HOME
CINEMA NEWS
GALLERY
TV NEWS
REVIEWS
CONTACT US

ಕೌಟಂಬಿಕಕಥನ ಈಶ ಮಹೇಶ
ಸತ್ಯಘಟನೆ, ಹಾರರ್, ಮರ್ಡರ್, ಪ್ರಯೋಗಾತ್ಮಕ ಚಿತ್ರಗಳ ನಡುವೆ ‘ಈಶ ಮಹೇಶ’ ಕೌಟಂಬಿಕಚಿತ್ರಎನ್ನಬಹುದು.ನೀರಾವರಿ ಪ್ರದೇಶವುಳ್ಳ ಚಿಕ್ಕ ಹಳ್ಳಿಯು ಕತೆಯು ನಡೆಯುತ್ತದೆ. ಸಮಾಜ ಸೇವೆ ಮಾಡುವಊರಿನ ಮುಖ್ಯಸ್ಥನಿಗೆಇಬ್ಬರು ಮಕ್ಕಳು. ಅಣ್ಣ ಶ್ರೀಮಂತ, ತಮ್ಮ ಬಡವ. ಒಮ್ಮೆ ಸೋದರಚುನಾವಣೆಯಲ್ಲಿ ನಿಲ್ಲುತ್ತಾನೆ. ಫಲಿತಾಂಶದಲ್ಲಿ ಸೋತು ಹೋಗಿದ್ದೆನೆಂದು ಬೇಸರಗೊಂಡು ಮನೆಗೆ ಹೋಗಿ ಆರೋಗ್ಯ ಸಮಸ್ಯೆಯಿಂದ ಮರಣ ಹೊಂದುತ್ತಾನೆ. ಆದರೆಎಲೆಕ್ಷನ್‍ದಲ್ಲಿ ಗೆಲುವು ಕಂಡಿರುತ್ತಾನೆ. ಪತ್ನಿಇಲ್ಲಿಯ ಕಷ್ಟ, ವಾತವರಣ ನೋಡಲಾಗದೆದೂರದಊರಿಗೆ ಹೋಗುತ್ತಾರೆ. ಮುಂದೇನುಎನ್ನುವುದುಕುತೂಹಲಕಾರಿಯಾಗಿದೆ.ಜೊತೆಗೆ ಸ್ವಚ್ಚತಾಅಭಿಯಾನದ ಸಂದೇಶಇರಲಿದೆ. ಅಚ್ಚುಕಟ್ಟಾಗಿ ಸನ್ನಿವೇಶಗಳನ್ನು ಸೃಷ್ಟಿಸಿರುವ ನಿರ್ದೇಶಕ ಎಂ.ಡಿ.ಕೌಶಿಕ್ ಕೆಲಸ ಸಪಲವಾಗಿದೆ.

ಮುಖ್ಯ ಪಾತ್ರದಲ್ಲಿ ಶ್ರೀಧರ್, ನಾರಾಯಣಸ್ವಾಮಿ. ಜಯಶ್ರೀ 25 ಹಾಗೂ 45 ವಯಸ್ಸಿನ ಎರಡು ಶೇಡ್‍ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಶರಣ್ಯಗೌಡ, ಎಂ.ಡಿ.ಕೌಶಿಕ್,ಸರಸ್ವತಿ, ಹಂಸರಾಜ್ ನಟನೆಯಜೊತೆಗೆಚಿತ್ರಕತೆಯಜವಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಪ್ರೊ.ದೊಡ್ಡೆರಂಗೇಗೌಡ ಸಾಹಿತ್ಯದ ಗೀತೆಗಳಿಗೆ ವಿ.ಮನೋಹರ್ ಸಂಗೀತವಿದೆ.ಅದರಲ್ಲೂ ಮಲೈ ಮಹದೇಶ್ವರಜಾತ್ರೆಕುರಿತ ಹಾಡಿನಲ್ಲಿದೇವರನ್ನು ವೈಭವಿ ಕರಿಸಿ, ಮಣ್ಣಿನ ಸಂಸ್ಕ್ರತಿ, ದೇಸಿ ಪದಗಳ ಬಳಕೆ ಮಾಡಿರುವ ಹಾಡಿಗೆಕಿಕ್ಕೇರಿಕೃಷ್ಣಮೂರ್ತಿಕಂಠದಾನ ಮಾಡಿರುವುದು ವಿಶೇಷ. ರಮೇಶ್‍ಕೋಯಿರಛಾಯಾಗ್ರಹಣ, ನೃತ್ಯ ಮೋಹನ್, ಸಂಕಲನ ಎಲ್.ನರಸಿಂಹಪ್ರಸಾದ್ ಎಲ್ಲವೂಇದಕ್ಕೆ ಪೂರಕವಾಗಿದೆ.
ನಿರ್ಮಾಣ: ನಟರಾಜ್‍ಮಂಚಯ್ಯ
***
ಸಿನಿ ಸರ್ಕಲ್.ಇನ್ ವಿಮರ್ಶೆ
8/11/19

ತೆರೆಗೆ ಸಿದ್ದ ಈಶ ಮಹೇಶ
ಕೌಟಂಬಿಕ ಕತೆ ಹೊಂದಿರುವ ‘ಈಶ ಮಹೇಶ’ ಚಿತ್ರದ ಕತೆಯು ನೀರಾವರಿ ಪ್ರದೇಶವುಳ್ಳ ಚಿಕ್ಕ ಹಳ್ಳಿಯಲ್ಲಿ ನಡೆಯುತ್ತದೆ. ಸಮಾಜ ಸೇವೆ ಮಾಡುವ ಊರಿನ ಮುಖ್ಯಸ್ಥನಿಗೆ ಇಬ್ಬರು ಮಕ್ಕಳು. ಅಣ್ಣ ಶ್ರೀಮಂತ, ತಮ್ಮ ಬಡವ. ಒಮ್ಮೆ ಸೋದರ ಚುನಾವಣೆಯಲ್ಲಿ ನಿಲ್ಲುತ್ತಾನೆ. ಫಲಿತಾಂಶದಲ್ಲಿ ಸೋತು ಹೋಗಿದ್ದೆನೆಂದು ಬೇಸರಗೊಂಡು ಮನೆಗೆ ಹೋಗಿ ಆರೋಗ್ಯ ಸಮಸ್ಯೆಯಿಂದ ಮರಣ ಹೊಂದುತ್ತಾನೆ. ಆದರೆ ಎಲೆಕ್ಷನ್‌ದಲ್ಲಿ ಗೆಲುವು ಕಂಡಿರುತ್ತಾನೆ. ಪತ್ನಿ ಇಲ್ಲಿಯ ಕಷ್ಟ, ವಾತವರಣ ನೋಡಲಾಗದೆ ದೂರದ ಊರಿಗೆ ಹೋಗುತ್ತಾರೆ. ಮುಂದೇನು ಎನ್ನುವುದು ಕುತೂಹಲಕಾರಿ ಯಾಗಿದೆ. ಜೊತೆಗೆ ಸ್ವಚ್ಚತಾ ಅಭಿಯಾನದ ಸಂದೇಶ ಇರಲಿದೆ. ಎಂ.ಡಿ.ಕೌಶಿಕ್ ನಿರ್ದೇಶನ ಮತ್ತು ಒಂದು ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.

ತಾರಗಣದಲ್ಲಿ ಶ್ರೀಧರ್, ನಾರಾಯಣಸ್ವಾಮಿ, ಶರಣ್ಯಗೌಡ, ಎಂ.ಡಿ.ಕೌಶಿಕ್,ಸರಸ್ವತಿ, ಹಂಸರಾಜ್ ನಟನೆಯ ಜೊತೆಗೆ ಚಿತ್ರಕತೆಯ ಜವಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಜಯಶ್ರೀ ೨೫ ಹಾಗೂ ೪೫ ವಯಸ್ಸಿನ ಎರಡು ಶೇಡ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರೊ.ದೊಡ್ಡೆರಂಗೇಗೌಡ ಸಾಹಿತ್ಯದ ಗೀತೆಗಳಿಗೆ ವಿ.ಮನೋಹರ್ ಸಂಗೀತವಿದೆ. ಅದರಲ್ಲೂ ಮಲೈ ಮಹದೇಶ್ವರ ಜಾತ್ರೆ ಕುರಿತ ಹಾಡಿಗೆ ಕಿಕ್ಕೇರಿಕೃಷ್ಣಮೂರ್ತಿ ಕಂಠದಾನ ಮಾಡಿರುವುದು ವಿಶೇಷ. ರಮೇಶ್‌ಕೋಯಿರ ಛಾಯಾಗ್ರಹಣ, ನೃತ್ಯ ಮೋಹನ್, ಸಂಕಲನ ಎಲ್.ನರಸಿಂಹಪ್ರಸಾದ್ ಅವರದಾಗದೆ. ಗ್ರಾನೈಟ್ ಉದ್ಯಮಿ ಮದ್ದೂರು ಮೂಲದ ನಟರಾಜ್ ಮಂಚಯ್ಯ ಕತೆ, ಸಂಭಾಷಣೆ ಬರೆದು ನಿರ್ಮಾಣ ಮಾಡಿರುವ ಚಿತ್ರವು ಜಯಲಕ್ಷೀ ಫಿಲಿಂಸ್ ಮುಖಾಂತರ ಶುಕ್ರವಾರದಂದು ಸುಮಾರು ೨೦ ಕೇಂದ್ರಗಳಲ್ಲಿ ಬಿಡುಗಡೆಯಾಗಲಿದೆ.
ಚಿತ್ರಗಳು: ಕೆ.ಎನ್.ನಾಗೇಶ್‌ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
2/11/19
For advertisements contact editor
K N Nagesh Kumar, Photo Journalist
Website Desined by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore