HOME
CINEMA NEWS
GALLERY
TV NEWS
REVIEWS
CONTACT US
ಎಲ್ಲಿಗೆ ಪಯಣಯಾವುದೋದಾರಿ
ಮೇಲಿನ ಸಾಲು ನೋಡಿದಾಗ ‘ಸಿಪಾಯಿ ರಾಮು’ ಚಿತ್ರವು ನೆನಪಿಗೆ ಬರುತ್ತದೆ.ಯಸ್, ಈಗ ಇದೇ ಹೆಸರಿನಲ್ಲಿಚಿತ್ರವೊಂದು ಸದ್ದಿಲ್ಲದೆಒಂದು ಹಂತದಚಿತ್ರೀಕರಣವನ್ನು ಮಡಕೇರಿ, ವಿರಾಜಪೇಟೆ ಸುತ್ತಮುತ್ತ ಯಶಸ್ವಿಯಾಗಿ ನಲವತ್ತು ದಿನಗಳ ಕಾಲ ಮುಗಿಸಿದೆ. ಎರಡನೇ ಹಂತದ ಶೂಟಿಂಗ್‍ಇದೇ ತಿಂಗಳು ಕೊನೆವಾರದಲ್ಲಿ ಶುರುವಾಗಲಿದೆ.ಚಿತ್ರೀಕರಣ ನಡೆಯುವ ವೇಳೆ ಭಾರಿಗಾತ್ರದ ಹೆಬ್ಬಾವು ಕಾಣಿಸಿಕೊಂಡಿದ್ದು, ನಾಯಕಿ ಸ್ಪೂರ್ತಿಉಡಿಮನೆ ಕೂದಲೆಳೆ ಅಂತರದಲ್ಲಿಅಪಾಯದಿಂದ ಪಾರಾಗಿದ್ದಾರೆಎಂದು ನಿರ್ದೇಶಕಕಿರಣ್‍ಸೂರ್ಯ ತಿಳಿಸಿದ್ದಾರೆ.

ಹಿರಿಯ ನಟ ಕಾಶಿನಾಥ್ ಪುತ್ರ ಅಭಿಮನ್ಯುಕಾಶಿನಾಥ್ ಗ್ಯಾಪ್ ನಂತರ ನಾಯಕನಾಗಿಅಭಿನಯಿಸುತ್ತಿದ್ದಾರೆ. ತಾರಗಣದಲ್ಲಿ ಬಲರಾಜವಾಡಿ, ವಿಜಯಶ್ರೀ, ಗಣೇಶ್‍ನಾರಾಯಣ್, ರವಿಕುಮಾರ್, ಶೊಭನ್, ಕಿಶೋರ್, ಅಶ್ವಿನಿ ಮುಂತಾದವರ ನಟನೆಇದೆ. ಕತೆ,ಚಿತ್ರಕತೆ,ಸಂಭಾಷಣೆಯಜವಬ್ದಾರಿಯನ್ನು ನಿರ್ದೇಶಕರು ವಹಿಸಿಕೊಂಡಿದ್ದಾರೆ. ಎರಡು ಹಾಡುUಳಿಗೆ ಗಣೇಶ್‍ನಾರಾಯಣ್‍ರಾಗಒದಗಿಸುತ್ತಿದ್ದಾರೆ. ಸುದರ್ಶನ್‍ಆರ್ಟ್ಸ್ ಲಾಂಛನದಲ್ಲಿ ನಂದೀಶ್ ಎಂ.ಸಿ.ಗೌಡ ಹಾಗೂ ಜತಿನ್.ಜಿ.ಪಟೇಲ್ ಸಿನಿಮಾ ಕೃಷಿಗೆ ಬಂಡವಾಳ ಹೂಡುತ್ತಿದ್ದಾರೆ.
ಸಿನಿ ಸರ್ಕಲ್.ಇನ್ ನ್ಯೂಸ್
21/03/20

For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore