ್‍ಶೆಟ್ಟಿ.

ನಾಯಕ ಮತ್ತು ನಿರ್ದೇಶನರೂಪೇಶ್‍ಶೆಟ್ಟಿಅವರಿಗೆ ಸಹಜವಾಗಿ ಖುಷಿ ತಂದಿದೆಯಂತೆ.ಮಾತೃ ಭಾಷೆಯಲ್ಲಿ ನಟಿಸಬೇಕಂಬ ನಾಯಕಿ ಶಿಲ್ಪಶೆಟ್ಟಿ ಬಯಕೆಇದರ ಮೂಲಕ ನೆರವೇರಿದೆ.ಒಂದುಹಾಡಿಗೆಗುರುಕಿರಣ್‍ಧ್ವನಿಯಾಗಿದ್ದಾರೆ.ರಾಕೇಶ್‍ಖದ್ರಿ ಮತ್ತೋಬ್ಬ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ.ಸಂಗೀತಜೋಯಲ್-ದರ್ರೆಲ್, ಸಂಕಲನ ರಾಹುಲ್‍ವಸಿಷ್ಟ, ಛಾಯಾಗ್ರಹಣ ನಿರಂಜನ್‍ದಾಸ್‍ಅವರದಾಗಿದೆ.
ಸಿನಿ ಸರ್ಕಲ್.ಇನ್ ನ್ಯೂಸ್
9/09/19

For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore