HOME
CINEMA NEWS
GALLERY
TV NEWS
REVIEWS
CONTACT US
ತಪ್ಪು ಮಾಡಬೇಡಿ ಎಂದು ಅರಿವು ಮೂಡಿಸುವ ಚಿತ್ರ
ಇತ್ತೀಚೆಗೆ ಕೆಲವು ಚಿತ್ರಗಳು ತಮ್ಮ ಕಥಾಹಂದರದ ಮೂಲಕ ಸುದ್ದಿ ಮಾಡಿದರೆ, ಇನ್ನು ಹಲವು ಸಿನಿಮಾಗಳು ತಮ್ಮ ಶೀರ್ಷಿಕೆಯಿಂದಲೇ ಸದ್ದು ಮಾಡುತ್ತಿವೆ. ತೀರಾ ವಿಚಿತ್ರ ಎನಿಸುವ ಟೈಟಲ್‍ಗಳು ನೋಡುಗರ ಮನಸೆಳಯಲು ಬರುತ್ತಿದೆ. ಅದರ ಸಾಲಿಗೆ ‘ಡಾ.56’ ಚಿತ್ರ ಸೇರ್ಪಡೆಯಾಗಿದೆ. 1956 ರಿಂದ 2019ರ ವರೆಗೆ, ಸಿರಂಜ್ ಪೋಸ್ಟರ್‍ನಲ್ಲಿ ಕಾಣಿಸಿಕೊಂಡಿದ್ದು, ಸೈನ್ಸ್ ಫಿಕ್ಷನ್ ಮರ್ಡರ್ ಮಿಸ್ಟರಿ ಕತೆಯಾಗಿದೆ. ಚೂಚ್ಚಲಬಾರಿ ನಿರ್ದೇಶನ ಮಾಡುತ್ತಿರುವ ರಾಜಿಆನಂದ್‍ಲೀಲಾ ಹೇಳುವಂತೆ 1956 ರಿಂದ 2019ರ ವರೆಗೂ ಮನುಷ್ಯನಾದವನು ತನಗೆ ಅರಿವಿಲ್ಲದಂತೆ ಯಾವುದಾದರೂ ತಪ್ಪನ್ನು ಮಾಡುತ್ತಾನೆ. ಇದನ್ನು ಮಾಡಬೇಡಿ ಎಂದು ಅರಿವು ಮೂಡಿಸುವ ಪ್ರಂiÀತ್ನ ಇದಾಗಿದೆ. ತಪ್ಪು ಯಾವುದೆಂದು ಹೇಳಿದರೆ ಕತೆಯ ಸುಳಿವು ಬಿಟ್ಟುಕೊಟ್ಟಂತೆ ಆಗುತ್ತದೆ. ಸಿನಿಮಾವು ತೆರೆಗೆ ಬರುವುದರೊಳಗೆ ಮುಂದಿನ ವರ್ಷ ಬರುವ ಕಾರಣ 2019 ಇಡಲಾಗಿದೆ ಅಂತ ಸಮರ್ಥನೆ ಉತ್ತರ ಕೊಡುತ್ತಾರೆ.

ಕತೆ,ಚಿತ್ರಕತೆ ಬರೆದು ಎರಡನೆ ಬಾರಿ ನಾಯಕ, ಜೊತೆಗೆ ಹಣ ಹೂಡುತ್ತಿರುವ ಪ್ರವೀಣ್‍ರೆಡ್ಡಿ ಶೀರ್ಷಿಕೆ 56, ಇದಕ್ಕೆ 56ನೇ ನಿಮಿಷಕ್ಕೆ ಆತನ ಸಾವು, ಬದುಕು ಬರುತ್ತದೆ. ಅದನ್ನು ಹೇಗೆ ಎದುರಿಸುತ್ತಾನೆ. ಅದು ಏನು ಅಂತ ಚಿತ್ರ ನೋಡಿದರೆ ತಿಳಿಯಲಿದೆ. ಮತ್ತು ನಾವುಗಳು ಹುಟ್ಟಿದಾಗಿನಿಂದ ಒಂದು ವಸ್ತುವನ್ನು ಉಪಯೋಗಿಸುತ್ತಾ ಬಂದಿದ್ದೇವೆ. ಇದನ್ನು ನಿಲ್ಲಿಸಿ ಎಂದು ಸನ್ನಿವೇಶದಲ್ಲಿ ಬರಲಿದೆ. ತೀರ್ಮಾನ ಜನರಿಗೆ ಬಿಟ್ಟಿದ್ದಂತೆ.

ಸಿಬಿಐ ಅಧಿಕಾರಿಯಾಗಿ ಪ್ರಿಯಾಮಣಿ ನಟನೆ ಮಾಡುತ್ತಿರುವುದು ಪ್ಲಸ್ ಪಾಯಿಂಟ್ ಆಗಿದೆ. ಹಾಗಂತ ಇವರಿಗೆ ಫೈಟ್, ಡ್ಯಾನ್ಸ್, ಡೈಲಾಗ್‍ಗಳು ಇರುವುದಿಲ್ಲ. 360 ಡಿಗ್ರಿ ಎನ್ನುವಂತೆ ಮುಂದೆ ಸಂಭವಿಸುವ ಅಪರಾಧಗಳನ್ನು ತಡೆಗಟ್ಟಲು ಕ್ರಮ ತೆಗೆದುಕೊಳ್ಳುವ ತೂಕದ ಪಾತ್ರವಾಗಿದೆ. ತಾರಬಳಗದಲ್ಲಿ ದೀಪಕ್‍ಶೆಟ್ಟಿ, ರಮೇಶ್‍ಭಟ್, ಆಕಾಶ್, ವೀಣಾಪೊನ್ನಪ್ಪ, ರುಪೇಶ್, ಗಿರೀಶ್‍ಜತ್ತಿ, ಸೌಮ್ಯರಾವ್ ಮುಂತಾದವರು ಬಣ್ಣ ಹಚ್ಚುತ್ತಿದ್ದಾರೆ.

ಎರಡು ಹಾಡುಗಳಿಗೆ ರಾಗ ಒದಗಿಸುತ್ತಿರುವ ನೊಬಿನ್‍ಪೌಲ್‍ಗೆ ಹಿನ್ನಲೆ ಸಂಗೀತ ಛಾಲೆಂಜ್ ಆಗಿದೆಯಂತೆ. ಶಂಕರ್‍ರಮಣಿ ಸನ್ನಿವೇಶಗಳಿಗೆ ಮಾತುಗಳನ್ನು ಪೋಣಿಸುತ್ತಿದ್ದಾರೆ. ಛಾಯಗ್ರಹಣ ರಾಕೇಶ್.ಸಿ.ತಿಲಕ್, ವಿಎಫ್‍ಎಕ್ಸ್ ಪ್ರಣವ್, ಸಂಕಲನ ವಿಶ್ವ ಅವರದಾಗಿದೆ. ಪ್ರಚಾರದ ಮೊದಲ ಹಂತವಾಗಿ ಮೋಷನ್ ಪೋಸ್ಟರ್‍ದಲ್ಲಿ ಸಿನಿಮಾವು ಮನರಂಜನೆ ಅಲ್ಲ, ಭವಿಷ್ಯ ಇದೆ ಎಂದು ಹೇಳಿಕೊಂಡಿದೆ. ಕನ್ನಡ ಮತ್ತು ತಮಿಳು ಭಾಷೆಯಲ್ಲಿ ನಿರ್ಮಾಣವಾಗುತ್ತಿರುವುದು ವಿಶೇಷ. ಎಂಟರಿಂದ ಚಿತ್ರೀಕರಣಕ್ಕೆ ಚಾಲನೆ ಸಿಗಲಿದೆ.
ಸಿನಿ ಸರ್ಕಲ್.ಇನ್ ನ್ಯೂಸ್
1/12/18


For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore