HOME
CINEMA NEWS
GALLERY
TV NEWS
REVIEWS
CONTACT US
ಇಬ್ಬರು ನಾಯಕಿಯರ ಡಬ್ಬಲ್ ಇಂಜಿನ್
ಪಟ್ಟಣ, ಹಳ್ಳಿಗಳಲ್ಲಿ ‘ಡಬ್ಬಲ್ ಇಂಜಿನ್’ ಎಂದರೆ ಬೇರೆಯದೆ ರೀತಿಯಲ್ಲಿ ಅರ್ಥೈಸಿಕೊಳ್ಳುವುದುಂಟು. ಈಗ ಇದೇ ಹೆಸರಿನಲ್ಲಿ ಸಿನಿಮಾವೊಂದು ಸಿದ್ದವಾಗಿದೆ. ಮೂರು ಹಳ್ಳಿಯ ಮುಗ್ದ ಹುಡುಗರು ಧಿಡೀರ್ ಶ್ರೀಮಂತರಾಗುವ ಪಸೆಯಿಂದ ಕೆಟ್ಟದಾರಿಗೆ ಹೋಗುತ್ತಾರೆ. ಮುಂದೆ ಪರಿಪಾಟಲುಗಳನ್ನು ಅನುಭವಿಸಿ, ಅದರಿಂದ ಹೇಗೆ ಹೊರಗೆ ಬರುತ್ತಾರೆಂದು ಹಾಸ್ಯದ ಮೂಲಕ ಹೇಳಲಾಗಿದೆ. ಮುಖ್ಯವಾಗಿ ಯುವಕರಿಗೆ ಸಂದೇಶವನ್ನು ಹೇಳಿರುವುದು ಹಾಗೆಯೇ ಕತೆಗೆ ಪೂರಕವಾಗಿ ಟೈಟಲ್ ಇಡಲಾಗಿದೆ ಎಂದು ಬಾಂಬೆ ಮಿಠಾಯಿದಲ್ಲಿ ಪ್ರೇಕ್ಷಕರಿಗೆ ಮಿಠಾಯಿ ನೀಡಿದ್ದ ನಿರ್ದೇಶಕ ಚಂದ್ರಮೋಹನ್ ಹೇಳುತ್ತಾರೆ. ಮೂವರು ಹುಡುಗರಾಗಿ ಚಿಕ್ಕಣ್ಣ, ಪ್ರಭು, ಅಶೋಕ್ ಇದ್ದಾರೆ. ಸುಮನ್‍ರಂಗನಾಥ್ ಅವರೊಂದಿಗೆ ತೆರಹಂಚಿಕೊಂಡಿದ್ದು ಚಿಕ್ಕಣ್ಣರಿಗೆ ಖುಷಿ ಆಗಿದೆಯಂತೆ. ಹಾಗಂತ ಜೋಡಿಯಲ್ಲ ಎಂಬುದು ನಿಮ್ಮ ಗಮನಕ್ಕೆ ಇರಲಿ.

ಪ್ರಿಯಾಂಕಮಲ್ಮಾಡ್‍ಗೆ ಜೋಡಿಯಾಗಿ ಪ್ರಭು. ಕಲಾವಿದರು ಆಂಜನೇಯನ ಬಾಲದಂತೆ ಇರುವ ಚಿತ್ರದಲ್ಲಿ ಸಾಧುಕೋಕಿಲ, ಸುಚೇಂದ್ರಪ್ರಸಾದ್, ದತ್ತಣ್ಣ, ಅಚ್ಯುತಕುಮಾರ್, ಶೋಭರಾಜ್ ಇನ್ನು ಮುಂತಾದವರ ನಟನೆ ಇದೆ. ನಾಲ್ಕು ಹಾಡುಗಳಿಗೆ ವೀರ್‍ಸಮರ್ಥ್ ಸಂಗೀತ ಸಂಯೋಜಿಸಿದ್ದಾರೆ. ಪಾತ್ರದ ಹೆಸರಿನೊಂದಿಗೆ ಊರಿನ ಪರಿಚಯ ಮಾಡಿಸಿದ ಟ್ರೈಲರ್ ನಗೆ ತರಿಸಿತು. ಅರುಣ್‍ಕುಮಾರ್.ಎನ್., ಶ್ರೀಕಾಂತ್.ಬಿ.ಮಠಪತಿ, ಮಂದಾರ.ಎ, ಮಧುಶುಂಜಿಕಾಫಿ, ಮಂಜುನಾಥ್‍ಮಂಜಪ್ಪ, ಪದ್ಮಾಕೃಷ್ಣಮೂರ್ತಿ ಮತ್ತು ಆರ್.ರಾಜು ನಿರ್ಮಾಣ ಮಾಡಿರುವ ಚಿತ್ರವು ಮುಂದಿನ ತಿಂಗಳು ಬಿಡುಗಡೆಯಾಗುವ ಸಾದ್ಯತೆ ಇದೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
15/05/18

For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore