HOME
CINEMA NEWS
GALLERY
TV NEWS
REVIEWS
CONTACT US
ಮಿಥ್ಯ ಎಂದಿಗೂ ಒಳ್ಳೆಯದಾಗುವುದಿಲ್ಲ
ಸತ್ಯ ಸಿಹಿ, ಸುಳ್ಳು ಕಹಿ.ಒಂದು ಸುಳ್ಳು ಎಂತಹ ಪರಿಣಾಮಗಳನ್ನು ತರಿಸುತ್ತದೆಎಂಬುದನ್ನು ‘ಎಲ್ಲಿದ್ದೆಇಲ್ಲಿತನಕ’ ಸಿನಿಮಾದಲ್ಲಿತೋರಿಸಲಾಗಿದೆ. ಇದರಜೊತೆಗೆ ನವಿರಾದ ಪ್ರೀತಿ, ಹಾಸ್ಯಎರಡು ಮಿಶ್ರಣವಾಗಿರುವುದು ಪ್ಲಸ್ ಪಾಯಿಂಟ್. ಸೂರ್ಯ (ಸೃಜನ್ ಲೋಕೇಶ್) ಅಗರ್ಭ ಶ್ರೀಮಂತನ ಮಗ.ಚಿಕ್ಕಂದಿನಿಂದಲೇ ವಿದೇಶದಲ್ಲಿಇವರಅಧೀನದಲ್ಲಿ ಬೆಳೆದು, ಒಂದು ವರ್ಷಗಳ ಕಾಲ ತನ್ನಿಷ್ಟದಂತೆಇರಲು ಸ್ವದೇಶಕ್ಕೆ ಬರುತ್ತಾನೆ. ಒಮ್ಮೆಅಮ್ಮನೊಂದಿಗೆ ಮದುವೆಗೆ ಹೋದಾಗ ನಂದಿನಿ(ಹರಿಪ್ರಿಯಾ)ಳನ್ನು ನೋಡಿ ಮರುಳಾಗುತ್ತಾನೆ. ಮುಂದೆಚಡ್ಡಿ ಗೆಳಯರೊಂದಿಗೆ ಸಮಯ ಕಳೆಯುತ್ತಿರುವಾಗ ಗೆಳೆಯ ಹಾಕಿದಛಾಲೆಂಜ್‍ನ್ನು ಸ್ವೀಕರಿಸಿ ಕೆಲಸಕ್ಕೆ ಸೇರುತ್ತಾನೆ. ಕಚೇರಿಯಲ್ಲಿಈತನ ಬಾಸ್ ನಂದನಿ ಆಗಿರುವುದರಿಂದ ಇವಳನ್ನು ಪಡೆಯುವ ಬಯಕೆಯಿಂದ ಸುಳ್ಳಿನ ಸರಮಾಲೆಗಳನ್ನು ಹುಟ್ಟಿಸುತ್ತಾ ಕೊನೆಗೂ ಮದುವೆ ಮಾಡಿಕೊಳ್ಳುವಲ್ಲಿಗೆ ಬರುತ್ತಾನೆ. ಈತನ ಸುಳ್ಳುಗಳು ಇವಳಿಗೆ ತಿಳಿದು ಏನು ಮಾಡುತ್ತಾಳೆ ಎಂಬುದನ್ನುಚಿತ್ರಮಂದಿರದಲ್ಲಿ ನೋಡಿ ತಿಳಿಯಬೇಕು.
ಟಾಕಿಂಗ್ ಸ್ಟಾರ್ ಬಿರುದಾಂಕಿತ ನಾಯಕ ಸೃಜನ್‍ಲೋಕೇಶ್‍ಚಿತ್ರದಲ್ಲಿ ಡೈಲಾಗ್‍ಗಳನ್ನು ಉದುರಿಸುತ್ತಾ ಬಿರುದಿಗೆ ನ್ಯಾಯ ಒದಗಿಸಿದ್ದಾರೆ. ಎರಡು ಫೈಟ್‍ನಲ್ಲಿ ಮಾಸ್ ಹೀರೋನಂತೆಕಂಡು ಬರುತ್ತಾರೆ. ಹರಿಪ್ರಿಯಾಕಲರ್‍ಫುಲ್ ಡ್ರೆಸ್‍ಗಳಿಂದ ಕಣ್ಣಿಗೆತಂಪುಕೊಡುತ್ತಾರೆ. ಇಂತಹಅಪ್ಪ-ಅಮ್ಮಇರಬೇಕು ಅನಿಸುವಂತೆ ನಟಿಸಿರುವ ತಾರಾ-ಅವಿನಾಶ್‍ಜೋಡಿಚೆನ್ನಾಗಿದೆ. ಗೆಳೆಯರಾಗಿ ಯಶಸ್,ಗಿರಿ, ಎದುರಾಳಿಯಾಗಿ ತರಂಗವಿಶ್ವ, ಗಿರಿಜಾ ಲೋಕೇಶ್ ಗಮನ ಸೆಳೆಯುತ್ತಾರೆ. ಕ್ಲೀನ್‍ಕೃಷ್ಣಪ್ಪನಾಗಿ ಸಾಧುಕೋಕಿಲ, ಮಿಮಿಕ್ರಿದಯಾನಂದ್, ತಬಲನಾಣಿ ಸಣ್ಣ ಪಾತ್ರದಲ್ಲಿ ಬಂದರೂ ನಗಿಸುತ್ತಾರೆ. ಸ್ನೇಹಿತೆಯಾಗಿರಾಧಿಕಾರಾವ್‍ಉಪನಾಯಕಿಎನ್ನಬಹುದು.ಮೊದಲ ನಿರ್ದೇಶನದಲ್ಲೆ ತೇಜಸ್ವಿ ಭವಿಷ್ಯದತಂತ್ರಜ್ಘರೆಂದು ಗುರುತಿಸಿಕೊಂಡಿದ್ದಾರೆ.ಕವಿರಾಜ್-ಚೇತನ್‍ಕುಮಾರ್ ಸಾಹಿತ್ಯದ ಗೀತೆಗಳಿಗೆ ಅರ್ಜುನ್‍ಜನ್ಯಾ ಸಂಗೀತ ಸಂಯೋಜನೆಒಮ್ಮೆ ಕೇಳಬಲ್. ಹೆಚ್.ಸಿ.ವೇಣು ಛಾಯಾಗ್ರಹಣದಲ್ಲಿ ಸುಂದರ ತಾಣಗಳು ಚಿತ್ರಕ್ಕೆ ಮರೆಗುತಂದುಕೊಟ್ಟಿದೆ.ಗಿರಿಜಾಲೋಕೇಶ್- ಸೃಜನ್ ಪುತ್ರ ಮಾಸ್ಟರ್ ಸುಕೃತ್‍ಲೋಕೇಶ್‍ಧ್ವನಿಯೊಂದಿಗೆ ಸಿನಿಮಾ ತೆರೆದುಕೊಳ್ಳುತ್ತದೆ.ಮಾಸ್, ಕ್ಲಾಸ್‍ಎರಡುಇರುವಕಾರಣಚಿತ್ರವು ಬೋರ್ ಅನಿಸುವುದಿಲ್ಲ.
ನಿರ್ಮಾಣ: ಲೋಕೇಶ್‍ಪ್ರೊಡಕ್ಷನ್ಸ್.
ಸಿನಿ ಸರ್ಕಲ್.ಇನ್ ವಿಮರ್ಶೆ
***
11/11/19

ಜನರಎದುರುಎಲ್ಲಿದ್ದೇಇಲ್ಲಿತನಕ
ಸದ್ದು ಮಾಡುತ್ತಿರುವ‘ಎಲ್ಲಿದ್ದೇಇಲ್ಲಿತನಕ’ ಚಿತ್ರವು ಕೊನೆ ಬಾರಿ ಮಾದ್ಯಮದವರನ್ನು ಭೇಟಿ ಮಾಡಿತು. ನಾಯಕ, ನಿರ್ಮಾಪಕ ಸೃಜನ್‍ಲೋಕೇಶ್ ಮಾತನಾಡಿ ಹಣ ಹೂಡಿರುವುದಕ್ಕೆಚಿಂತೆಇಲ್ಲ. ತೆರೆಗೆ ಬರುತ್ತಿರುವಕಾರಣದುಗುಡ ಶುರುವಾಗುತ್ತಿದೆ. ತಾತ ಸುಬ್ಬಯ್ಯ ನಾಯ್ಡು ಹೆಸರಿನಲ್ಲಿ ನೀಡುವ ಪ್ರಶಸ್ತಿ ಪಡೆಯುವ ಬಯಕೆಇದೆ. ಅವರುಕೊನೆಗಾಲದಲ್ಲಿಕಷ್ಟದಲ್ಲಿಇದ್ದರು, ಅಪ್ಪ ನಿರ್ಮಾಣ ಮಾಡುವಾಗರಕ್ತದೊತ್ತಡ ಹೆಚ್ಚಾಗಿತ್ತುಎಂದು ತಿಳಿದಿದ್ದೆ.ಸಿನಿಮಾದಲ್ಲಿ ನಾಯಕಿಅಮ್ಮ, ಮತ್ತು ಹರಿಪ್ರಿಯಾ.ಛಾಯಾಗ್ರಾಹಕ ವೇಣು ನಾಯಕ. ಶೀರ್ಷಿಕೆಯಂತೆ ಇಲ್ಲೆಇರುವ ಕೊನೆ ತನಕ, ಇಲ್ಲೇ ಸ್ವರ್ಗವೆಂದುಧೀರ್ಘಕಾಲದ ಮಾತಿಗೆ ವಿರಾಮ ಹಾಕಿದರು.

ಸೃಜನ್‍ಚಿಕ್ಕವನಿದ್ದಾಗಸಾಕಷ್ಟು ಕಷ್ಟ ಕೊಟ್ಟಿದ್ದಾನೆ.ನಮ್ಮಿಬ್ಬರಿಗೂ ಶೂಟಿಂಗ್‍ಗೆ ಹೋಗಲು ಬಿಡುತ್ತಿರಲಿಲ್ಲ. ಎಂಥ ಮಗು ಹುಟ್ಟಿತುಅಂತ ಬೇಸರ ತರಿಸಿತ್ತು.ಇಂದು ಈ ಮಟ್ಟಕ್ಕೆ ಬೆಳಿದಿದ್ದಾನೆ ಎಂದರೆ ನಂಬಲಿಕ್ಕೆ ಆಗೋದಿಲ್ಲ. ಆದರೂ ಅವನು ತಾತ, ಅಪ್ಪನ ಸರಿಸಾಟಿಯಾಗಲಾರ. ಅವನಿಗೆ ಕಿಂಚಿತ್ತು ಸಹಾಯ ಮಾಡಿಲ್ಲ. ಇಲ್ಲೇಇರು ಕೊನೆ ತನಕಎಂದುಅಮ್ಮನಾಗಿ ಹೇಳಬಲ್ಲೆಎಂಬುದುಗಿರಿಜಾಲೋಕೇಶ್ ನುಡಿ. ಸಿನಿಮಾ ನೋಡಿದ್ದೇನೆ. ಇದೊಂದು ಸುಂದರ, ಸರಳ, ಪ್ರೀತಿಯಿಂದ ನೋಡಬಹುದಾಗಿದೆ.ಲೋಕೇಶ್, ಗಿರಿಜಮ್ಮ ಮುಂದೆಯೂ ಪೋಷಕರಂತೆಇರುತ್ತಾರೆ.ಅಂತಹಗುಣ ಸೃಜನ್‍ರಲ್ಲಿಕಂಡುಬಂದಿದೆ.ಆತನಲ್ಲಿ ಭವಿಷ್ಯದಅದ್ಬುತ ಯೋಚನೆಗಳು ಇದೆಎಂದು ಹೊಗಳಿದ್ದು ತಾಯಿಯಾಗಿ ನಟಿಸಿರುವ ತಾರ.

ನಾಯಕಿ ಹರಿಪ್ರಿಯಾ ಮಾತನಾಡಿ ಸೃಜನ್‍ಇದರಿಂದರಿಲಾಂಚ್ ಆಗಲಿ. ಅವರಲ್ಲಿನ ಶ್ರದ್ದೆ, ಪ್ರಾಮಾಣಿಕತೆಚಿತ್ರಕ್ಕೆ ಒಳ್ಳೆಯದೇ ಆಗುತ್ತದೆಎಂದರು.ಲೋಕೇಶ್‍ತೀರಿಕೊಂಡ ಸಂದರ್ಭದಲ್ಲಿ ಸೃಜನ್‍ರನ್ನು ಭೇಟಿ ಮಾಡಿದಾಗಅವರು ಸ್ವಾಭಾವಿಕವಾಗಿ ಸ್ಪಂದನೆ ನೀಡಿದರು.ಎಲ್ಲಾ ವಿಧದಲ್ಲೂಅವರು ಒಳ್ಳೆಯದನ್ನು ಕಂಡುಕೊಂಡಿದ್ದಾರೆ.ದೃಶ್ಯವುಚೆನ್ನಾಗಿ ಬರಲೆಂದುರಾಜಿಯಾಗುತ್ತಿರಲಿಲ್ಲ. ಅವರ ಸಂಸ್ಥೆಯಿಂದ ಸಾಕಷ್ಟು ಪ್ರತಿಭೆಗಳು ಹೊರಬಂದಿವೆ. ವೇಣುಕ್ಯಾಮಾರ ಕೆಲಸ ಸಿನಿಮಾಕ್ಕೆ ಶಕ್ತಿ ತರಿಸಿದೆ. ಪ್ರೇಕ್ಷಕರು ಹೊರಬರುವಾಗ ಸೃಜರನ್ನು ಶೀರ್ಷಿಕೆಯಂತೆ ಪ್ರಶ್ನೆ ಮಾಡುವುದುಖಚಿತವೆಂದು ನಿರ್ದೇಶಕ ತೇಜಸ್ವಿ ಬಣ್ಣಸಿಕೊಂಡರು. ಎಂ.ಎಸ್.ಉಮೇಶ್, ತಬಲನಾಣಿ, ಗಾಯಕ ಅನಿರುದ್ದ್‍ಶಾಸ್ತ್ರೀ, ವೇಣು ಮುಂತಾದವರ ಉಪಸ್ತಿತಿ ಇತ್ತು. ಅಂದಹಾಗೆ ಮಜಾಟಾಕೀಸ್‍ದಸರಾ ಹಬ್ಬಕ್ಕೆ 500ನೇ ಕಂತು ಪ್ರಸಾರವಾಗುತ್ತದೆ.ಚಿತ್ರವುಇದೇ ಶುಕ್ರವಾರದಂದುಚಿತ್ರಮಂದಿರದಲ್ಲಿತೆರೆಕಾಣಲಿದೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
06/10/19


ಎಲ್ಲಿದ್ದೆಇಲ್ಲಿತನಕಚಿತ್ರಕ್ಕೆಅಮ್ಮಂದಿರ ಶುಭಹಾರೈಕೆ
ಸೃಜನ್‍ಲೋಕೇಶ್‍ಅವರು ಲೋಕೇಶ್ ಪ್ರೊಡಕ್ಷನ್ ಮೂಲಕ ಮೊದಲ ಬಾರಿ ನಿರ್ಮಾಣ ಮಾಡಿರುವ ‘ಎಲ್ಲಿದ್ದೆಇಲ್ಲಿತನಕ’ ಚಿತ್ರದ ಲಿರಿಕಲ್ ವಿಡಿಯೋ ಹಾಡುಗಳನ್ನು ಕಲಾವಿದರು, ತಂತ್ರಜ್ಘರುಅಮ್ಮಂದಿರು ಅನಾವರಣಗೊಳಿಸಿದರು.

ಹೊರಗಡೆಟಾಕಿಂಗ್ ಸ್ಟಾರ್‍ಅಂತ ಕರೆಸಿಕೊಂಡಿರುವ ಸೃಜನ್ ಮನೆಯಲ್ಲಿಹೆಚ್ಚು ಮಾತನಾಡೋಲ್ಲ. ಅವನು ಎತ್ತರಕ್ಕೆ ಬೆಳೆಯಬೇಕೆಂದು ಯಜಮಾನರ ಆಸೆ ಇತ್ತು. ಅವರುತೀರಿಕೊಂಡ ಸಂದರ್ಭದಲ್ಲಿ ಮುಂದೇನುಎಂದುಚಿಂತಿಸುತ್ತಿರುವಾಗ, ದುಡಿದು ಸಾಕುತ್ತೆನೆಂದು ಹೇಳಿದ್ದ.ಅದರಂತೆಇಂದು ಸ್ವಸ್ವಾಮಥ್ರ್ಯದಿಂದಏಕಾಂಗಿಯಾಗಿ ಸಿನಿಮಾ ಮಾಡುವತನಕ ಬಂದಿರುವುದು ನೋಡಿದರೆಖುಷಿಯಾಗುತ್ತದೆಂದುಗಿರಿಜಾಲೋಕೇಶ್ ಸಂತಸ ಹಂಚಿಕೊಂಡರು..ಕಾಶ್ಮೀರದಲ್ಲಿ ಚಿತ್ರೀಕರಣ ನಡೆಯುವಾಗ ಪ್ರತಿ ದಿನ ಪುಲ್ವಾಮರಸ್ತೆಯಲ್ಲಿ ಪ್ರಯಾಣ ಮಾಡುತ್ತಿದ್ದೇವು.ಇಲ್ಲಿಗೆ ಬಂದ ನಂತರಅದೇಜಾಗದಲ್ಲಿಘೋರಘಟನೆ ನಡೆದಿದೆ. ಮಾನ್ಯ ಪ್ರಧಾನ ಮಂತ್ರಿಗಳು ಇದಕ್ಕೆಕಾರಣರಾದವರನ್ನು ಬುಡ ಸಮೇತ ಮಟ್ಟಹಾಕಿ ಹೆಸರು ಮಾಡಿದ್ದರು.ಅದೇರೀತಿಚಿತ್ರವಾಗಲಿ ಎಂಬುದು ನಾಯಕನತಾಯಿ ಪಾತ್ರ ನಿರ್ವಹಿಸಿರುವ ತಾರಾ ಹೇಳಿದರು.

ಲೋಕೇಶ್ ಸರ್ ನನ್ನತಂದೆಯಂತೆ ಹೋಲುತ್ತಾರೆ.ಇವರಕುಟುಂಬದಚಿತ್ರಕ್ಕೆ ಸಂಗೀತಒದಗಿಸಬೇಕೆಂಬ ಕನಸು ಇತ್ತು.ಕರೆ ಬಂದಾಗ ಮೊದಲ ಆದ್ಯತೆ ಮೇರೆಗೆಒಂದೇ ದಿನದಲ್ಲಿಕವಿರಾಜ್,ಚೇತನ್ ಸಾಹಿತ್ಯದ ನಾಲ್ಕು ಹಾಡುಗಳಿಗೆ ರಾಗಒದಗಿಸಲಾಗಿದೆಎನ್ನುವುದುಅರ್ಜುನ್‍ಜನ್ಯಾ ವ್ಯಾಖ್ಯಾನ. ಮೂರನೇತಲೆಮಾರುಚಿತ್ರರಂಗದಲ್ಲಿ ನೆಲೆಯೊರಿದ್ದಾರೆ. ಲೋಕೇಶ್-ಲಂಕೇಶ್ ಸಂಬಂದ, ನಮ್ಮಿಬ್ಬರಲ್ಲೂ ಮುಂದುವರೆದಿದೆ.ಇನ್ನು ನನ್ನ ಮಗ ನಿನ್ನ ಮಗನನ್ನು ನಿರ್ದೇಶನ ಮಾಡುವುದು ಬಾಕಿ ಇದೆಅಂತಾರೆಇಂದ್ರಜಿತ್‍ಲಂಕೇಶ್.

ಎಲ್ಲರ ಬದುಕಿನಲ್ಲಿಅಮ್ಮ ಮುಖ್ಯವಾಗಿರುತ್ತಾರೆ.ಅದಕ್ಕೆತಾಯಂದಿರುಗಳಿಂದ ಆಡಿಯೋ ಬಿಡುಗಡೆ ಮಾಡಿದ್ದುಆರ್ಥಪೂರ್ಣವಾಗಿದೆ.ನಿರ್ದೇಶಕರು ಸಂಗೀತದೊಂದಿಗೆಕತೆ ಹೇಳಿದರು. ಕಾಶ್ಮೀರದಲ್ಲಿ ನನಗೆ ಅಲ್ಲದೆ ನಾಯಕನಿಗೂ ತೆಳು ಬಟ್ಟೆ ಹಾಕಿಸಿದ್ದರೆಂದು ಚಿತ್ರೀಕರಣದ ಅನುಭವಗಳನ್ನು ನಾಯಕಿ ಹರಿಪ್ರಿಯಾನೆನಪಿಸಿಕೊಂಡರು.

ಎಲ್ಲರ ನಂತರ ಸೃಜನ್‍ಲೋಕೇಶ್‍ಗೆ ಮಾತನಾಡುವ ಸರದಿ ಬಂತು.ಚಿತ್ರಕ್ಕೆ ನಿಜವಾದ ನಾಯಕಅಂದರೆತಂತ್ರಜ್ಘರು. ಅವರಿಂದಲೇಇಲ್ಲಿಯತನಕ ಬಂದಿದೆ.ಸಿನಿಮಾವುಚಿತ್ರೀಕರಣೋತ್ತರಲ್ಲಿ ಬ್ಯುಸಿ ಇದೆ.ವೇಣುಒಂದು ಮೇಣದಬತ್ತಿಯಲ್ಲಿಅದ್ಬುತ ಶಾಟ್‍ತೆಗೆದಿದ್ದಾರೆ.ಪರಿಚಯದ ಹಾಡಿಗೆಅರ್ಜುನ್‍ಜನ್ಯಾ ಒಳ್ಳೆ ಟ್ಯೂನ್ ನೀಡಿದ್ದಾರೆ. ಕೇವಲ ದುಡ್ಡಿನಿಂದಚಿತ್ರ ಆಗುವುದಿಲ್ಲ. ಶ್ರದ್ದೆ, ಆಸಕ್ತ್ತಿಇದ್ದರೆ ಮಾತ್ರ ಒಳ್ಳೆ ಸಿನಿಮಾವಾಗುತ್ತದೆ. ತಂಡದೊಂದಿಗೆ ಹನ್ನೆರಡು ಬಾರಿಚಿತ್ರಕತೆಯನ್ನು ಬದಲಾವಣೆ ಮಾಡಿಕೊಂಡಿದ್ದೇವೆ. ಇಷ್ಟು ವರ್ಷಗೆದ್ದಿರುವ ಹಣದಲ್ಲಿ ಬಂಡವಾಳ ಹೂಡಿದ್ದೇನೆ. ನಷ್ಟವಾದರೂಚಿಂತೆಯಿಲ್ಲ. ಜನರು ನ್ಯಾಯಯುತಚಿತ್ರ ಮಾಡಿದ್ದೇನೆಂದು ಹೇಳಿದರೆ ಸಾರ್ಥಕವಾಗುತ್ತದೆ. ಸೆಟ್‍ನಲ್ಲಿ ನಿರ್ದೇಶಕರೊಂದಿಗೆ ವಾದ ಮಾಡಿದ್ದೇನೆ. ನನಗೆ ಬರುವ ಸಂದೇಹ ಪ್ರೇಕ್ಷಕರಿಗೆ ಬರಬಾರದು.ವಿಭಿನ್ನರೀತಿಯಲ್ಲಿ ಪ್ರಚಾರ ಮಾಡುವ ಪಸೆಯಿಂದಆಡಿಯೋ ಲಾಂಚ್‍ಕಾರ್ಯಕ್ರಮಏರ್ಪಡಿಸಲಾಗಿದೆ.ಒಂದೇಕುಟುಂಬದ ನಾಲ್ಕು ತಲೆಮಾರು ಬಣ್ಣ ಹಚ್ಚಿರುವುದುದಕ್ಷಿಣಭಾರತದಲ್ಲಿ ನಮ್ಮದು ಮೊದಲುಎನ್ನಬಹುದು.ಮಗ ಮಾ.ಸುಕೃತ್ ಸಣ್ಣ ಪಾತ್ರದಲ್ಲಿಅಮ್ಮನೊಂದಿಗೆ ನಿರೂಪಣೆ ಮಾಡಿದ್ದಾನೆ. ಮುಂದೆ ಲೋಕೇಶ್‍ಕ್ರಿಯೇಶನ್ಸ್ ಮೂಲಕ ‘ಇವಳು ಸುಜಾತ’ ಧಾರವಾಹಿ ಪ್ರಸಾರವಾಗುತ್ತದೆ. ಯೋಗ್ಯತೆಇದ್ದರೆ ನಮ್ಮನ್ನು ಬೆಳಸಿ, ಇಲ್ಲದಿದ್ದಲ್ಲಿ ಬಿಟ್ಟುಬಿಡಿಎಂದುನಿಟ್ಟುಸಿರು ಬಿಟ್ಟರು.ಆನಂದ್‍ಆಡಿಯೋದ ಶ್ಯಾಮ್, ಕವಿರಾಜ್, ನಿರ್ದೇಶಕ ತೇಜಸ್ವಿ, ಯಶಸ್‍ಸೂರ್ಯ, ಗಿರಿಕಡಿಮೆಮಾತನಾಡಿದರು.
ಸಿನಿ ಸರ್ಕಲ್.ಇನ್ ನ್ಯೂಸ್
25/08/19ಸೃಜನ್‍ಲೋಕೇಶ್ ನಿರ್ಮಾಣದ ಎಲ್ಲಿದ್ದೆ ಇಲ್ಲಿ ತನಕ
ಮಜಾ ಟಾಕೀಸ್, ಸದಾ ನಿಮ್ಮೊಂದಿಗೆ ರಿಯಾಲಿಟಿ ಶೋಗಳನ್ನು ಲೋಕೇಶ್ ಪ್ರೊಡಕ್ಷನ್ ಮೂಲಕ ನಿರ್ಮಾಣ ಮಾಡಿದ್ದ ಸೃಜನ್‍ಲೋಕೇಶ್ ಮೊದಲಬಾರಿ ಹಿರಿತೆರೆಗೆ ಹಣ ಹೂಡುವುದರ ಮೂಲಕ ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಲೋಕೇಶ್ ಅಭಿನಯದ ‘ಪರಸೆಂಗದ ಗೆಂಡೆತಿಮ್ಮ’ ಚಿತ್ರದಲ್ಲಿ ‘ಎಲ್ಲಿದ್ದ ಇಲ್ಲೀ ತನಕ, ಎಲ್ಲಿಂದ ಬಂದವ್ವ’ ಗೀತೆಯು ಎಸ್.ಬಿ.ಬಾಲಸುಬ್ರಮಣ್ಯಹಂ ಕಂಠದಲ್ಲಿ ಹಾಡು ಹಿಟ್ ಆಗಿತ್ತು. ಅಪ್ಪ ನಟಿಸಿದ ಚಿತ್ರದ ಹಾಡಿನ ಸಾಲು ‘ಎಲ್ಲಿದ್ದ ಇಲ್ಲೀ ತನಕ’ ಟೈಟಲ್‍ನಲ್ಲಿ ನಾಯಕನಾಗಿ ನಟಿಸುತಿದ್ದಾರೆ. ನಾಯಕಿಯಾಗಿ ಹರಿಪ್ರಿಯಾ ಇಂಟಿರಿಯರ್ ಡಿಸೈನರ್ ಪಾತ್ರ. ಮಜಾ ಟಾಕೀಸ್ ಶೋ ಜವಬ್ದಾರಿಯನ್ನು ಹೊತ್ತುಕೊಂಡಿರುವ ಕೊಳ್ಳೆಗಾಲದ ತೇಜಸ್ವಿ ನಿರ್ದೇಶನದ ಚುಕ್ಕಾಣಿ ಹಿಡಿಯುತ್ತಿದ್ದಾರೆ. ಐದು ಹಾಡುಗಳಿಗೆ ರಾಗ ಒದಗಿಸುತ್ತಿರುವುದು ಅರ್ಜುನ್‍ಜನ್ಯಾ, ಮಾತುಗಳಿಗೆ ಮುತ್ತನ್ನು ಪೋಣಿಸುತ್ತಿರುವುದು ರಾಕೇಶ್.ಸಿ.ಎ, ಛಾಯಗ್ರಹಣ ಹೆಚ್.ಸಿ.ವೇಣು, ಕತೆ ಅರುಣ್‍ರಾಮದಾಸ್ ನಿರ್ವಹಿಸಿದ್ದಾರೆ.

ಪ್ರೀತಿಗಾಗಿ ಹುಡುಗನೊಬ್ಬ ಏನೆಲ್ಲಾ ಕಸರತ್ತು ಮಾಡುತ್ತಾನೆ ಎಂಬುದು ಒಂದು ಏಳೆಯ ಸಾರಾಂಶವಾಗಿದೆ. ಒಳ್ಳೆಯ ರೀತಿಯಲ್ಲಿ ಚಿತ್ರ ಮೂಡಿಬರಲು ತಂಡವು ಕತೆಯನ್ನು ಹದಿನಾಲ್ಕು ಬಾರಿ ಬದಲಾವಣೆ ಮಾಡಿಕೊಂಡು ಕೊನೆ ಹಂತಕ್ಕೆ ತಂದಿದೆಯಂತೆ. ಪ್ರತಿ ಎರಡು ನಿಮಷಕ್ಕೆ ವಿನೂತನ ದೃಶ್ಯಗಳು ಪ್ರೇಕ್ಷಕನಿಗೆ ನಗು ತರಿಸುತ್ತದೆ. ಬೆಂಗಳೂರು, ಆಸ್ಟ್ರೇಲಿಯಾದಲ್ಲಿ ಮೂರು ಹಾಡು, ಒಂದು ಫೈಟ್ ಮತ್ತು ನಾಯಕನ ಪರಿಚಯದ ದೃಶ್ಯಗಳನ್ನು ಚಿತ್ರೀಕರಣ ನಡೆಸಲು ಯೋಜನೆ ಹಾಕಲಾಗಿದೆ.

ಬಂಡಿಕಾಳಮ್ಮ ದೇವಸ್ಥಾನದಲ್ಲಿ ನಡೆದ ಮಹೂರ್ತ ಸಮಾರಂಭದಲ್ಲಿ ತಾರ ಮತ್ತು ಗಿರಿಜಾಲೋಕೇಶ್ ದೇವಿ ಮುಂದೆ ಪ್ರಾರ್ಥನೆ ಮಾಡುವ ದೃಶ್ಯಕ್ಕೆ ರವಿಚಂದ್ರನ್ ಕ್ಲಾಪ್ ಮಾಡಿದರು. ಸೃಜನ್‍ಲೋಕೇಶ್ ಇಬ್ಬರು ಅಭಿನಯಿಸಿದ ಸನ್ನಿವೇಶಕ್ಕೆ ಆಕ್ಷನ್ ಹೇಳುವ ಮೂಲಕ ನಿರ್ದೇಶನ ಮಾಡುವ ಆಸೆಯನ್ನು ಈಡೇರಿಸಿಕೊಂಡರು. ನಂತರ ನಡೆದ ಸರಳ ಕಾರ್ಯಕ್ರಮದಲ್ಲಿ ದರ್ಶನ್, ಜಯಂತಿ, ಪ್ರಿಯಾಂಕಉಪೇಂದ್ರ, ವಿನೋಧ್‍ಪ್ರಭಾಕರ್, ಧರ್ಮಕೀರ್ತಿರಾಜ್,ರವಿಶಂಕರ್‍ಗೌಡ ಮುಂತಾದವರು ಚಿತ್ರಕ್ಕೆ ಶುಭವಾಗಲೆಂದು ಹರಿಸಿದರು. ಉಳಿದಂತೆ ಚಿತ್ರದಲ್ಲಿ ಅಭಿನಯಿಸುತ್ತಿರುವ ತರಂಗವಿಶ್ವ, ಸಿಹಿಕಹಿಚಂದ್ರು, ಮಂಡ್ಯಾರಮೇಶ್, ಯಶಸ್‍ಸೂರ್ಯ, ರಾಧಿಕಾರಾವ್, ಗಿರಿ ಉಪಸ್ಥಿತರಿದ್ದರು. ಶಿವಣ್ಣ ಮಗಳ ಮದುವೆಯ ಉಸ್ತುವಾರಿಯನ್ನು ತೆಗೆದುಕೊಂಡಿದ್ದ ಧ್ರುವಕುಮಾರ್ ಸಹ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ.
ಸಿನಿ ಸರ್ಕಲ್.ಇನ್ ನ್ಯೂಸ್
9/12/18


For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore