HOME
CINEMA NEWS
GALLERY
TV NEWS
REVIEWS
CONTACT US
ಏನೋ ಆಗಿದೆ ವಿಡಿಯೋ ಹಾಡು
ಸಾಮಾಜಿಕ ಜಾಲತಾಣ ಯು ಟ್ಯೂಬ್ ವೀಕ್ಷಕರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಕಾರಣ ಸಿನಿಮಾಮೋಹಿಗಳು ವಿಡಿಯೋ ಹಾಡುಗಳನ್ನು ಇದರಲ್ಲಿ ಅಳವಡಿಸುತ್ತಿದ್ದಾರೆ. ಅದರಂತೆ ‘ಏನೋ ಆಗಿದೆ’ ಎಂಬ ನಾಲ್ಲೂವರೆ ನಿಮಿಷದ ಗೀತೆ ಸಿದ್ದಗೊಂಡಿದೆ. ಹದಿಹರೆಯದ ಹುಡುಗರ ಮನಸಿನ ಭಾವನೆಗಳ ಮೇಲೆ ಕೇಂದ್ರಿಕರಿಸಿರುವ ಗೀತೆಯಲ್ಲಿ ಹರ್ಷಿತಾಸುಬ್ರಮಣ್ಯಂ ಅವರು ಗೀತೆಗೆ ಧ್ವನಿ ನೀಡಿದ್ದು ಅಲ್ಲದೆ ತೆರೆ ಮೇಲೆ ಹೆಜ್ಜೆ ಹಾಕಿರುವುದು ವಿಶೇಷವಾಗಿದೆ. ಬಿಎಂಡ್ಲ್ಯೂ ಚಿತ್ರ ನಿರ್ದೇಶನ ಮಾಡಿದ ಗಂಧರ್ವರಾಯರಾವುತ್ ಆಕ್ಷನ್ ಕಟ್ ಹೇಳಿದ್ದಾರೆ, ಮಗ ಶ್ರೀಮಾನ್‍ಗಂಧರ್ವ ಸಂಗೀತ, ಸೀನಿಯರ್ ಕ್ಯಾಮರಮನ್ ಸುಂದರನಾಥಸುರ್ವಣ ಸಹೋದರ ರವಿಸುವರ್ಣ ಛಾಯಗ್ರಹಣ, ನೃತ್ಯ ನೀಲ್‍ರಾಜ್, ಸಾಹಿತ್ಯ ಗೌರವ್ ಪೆನ್ನು ಕೆಲಸ ಮಾಡಿದೆ. ಶನಿವಾರದಂದು ಎಸ್.ಆರ್.ವಿ. ಪ್ರಿವ್ಯೂ ಚಿತ್ರಮಂದಿರದಲ್ಲಿ ಗಣ್ಯರುಗಳಾದ ರಂಗಿತರಂಗ ನಿರ್ಮಾಪಕ ಪ್ರಕಾಶ್, ಉದ್ಯಮಿ ಎ.ಎಸ್.ಜಯರಾಮಣ್ಣ, ರಾಜ್.ಬಿ.ಪುರುಷೋತ್ತಮ್, ಸಂಗೀತ ವಿದ್ವಾಂಸ ಬಲರಾಂ ಹಾಡನ್ನು ವೀಕ್ಷಿಸಿ ತಂಡಕ್ಕೆ ಶುಭ ಹಾರೈಸಿದರು. ಹರ್ಷಿತಾಸುಬ್ರಮಣ್ಯಂ ಅವರು ಮುಂದೆ ಚಲನಚಿತ್ರದಲ್ಲಿ ನಟಿಸುವ ಬಯಕೆ ಇದೆಯಂತೆ. ಸಮೃದ್ದಿ ಕ್ರಿಯಶನ್ಸ್ ಮೂಲಕ ಜೀವಿತಾಸುಬ್ರಮಣ್ಯಂ ನಿರ್ಮಾಣ ಮಾಡಿರುವ ಗೀತೆಯನ್ನು ಯು ಟ್ಯೂಬ್‍ನಲ್ಲಿ ನೋಡಬಹುದು.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್. ಇನ್ ನ್ಯೂಸ್
-11/02/18


For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore