HOME
CINEMA NEWS
GALLERY
TV NEWS
REVIEWS
CONTACT US
ಗರದ ಆಟ ಪ್ರೀತಿಯ ನೋಟ
ನಿನ್ನ ಪರ ಗರ ಬಿದ್ದರೆ ಸಾಲ ಮನ್ನಾ, ನನ್ನ ಪರ ಆದರೆ ಆಸ್ತಿ ಜಫ್ತಿ ಮಾಡಲಾಗುವುದು. ಗರ ಮೂರು ಬಿದ್ದರೆ ಪ್ರೀತಿ ನಿನ್ನದು, ನಾಲ್ಕು ಬಿದ್ದರೆ ಎಲ್ಲವು ನನ್ನದು. ಹೀಗೆ ಕೆಲವು ಸನ್ನಿವೇಶಗಳು ಇದರ ಮೂಲಕವೇ ‘ಗರ’ ಚಿತ್ರದಲ್ಲಿ ಬರಲಿದೆ. ಇಬ್ಬರು ಹುಡುಗರು, ಒಬ್ಬ ಹುಡುಗಿಯ ಸುತ್ತ ಕತೆ ಸಾಗುತ್ತದೆ. ಕತೆಯಲ್ಲಿ ಅವಳು ತಪ್ಪಾಗಿ ಮತ್ತೋಬ್ಬನನ್ನು ಮದುವೆಯಾಗುವುದು. ಮೊದಲ ರಾತ್ರಿಯೇ ಪ್ರಿಯಕರನೊಂದಿಗೆ ಓಡಿಹೋಗುವುದು. ಅವಳನ್ನು ದಾರಿ ತಪ್ಪಿಸಲು ಕಾರಣನಾದ ಆತನನ್ನು ಹುಡುಕುವುದು. ಇದಕ್ಕಾಗಿ ಕಂಡವರ ಮೇಲೆ ಸಂಶಯ ಬರುವುದು. ಕೊನೆಗೂ ಅವನು ಸಿಕ್ಕಾಗ ನಾಟಕ ಎನ್ನುವಂತೆ ಅವಳ ಯುಕ್ತಿಯಿಂದ ಎಲ್ಲವು ಸರಿಹೋಗುವುದು. ಇದರ ಮಧ್ಯೆ ಜುಗಾರಿ ಬ್ರದರ್ಸ್ ಗರ ಆಟದಲ್ಲಿ ಸೋಲುಂಡು ಪರಿತಪಿಸುವುದು. ಸಾಲವನ್ನು ವಸೂಲು ಮಾಡುವ ಡಿಜಿಟಲ್ ಗೌಡ ಎಂಟ್ರಿ ಕೊಡುವುದು. ಇವೆಲ್ಲವು ಸಿನಿಮಾ ಪೂರ್ತಿ ಆವರಿಸಿಕೊಂಡು ನೋಡುಗನನ್ನು ಮನೆಸೆಳಯುವಲ್ಲಿ ಸಪಲವಾಗುತ್ತದೆ . ಕವಡೆಗಳನ್ನು ಹಾಕುವವನು ಏನು ಬೇಕಾದರೂ ಮಾಡಬಹುದು. ಅದಕ್ಕಾಗಿ ಇದನ್ನು ನಂಬಿದರೆ ಸಕರಾತ್ಮಕ, ನಕರಾತ್ಮಕವಾಗಬಹುದೆಂದು ಸೂಕ್ಷವಾಗಿ ಹೇಳಲಾಗಿದೆ.

ಪೋಷಕ ಪಾತ್ರಗಳಲ್ಲಿ ನಟಿಸಿದ್ದ ರೆಹಮಾನ್‍ಗೆ ಗಂಗಸ್ವಾಮಿ,ನಿಶಾಂತ್ ಹೆಸರಿನಲ್ಲಿ ನಾಯಕನಾಗಿ ಎರಡು ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ನವನಾಯಕ ಪ್ರದೀಪ್‍ಆರ್ಯನ್ ಭಗೀರಥನಾಗಿ ಭಾವನೆಗಳನ್ನು ಚೆನ್ನಾಗಿ ತೋರಿಸಿದ್ದರೂ ಕಂಠದಾನ ಅದಕ್ಕೆ ಕೆಲವು ಕಡೆ ಸೂಕ್ತ ಅನಿಸಿಲ್ಲ. ತುಂಗ ಮತ್ತು ಆಕಸ್ಮಿಕಳಾಗಿ ನಾಯಕಿ ಆವಂತಿಕಮೋಹನ್ ತುಂಟ ಅಭಿನಯದಿಂದ ಮನಸೆಳೆದಿದ್ದಾರೆ. ಹಾಗೆ ಬಂದು ಹೋಗುವ ನೇಹಾಪಾಟೀಲ್ ಉಪನಾಯಕಿ ಎನ್ನಬಹುದಷ್ಟೆ. ಜುಗಾರಿಬ್ರದರ್ಸ್ ಆಗಿ ಬಾಲವುಡ್ ನಟ ಜಾನಿಲೀವರ್ ಮತ್ತು ಸಾಧುಕೋಕಿಲ ನಾಲ್ಕೈದು ಸೂಟ್ ಧಿರಿಸಿನಲ್ಲಿ ಮಿಂಚಿದ್ದಾರೆ. ಹಿರಿಯ ಕಲಾವಿದರುಗಳಾದ ರಾಮಕೃಷ್ಣ, ರೂಪದೇವಿ, ರಮೇಶ್‍ಭಟ್, ಉಮೇಶ್, ಮನ್‍ದೀಪ್‍ರಾಯ್ ನೀಡಿದ ಕೆಲಸವನ್ನು ಅಚ್ಚು ಕಟ್ಟಾಗಿ ನಿಭಾಯಿಸಿದ್ದಾರೆ. ಚಹಾ ನೀಡುವ ಸೋನುಪಾಟೀಲ್ ಎರಡು ದೃಶ್ಯಗಳಲ್ಲಿ ಪಡ್ಡೆಗಳಿಗೆ ಚಮಕ್ ಕೊಡುತ್ತಾರೆ. ಕತೆ ಬರೆದು ನಿರ್ದೇಶಿಸಿರುವ ಕೆ.ಆರ್.ಮುರಳಕೃಷ್ಣ ಎರಡೂವರೆ ವರ್ಷದ ಶ್ರಮ ಪರದೆ ಮೋಲೆ ನೋಡಿದಾಗ ಸಾರ್ಥಕ ಅನಿಸುತ್ತದೆ. ಇವರಿಗೆ ಸ್ಪೂರ್ತಿ ಎಂಬಂತೆ ಮೊದಲಬಾರಿ ಸಂಗೀತ ಒದಗಿಸಿರುವ ಸಾಗರ್‍ಗುರುರಾಜ್ ಹಾಡುಗಳು ಆಲಿಸುವಂತಿದೆ. ವೇಣುಗೋಪಾಲ್ ಛಾಯಾಗ್ರಹಣದಲ್ಲಿ ಸುಂದರ ಕಾಶ್ಮೀರ ಕಣ್ಣಿಗೆ ತಂಪು ಕೊಡುತ್ತದೆ. ಹಿಂದಿ ಸ್ಟಾರ್ ನಟರನ್ನು ಕುಣಿಸಿದ್ದ ಸರೋಜ್‍ಖಾನ್ ತಂಡದಲ್ಲಿ ಇರುವುದು ಪ್ಲಸ್ ಪಾಯಿಂಟ್ ಆಗಿದೆ. ಒಟ್ಟಾರೆ ಗರ ಪೈಸಾ ವಸೂಲ್ ಎನ್ನಬಹುದು.
ನಿರ್ಮಾಣ: ನಾಗಪ್ರಸಾದ್
ಸಿನಿ ಸರ್ಕಲ್.ಇನ್ ವಿಮರ್ಶೆ
***
3/05/19

ಗುಂ ಗುಂ ಗರ ಗರ
‘ಗರ’ ಚಿತ್ರದ ‘ಗುಂ ಗುಂ ಗರ ಗರ’ ಶೀರ್ಷಕೆ ಹಾಡನಲ್ಲಿ ಸಿನಿಮಾ ಒಂದು ಏಳೆಯ ಕತೆಯನ್ನು ಹೇಳಲಾಗಿದೆ. ಬಾಲಿವುಡ್ ನಟ ಜಾನಿಲೀವರ್, ಕೊರಿಯೋಗ್ರಾಫರ್ ಸರೋಜಖಾನ್ ಮೊದಲ ಬಾರಿ ಕೆಲಸ ಮಾಡಿರುವುದು ವಿಶೇಷವಾಗಿದೆ. ಬದುಕಿನಲ್ಲಿ ಎಲ್ಲರಿಗೂ ಯಾವುದೋ ವಿಷಯದಲ್ಲಿ ಗರ ಬಡಿಯುತ್ತದೆ. ಒಬ್ಬರ ಗರ ಮತ್ತೋಬ್ಬರ ಮೇಲೆ ಬೀಳುತ್ತದೆ. ಆರ್.ಕೆ.ನಾರಾಯಣ್ ವಿರಚಿತ ಕತೆಯ ಎಂದು ಏಳೆಯನ್ನು ತೆಗೆದುಕೊಳ್ಳಲಾಗಿದೆ. ಸಾಧುಕೋಕಿಲ ಅವರೊಂದಿಗೆ ಜಾನಿಲಿವರ್ ಜುಗಾರಿ ಬ್ರದರ್ಸ್ ಆಗಿ ನಗಿಸಿದ್ದಾರೆ. ಹರಿಷಡ್ವರ್ಗದಲ್ಲಿ ಇರುವ ಗಂಗಸ್ವಾಮಿಯಾಗಿ ರೆಹಮಾನ್, ಸಿನಿಮಾ ತರಭೇತಿ ಶಾಲೆಯಲ್ಲಿ ನಿರ್ದೇಶಕರಿಗೆ ಉಪನ್ಯಾಸಕನಾಗಿದ್ದ ಪ್ರದೀಪ್‍ಆರ್ಯನ್ ಭಗೀರಥನಾಗಿ ಕಾಣಿಸಿಕೊಂಡಿದ್ದಾರೆ.

ಸುದ್ದಿಗೋಷ್ಟಿಯಲ್ಲಿ ನಿರ್ದೇಶಕ ಕೆ.ಆರ್.ಮುರಳಿಕೃಷ್ಣ ಚಿತ್ರದ ಕುರಿತು ಮತ್ತಷ್ಟು ಮಾಹಿತಿಗಳನ್ನು ಹಂಚಿಕೊಂಡರು. ಹೊಸ ಕಲಾವಿದರ ಜೊತೆ ಹಳಬರು ಸೇರಿಕೊಂಡಿರುವುದು ವಿಶೇಷವಂತೆ. ನಾಯಕರುಗಳಾದ ರೆಹಮಾನ್, ಪ್ರದೀಪ್‍ಆರ್ಯನ್, ನಾಯಕಿ ಆವಂತಿಕಾಮೋಹನ್, ಸಂಗೀತ ನಿರ್ದೇಶಕ ಸಾಗರ್‍ಗುರುರಾಜ್, ಮನ್‍ದೀಪ್‍ರಾಯ್, ವನಿತಾಮೃತ ಮುಂತಾದವರು ಉಪಸ್ತಿತರಿದ್ದು ಚುಟುಕು ಮಾತನಾಡಿದರು. ಚಂದನ್ ಫಿಲಿಂಸ್ ಮುಖಾಂತರ ಮೇ 3ರಂದು ಬಿಡುಗಡೆಯಾಗಲಿದೆ.
ಸಿನಿ ಸರ್ಕಲ್.ಇನ್ ನ್ಯೂಸ್
23/04/19


ಗರಕ್ಕೆ ಮೇ ಮೂರರಂದು ಮುಕ್ತಿ
‘ಗರ’ ಚಿತ್ರದ ನಿರ್ದೇಶಕ ಮುರಳಿಕೃಷ್ಣ ಟ್ರೈಲರ್ ನಂತರ ನಾಲ್ಕು ಬಗೆಯ ವಿನೂತನ ಪೋಸ್ಟರ್‍ಗಳನ್ನು ಮಾಡಿಸಿರುವುದು ಎಲ್ಲರು ಇದರ ಬಗ್ಗೆ ಮಾತನಾಡುವಂತಾಗಿತ್ತು. ಬಾಲಿವುಡ್ ನಟ ಜಾನಿಲೀವರ್, ಕೊರಿಯೋಗ್ರಾಫರ್ ಸರೋಜಖಾನ್ ಮೊದಲ ಬಾರಿ ಕೆಲಸ ಮಾಡಿರುವುದು ವಿಶೇಷವಾಗಿದೆ. ಸೆನ್ಸಾರ್‍ನವರು ಸಿನಿಮಾ ವೀಕ್ಷಿಸಿ ಯಾವುದೇ ದೃಶ್ಯಕ್ಕೆ ಆಕ್ಷೇಪ ವ್ಯಕ್ತಪಡಿಸದೆ ಕ್ಲೀನ್ ಯು ಸರ್ಟಿಫೀಕೇಟ್ ನೀಡಿದೆ. ಕತೆಯ ಕುರಿತು ಹೇಳುವುದಾದರೆ ಬದುಕಿನಲ್ಲಿ ಎಲ್ಲರಿಗೂ ಯಾವುದೋ ವಿಷಯದಲ್ಲಿ ಗರ ಬಡಿಯುತ್ತದೆ. ಒಬ್ಬರ ಗರ ಮತ್ತೋಬ್ಬರ ಮೇಲೆ ಬೀಳುತ್ತದೆ. ಆರ್.ಕೆ.ನಾರಾಯಣ್ ವಿರಚಿತ ಕತೆಯ ಎಂದು ಏಳೆಯನ್ನು ತೆಗೆದುಕೊಳ್ಳಲಾಗಿದೆ. ಸಾಧುಕೋಕಿಲ ಅವರೊಂದಿಗೆ ಜಾನಿಲಿವರ್ ಜುಗಾರಿ ಬ್ರದರ್ಸ್ ಆಗಿ ನಗಿಸಿದ್ದಾರೆ. ಹರಿಷಡ್ವರ್ಗದಲ್ಲಿ ಇರುವ ಗಂಗಸ್ವಾಮಿಯಾಗಿ ರೆಹಮಾನ್, ಸಿನಿಮಾ ತರಭೇತಿ ಶಾಲೆಯಲ್ಲಿ ನಿರ್ದೇಶಕರಿಗೆ ಉಪನ್ಯಾಸಕನಾಗಿದ್ದ ಪ್ರದೀಪ್‍ಆರ್ಯನ್ ಭಗೀರಥನಾಗಿ ಕಾಣಿಸಿಕೊಂಡಿದ್ದಾರೆ.

ತಾರಗಣದಲ್ಲಿ ಆವಂತಿಕಮೋಹನ್ ನಾಯಕಿ, ಮನ್‍ದೀಪ್‍ರಾಯ್, ನೇಹಾಪಾಟೀಲ್, ಗುರುರಾಜ್, ಹಿರಿಯ ಕಲಾವಿದರಾದ ರಾಮಕೃಷ್ಣ-ರೂಪದೇವಿ ಜೋಡಿ, ದಯಾನಂದ್, ರಮೇಶ್‍ಭಟ್ ಮುಂತಾದವರ ನಟನೆ ಇದೆ. ಮುಂದಿನ ತಿಂಗಳು ಬಿಡುಗಡೆಯಾಗುತ್ತಿರುವ ಕಾರಣ ಚಿತ್ರತಂಡವು ಹೊಸದೊಂದು ಕಲ್ಪನೆಯನ್ನು ಹುಟ್ಟುಹಾಕಿದೆ. ವೆಬ್ ಸೈಟ್‍ಗೆ ಹೋಗಿ ಅದರಲ್ಲಿ ‘ಬುಕ್ ಮೈ ಷೋ’ ಎಂದು ಬಟನ್ ಒತ್ತಿದ ನಂತರ ಸರ್ಚ್ ‘ಗರ’ ಎಂಬ ಬಟನ್ ಒತ್ತಿದಾಗ ಚಿತ್ರದ ಮೇಕಿಂಗ್ ದೃಶ್ಯಗಳು ಲಭ್ಯವಾಗುತ್ತದೆ. ಮುಂದೆ ಆಸಕ್ತಿ (Iಟಿಣeಡಿesಣ) ಎನ್ನುವ ಬಟನ್ ಪ್ರೆಸ್ ಮಾಡುವುದು. ಈ ರೀತಿ ಮಾಡುವುದರಿಂದ ಚಿತ್ರಕ್ಕೆ ಸಹಕಾರ ಮತ್ತು ಸಹಾಯವಾಗಲಿದೆ ಎಂದು ನಿರ್ದೇಶಕರು ಕೋರಿಕೊಂಡಿದ್ದಾರೆ.
ಸಿನಿ ಸರ್ಕಲ್.ಇನ್ ನ್ಯೂಸ್
21/04/19ಪೋಸ್ಟರ್‍ಗಳಲ್ಲಿ ಗಮನ ಸೆಳೆಯುವ ಗರ
ಜನರನ್ನು ಚಿತ್ರಮಂದಿರಕ್ಕೆ ಸೆಳಯಲು ಟ್ರೈಲರ್ ಎಷ್ಟು ಮುಖ್ಯವೋ ಅದೇ ರೀತಿ ಪೋಸ್ಟರ್‍ಗಳು ಅದರಲ್ಲಿ ಪಾಲಾಗಿರುತ್ತದೆ. ಇದನ್ನು ಅರಿತ ‘ಗರ’ ಚಿತ್ರದ ನಿರ್ದೇಶಕ ಮುರಳಿಕೃಷ್ಣ ನಾಲ್ಕು ಬಗೆಯ ವಿನೂತನ ಪೋಸ್ಟರ್‍ಗಳನ್ನು ಮಾಡಿಸಿರುವುದು ಎಲ್ಲರು ಇದರ ಬಗ್ಗೆ ಮಾತನಾಡುವಂತಿದೆ. ಬಾಲಿವುಡ್ ನಟ ಜಾನಿಲೀವರ್, ಕೊರಿಯೋಗ್ರಾಫರ್ ಸರೋಜಖಾನ್ ಮೊದಲ ಬಾರಿ ಕೆಲಸ ಮಾಡಿರುವುದು ವಿಶೇಷವಾಗಿದೆ. ಸೆನ್ಸಾರ್‍ನವರು ಸಿನಿಮಾ ವೀಕ್ಷಿಸಿ ಯಾವುದೇ ದೃಶ್ಯಕ್ಕೆ ಆಕ್ಷೇಪ ವ್ಯಕ್ತಪಡಿಸದೆ ಕ್ಲೀನ್ ಯು ಸರ್ಟಿಫೀಕೇಟ್ ನೀಡಿದೆ. ಕತೆಯ ಕುರಿತು ಹೇಳುವುದಾದರೆ ಬದುಕಿನಲ್ಲಿ ಎಲ್ಲರಿಗೂ ಯಾವುದೋ ವಿಷಯದಲ್ಲಿ ಗರ ಬಡಿಯುತ್ತದೆ. ಒಬ್ಬರ ಗರ ಮತ್ತೋಬ್ಬರ ಮೇಲೆ ಬೀಳುತ್ತದೆ. ಆರ್.ಕೆ.ನಾರಾಯಣ್ ವಿರಚಿತ ಕತೆಯ ಎಂದು ಏಳೆಯನ್ನು ತೆಗೆದುಕೊಳ್ಳಲಾಗಿದೆ. ಸಾಧುಕೋಕಿಲ ಅವರೊಂದಿಗೆ ಜಾನಿಲಿವರ್ ಜುಗಾರಿ ಬ್ರದರ್ಸ್ ಆಗಿ ನಗಿಸಿದ್ದಾರೆ. ಹರಿಷಡ್ವರ್ಗದಲ್ಲಿ ಇರುವ ಗಂಗಸ್ವಾಮಿಯಾಗಿ ರೆಹಮಾನ್, ಸಿನಿಮಾ ತರಭೇತಿ ಶಾಲೆಯಲ್ಲಿ ನಿರ್ದೇಶಕರಿಗೆ ಉಪನ್ಯಾಸಕನಾಗಿದ್ದ ಪ್ರದೀಪ್‍ಆರ್ಯನ್ ಭಗೀರಥನಾಗಿ ಕಾಣಿಸಿಕೊಂಡಿದ್ದಾರೆ.

ತಾರಗಣದಲ್ಲಿ ಆವಂತಿಕಮೋಹನ್ ನಾಯಕಿ, ಮನ್‍ದೀಪ್‍ರಾಯ್, ನೇಹಾಪಾಟೀಲ್, ಗುರುರಾಜ್, ಹಿರಿಯ ಕಲಾವಿದರಾದ ರಾಮಕೃಷ್ಣ-ರೂಪದೇವಿ ಜೋಡಿ, ದಯಾನಂದ್, ರಮೇಶ್‍ಭಟ್ ಮುಂತಾದವರ ನಟನೆ ಇದೆ. ಸದ್ಯದಲ್ಲೆ ಗರ ಸಿನಿಮಾವು ಜನರಿಗೆ ತೋರಿಸಲು ಸಜ್ಜಾಗಿದೆ.
ಸಿನಿ ಸರ್ಕಲ್.ಇನ್ ನ್ಯೂಸ್
28/02/19

ಗರ ಯು ಸರ್ಟಿಫೀಕೇಟ್
ಬಾಲಿವುಡ್ ನಟ ಜಾನಿಲೀವರ್, ಕೊರಿಯೋಗ್ರಾಫರ್ ಸರೋಜಖಾನ್ ಮೊದಲ ಬಾರಿ ‘ಗರ’ ಚಿತ್ರದಲ್ಲಿ ಕೆಲಸ ಮಾಡಿರುವುದು ವಿಶೇಷವಾಗಿದೆ. ಸೆನ್ಸಾರ್‍ನವರು ಸಿನಿಮಾ ವೀಕ್ಷಿಸಿ ಯಾವುದೇ ದೃಶ್ಯಕ್ಕೆ ಆಕ್ಷೇಪ ವ್ಯಕ್ತಪಡಿಸದೆ ಕ್ಲೀನ್ ಯು ಸರ್ಟಿಫೀಕೇಟ್ ನೀಡಿರುವುದರಿಂದ ನಿರ್ದೇಶಕ ಮುರಳಿಕೃಷ್ನ ಖುಷಿಯಾಗಿದ್ದಾರೆ. ಕತೆಯ ಕುರಿತು ಹೇಳುವುದಾದರೆ ಬದುಕಿನಲ್ಲಿ ಎಲ್ಲರಿಗೂ ಯಾವುದೋ ವಿಷಯದಲ್ಲಿ ಗರ ಬಡಿಯುತ್ತದೆ. ಒಬ್ಬರ ಗರ ಮತ್ತೋಬ್ಬರ ಮೇಲೆ ಬೀಳುತ್ತದೆ. ಆರ್.ಕೆ.ನಾರಾಯಣ್ ವಿರಚಿತ ಕತೆಯ ಎಂದು ಏಳೆಯನ್ನು ತೆಗೆದುಕೊಳ್ಳಲಾಗಿದೆ. ಸಾಧುಕೋಕಿಲ ಅವರೊಂದಿಗೆ ಜಾನಿಲಿವರ್ ಜುಗಾರಿ ಬ್ರದರ್ಸ್ ಆಗಿ ನಗಿಸಿದ್ದಾರೆ. ಹರಿಷಡ್ವರ್ಗದಲ್ಲಿ ಇರುವ ಗಂಗಸ್ವಾಮಿಯಾಗಿ ರೆಹಮಾನ್, ಸಿನಿಮಾ ತರಭೇತಿ ಶಾಲೆಯಲ್ಲಿ ನಿರ್ದೇಶಕರಿಗೆ ಉಪನ್ಯಾಸಕನಾಗಿದ್ದ ಪ್ರದೀಪ್‍ಆರ್ಯನ್ ಭಗೀರಥನಾಗಿ ಕಾಣಿಸಿಕೊಂಡಿದ್ದಾರೆ.

ತಾರಗಣದಲ್ಲಿ ಆವಂತಿಕಮೋಹನ್ ನಾಯಕಿ, ಮನ್‍ದೀಪ್‍ರಾಯ್, ನೇಹಾಪಾಟೀಲ್, ಗುರುರಾಜ್, ಹಿರಿಯ ಕಲಾವಿದರಾದ ರಾಮಕೃಷ್ಣ-ರೂಪದೇವಿ ಜೋಡಿ, ದಯಾನಂದ್, ರಮೇಶ್‍ಭಟ್ ಮುಂತಾದವರ ನಟನೆ ಇದೆ. ಸದ್ಯದಲ್ಲೆ ಗರ ಸಿನಿಮಾವು ಜನರಿಗೆ ತೋರಿಸಲು ಸಜ್ಜಾಗಿದೆ.
ಸಿನಿ ಸರ್ಕಲ್.ಇನ್ ನ್ಯೂಸ್
ಗರ ಹಾಡುಗಳ ಸಮಯ
ನಟಿ ತಾರಾಅನುರಾಧ ಮತ್ತು ಗಾಯಕಿ ಮಂಜುಳಗುರುರಾಜ್ ಕವಡೆ ಹಾಕುವುದರ ಮೂಲಕ ‘ಗರ’ ಚಿತ್ರದ ಧ್ವನಿಸಾಂದ್ರಿಕೆ ಅನಾವರಣ ಕಾರ್ಯಕ್ರಮಕ್ಕೆ ಚಾಲನೆ ದೊರಕಿತು. ಪಾತ್ರಕ್ಕೆ ತಿರುವು ಕೊಡಲಿದೆ. ತೆರೆ ಮೇಲೆ ಕಂಡಾಗ ಈಕೆ ಏತಕ್ಕಾಗಿ ಬಂದಳು, ಇವಳಿಂದ ಇಷ್ಟೋಂದು ಆಯಿತಾ ಅಂತ ನೋಡುಗರಿಗೆ ಅನಿಸುವ ರೀತಿಯಲ್ಲಿ ಕಾಣಿಸಿಕೊಂಡಿರುವ ನೇಹಾಪಾಟೀಲ್ ಖುಷಿ ಹಂಚಿಕೊಂಡರು. ಟ್ರೈಲರ್‍ಗೆ ಹಸಿರು ನಿಶಾನೆ ತೋರಿಸಿದ ಶಿವರಾಜ್‍ಕುಮಾರ್ ಮಾತನಾಡಿ ಜಾನಿಲೀವರ್ ಅಭಿಮಾನಿಯಾಗಿರುವೆ. ವೇಣು ಕ್ಯಾಮರ ಕೆಲಸ ಅದ್ಬುತವಾಗಿದೆ. ರೆಹಮಾನ್ ಸಿಕ್ಕಾಗಲೆಲ್ಲಾ ಯಾವಾಗ ನಟನಾಗುತ್ತಿಯಾ ಎಂದು ಕೇಳುತ್ತಿದ್ದೆ. ಸಾಧುಕೋಕಿಲ ನೋಡಿದರೆ ನಗ್ತವೆ. ಚಿತ್ರರಂಗದಲ್ಲಿ ಯಾರನ್ನು ಕೆಳಹಂತದಲ್ಲಿ ನೋಡಬಾರದು. ಕಲಾವಿದರಾದವರು ಮುಂದೆ ಏನಾಗುತ್ತಾರೆಂದು ಯಾರಿಗೂ ತಿಳಿಯದು. ನಾವುಗಳು ಅವರನ್ನು ಪ್ರೋತ್ಸಾಹಿಸಬೇಕು. ಯಾವುದು ದೊಡ್ಡದು, ಚಿಕ್ಕ ಸಿನಿಮಾ ಅಂತ ಉಲ್ಲೇಖಿಸಬಾರದು. ಪ್ರೇಕ್ಷಕ ಇಷ್ಟಪಟ್ಟರೆ ಚಿತ್ರವು ಎಲ್ಲಿಗೋ ತೆಗೆದುಕೊಂಡು ಹೋಗುತ್ತದೆಂದು ಅಭಿಪ್ರಾಯಪಟ್ಟರು.

ಪ್ರಾರಂಭದಲ್ಲಿ ಗರ ಇಡತ್ತೇನೆಂದು ಸ್ನೇಹಿತರಿಗೆ ಹೇಳಿದಾಗ ನಕರಾತ್ಮಕ ಸಂದೇಶ ತರುತ್ತದೆಂದು ಹೇಳಿದರು. ನೆಗಟೀವ್‍ನಿಂದ ಪಾಸಿಟೀವ್ ಹುಡುಕುವ ಮನುಷ್ಯನಾಗಿದ್ದರಿಂದ ಇದೇ ಸೂಕ್ತವೆಂದು ಟೈಟಲ್‍ಗೆ ಬದ್ದನಾದೆ. ನಾವುಗಳು ಸ್ವಾರ್ಥಕ್ಕಾಗಿ ಗರ ಹಾಕುತ್ತೇವೆ. ಆದರೆ ಮೇಲಿದ್ದವ ಹಾಕುವ ಗರದಿಂದ ತಪ್ಪಿಸಿಕೊಳ್ಳಲು ಆಗುವುದಿಲ್ಲ. ಪ್ರತಿಯೊಬ್ಬರಲ್ಲೂ ಎರಡು ಮನಸ್ಸುಗಳು ಇರುತ್ತವೆ. ಒಳ್ಳೆಯವನು ಕೆಟ್ಟವನಾಗಬಹುದು. ಅದೇ ರೀತಿಯಲ್ಲಿ ಕೆಟ್ಟವನು ಸುಗಣರಾಗಬಹುದು. ಕತೆಯಲ್ಲಿ ರಂಗಸ್ವಾಮಿ, ಭಗೀರಥ ಎರಡು ಪಾತ್ರಗಳಲ್ಲಿ ಯಾರು ಯಾರ ಮೇಲೆ ಗರ ಹಾಕುತ್ತಾರೆ ಎಂಬುದನ್ನು ತೋರಿಸಲಾಗಿದೆ. ಜಾನಿಲೀವರ್ ನಟಿಸಿದ್ದು ಚಿತ್ರಕ್ಕೆ ತೂಕ ಬಂದಿದೆ ಅಂತ ನಿರ್ಮಾಪಕ ಹೆಸರಿನ ಗೌಪ್ಯತೆಯನ್ನು ನಿರ್ದೇಶಕ ಕೆ.ಆರ್.ಮುರಳಿಕೃಷ್ಣ ಕಾಪಾಡಿದರು.
ಅರ್ಥವಾಗದ ಭಾಷೆಯಲ್ಲಿ ಹೇಳಿದ ಜಾನಿಲೀವರ್ ಇದರ ಅರ್ಥ ತಿಳಿಯಲು ಸಿನಿಮಾ ನೋಡಬೇಕು. ಗುರುರಾಜ್ ಅವರಿಂದ ಸ್ಯಾಂಡಲ್‍ವುಡ್‍ಗೆ ಬಂದಿದ್ದೇನೆಂದು ಮಾತಿಗೆ ವಿರಾಮ ಹಾಕಿದರು.

ಸಂಗೀತ ಗೊತ್ತಿದ್ದವರು ನಿರ್ದೇಶಕರಾಗುವುದು ಒಳಿತು. ಗುರುರಾಜ್-ಮಂಜುಳಾಗುರುರಾಜ್ ಸಂಗೀತಕ್ಕೆ ಜೀವನವನ್ನು ಮುಡುಪಾಗಿಟ್ಟಿದ್ದಾರೆ. ಅವರ ಪುತ್ರ ಮ್ಯೂಸಿಕ್ ಕಂಪೋಸ್ ಮಾಡಿ ಒಳ್ಳೆಯ ರಾಗಗಳನ್ನು ಕೊಟ್ಟಿದ್ದಾರೆ. ಅವರಿಗೆ ಒಳ್ಳೆಯದಾಗಲೆಂದು ಸಾಧುಕೋಕಿಲ ಹೇಳಿದರು.

ಕಲಾವಿದರಾದ ಪ್ರದೀಪ್‍ಆರ್ಯನ್, ರೆಹಮಾನ್, ತಬಲನಾಣಿ. ವಿ.ಮನೋಹರ್, ಆರ್ಯನ್‍ಶರ್ಮಾ, ಸಂಗೀತ ನಿರ್ದೇಶಕ ಸಾಗರ್‍ಗುರುರಾಜ್ ಅವಕಾಶ ನೀಡಿದ್ದಕ್ಕೆ ಥ್ಯಾಂಕ್ಸ್ ಎಂದರು. ಲಹರಿವೇಲು ಹಿರಿಯ ಸಂಕಲನಕಾರ ಉಮಾಶಂಕರಬಾಬು ಅವರಿಗೆ ಉಂಗುರ ಹಾಕುವುದರೊಂದಿಗೆ ಗೌರವ ಅರ್ಪಿಸಿದರು. ಸಿನಿಮಾವು ಮುಂದಿನ ತಿಂಗಳು ತೆರೆಕಾಣುವ ಸಾದ್ಯತೆ ಇದೆ ಎಂಬುದಾಗಿ ತಂಡದಿಂದ ಮಾಹಿತಿ ಲಭ್ಯವಾಯಿತು.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
15/01/19

ಸೆನ್ಸಾರ್‍ಗೆ ಹೋಗಲಿದೆ ಗರ
ಬಾಲಿವುಡ್ ನಟ ಜಾನಿಲೀವರ್, ಕೊರಿಯೋಗ್ರಾಫರ್ ಸರೋಜಖಾನ್ ಮೊದಲ ಬಾರಿ ‘ಗರ’ ಚಿತ್ರದಲ್ಲಿ ಕೆಲಸ ಮಾಡಿರುವುದು ವಿದೇಶ. ಅಂದುಕೊಂಡಂತೆ ಚಿತ್ರೀಕರಣೋತ್ತರ ಕೆಲಸಗಳು ಮುಗಿಸಿದ್ದು, ಸದ್ಯ ಮೊದಲ ಕಾಫಿ ಹೊರಬಂದಿದೆ. ಇದರಿಂದ ನಿರ್ದೇಶಕ ಮುರಳಿಕೃಷ್ನ ಖುಷಿಯಾಗಿ ಮುಂದಿನದು ಸೆನ್ಸಾರ್ ಮಾಡಿಲು ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಿದ್ದಾರೆ. ಕತೆಯ ಕುರಿತು ಹೇಳುವುದಾದರೆ ಬದುಕಿನಲ್ಲಿ ಎಲ್ಲರಿಗೂ ಯಾವುದೋ ವಿಷಯದಲ್ಲಿ ಗರ ಬಡಿಯುತ್ತದೆ. ಒಬ್ಬರ ಗರ ಮತ್ತೋಬ್ಬರ ಮೇಲೆ ಬೀಳುತ್ತದೆ. ಆರ್.ಕೆ.ನಾರಾಯಣ್ ವಿರಚಿತ ಕತೆಯ ಎಂದು ಏಳೆಯನ್ನು ತೆಗೆದುಕೊಳ್ಳಲಾಗಿದೆ. ಸಾಧುಕೋಕಿಲ ಅವರೊಂದಿಗೆ ಜಾನಿಲಿವರ್ ಜುಗಾರಿ ಬ್ರದರ್ಸ್ ಆಗಿ ನಗಿಸಿದ್ದಾರೆ. ಹರಿಷಡ್ವರ್ಗದಲ್ಲಿ ಇರುವ ಗಂಗಸ್ವಾಮಿಯಾಗಿ ರೆಹಮಾನ್, ಸಿನಿಮಾ ತರಭೇತಿ ಶಾಲೆಯಲ್ಲಿ ನಿರ್ದೇಶಕರಿಗೆ ಉಪನ್ಯಾಸಕನಾಗಿದ್ದ ಪ್ರದೀಪ್‍ಆರ್ಯನ್ ಭಗೀರಥನಾಗಿ ಕಾಣಿಸಿಕೊಂಡಿದ್ದಾರೆ.

ತಾರಗಣದಲ್ಲಿ ಆವಂತಿಕಮೋಹನ್ ನಾಯಕಿ, ಮನ್‍ದೀಪ್‍ರಾಯ್, ನೇಹಾಪಾಟೀಲ್, ಗುರುರಾಜ್, ಹಿರಿಯ ಕಲಾವಿದರಾದ ರಾಮಕೃಷ್ಣ-ರೂಪದೇವಿ ಜೋಡಿ, ದಯಾನಂದ್, ರಮೇಶ್‍ಭಟ್ ಮುಂತಾದವರ ನಟನೆ ಇದೆ. ಜನವರಿಯಲ್ಲಿ ಗರ ಸಿನಿಮಾವು ಜನರಿಗೆ ತೋರಿಸಲು ಸಜ್ಜಾಗಿದೆ.
ಸಿನಿ ಸರ್ಕಲ್.ಇನ್ ನ್ಯೂಸ್
9/12/18ದೃಶ್ಯಗಳಿಗೆ ಕಂಠ ನೀಡಿದ ಜಾನಿಲೀವರ್
‘ಗರ’ ಚಿತ್ರಕ್ಕೆ ಮೊಟ್ಟ ಮೊದಲಬಾರಿ ಹಾಸ್ಯ ಪಾತ್ರದಲ್ಲಿ ಸಾಧುಕೋಕಿಲ ಜೊತೆಗೆ ಕಾಣಿಸಿಕೊಂಡಿರುವ ಬಾಲಿವುಡ್ ನಟ ಜಾನಿಲೀವರ್ ತಮ್ಮ ಭಾಗದ ದೃಶ್ಯಗಳಿಗೆ ಕಂಠದಾನ ಮಾಡಿದ್ದಾರೆ. ಸೋಮವಾರ ಸ್ಟುಡಿಯೋಕ್ಕೆ ಆಗಮಿಸಿ ಸತತವಾಗಿ ಏಳು ಗಂಟೆಗಳ ಕಾಲ ವಿಶ್ರಾಂತಿ ಪಡೆಯದೆ ಕ್ಷಿಪ್ರ ಕೆಲಸ ಮಾಡಿ ನಿರ್ಗಮಿಸಿದ್ದಾರೆ. ನಿರ್ದೇಶಕ ಮುರಳಿಕೃಷ್ಣ ಚಿತ್ರೀಕರಣ ಸೆಟ್‍ನಲ್ಲೆ ನೀಡಿದ ಸಂಭಾಷಣೆಗಳನ್ನು ತಾಲೀಮು ನಡೆಸಿ ಕನ್ನಡ ಭಾಷೆಯಲ್ಲಿ ಧ್ವನಿ ಒದಗಿಸಿರುವುದು ವಿಶೇಷ. ಅವರ ಸಾತ್ವಿಕ್ತ ಗುಣಕ್ಕೆ ತಂಡದವರು ಶ್ಲಾಘಿಸಿದ್ದಾರೆ. ಮೂಲತ: ತೆಲುಗು ಕಡೆಯವರಾಗಿದ್ದರಿಂದ ಇಲ್ಲಿನ ಭಾಷೆಯನ್ನು ಸುಲಭವಾಗಿ ಅರ್ಥಮಾಡಿಕೊಂಡಿದ್ದು ಪ್ಲಸ್ ಪಾಯಿಂಟ್ ಆಗಿದೆಯಂತೆ. ಇನ್ನು ಸಾಧುಕೋಕಿಲ ಡಬ್ಬಿಂಗ್, ಮತ್ತು ಗ್ರಾಫಿಕ್ಸ್ ಮುಗಿದರೆ ಮೊದಲ ಪ್ರತಿ ಹೊರಬರುತ್ತದೆ. ಇದಕ್ಕಾಗಿ ನಿರ್ದೇಶಕರು ಸಮಯ ವ್ಯರ್ಥಮಾಡದೆ ಚಿತ್ರೀಕರಣೋತ್ತರ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ನಾಯಕಿ ಆವಂತಿಕಮೋಹನ್‍ಗೆ ದೀಪಾಭಾಸ್ಕರ್ ಕಂಠದಾನ ಮಾಡಿದ್ದಾರೆ. ಮುಂದಿನ ತಿಂಗಳು ಧ್ವನಿಸಾಂದ್ರಿಕೆ ಲೋಕಾರ್ಪಣೆ, ಹೊಸ ರೀತಿಯಲ್ಲಿ ಟೀಸರ್ ಅನಾವರಣ, ಹಾಗೂ ನಿರ್ಮಾಪಕರನ್ನು ಪರಿಚಯಿಸುವ ಸಲುವಾಗಿ ಪ್ರತ್ಯೇಕವಾಗಿ ಸುದ್ದಿಗೋಷ್ಟಿಯನ್ನು ಏರ್ಪಡಿಸಲಾಗುವುದು. ಎಲ್ಲವು ಅಂದುಕೊಂಡಂತೆ ಆದಲ್ಲಿ ಸೆಪ್ಟಂಬರ್‍ದಲ್ಲಿ ಚಿತ್ರ ಬಿಡುಗಡೆ ಖಚಿತ ಅಂತಾರೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
10/07/18
ಚಿತ್ರೀಕರಣ ಮುಗಿಸಿದ ಗರ
ಅಂದುಕೊಂಡಂತೆ ಕುಂಬಳಕಾಯಿ ಒಡೆದ ಖುಷಿಯಲ್ಲಿ ‘ಗರ’ ತಂಡವು ಚಿತ್ರೀಕರಣ ಅನುಭವಗಳನ್ನು ಹಂಚಿಕೊಳ್ಳಲು ಪತ್ರಕರ್ತರನ್ನು ಭೇಟಿ ಮಾಡಿತ್ತು. ಪ್ರಾರಂಭದಲ್ಲಿ ನಿರ್ದೇಶಕ ಮುರಳಿಕೃಷ್ಣ ಎಂದಿನಂತೆ ಗತಕಾಲದ ನೆನಪುಗಳನ್ನು ಹೇಳುತ್ತಾ, ಬದುಕಿನಲ್ಲಿ ಎಲ್ಲರಿಗೂ ಯಾವುದೋ ವಿಷಯದಲ್ಲಿ ಗರ ಬಡಿಯುತ್ತದೆ. ಒಬ್ಬರ ಗರ ಮತ್ತೋಬ್ಬರ ಮೇಲೆ ಬೀಳುತ್ತದೆ. ಆರ್.ಕೆ.ನಾರಾಯಣ್ ವಿರಚಿತ ಕತೆಯ ಎಂದು ಏಳೆಯನ್ನು ತೆಗೆದುಕೊಳ್ಳಲಾಗಿದೆ. ಗುರುರಾಜ್ ಸಹಕಾರದಿಂದ ಜಾನಿಲೀವರ್ ಕನ್ನಡದಲ್ಲಿ ಮೊದಲಬಾರಿ ಸಾಧುಕೋಕಿಲ ಅವರೊಂದಿಗೆ ಜುಗಾರಿ ಬ್ರದರ್ಸ್ ಆಗಿ ನಗಿಸಿದ್ದಾರೆ. ಹರಿಷಡ್ವರ್ಗದಲ್ಲಿ ಇರುವ ಗಂಗಸ್ವಾಮಿಯಾಗಿ ರೆಹಮಾನ್, ಸಿನಿಮಾ ತರಭೇತಿ ಶಾಲೆಯಲ್ಲಿ ನನಗೆ ಉಪನ್ಯಾಸಕನಾಗಿದ್ದ ಪ್ರದೀಪ್‍ಆರ್ಯನ್ ಭಗೀರಥನಾಗಿ ಚೆನ್ನಾಗಿ ನಟಿಸಿ ಕನ್ನಡ ಕಲಿತುಕೊಂಡಿದ್ದಾರೆ. ನಿರ್ಮಾಪಕರನ್ನು ಕೊನೆ ದಿವಸ ಪರಿಚಯಿಸುವುದಾಗಿ ಹೇಳಿದರು.

ಐದು ದಿವಸ ಸೆಟ್‍ನಲ್ಲಿ ನಗು ಇರುತ್ತಲ್ಲೆ ಇತ್ತು. ಅದಕ್ಕೆ ಕಾರಣ ಜಾನಿಲೀವರ್. ಮೊದಲ ಬಾರಿ ಸೌತ್ ಇಂಡಿಯಿನ್ ಆಗಿಮಿಸಿದ್ದಾರೆ. ಅವರ ಜೊತೆಗೆ ನಟಿಸಿರುವುದು ಸುಕೃತ. ಚಿತ್ರರಂಗದಲ್ಲಿ ಹೆಚ್ಚು ಇಷ್ಟಪಡುವ ನಟ. ಪ್ರಾಂಮ್ಟ್ ಮಾಡದೆ ನಟಿಸುತ್ತಿದ್ದರು. ಅಂದು ಇವರ ಭಾವಚಿತ್ರಗಳನ್ನು ನೋಡಿ ಕಲಿತುಕೊಳ್ಳುತ್ತಿದ್ದೆ. ಅವರು ಪ್ರೀತಿಯ ದೇವರು. ಪಾದರಸದಂತೆ, ಕೆಲಸಕ್ಕೆ ಬಂದಿದ್ದೇನೆ. ಕೆಲಸ ಮಾಡುತ್ತೇನೆಂದು ಬೇಸರ ಪಟ್ಟುಕೊಳ್ಳದೆ ನಿರ್ದೇಶಕರು ಹೇಳಿದ ಸನ್ನಿವೇಶಕ್ಕೆ ನಟಿಸುತ್ತಿದ್ದರು ಅಂತ ಗುಣಗಾನ ಮಾಡಿದ್ದು ಸಾಧುಕೋಕಿಲ.
ಪಾತ್ರ ಚೆನ್ನಾಗಿದೆ. ಹೈದರಬಾದ್‍ನಿಂದ ಬಂದವನಾಗಿದ್ದರಿಂದ ತೆಲುಗು ಭಾಷೆಯಂತೆ ಕನ್ನಡ ಭಾಷೆ ಇದೆ. ಬಾಲಿವುಡ್ ನೃತ್ಯ ನಿರ್ದೇಶಕಿ ಕೊರಿಯೋಗ್ರಾಫ್ ಮಾಡಿರುವುದು ಸಂತಸ ತಂದಿದೆ ಎಂದು ಕುಡುಕರ ಹಾಸ್ಯ ಪ್ರಸಂಗವನ್ನು ನಟನೆ ಮಾಡಿ ರಂಜಸಿದರು ಜಾನಿಲೀವರ್. ಮೊದಲ ಬಾರಿ ಕನ್ನಡ ಚಿತ್ರಕ್ಕೆ ನೃತ್ಯ ಸಂಯೋಜನೆ ಮಾಡಲು ಆಗಮಿಸಿದ್ದ ಬಾಲಿವುಡ್‍ನ ಸರೋಜ್‍ಖಾನ್ ಇಲ್ಲಿನ ಚಿತ್ರರಂಗದಲ್ಲಿ ಶಿಸ್ತು ಅನ್ನುವುದನ್ನು ನೋಡಿ ಖುಷಿಯಾಗಿದೆ. ಜಾನಿಲೀವರ್, ಸಾಧುಕೋಕಿಲ ನಾಯಕರಂತೆ ಡ್ಯಾನ್ಸ್ ಮಾಡಿದ್ದಾರೆಂದು ಶ್ಲಾಘಿಸಿದರು ಸರೋಜಖಾನ್. ನಾಯಕ ರೆಹಮಾನ್, ನಾಯಕಿ ಆವಂತಿಕಮೋಹನ್, ನೇಹಾಪಾಟೀಲ್, ಆದಿತ್ಯಾರ್ಯನ್, ಮನದೀಪ್‍ರಾಯ್, ಗುರುರಾಜ್ , ಪ್ರದೀಪ್‍ಆರ್ಯನ್ ಚುಟುಕು ಮಾತನಾಡಿದರು.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್ ಡಾಟ್ ಇನ್ ನ್ಯೂಸ್
-20/03/18ಮೇಲುಕೋಟೆಯಲ್ಲಿ ಗರ ಹಾಡು
ಕಾಶ್ಮೀರ ಸುತ್ತಮುತ್ತ ಯಶಸ್ವಿಯಾಗಿ ಹಾಡಿನ ಚಿತ್ರೀಕರಣವನ್ನು ಮುಗಿಸಿರುವ ‘ಗರ’ ಚಿತ್ರತಂಡವು ಈಗ ಮದುವೆ ಸಂದರ್ಭದ ಗೀತೆಯನ್ನು ಮೇಲುಕೋಟೆಯ ಸುಂದರ ತಾಣಗಳಲ್ಲಿ ಸೆರೆಹಿಡಿದಿದ್ದಾರೆ. ಹಾಡಿನಲ್ಲಿ ನಾಯಕ ಪ್ರದೀಪ್‍ಆರ್ಯನ್, ನಾಯಕಿ ಆವಂತಿಕಾಮೋಹನ್, ಹಿರಿಯ ಕಲಾವಿದರಾದ ರಾಮಕೃಷ್ಣ, ರೂಪದೇವಿ, ಇವರೊಂದಿಗೆ ಸುಚಿತ್ರಾ, ಶ್ರೀಕಾಂತ್‍ಹೆಬ್ಳಿಕರ್, ದಯಾನಂದ್, ನೇಹಾಪಾಟೀಲ್ ಹೆಜ್ಜೆ ಹಾಕಿದ್ದಾರೆ. ಮೊದಲಬಾರಿ ರಾಮಕೃಷ್ಣ-ರೂಪದೇವಿ ಜೋಡಿಯಾಗಿ ಅಭಿನಯಿಸುತ್ತಿದ್ದು, ಗೀತೆಯಲ್ಲಿ ವಿಶೇಷ ಎನ್ನುವಂತೆ ಇಬ್ಬರು ಡ್ಯಾನ್ಸ್ ಮಾಡಿ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ. ಬಾಲಿವುಡ್ ಹೆಸರಾಂತ ನೃತ್ಯ ನಿರ್ದೇಶಕಿ ಸರೋಜಖಾನ್ ಸಾರಥ್ಯದಲ್ಲಿ ಹಾಡು ಸಿದ್ದಗೊಂಡಿದೆ. ನಿರ್ದೇಶಕರು ಮಾನಿಟರ್‍ನಲ್ಲಿ ದೃಶ್ಯಗಳನ್ನು ನೋಡುತ್ತಿದ್ದರೆ ಸರೋಜಖಾನ್ ದೂರದಲ್ಲಿ ಒಬ್ಬರು ಸರಿಯಾಗಿ ಮಾಡಿಲ್ಲದನ್ನು ಕಂಡು ಸರಿಪಡಿಸುತ್ತಿದ್ದು ತಂಡಕ್ಕೆ ಖುಷಿಯಾಗಿದೆಯಂತೆ. ಬೆಂಗಳೂರಿನ ಲುಬ್ನ ಕಾಸ್ಟ್ಯೂಮ್ ಡಿಸೈನ್ ಆಗಿ ಅಚ್ಚುಕಟ್ಟಾಗಿ ಕೇವಲ ಎರಡು ದಿನಗಳಲ್ಲಿ ರೆಡಿ ಮಾಡಿರುವುದು, ಇವರಿಗೆ ಭವಿಷ್ಯದಲ್ಲಿ ಒಳ್ಳೆಯ ಅವಕಾಶ ಸಿಗಲಿದೆ ಎಂಬ ಮಾತು ಕೇಳಿಬಂದಿದೆ. ಇತ್ತೀಚೆಗೆ ನಮ್ಮನ್ನು ಅಗಲಿದ ಎಲ್.ಎನ್.ಶಾಸ್ತ್ರೀ ಕಂಠದಲ್ಲಿ ಮೂಡಿಬಂದಿರುವ ಗೀತೆಗೆ ಅಜಯ್‍ವಾರಿಯರ್, ಆಕಾಂಕ್ಷ ಸೇರಿಕೊಂಡಿದ್ದಾರೆ.

ಕೊನೆ ಹಂತದ ಚಿತ್ರೀಕರಣವು ಜಾನಿಲೀವರ್-ಸಾಧುಕೋಕಿಲ ಕಾಂಬಿನೇಶನ್‍ನಲ್ಲಿ ಟಿ.ಸಿ ಪಾಳ್ಯದಲ್ಲಿ ಕತೆಯಲ್ಲಿ ಬರುವ ಡಿಜಿಟಲ್ ಗೌಡನ ಅರಮೆನೆಯಂತೆ ಸೆಟ್ ಹಾಕಲಾಗಿದ್ದು ಇದೇ 14ರಿಂದ ಐದು ದಿನಗಳ ಕಾಲ ಶೂಟಿಂಗ್ ನಡೆಸಿ ಅಂದೇ ಕುಂಬಳಕಾಯಿ ಒಡೆಯಲು ಯೋಜನೆ ಹಾಕಲಾಗಿದೆ. ಮುರಳಿಕೃಷ್ಣ ಅವರು ಆಕ್ಷನ್ ಕಟ್ ಹೇಳುವದರ ಜೊತೆಗೆ ಕತೆ, ಚಿತ್ರಕತೆ, ಸಂಭಾಷಣೆಯನ್ನು ಬರೆದಿದ್ದಾರೆ. ಮೊದಲಬಾರಿ ಎನ್ನುವಂತೆ ಸಾಧುಕೋಕಿಲ ಅವರಿಂದ ಡಬ್ಬಲ್ ಮೀನಿಂಗ್ ಡೈಲಾಗ್ ಹೇಳಿಸದೆ ಅವರಲ್ಲಿರುವ ಹೊಸ ಪ್ರತಿಭೆಯನ್ನು ಹೊರಗೆ ತೆಗೆಯುತ್ತಿರುವುದು ಸ್ವತ: ಸಾಧುಗೆ ಇಷ್ಟವಾಗಿದೆಯಂತೆ. ಛಾಯಗ್ರಹಣ ವೇಣು ಚಿತ್ರಕ್ಕೆ ಕಣ್ಣಾಗಿದ್ದಾರೆ ಅರ್ಥಾತ್ ಛಾಯಗ್ರಾಹಕ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್ ಡಾಟ್ ಇನ್ ನ್ಯೂಸ್
-15/03/18
ಕಾಶ್ಮೀರದಲ್ಲಿ ರೆಹಮಾನ್-ಆವಂತಿಕ ಹಾಡು
‘ಗರ’ ಚಿತ್ರದಲ್ಲಿ ಬರುವ ರೋಮಾಂಟಿಕ್ ಹಾಡಿಗೆ ಸಾಹಿತ್ಯವನ್ನು ವಾಸುಕಿವೈಭವ್ ಒದಗಿಸಿದ್ದಾರೆ. ಇದರ ಗೀತೆಯನ್ನು ಕಾಶ್ಮೀರ ಸುತ್ತಮುತ್ತ ಸುಂದರ ತಾಣಗಳಲ್ಲಿ ಚಿತ್ರೀಕರಿಸಲಾಗಿದೆ. ಶಂಕರ್‍ಗುರು, ಹಿಂದಿ ಚಿತ್ರ ಭಜರಂಗಿಭಾಯಜಾನ್ ಮುಂತಾದ ಸಿನಿಮಾಗಳು ಡಾಲ್ ಲೆಕ್ ಸ್ಥಳದಲ್ಲಿ ಹಗಲು ಹೊತ್ತಿನಲ್ಲಿ ಸರೆ ಹಿಡಿದಿದ್ದರು. ಮೊದಲಬಾರಿ ಎನ್ನುವಂತೆ ಚಿತ್ರತಂಡವು ರಾತ್ರಿ ವೇಳೆ ಕಾಶ್ಮೀರ ಹೇಗಿರುತ್ತೆ ಎಂಬುದನ್ನು ಇದೇ ಜಾಗದಲ್ಲಿ ಚಿತ್ರೀಕರಣ ನಡೆಸಿ ಯಶಸ್ವಿಯಾಗಿದ್ದಾರೆ. ನಿರ್ದೇಶಕ ಮುರಳಿಕೃಷ್ಣ , ಛಾಯಗ್ರಾಹಕ ವೇಣು ಮತ್ತು ತಂಡದೊಂದಿಗೆ ಪ್ರಯಾಣ ಮಾಡುವಾಗ ದಾರಿಯಲ್ಲಿ ಒಳ್ಳೆ ಪ್ರೇಕ್ಷಣ ೀಯ ಸ್ಥಳ ಕಂಡಲ್ಲಿ ಅಲ್ಲಿಯೇ, ಕ್ಯಾಮಾರ ಇಡಲಾಗಿ, ಡ್ಯುಯೆಟ್ ಗೀತೆಯ ದೃಶ್ಯಗಳ್ನು ತೆಗೆದಿರುವುದು ಸಾಹಸ ಎನ್ನಬಹುದಂತೆ.

ಒಂದು ಜಾಗದಲ್ಲಿ ನದಿ ನೀರು ಬಂಡೆಗಳಾಗಿ ಮಾರ್ಪಟು ಆಗಿರುವುದರ ಮುಂದೆ ಇಬ್ಬರು ಹೆಜ್ಜೆ ಹಾಕಿದಿರುವುದನ್ನು ತೆಗೆಯಲಾಗಿದೆ. ಕಾಶ್ಮೀರದ ತುತ್ತತುದಿ ಸಮೀಪ ಕೆಲಸ ಮಾಡುವ ಸಂದರ್ಭದಲ್ಲಿ ಸೇನಾಪಡೆಗಳು ಚಿತ್ರೀಕರಣ ನಡೆಸಲು ಅನುಮತಿ ನೀಡಲಿಲ್ಲ. ಕೊನೆಗೂ ಅವರನ್ನು ಮನವೊಲಿಸಿ, ಕೆಲವೊಂದು ಕಡೆ ಅವರುಗಳು ಇಲ್ಲದ ಜಾಗದಲ್ಲಿ ಕಷ್ಟಪಟ್ಟು ಶೂಟಿಂಗ್ ಮಾಡಿದ್ದು ಮರೆಯಲಾಗದ ಅನುಭವವಾಗಿದೆಯಂತೆ. ಇಷ್ಟೆಲ್ಲಾ ಕೆಲಸಗಳು ಸುಗಮವಾಗಿ ನಡೆದಿದೆ ಎಂದರೆ ಅದು ವೇಣು ಸಹಕಾರ ಎಂದರೆ ತಪ್ಪಾಗುವುದಿಲ್ಲ. ಅವರು ಕೊಂಚವೂ ಬೇಸರಪಟ್ಟುಕೊಳ್ಳದೆ ಸೆಟ್‍ನಲ್ಲಿ ತೊಡಗಿಕೊಂಡಿದ್ದರಿಂದಲೇ ಹಾಡು ಚೆನ್ನಾಗಿ ಬಂದಿದೆ ಎಂಬುದು ನಿರ್ದೇಶಕರ ಸಂತಸದ ನುಡಿ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್ ಡಾಟ್ ಇನ್ ನ್ಯೂಸ್
-27/01/18

\

ಗುಲ್ಮಾರ್ಗ್‍ದಲ್ಲಿ ಗರ ಗೀತೆ
ಆರ್.ಕೆ.ನಾರಾಯುಣ್ ಕತೆಯ ಒಂದು ಏಳೆಯನ್ನು ತೆಗೆದುಕೊಂಡು ಸಿದ್ದಗೊಳ್ಳುತ್ತಿರುವ ‘ಗರ’ ಸಿನಿಮಾ ಮಾತಿನ ಭಾಗದ ಚಿತ್ರೀಕರಣ ಬಹುತೇಕ ಮುಗಿದಿದ್ದು, ಜಾನಿಲೀವರ್-ಸಾಧುಕೋಕಿಲ ಕಾಂಬಿನೇಶನ್ ದೃಶ್ಯ ಹಾಗೂ ಹಾಡು ಬಾಕಿ ಇದೆ. ಚಿತ್ರದ ನಾಯಕರಲ್ಲಿ ಒಬ್ಬರಾದ ಪ್ರದೀಪ್‍ಆರ್ಯನ್-ಆವಂತಿಕಾ ಜೋಡಿಯಲ್ಲಿ ಕೆ.ಕಲ್ಯಾಣ್ ರಚಿಸಿ, ವಿಜಯಪ್ರಕಾಶ್ ಧ್ವನಿಯಾಗಿರುವ ಯುಗಳ ಗೀತೆಯನ್ನು ಕಾಶ್ಮೀರದ ಗುಲ್ಮಾರ್ಗ್ ಪ್ರದೇಶದಲ್ಲಿ ಚಿತ್ರೀಕರಿಸಲಾಗಿದೆ. ಹೆಣ ್ಣನ ವಿವಿಧ ರೂಪವನ್ನು ಬಣ ್ಣಸುವ ಸಾಹಿತ್ಯ ಇರುವ ಕಾರಣ ಸ್ಥಳೀಯ ಕಲಾ ನಿರ್ದೇಶಕರಿಂದ ಮಂಜುಗಡ್ಡೆಯಲ್ಲಿ ಹಣ ್ಣನ ವಿಗ್ರಹ ಮಾಡಿಸಲಾಗಿ, ಅದಕ್ಕೆ ಅಲಂಕಾರ ಮಾಡಿ ಚಿತ್ರಕ್ಕೆ ಬಳಸಿರುವುದು ನೋಡುಗನಿಗೆ ಇಷ್ಟವಾಗಲಿದೆಯಂತೆ. ಕಾಶ್ಮೀರದಿಂದ ಗುಲ್ಮಾರ್ಗ್ ಸೇರಲು 80 ಕಿ.ಮೀ ಇರಲಿದ್ದು, ನಾಲ್ಕು ದಿವಸಗಳ ಕಾಲ ಪ್ರಯಾಣ ಮಾಡಿ ಅಂದುಕೊಂಡಂತೆ ದೃಶ್ಯಗಳು ಚೆನ್ನಾಗಿ ಬಂದಿರುವುದರಿಂದ ನಿರ್ದೇಶಕ ಮುರಳಿಕೃಷ್ಣ, ಛಾಯಗ್ರಾಹಕ ವೇಣು ಅವರಿಗೆ ತೃಪ್ತಿತಂದಿದೆಯಂತೆ.

ಬೆಂಗಳೂರು ಕಡೆಯಿಂದ ಒಟ್ಟು 25 ಜನರ ತಂಡವು ಪಕ್ಕಾ ಯೋಜನೆ ಹಾಕಿಕೊಂಡಿದ್ದರಿಂದಲೇ ವ್ಯವಸ್ಥಿತವಾಗಿ ಎಲ್ಲಾ ಕೆಲಸಗಳು ಸುಗಮವಾಗಿ ನಡೆದಿದೆ. ಒಂದು ಕಡೆ ಪ್ರಯಾಣ ಮಾಡುವ ಸಂದರ್ಭದಲ್ಲಿ ಸಣ್ಣದೊಂದು ಕಾರು ಅಪಘಾತವಾಗಿದೆ. ಇದನ್ನು ಲೆಕ್ಕಿಸದೆ ತಂಡವು ಸಮಯವನ್ನು ಹಾಳು ಮಾಡದೆ ಮೈನಸ್ ಆರು ಡಿಗ್ರಿ ಉಷ್ಣಾಂಶ ಇದ್ದರೂ ಕಲಾವಿದರಿಂದ ನಟನೆ ತೆಗೆಸಿರುವುದು ಅಷ್ಟೇನು ತ್ರಾಸ ವಾಗಿಲ್ಲ. ಹಿರಿಯ ಸಿನಿಮಾ ಪತ್ರಕರ್ತ ನಾಗೇಶ್‍ಕುಮಾರ್ ಅಂತಹ ಚಳಿಯಲ್ಲೂ ತೂಕದ ಸ್ಟಿಲ್ ಕ್ಯಾಮಾರದಲ್ಲಿ ಭಾವಚಿತ್ರಗಳನ್ನು ತೆಗೆಯುತ್ತಿದ್ದರು. ಅವರ ಕೆಲಸಕ್ಕೆ ಗರ ಟೀಮ್‍ನಿಂದ ಥ್ಯಾಂಕ್ಸ್ ಅಂತಾರೆ ಮುರಳಿಕೃಷ್ಣ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್ ಡಾಟ್ ಇನ್ ನ್ಯೂಸ್
-27/01/18ಗರ ತಂಡಕ್ಕೆ ಅಪಘಾತ
ಮುರಳಿಕೃಷ್ಣ ನಿರ್ದೇಶನದ ‘’ಗರ’’ ಚಿತ್ರದ ಎರಡು ಹಾಡುಗಳನ್ನು ಚಿತ್ರೀಕರಿಸಲು ಕಾಶ್ಮೀರಕ್ಕೆ ಪ್ರಯಾಣ ಬೆಳೆಸಿತ್ತು. ಅಲ್ಲಿ ಗುಲ್ಮಾರ್ಗ್‍ಗೆ ಹೋಗುವಾಗ ಕಂಜಾರ್ ಸ್ಥಳದಲ್ಲಿ ಮಂಜುಕವಿದ ವಾತವರಣ ಇರುವುದರಿಂದ ತಂಡದ ಕಾರಿಗೆ ಮತ್ತೋಂದು ವಾಹನ ಡಿಕ್ಕಿ ಹೊಡೆದಿದೆ. ಇದರ ರಭಸಕ್ಕೆ ಚಿತ್ರತಂಡದ ಕಾರು ಬಾಗಿಲು ಜಖಂಗೊಂಡಿದ್ದು, ತಂತ್ರಜ್ಘರು, ಕಲಾವಿದರಿಗೆ ಯಾವುದೇ ರೀತಿಯ ಅಪಾಯ ಸಂಭವಿಸಿರವುದಿಲ್ಲ. ಕಾರಿನಲ್ಲಿ ನಿರ್ದೇಶಕರು, ಛಾಯಗ್ರಾಹಕ ವೇಣು, ನಾಯಕ ರೆಹಮಾನ್ ಪ್ರಯಾಣ ಸುತ್ತಿದ್ದರು. ನಂತರ ತಂಡವು ಸ್ಥಳೀಯ ಪೋಲಿಸರ ಸಹಕಾರದಿಂದ ಬಗೆಹರಿಸಿಕೊಂಡು ಹಾಡಿಗಾಗಿ ಗುಲ್ಮಾರ್ಗ್ ಸ್ಥಳಕ್ಕೆ ಧಾವಿಸಿ ಮುಂದಿನ ಕೆಲಸದಲ್ಲಿ ನಿರತವಾಗಿದೆ. ಬಲ್ಲಮೂಲಗಳ ಪ್ರಕಾರ 20ರಂದು ವಾಪಸ್ಸು ಬರುವ ಸಾದ್ಯತೆಗಳು ಇದೆ.
ಸಿನಿ ಸರ್ಕಲ್ ಡಾಟ್ ಇನ್ ನ್ಯೂಸ್
-18/01/18
ಕಾಶ್ಮೀರಕ್ಕೆ ಹೋಗಲಿದೆ ಗರ
ಸೆಸ್ಪನ್ಸ್, ಥ್ರಿಲ್ಲರ್ ಮಾದರಿ ಕತೆ ಹೊಂದಿರುವ ‘ಗರ’ ಚಿತ್ರದ ಬಹುತೇಕ ಚಿತ್ರೀಕರಣವನ್ನು ಮಡಕೇರಿ,ಕೊಪ್ಪ ಹಾಗೂ ಬೆಂಗಳೂರು ಸ್ಥಳೀಯ ಜಾಗಗಳಲ್ಲಿ ನಡೆಸಿ, ಹಾಡುಗಳು ಮತ್ತು ಹಾಸ್ಯ ಸನ್ನಿವೇಶದ ದೃಶ್ಯಗಳನ್ನು ಬಾಕಿ ಉಳಿಸಿಕೊಂಡಿದೆ. ಇದರÀ ಹಂತವಾಗಿ ಮೊದಲ ಎರಡು ಹಾಡುಗಳನ್ನು ಕಾಶ್ವೀರದಲ್ಲಿ ನಡೆಸುವ ಇರಾದೆ ಇದೆ. ಕಲಾವಿದರಾದ ರೆಹಮಾನ್-ಆವಂತಿಕಮೋಹನ್ ಮತ್ತು ಪ್ರದೀಪ್‍ಆರ್ಯನ್-ಆವಂತಿಕಮೋಹನ್ ಇವರಗಳ ಮೇಲೆ ಸುಂದರತಾಣಗಳಾದ ಗುಲ್ಮಾರ್ಗ್,ಶ್ರೀನಗರ ಮುಂತಾದ ಕಡೆ ಶೂಟ್ ಮಾಡಲು ಯೋಜನೆ ಹಾಕಲಾಗಿದೆ. ಇದಾದ ನಂತರ ಬಾಲಿವುಡ್ ನಟ ಜಾನಿಲೀವರ್-ಸಾಧುಕೋಕಿಲ ಅವರ ಮಾತಿನ ಭಾಗ, ಒಂದು ಹಾಡು ಜೊತೆಗೆ ಚಂದನವನದ ಎಲ್ಲಾ ಹಾಸ್ಯನಟರನ್ನು ಸೇರಿಸಿಕೊಂಡು ಇವರೊಬ್ಬರೊಂದಿಗೆ ಕಾಮಿಡಿ ಟ್ರಾಕ್‍ನ್ನು ಅಳವಡಿಸಲು ನಿರ್ದೇಶಕ ಮುರಳಿಕೃಷ್ಣ ಚಿಂತನೆ ನಡೆಸಿದ್ದಾರೆ. ಇದು ಎಷ್ಟರಮಟ್ಟಿಗೆ ಫಲಕಾರಿಯಾಗಲಿದೆ ಎಂಬುದು ಮಂದಿನ ದಿನಗಳಲ್ಲಿ ತಿಳಿಯಲಿದೆ.

ಕಾಶ್ಮೀರದಲ್ಲಿ ಬರುವ ಗೀತೆಗಳಿಗೆ ಕೆ.ಕಲ್ಯಾಣ್, ರಾಮರಾಮರೇ ಖ್ಯಾತಿಯ ವಾಸುಕಿವೈಭವ್ ಸಾಹಿತ್ಯ ಒದಗಿಸಿದ್ದು ಗುರುರಾಜ್-ಮಂಜುಳಾಗುರುರಾಜ್ ಪುತ್ರ ಸಾಗರ್‍ಗುರುರಾಜ್ ಸಂಗೀತ ಸಂಯೋಜಿಸಿದ್ದಾರೆ. ದೂರದ ಪ್ರದೇಶಕ್ಕೆ ಚಳಿಯನ್ನು ಅನುಭವಿಸಲು ಇದೇ 14ರಿಂದ ಆರು ದಿನಗಳ ಮಟ್ಟಿಗೆ ತೆರೆಳುತ್ತಿರುವ ತಂಡಕ್ಕೆ ‘ಸಿನಿಸರ್ಕಲ್ ಡಾಟ್ ಇನ್ ನ್ಯೂಸ್’ ಸಂಸ್ಥೆಯು ಸುಖಕರ ಪ್ರಯಾಣಕ್ಕೆ ಶುಭಹಾರೈಕೆಯನ್ನು ಸಲ್ಲಿಸುತ್ತದೆ.
ಸಿನಿಸರ್ಕಲ್ ಡಾಟ್ ಇನ್ ನ್ಯೂಸ್
-10/01/18

ಮೂರೂವರೆ ನಿಮಿಷದ ದೃಶ್ಯಕ್ಕೆ ನಲವತ್ತು ಲಕ್ಷ
ಚಂದನವನದಲ್ಲಿ ಅದ್ದೂರಿ ವೆಚ್ಚದ ಚಿತ್ರಗಳು ಬರುತ್ತಿವೆ. ಇದರ ಸಾಲಿಗೆ ‘’ಗರ’ ಎನ್ನುವ ಸಿನಿಮಾವು ಸೇರ್ಪಡೆಯಾಗುತ್ತಿದೆ. ಇದನ್ನು ಹೇಳಲು ಕಾರಣವಿದೆ. ಕvಯಲ್ಲಿ ಪಾತ್ರಧಾರಿಗಳು ವರ್ತಮಾನ ಕಾಲದಿಂದ ಭೂತಕಾಲದಲ್ಲಿ ಏನಾಗಿದ್ದವು ಅಂತ ಟೈಂಬೇಸಡ್ ಆಧಾರದ ಮೇಲೆ ಸನ್ನಿವೇಶಗಳು ಬರುತ್ತವೆ. ಇದಕ್ಕಾಗಿ ಮಡಕೇರಿ, ದೇವನಹಳ್ಳಿಯ ಬಾವಿ ಮತ್ತು ಸ್ಟುಡಿಯೋದಲ್ಲಿ ಗ್ರೀನ್ ಮ್ಯಾಟ್ ಶಾಟ್‍ನಲ್ಲಿ ಒಟ್ಟು ಏಳು ದಿನಗಳ ಕಾಲ ಚಿತ್ರೀಕರಿಸಲಾಗಿದೆ. ಇದಕ್ಕಾಗಿ ನಲವತ್ತು ಲಕ್ಷ ಖರ್ಚು ಆಗಿದೆಯಂತೆ. ಸನ್ನಿವೇಶದಲ್ಲಿ ನಟ ರೆಹಮಾನ್ ಅವರು ಪ್ರದೀಪ್‍ಆರ್ಯನ್ ಅವರನ್ನು ಬಾವಿಗೆ ತಳ್ಳುವಾಗ ಪ್ರಶಾಂತ್‍ಸಿದ್ದಿ ನೋಡುತ್ತಾನೆ. ಮುಂದೇನು ಅನ್ನುವುದು ಸಿನಿಮಾ ನೋಡಿದರೆ ತಿಳಿಯುತ್ತದಂತೆ. ವಿರಾಮದ ನಂತರ ಬರುವ ದೃಶ್ಯಗಳು ಕತೆಗೆ ಪೂರಕವಾಗಿದ್ದು ಮೂರೂವರೆ ನಿಮಷಗಳ ಕಾಲ ಬರಲಿದೆ. ಮೂವರು ಎರಡು ಪಾತ್ರಗಳಲ್ಲಿ ಅಭಿನಯಿಸಿರುವುದು ವಿಶೇಷವಾಗಿದೆ.

ಪಗಡೆ, ಚೌಕಬಾರ-ಸೂರ್ಯಗ್ರಹಣ-ಅಂಕಿ ಅಂಶಗಳು ಇವೆಲ್ಲವುಗಳಲ್ಲಿ ಗರ ಪದವನ್ನು ಬಳಕೆ ಮಾಡುವುದುಂಟು. ಸಿನಿಮಾದಲ್ಲಿ ಆಟಕ್ಕೆ ಹೋಲಿಸಿದ್ದು, ಜೀವನದಲ್ಲಿ ಒಬ್ಬನು ಮತ್ತೋಬ್ಬನ ಮೇಲೆ ಗರ ಹಾಕುತ್ತಲೇ ಇರುತ್ತಾನೆ. ಆದರೆ ಭಗವಂತನು ಆಡುವ ಗರದಲ್ಲಿ ಯಾರು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಅದು ಏಕೆ, ಹೇಗೆ, ಯಾತಕ್ಕೆ ಎಂಬುದನ್ನು ಸೆಸ್ಪೆನ್ಸ್, ಥ್ರಿಲ್ಲರ್ ಮಾದರಿಯಲ್ಲಿ ತೋರಿಸುವ ಪ್ರಯತ್ನ ಮಾಡಲಾಗುತ್ತಿದೆ. ಹಳೆ-ಮಧ್ಯಮ-ಹೊಸ ಕಾಯಿಗಳನ್ನು ಬಳಸಿಕೊಂಡಿದ್ದೇವೆ ಅಂತ ಕಲಾವಿದರನ್ನು ಕಾಯಿಗಳಿಗೆ ಹೋಲಿಸಲಾಗಿದೆ. ತಾರಬಳಗದಲ್ಲಿ ಹಿರಿಯರಾದ ರಾಮಕೃಷ್ಣ, ರಮೇಶ್‍ಭಟ್, ರೂಪದೇವಿ ಮಧ್ಯಮ ವರ್ಗದಲ್ಲಿ ಸಾಧುಕೋಕಿಲ, ಸುನೇಂದ್ರಪಂಡಿತ್, ತಬಲನಾಣಿ, ಯುವ ತಾರಗಣದಲ್ಲಿ ಬಿಗ್‍ಬಾಸ್ ಖ್ಯಾತಿಯ ರೆಹಮಾನ್, ಪ್ರದೀಪ್ ಆರ್ಯನ್ ನಾಯಕರು, ಮಾಲಿವುಡ್‍ನ ಆವಂತಿಕಾ ನಾಯಕಿ. ಇವರೊಂದಿಗೆ ನೇಹಾಪಾಟೀಲ್ ಮತ್ತು ತೆಲುಗು ನಟ ಕನ್ನಡ ಕಲಿತುಕೊಂಡು ಖಳನಾಯಕನಾಗಿ ಅಭಿನಯಿಸಿರುವ ಆದಿತ್ಯಆರ್ಯನ್ ಪಾತ್ರದ ಹೆಸರು ಡಿಜಿಟಲ್‍ಗೌಡ ಅಡಿಬರಹದಲ್ಲಿ ಜನಪದ ಲವರ್ ಅಂತೆ.

ಬಾಲಿವುಡ್ ನಟ ಜಾನಿಲೀವರ್ ಚೂಚ್ಚಲಬಾರಿ ಚಿತ್ರದಲ್ಲಿ ಅಭಿನಯಿಸುತ್ತಿರುವುದು ವಿಶೇಷ. ಇವರಿಗೆ ಸಾಥ್ ನೀಡಲು ಸಾಧುಕೋಕಿಲ ಇದ್ದಾರೆ. ಅಲ್ಲವೆ ಇಬ್ಬರ ಜುಗಲ್‍ಬಂದಿಯಲ್ಲಿ ಒಂದು ಹಾಡು ಇರುವುದು ಧನಾತ್ಮಕ ಅಂಶವಾಗಿದೆ. ಇಲ್ಲಿಯವರೆಗೂ ಮಡಕೇರಿ, ಕೊಪ್ಪ, ಬೆಂಗಳೂರು ತಟಗಳಲ್ಲಿ ಚಿತ್ರೀಕರಣ ನಡೆಸಿದ್ದು, ಬಾಕಿ ಎರಡು ಹಾಡುಗಳನ್ನು ಕಾಶ್ಮೀರ, ಉಳಿದ ಒಂದು ಗೀತೆಯನ್ನು ಹಾಸ್ಯನಟರೊಂದಿಗೆ ಸೆರೆಹಿಡಿದರೆ ಕುಂಬಳಕಾಯಿ ಒಡೆಯಲಾಗುವುದು. ನಿರ್ದೇಶಕರು, ಡಾ.ನಾಗೇಂದ್ರಪ್ರಸಾದ್, ಕೆ.ಕಲ್ಯಾಣ್, ರಾಮರಾಮರೇ ಖ್ಯಾತಿಯ ವಾಸುಕಿವೈಭವ್, ವಿಮನೋಹರ್ ರಚಿಸಿರುವ ಆರು ಗೀತೆಗಳಿಗೆ ಮಂಜುಳಗುರುರಾಜ್-ಗುರುರಾಜ್ ಪುತ್ರ ಸಾಗರ್‍ಗುರುರಾಜ್ ಸಂಗೀತ ಸಂಯೋಜಸಿದ್ದಾರೆ. ಸೋನುನಿಗಮ್,ವಿಜಯಪ್ರಕಾಶ್,ಮಂಜುಳಗುರುರಾಜ್, ಎಲ್.ಎನ್.ಶಾಸ್ತ್ರೀ ಹಾಡುಗಳಿಗೆ ಧ್ವನಿಯಾಗಿದ್ದಾರೆ. ಇವೆಲ್ಲಕ್ಕೆಲ್ಲಾ ಕಳಸಪ್ರಾಯದಂತೆ ಸುಂದರವಾಗಿ ಸೆರೆಹಿಡಿರುವುದು ಹಿರಿಯ ಛಾಯಗ್ರಾಹಕ ಹೆಚ್.ಸಿ.ವೇಣು.

ಬಾಳನೌಕೆ, ಹೃದಯಸಾಮ್ರಾಜ್ಯ ನಿರ್ಮಾಣ,ನಿರ್ದೇಶನ ಮಾಡಿರುವ ವಿ.ಶಾಂತರಾಂ ಸೋದರ ಮುರಳಿಕೃಷ್ಣ ಕರ್ಣನಸಂಪತ್ತು ನಂತರ ಚಿತ್ರಕ್ಕೆ ಕತೆ ಬರೆದು ಆಕ್ಷನ್ ಕಟ್ ಹೇಳುತ್ತಿದ್ದಾರೆ. ಚಿತ್ರದ ಮೊದಲ ಸುದ್ದಿಗೋಷ್ಟಿಯಲ್ಲಿ ಪತ್ರಕರ್ತರೆ ನಿರ್ಮಾಪಕರು ಎಂದು ಸುದ್ದಿ ಮಾಡಿದ್ದ ನಿರ್ದೇಶಕರು ಇಲ್ಲಿಯವರೆಗೂ ಅವರ ಹೆಸರನ್ನು ಗೌಪ್ಯವಾಗಿಟ್ಟಿದ್ದಾರೆ. ನಮ್ಮ ರಾಜ್ಯದವರಾಗಿ ಎಲ್ಲರಿಗೂ ಬೇಕಾದವರಾಗಿದ್ದರಿಂದ ಕೊನೆ ದಿವಸ ಮಾದ್ಯಮದವರಿಗೆ ಪರಿಚಯಿಸುವುದಾಗಿ ಹೇಳಿ ಮತ್ತಷ್ಟು ಕುತೂಹಲ ಸೃಷ್ಟಿಸಿರುವುದು ಚಿತ್ರದ ಬಗ್ಗೆ ಹೀಗಿನಿಂದಲೇ ಅಚ್ಚರಿ ಉಂಟು ಮಾಡಿರುವುದು ನಿಜವಾಗಿದೆ.
-21/12/17

ಮೊದಲ ಬಾರಿ ಬಣ್ಣ ಹಚ್ಚಿದ ಗುರುರಾಜ್
ಗುರುರಾಜ್ ಅಂದರೆ ತಕ್ಷಣ ತಿಳಿಯುವುದಿಲ್ಲ. ಸೌಂಡ್ ಆಫ್ ಮ್ಯೂಸಿಕ್ ಗುರುರಾಜ್ ಅಂತ ಹೇಳಿದಾಗ ಅವರು ಮಾಡಿದ ಸಾಧನೆಗಳು ನೆನಪಿಗೆ ಬರುತ್ತವೆ. 80ರ ದಶಕದಲ್ಲಿ ಆರ್ಕೆಸ್ಟ್ರಾ ಹುಟ್ಟು ಹಾಕಿ ಹಲವು ಪ್ರತಿಭೆಗಳಿಗೆ ವೇದಿಕೆಯನ್ನು ಕಲ್ಪಸಿದ್ದರು. ಡಾ.ರಾಜಕುಮಾರ್ ಅಭಿನಯದ ಕೆರಳಿದೆ ಸಿಂಹ ಚಿತ್ರಕ್ಕೆ ಸಂಗೀತ ನಿರ್ದೇಶಕ ಸತ್ಯಂ ಅವರು ವಿಶೇಷ ವಾದ್ಯಗಳನ್ನು ಬಳಸಿ ರಾಗ ಸಂಯೋಜಿಸಿದ್ದ ‘’ಏನೋ ಮೋಹ ಏನೋ ದಾಹ’’ ಹಾಡು ಹಿಟ್ ಆಗಿತ್ತು. ಅಂತಹುದೆ ಬೆಲೆಬಾಳುವ ವಾದ್ಯಗಳನ್ನು ಖರೀದಿವುದರ ಜೊತೆಗೆ ಹೊಸ ಹೊಸ ಉಪಕರಣಗಳನ್ನು ಬಳಸುತ್ತಿದ್ದರಿಂದ ಇವರ ಸಂಸ್ಥೆ ನಂಬರ್ ಒನ್ ಸ್ಥಾನದಲ್ಲಿತ್ತು. ಮುಂದೆ ಗುರುರಾಜ್-ಮಂಜುಳಗುರುರಾಜ್ ಸಾರಥ್ಯದಲ್ಲಿ ಸಾಧನ ಸಂಗೀತ ಶಾಲೆ ತೆರೆದು ಸಂಗೀತಾಸಕ್ತರಿಗೆ ತರಭೇತಿ ನೀಡಲಾಗಿ ಹಲವರು ಗಾಯಕ-ಗಾಯಕಿಯರಾಗಿ ಪರಿಚಿತರಾಗಿದ್ದಾರೆ.

ಗುರುರಾಜ್ ಈಗ ಗರ ಎನ್ನವ ಚಿತ್ರದಲ್ಲಿ ಜ್ಯೋತಿಷನ ಪಾತ್ರಕ್ಕೆ ಮೊದಲ ಬಾರಿ ಹಚ್ಚಿದ್ದಾರೆ. ಗೆಳೆಯ ನಿರ್ದೇಶಕ ಮುರಳಿಕೃಷ್ಣ ಅವರ ಬಿಡುಗಡೆ ಸಿದ್ದವಾಗಿರುವ ಸಣ್ಣ ಸತ್ಯ ಚಿತ್ರದಲ್ಲಿ ನಟಿಸಿದ್ದರೂ, ಗರ ಮೊದಲು ಬರುತ್ತಿರುವುದರಿಂದ ಲೆಕ್ಕಕೆ ಇದು ಮೊದಲ ಸಿನಿಮಾವಾಗಿದೆಯಂತೆ. ಪುತ್ರ ಸಾಗರ್‍ಗುರುರಾಜ್ ಈಗಾಗಲೇ ಸಂಗಿತ ನಿರ್ದೇಶಕರಾಗಿ ಚಂದನವನದಲ್ಲಿ ಗುರುತಿಸಿಕೊಂಡಿದ್ದಾರೆ. ಇದೇ ರೀತಿಯಲ್ಲಿ ನಟನಾಗಿ ತಾರರಕ್ಕೆ ಏರಲಿ ಎಂಬುದು ನಮ್ಮೆಲ್ಲರ ಹಾರೈಕೆಯಾಗಿದೆ.

-21/12/17

GARA COMPLETES 80 PER CENT OF SHOOTING
A
marriage sequence was shot at Balamuri Sri Sidhi Vinayaka Temple at Sahakaranagar on Thursday. Director-cum-producer Muralikrishna was busy in handling the megaphone for the marriage scene in which heroine Avantika Mohan, Aryan, senior artistes Ramakrishna, Roopa Devi, Dayanand and others participated.

Speaking on the occasion, director Muralikrishna said that he was grateful to cinematographer H. C. Venugopal for not only working for this film but also helping him to select artistes and other technicians. “I consider media persons as the first producers of this film because they are always ready to encourage me by giving maximum support to my film. I consider artistes of this film as second producers because they are participating in the shooting with dedication and commitment,’’ Muralikrishna said.

Rahaman, who is making debut as hero in Kannada films with Gara, said 80 per cent of the shooting of Gara has been completed. “We have to shoot songs for this film. I have to thank producer-cum-director Muralikrishna for giving me an opportunity to act in this film,’’ Rahaman said.
Veteran actress Roopa Devi recalled how she happened to act in a Kannada film directed by Muralikrishna’s brother Shantharam 25 years ago. “I consider Muralikrishna as Lakshmana to Rama. I am grateful to him for selecting me to act in this film,’’ Roopa Devi said.

Senior character actor Ramakrishna said Muralikrishna, being an advocate, knows how to make and direct a film. “I happened to act in Huli Banthu Huli, directed by Muralikrishna’s brother Shantharam 25 years ago. Now, I am acting in Gara, directed by Shantharam’s brother Muralikrishna. I am happy,’’ Ramakrishna said.

Thanking director Muralikrishna for selecting her to act in this film, Padmaja Rao said she was desperately waiting to play a different role since she was fed up with monotonous roles. “I gained confidence when director has narrated the script over the phone. The next day, he directed a cute scene in which Rahaman and I acted. I am acting as hero’s mother in this film,’’ said Padmaja Rao.
The director said the shooting of the film in which Johnny Lever and Sadhu Kokila are supposed to act will be held in the last schedule.
While H.C. Venugopal alias Venu is the cinematographer, Sagar Gururaj is the music director.
-Cine Circle News
-21/07/17

JOHNNY LEVER, SADHU KOKILA ARE BROTHERS IN ‘GARA
R
enowned standup comedian and Hindi actor Johnny Lever will be seen playing Sadhu Kokila’s brother  in Kannada film Gara that went on the floors on International Women’s Day. The film is written and directed by K R Muralikrishna. The film stars Rahaman, Aryan, Avantika, Prashant Siddi, Mandeep Rai, Tabala Nani, Sunetra Pandit, Suchitra, Niranjan, Roopa Devi, Ramakrishna, Sonu and Rohit among others. Sagar Gururaj is scoring the music and H C Venu is the cameraman. Saroj Khan is the choreographer.  

Johnny Lever told reporters that he is glad to be making his debut in the first south Indian film through Gara. He said he understands Kannada as he is from Andhra Pradesh but added he didn’t act in any Telugu film despite getting repeated calls from the film-makers there. He said he agreed to do the Kannada film because of Gururaj with whom he had done several stage shows. He said the role in the film is funny and good which will be enjoyed by the audiences.  

Director Muralikrishna said the film is inspired by R K Narayan’s story without revealing the title of the story or the story itself. He said the film has five producers whom he hadn’t seen and named all the journalists as one of the producers. He said the film shoot will happen in Koppa during the month and then continue during June. He promised that the film will be good and entertaining and praised Venu’s camerawork for being the eye to his imagination.  

The director, a soon-to-be grandpop said he thought of a comedy track and came up with the idea of casting Sadhu Kokila with Johnny Lever together as brothers.  

Rahaman said he was hopeful of getting good support from all. Aryan said after struggling as an actor in television soaps he got selected for the role through an audition. He said it is a director’s story and added that he was impressed with the director’s preparation.  

Music composer Sagar Gururaj said the film has five songs and added that the director had explained each and every scene of the movie to him besides giving him freedom to score music.
-17/03/17GARA’ LAUNCHED
A
new Kannada film titled ‘Gara’ was launched on International Women’s Day in Bengaluru. The film is being directed by K R Muralikrishna. H C Venu is handling the camera and Sagar Gururaj, son of Manjula and Gururaj is composing the music. The film marks newcaster Rahaman’s debut as a film hero who has shot into the limelight after Bigg Boss. Aryan is the newcomer playing the lead and Avantika is playing the female lead.

Sukre Gowda (Sukrajji) sounded the clapboard while Manjula Gururaj switched on the camera. Roopa Devi, actress of yesteryears was also present. Suchitra and Mimicry Dayanand were present.

Addressing the gathering after the muhurta, Director Muralikrishna said behind every successful woman there is a woman and there are woman achievers in all spheres of life. He said he would bow to all women and women achievers who continue to contribute to society and their families.

Muralikrishna said it was his late brother Shantharam’s dream that he has become a director. He said he is making a film that is written by his brother. He said the producer’s name has been kept a secret despite his presence at the event. He said he is introducing Rahaman as a hero and Aryan as another hero. He said when he went in search of a heroine he posted an ad in facebook and selected Avantika who said she would take up the challenge.

 Gara is a woman-oriented film and it talks about a woman’s dilemma and how she resolves it, the director said.

Muralikrishna has made films like Bala Nouke, Hrudaya Samrajya and Karnana Sampathu and is now practicing law.
-10/03/17


For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore

/