HOME
CINEMA NEWS
GALLERY
TV NEWS
REVIEWS
CONTACT US
ಹೊಸ ಎಡಕಲ್ಲು ಗುಡ್ಡದ ಮೇಲೆ
ನಾಲ್ಕು ದಶಕಗಳ ಹಿಂದೆ ಚಿತ್ರಬ್ರಹ್ಮ ಪುಟ್ಟಣಕಣಗಾಲ್ ನಿರ್ದೇಶನದ ‘ಎಡಕಲ್ಲು ಗುಡ್ಡದ ಮೇಲೆ’ ಚಿತ್ರವು ಬಿಡುಗಡೆಯಾಗಿ ಆಗಿನ ಕಾಲಕ್ಕೆ ಹೆಸರು ಮಾಡಿತ್ತು. ಕಟ್ ಮಾಡಿದರೆ ಈಗ ಅದೇ ಹೆಸರಿನಲ್ಲಿ ಚಿತ್ರವೊಂದು ಸದ್ದಿಲ್ಲದೆ ಬಿಡುಗಡೆ ಹಂತಕ್ಕೆ ಬಂದಿದೆ. ಪ್ರಚಾರದ ಮೊದಲ ಹಂತವಾಗಿ ಚಿತ್ರದ ಧ್ವನಿಸಾಂದ್ರಿಕೆ ಅನಾವರಣ ಕಾರ್ಯಕ್ರಮ ನಡೆಯಿತು. ವೃತ್ತಿಯಲ್ಲಿ ಖಳನಟನಾಗಿರುವ ವಿವಿನ್‍ಸೂರ್ಯ ಮಾತನಾಡಿ ಮೊದಲಬಾರಿ ಕತೆ ಬರೆದು ನಿರ್ದೇಶನ ಮಾಡಲಾಗಿದೆ. ಪೋಷಕರಾದವರು ಸಂಬಂದ, ಬಾಂದವ್ಯಗಳ ಬಗ್ಗೆ ಗಮನ ಹರಿಸದೆ, ವಸ್ತು ಮೇಲೆ ಪ್ರೀತಿ ಜಾಸ್ತಿ ತೋರಿಸಿ, ಹಣದ ಹಿಂದೆ ಹೋದಾಗ ಏನೇನು ಘಟನೆಗಳು ನಡೆಯುತ್ತವೆ ಎಂಬುದನ್ನು ಹೇಳಲಾಗಿದೆ. ಇಂತಹ ಸಂಗತಿಗಳು ಭೂತ, ವರ್ತಮಾನದಲ್ಲಿ ನಡೆಯುತ್ತಿದ್ದು, ಭವಿಷ್ಯದಲ್ಲಿ ಆಗಬಹುದು. ಪ್ರಾರಂಭದಲ್ಲಿ ಮೂಲ ಚಿತ್ರದ ಕಲಾವಿದರಾದ ಜಯಂತಿ, ಆರತಿ, ಚಂದ್ರಶೇಖರ್ ಅವರನ್ನು ಆಯ್ಕೆ ಮಾಡಲು ಯೋಜನೆ ಹಾಕಲಾಗಿತ್ತು. ಆ ಸಮಯದಲ್ಲಿ ಜಯಂತಿ ಆರೋಗ್ಯ ಸರಿ ಇರಲಿಲ್ಲ. ಆರತಿ ಸಂಪರ್ಕಕ್ಕೆ ಸಿಗಲಿಲ್ಲ. ಚಂದ್ರಶೇಖರ್ ಹೆಸರು ಕೇಳಿ ವಿವರ ಪಡಯದೆ ನಾಯಕನ ತಂದೆ ಪಾತ್ರಕ್ಕೆ ಓಕೆ ಎಂದರು. ಹಾಗಂತ ಅದಕ್ಕೂ ಇದಕ್ಕೂ ಹೋಲಿಕೆ ಇರುವುದಿಲ್ಲ. ಕತೆಯು ಮಳೆಯನ್ನು ಕೇಳಿದ್ದರಿಂದ ಚಿಕ್ಕಮಗಳೂರಿನಲ್ಲಿ ಹೆಚ್ಚಾಗಿ ಚಿತ್ರೀಕರಣ ನಡೆಸಿ, ಬಾಕಿ ಮೈಸೂರು, ಬೆಂಗಳೂರು ಸುತ್ತಮುತ್ತ ಸೆರೆಹಿಡಿಯಲಾಗಿದೆ. ಶೀರ್ಷಿಕೆ ಪೂರಕವಾಗಿದ್ದು, ಏತಕ್ಕಾಗಿ ಇಡಲಾಗಿದೆ ಅಂತ ಚಿತ್ರ ನೋಡಿದರೆ ತಿಳಿಯತ್ತದೆಂದು ಮಾದ್ಯಮದವರು ಪ್ರಶ್ನೆ ಕೇಳದಂತೆ ಮಾಹಿತಿ ನೀಡಿದರು.2

ಮಕ್ಕಳ ಮೇಲೆ ಕೇರ್ ತೆಗೆದುಕೊಳ್ಳದೆ ಇದ್ದರೆ ಜರುಗವ ಅವಘಡಗಳು, ಜೊತೆಗೆ ಸಣ್ಣದೊಂದು ಪ್ರೇಮಕತೆಯನ್ನು ಚೆನ್ನಾಗಿ ತೋರಿಸಿದ್ದಾರೆ. ಎರಡು ದಿವಸ ಕೆಲಸ ಮಾಡಿದ್ದರಿಂದ ಪಾತ್ರದ ಬಗ್ಗೆ ಅಷ್ಟೇನು ತಿಳಿಯದು ಎನ್ನುತ್ತಾರೆ ದತ್ತಣ್ಣ. ಇವರ ಮಾತನ್ನು ಮೂಗುಸುರೇಶ್, ಮನ್‍ದೀಪ್‍ರಾಯ್ ಅನುಮೋದಿಸಿದರೆ, ರವಿಭಟ್ ನಾಯಕಿಯ ತಂದೆಯಾಗಿ ನಟನೆ ಮಾಡಲಾಗಿದೆ. ಕಾನೂನಿನ ಚೌಕಟ್ಟು ವಿಷಯವನ್ನು ಹೇಳುವ ಪ್ರಯತ್ನ ಮಾಡಿದ್ದಾರೆಂದು ಸಣ್ಣದೊಂದು ಸುಳಿವು ನೀಡಿದರು.

ಮಹಿಳಾ ಪ್ರಧಾನ ಚಿತ್ರದಲ್ಲಿ ನಟಿಸಬೇಕೆಂಬ ತುಡಿತವಿತ್ತು. ಅದು ಮೊದಲ ಚಿತ್ರದಲ್ಲೆ ಸಿಕ್ಕಿದ್ದು ಸುಕೃತ ಎನ್ನಬಹುದು. ಮುಗ್ದತೆಯಿಂದ ಗಂಬೀರವಾಗಿ ಭಾವನೆಗಳನ್ನು ಕ್ಯಾಮರಾ ಮುಂದೆ ತೋರಿಸುವುದು ಛಾಲೆಂಜಿಂಗ್ ಆಗಿತ್ತು ಎಂದು ನಾಯಕಿ ಸ್ವಾತಿಶರ್ಮಾ ಖುಷಿ ಹಂಚಿಕೊಂಡರು. ಮೊದಲನೆ ಬಿಬಿಎಂ ಓದುತ್ತಿರುವ ಮೈಸೂರು ಹುಡುಗ ಮಾಡಲ್ ಆಗಿರುವ ನಕುಲ್ ಅವಕಾಶ ಸಿಕ್ಕ ಬಗೆಯನ್ನು ನೆನಪು ಮಾಡಿಕೊಂಡರು. ಐದು ಹಾಡುಗಳಿಗೆ ಸಂಗೀತ ಸಂಯೋಜಿಸಿರುವ ಆಶಿಕ್‍ಅರುಣ್ ಮತ್ತು ಸಾಹಿತಿಗಳು ಹಾಜರಿದ್ದರು. ಅಘಾತ ಎನ್ನವ ಚಿತ್ರಕ್ಕೆ ಹಣ ಹೂಡಿದ್ದು, ಬಿಡುಗಡೆ ಹಂತದಲ್ಲಿರುವಾಗಲೆ ಈ ಸಿನಿಮಾವನ್ನು ನಿರ್ಮಾಣ ಮಾಡಿರುವ ಜಿ.ಪಿ.ಪ್ರಕಾಶ್ ಬಂಡವಾಳ ವಾಪಸ್ಸು ಬಂದಲ್ಲಿ ಮುಂದೆ ಒಳ್ಳೆಯ ಚಿತ್ರಗಳನ್ನು ಕೊಡುತ್ತೆನೆಂದು ಹೇಳಿದರು. ಸಿನಿಮಾವು ಮುಂದಿನ ತಿಂಗಳು ಎರಡನೆ ವಾರ ತೆರೆಗೆ ಬರುವ ಸೂಚನೆಗಳು ಇವೆ. ಇದಕ್ಕೂ ಮುನ್ನ ಟೀಸರ್ ಮತ್ತು ಒಂದು ಹಾಡನ್ನು ತೋರಿಸಲಾಯಿತು.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
12/04/18

For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore