HOME
CINEMA NEWS
GALLERY
TV NEWS
REVIEWS
CONTACT US
ಎರಡು ಕನಸು, ಒಂದು ನನಸು
ಇಬ್ಬರು ನಾಯಕಿಯರು, ಒಬ್ಬ ನಾಯಕ, ಈ ಮೂವರ ಸುತ್ತ ನಡೆಯುವ ಒಂದು ಲವ್‍ಸ್ಟೋರಿ. ಇದು ನಮ್ಮ ಗಾಂಧಿನಗರದಲ್ಲಿ ಸದಾ ಕಾಣಸಿಗುವ ತ್ರಿಕೋನ ಪ್ರೇಮಕಥೆಯ ಕಾನ್ಸೆಪ್ಟ್. ನಮ್ಮ ಚಿತ್ರರಂಗದಲ್ಲಿ ಅನಾದಿ ಕಾಲದಿಂದಲೂ ಇಂಥ ಹಲವಾರು ಕಥೆಗಳು ಬಂದಿವೆ. ಈಗ ಅಂಥz್ದÉೀ ಮತ್ತೊಂದು ಹಳೇ ಕಥೆಗೆ ಹೊಸರೂಪ ಕೊಟ್ಟು ನಿದೇಶಕ ಮದನ್ ಎರಡು ಕನಸು ಎಂಬ ಸುಂದರ ಚಲನಚಿತ್ರವನ್ನು ತೆರೆಮೇಲೆ ಮೂಡಿಸಿದ್ದಾರೆ. ನಾಯಕ ಮುತ್ತಣ್ಣ(ವಿಜಯ ರಾಘವೇಂದ್ರ) ಒಬ್ಬ ಆನಾಥ. ಹಿಂದೆ ನಡೆದ ಅಪಘಾತವೊಂದರಲ್ಲಿ ತನ್ನವರನ್ನೆಲ್ಲಾ ಕಳೆದುಕೊಂಡಿರುತ್ತಾನೆ. ನಗರದಲ್ಲಿ ತಾನೇ ಒಂದು ಅನಾಥಾಶ್ರಮವನ್ನು ಆರಂಭಿಸಿ ಅಲ್ಲಿ ಅನಾಥರು ಹಾಗೂ ವಯೋವೃದ್ದರನ್ನು ತನ್ನ ಬಂಧುಗಳಂತೆ ಸಾಕುತ್ತಾ ಅದರಲ್ಲೇ ಸಾರ್ಥಕತೆ ಕಂಡುಕೊಂಡಿರುತ್ತಾನೆ. ಆತನ ಈ ಸಮಾಜಸೇವಾ ಗುಣಗಳನ್ನು ಗುರುತಿಸಿದ ವಾಹಿನಿಯೊಂದರ ವರದಿಗಾರ್ತಿ ಶೃತಿ(ಕೃಷಿ ತಾಪಂಡ) ಸುದ್ದಿ ಮಾಡಲೆಂದು ಆತನ ಸಂದರ್ಶನಕ್ಕೆ ಹೋದಾಗ ನಾನು ಎಂದೂ ಪ್ರಚಾರ ಬಯಸುವವನಲ್ಲ ಎಂದು ನಯವಾಗಿ ತಿರಸ್ಕರಿಸುತ್ತಾನೆ.

ಇತ್ತ ಅನಾಥಾಲಯದಲ್ಲಿನ ಅಂಗವಿಕಲ ಮಕ್ಕಳು ಹೋಟೆಲೊಂದರಿಂದ ಮಧ್ಯಾಹ್ನದ ಊಟದ ಕ್ಯಾರಿಯರ್‍ಗಳನ್ನು ನಾನಾಕಡೆ ಕೆಲಸ ಮಾಡುತ್ತಿರುವವರಿಗೆ ಸರಬರಾಜು ಮಾಡುವುದರ ಮೂಲಕ ಒಂದಷ್ಟು ಹಣ ಕೂಡಿಡುತ್ತಿರುತ್ತಾರೆ. ಆದರೆ ಆ ಹೋಟೆಲ್ ಮಾಲೀಕ ಆಲ್ಕಡ್ಡಿ ಆದಿ(ಪೆಟ್ರೋಲ್ ಪ್ರಸನ್ನ) ಕ್ಯಾರಿಯರ್‍ಗಳಲ್ಲಿ ಊಟದ ಜೊತೆಗೆ ಕೆಲವರಿಗೆ ಡ್ರಗ್ಸ್ ಕೂಡ ಸಪ್ಲೈ ಮಾಡುತ್ತಿರುತ್ತಾನೆ. ಒಮ್ಮೆ ಡ್ರಗ್ಸ್ ಇರೋ ಕ್ಯಾರಿಯರ್ ಮತ್ತೊಬ್ಬ ಹುಡುಗನ ಬಳಿಯಿರುವ ಖಾಲಿ ಕ್ಯಾರಿಯರ್ ಎರಡೂ ಅದಲು ಬದಲಾಗಿ ಆದಿ ತನ್ನ ಕಸ್ಟಮರ್ ಕಡೆಯಿಂದ ನಿಂದನೆಗೊಳಪಡಬೇಕಾಗುತ್ತದೆ. ಆ ಹುಡುಗನನ್ನು ಕರೆಸಿದ ಆದಿ ಸಿಟ್ಟಿನಿಂದ ಆತನಿಗೆ ಹೊಡೆಯುತ್ತಾನೆ. ಆ ಏಟಿಗೆ ಹುಡುಗ ಸತ್ತೇ ಹೋಗುತ್ತಾನೆ, ಇದರ ಜಾಡು ಹಿಡಿದು ಹೋಗುವ ಮುತ್ತುಗೆ ಆದಿಯ ಸಮಾಜಘಾತುಕ ಕೆಲಸ ತಿಳಿಯುತ್ತದೆ. ಮುತ್ತು ಅವರನ್ನೆಲ್ಲಾ ಬಗ್ಗುಬಡಿದು ಪೆÇೀಲೀಸರಿಗೆ ಒಪ್ಪಿಸುತ್ತಾನೆ. ಈ ಕೆಲಸದಲ್ಲಿ ಮುತ್ತು ಜೊತೆ ಶೃತಿಯೂ ಕೈಜೋಡಿಸಿರುತ್ತಾಳೆ. ನಂತರದಲ್ಲಿ ತಾನು ಪ್ರೀತಿಸುವ ವಿಷಯವನ್ನು ಮುತ್ತುಗೆ ಹೇಳುತ್ತಾಳೆ. ಮುತ್ತು ಲವ್ ವಿಷಯ ಕೇಳಿದಕೂಡಲೇ ಇನ್ನಿಲ್ಲದ ಕೋಪ ಬರುತ್ತದೆ. ಪ್ರೀತಿಯ ವಿಷಯದಲ್ಲಿ ಅದೇಕೆ ಹಾಗೆ ಸಿಟ್ಟಿಗೇಳುತ್ತೀಯ ಎಂದು ಸ್ನೇಹಿತರೆಲ್ಲ ಕೇಳಿದಾಗ ಅಲ್ಲಿ ಮತ್ತೊಂದು ಕಥೆ ಬಿಚ್ಚಿಕೊಳ್ಳುತ್ತದೆ. ಅಲ್ಲಿ ನಾಯಕನ ದೊಡ್ಡ ಕುಟುಂಬ ಅನಾವರಣಗೊಳ್ಳುತ್ತದೆ. ತಂದೆ, ತಾಯಿ, ಅಜ್ಜ(ಸುದರ್ಶನ್)ಅಜ್ಜಿ(ಶೈಲಶ್ರೀ)ಅತ್ತೆ, ಮಾವ, ತಾನು ಮದುವೆಯಾಗಬೇಕಿದ್ದ ಹುಡುಗಿ(ಕಾರುಣ್ಯ ರಾಮ್) ಹೀಗೆ ಎಲ್ಲರೂ ಅಲ್ಲಿ ಕಾಣಸಿಗುತ್ತಾರೆ. ಸಿಟಿಯಲ್ಲಿ ಉತ್ತಮ ಕೆಲಸದಲ್ಲಿದ್ದ ನಾಯಕನ ಮದುವೆಯನ್ನು ಅತ್ತೆಯ ಮಗಳ ಜೊತೆಯೇ ನಿಶ್ಚಯ ಮಾಡಿಕೊಂಡು ಎರಡೂ ಕುಟುಂಬದವರು ದೇವಸ್ಥಾನದಲ್ಲಿ ಪೂಜೆ ಮಾಡಿಸಿಕೊಂಡು ವಾಪಸ್ ಬರುವಾಗ ದೊಡ್ಡ ಅನಾಹುತವೇ ನಡೆದುಹೋಗುತ್ತದೆ. ಅದೇನು ಎಂದು ನಾವು ಹೇಳಿವುದಕ್ಕಿಂತ ಚಿತ್ರದಲ್ಲಿಯೇ ನೋಡಿ. ಚಿತ್ರದಲ್ಲಿನ 3 ಹಾಡುಗಳು ಉತ್ತಮವಾಗಿ ಮೂಡಿಬಂದಿವೆ. ನಟ ವಿಜಯ ರಾಘವೇಂದ್ರ ಅವರು ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಅವರ ಜೊತೆ ನಾಯಕಿಯರಾಗಿ ಕಾರುಣ್ಯರಾಮ್ ಮತ್ತು ಕೃಷಿ ತಾಪಂಡ ಅವಲವಿಕೆಯಿಂದ ಅಭಿನಯಿಸಿದ್ದಾರೆ. ಹಿರಿಯ ಕಲಾವಿದರಾದ ಸುದರ್ಶನ್, ಶೈಲಜಾ, ಕಿಶೋರಿ ಬಲ್ಲಾಳ್, ಉಮೇಶ್, ಚಿತ್ರಾಶಣೈ, ಲಕ್ಷ್ಮೀಗೌಡ, ಕುರಿ ಪ್ರತಾಪ್, ಪೆಟ್ರೋಲ್ ಪ್ರಸನ್ನ, ಡ್ಯಾನಿಯಲ್ ಕುಟ್ಟಪ್ಪ ಮೊದಲಾದ ಹಿರಿಯ ಕಲಾವಿದರ ದಂಡೇ ಚಿತ್ರದಲ್ಲಿ ಕಾಣ ಸಿಕೊಂಡಿರುವುದು ಮತ್ತೊಂದು ವಿಶೇಷ. ಅಲ್ಲದೆ ಆ ಚಿತ್ರದ ನಿರ್ದೇಶಕ ಭಗವಾನ್ ಅವರು ಛಾನೆಲ್ ಹೆಡ್ ಆಗಿ ಈ ಚಿತ್ರದಲ್ಲಿ ಕಾಣ ಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಒಂದು ಹೊಸ ಪ್ರೀತಿಯ ಕನಸಿನ ಜೊತೆಗೆ ಉತ್ತಮವಾದ ಕೌಟುಂಬಿಕ ಸಂಬಂಧಗಳ ಸುತ್ತ ಹೆಣೆಯಲಾದ ಕಥೆಯಿದೆ. ಹೊಸದಾದ ನಿರೀಕ್ಷೆಗಳನ್ನು ಹೊತ್ತುತಂದ ಎರಡು ಕನಸು ಚಿತ್ರವನ್ನು ಪ್ರೇಕ್ಷಕರು ಕೂಡ ಅಷ್ಟೇ ಪ್ರೀತಿಯಿಂದ ಸ್ವೀಕರಿಸಿದ್ದಾರೆ.
-20/03/17

ERADU KANASU’ RELEASING ON MARCH 10
‘Eradu Kanasu’ will release in about 100 theatres all over Karnataka on March 10. The film is being distributed by Vijay. The film is produced by Ashok and directed by his son Madan. The film stars Vijaya Raghavendra, Karunya Ram and Krishi Thapanda in lead roles. Darshan Kanaka is the cameraman.

 Producer Ashok told journalists on Monday that he is a fan of Dr Rajkumar and as soon as his son announced the title of the film that he is about to direct he was happy to hear the title. He said the film has shaped up well with all the characters.  

Director Madan said in Dr Rajkumar classic film of the 1970s both the dreams fail while in this movie both the dreams have been given lives. He said the film has no item song but there is a song in which 3,000 children have participated.  The film has been shot in Bengaluru, Melukote and Goa.  

Vijaya Raghavendra said his uncle Dr Rajkumar’s film of the same title was a great classic and a hit. He said if the content of the film is good people will watch it. The poster says Chinnari Mutha is back and it is the director’s call and wish to announce that way.  

Karunya Ram said she plays a bubbly and a lovely girl in the movie. She said she hopes that it will be a hattrick of successes for her after Vajrakaaya and Kirugurina Gayaligalu. Krishi Thapanda said she plays a reporter in this film which is her third one.
-28/02/17


ERADU KANASU’ AUDIO, PROMO LAUNCHED
P
uneeth Rajkumar released the audio CD and launched the promo of the upcoming Kannada film ‘Eradu Kanasu’ at a function in Bengaluru on Monday evening. Eradu Kanasu is produced by Ashok K B while it has been written and directed by Madan. The film stars Vijaya Raghavendra, Karunya Ram and Krishi Thapanda in lead roles. Steve and Kaushik have scored the music. The audio was brought out by Sai Audio.

Speaking at the function, Puneeth Rajkumar said this movie looks different from the movie that had his father in the lead. He said Vijaya Raghavendra is a good dancer and an actor who has grown up to be a good performer. He congratulated Raghavendra for winning the state award for the best actor. 

Puneeth said he and Raghavendra had grown up together as child artistes while wishing all the children a happy children’s day. 

Director S K Bhagawan said Puneeth and Vijaya Raghavendra had started off as child artistes on this day many years back. He said their success should be an inspiration for other children today. He said Eradu Kanasu starring Rajkumar was released in 1976 which ran for 37 weeks. He said the film had six songs and all of them became hits which are heard even to this day. The senior director said Mungaru Male was another film in which all the songs became a hit. He said his student Madan who has made this Eradu Kanasu has used a similar format to popularize the songs while wishing good luck.

Chinne Gowda said Madan was giving guru dakshine to his mentor Bhagawan by making a film with the same title that was made by the guru.

Music composer Kaushik said the film has five songs and two bit songs. V Manohar who has penned the lyrics for one of the songs said the film’s audio release is a symbolic celebration of children’s day as Vijaya Raghavendra has grown up from being a child artiste to an actor.

Director Madan said the film is in final stages of post-production with the team and added that the film will soon hit the theatres. 
-15/11/16
ERADU KANASU’ LAUNCHED
‘Eradu Kanasu’ a new Kannada film mounted the sets on Wednesday morning at the Kanteerava Studio in Bengaluru. The film is produced by Ashok K B and directed by debutant Madan, an alumnus of Adarsha Film Institute. The film stars Vijay Raghavendra, Prajwal Poovaiah and Karunya Ram in lead roles.

Director Madan told journalists that the film had nothing to do with Dr Rajkumar classic film that was released in 1974 except that the title was suitable for the subject. He said the film has entertainment value, comedy and action. Madan said a 42-day schedule has been drawn and the movie will be shot in locales of Mysuru, Devanahalli and Bengaluru. The film has two heroines and a hero but with an altogether different storyline.

Vijay Raghavendra said the 1974 classic that starred his uncle Rajkumar had wonderful songs, a beautiful story and everything in it was a superhit. “When I heard the title for this film I was scared because mama (Annavru) had acted in it. But, then after I heard the story I agreed as I found the title to be suitable. I play a decent guy in the movie. The film is about the struggle between two dreams – love and life”, he said.

Prajwal Poovaiah said she plays a modern girl in the movie and that of a journalist while Karunya Ram said she plays a chatter box who keeps talking all the time.

Music composers for the movie Steve-Kaushik said they are scoring music for their second movie. Rajan and Nagendra had scored good music for the Rajkumar’s film and now the two of them are scoring the music for the current movie. Steve and Kaushik said they will blend live instruments with the electronic instruments.

Producer Ashok said he was impressed with the story of the movie and so decided to turn a producer for his director son.

Darshan Kanaka is the cameraman and Daniel Kuttappa will be acting in the movie as a villain.

Director S K Bhagawan (of Dorai Bhagawan duo) who directed Rajkumar’s classic film said the muhurta for their film was held at the same Kanteerava Studio about 40 years back. The classic film ran for 36 weeks he said and wished the new team who is his student success.
-11/09/15

For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore