HOME
CINEMA NEWS
GALLERY
TV NEWS
REVIEWS
CONTACT US
ಸಾಲು ಸಾಲು ಚಿತ್ರಗಳ ನಡುವೆ ದಿವಂಗತ
ಕಳದೆರಡು ತಿಂಗಳುಗಳಿಂದ ವಾರಕ್ಕೆ ಕಡಿಮೆ ಎಂದರೂ 3-4 ನಾಲ್ಕು ಚಿತ್ರಗಳು ತೆರೆ ಕಾಣುತ್ತಿದೆ. ಈ ಸಾಲುಗಳ ನಡುವೆ ‘ದಿ!! ಮಂಜುನಾಥನ ಗೆಳೆಯರು’ ಚಿತ್ರವು ಕ್ರೈಮ್, ಥ್ರಿಲ್ಲರ್ ಕತೆಯಾಗಿದೆ. ಐದು ಇಂಜಿನಿಯರಿಂಗ್ ಕಾಲೇಜು ಹುಡುಗರು ತುಂಬ ವರ್ಷಗಳ ನಂತರ ಪೋಲೀಸ್ ಠಾಣೆಯಲ್ಲಿ ಭೇಟಿಯಾಗುತ್ತಾರೆ. ಆಗ ಸಾಕಷ್ಟು ತಿರುವುಗಳು, ಹಾಸ್ಯ, ಪ್ರೀತಿ ಸಂಬಂದಗಳು ಬಿಚ್ಚಿಕೊಂಡಾಗ ಮಂಜುನಾಥನ ಸನ್ನಿವೇಶಗಳು ಯಾವ ರೀತಿ ಬರುತ್ತದೆಂದು 2.03 ಗಂಟೆಯಲ್ಲಿ ನವಿರಾಗಿ ತೋರಿಸಲಾಗಿದೆ. ಎಣ್ಣೆ ಪಾರ್ಟಿ ಕಿರುಚಿತ್ರ ನಿರ್ದೇಶಿಸಿ ಹೆಸರು ಮಾಡಿ, ಪ್ರೇರಿತಗೊಂಡ ಎನ್.ಡಿ.ಅರುಣ್ ರಚನೆ, ಚಿತ್ರಕತೆ, ಸಾಹಿತ್ಯ, ನಿರ್ದೇಶನದ ಜೊತೆಗೆ ಹಣ ಹೂಡಿದ್ದಾರೆ. ಇವರು ಸ್ಕಿಪ್ಟ್ ಸಿದ್ದಪಡಿಸಲು ಏಳು ತಿಂಗಳು ಸಮಯ ತೆಗೆದುಕೊಂಡಿದ್ದಾರಂತೆ. ಮಾಜಿ ಐಬಿಎಂ ಉದ್ಯೋಗಿ ರುದ್ರಪ್ರಯೋಗ್ ನಾಯಕ. ಕಿರಿಕ್ ಪಾರ್ಟಿಯಲ್ಲಿ ನಟಿಸಿದ್ದ ಶಂಕರ್‍ಮೂರ್ತಿ ಅವರೊಂದಿಗೆ ಮೋಹನ್‍ದಾಸ್, ಸುಂಗಾರಿನಾಗರಾಜ್, ನವೀನ್, ಅವಿನಾಶ್‍ಮುದ್ದಪ್ಪ, ಪೋಲೀಸ್ ಆಯುಕ್ತರಾಗಿ ಸತ್ಯಜಿತ್, ಮತ್ತು ಕಲೆ ಜವಬ್ದಾರಿಯನ್ನು ಹೊತ್ತುಕೊಂಡಿದ್ದ ರವಿಪೂಜಾರ್ ಕೆಲಸದ ಜೊತೆಗೆ ಬಣ್ಣ ಹಚ್ಚಿದ್ದಾರೆ. ಬಾಂಬೆ ಮೂಲದ ಶೀತಲ್‍ಪಾಂಡ್ಯ ನಾಯಕಿ. ಮಂಜುನಾಥನಾಗಿ ಸಚ್ಚಿನ್ ಇಂಜಿನಿಯರಿಂಗ್ ಮುಗಿಸಿ, ಮೋಸ ಮಾಡುತ್ತಾ ಆಕಸ್ಮಿಕವಾಗಿ ಸಾವಿಗೆ ಶರಣಾಗುತ್ತಾನೆ. ಅದು ಏನೆಂದು ಚಿತ್ರ ನೋಡಿದರೆ ತಿಳಿಯುತ್ತದಂತೆ.

ನಾಲ್ಕು ಹಾಡುಗಳಿಗೆ ವಿನಯ್‍ಕುಮಾರ್ ರಾಗ ಒದಗಿಸಿದ್ದರೆ, ಹಿನ್ನಲೆ ಸಂಗೀತವನ್ನು ಸತೀಶ್‍ಆರ್ಯನ್ ನಿರ್ವಹಿಸಿದ್ದಾರೆ. ಸಂಕಲನ ಸಿ.ಕೆ.ಕುಮಾರ್, ಛಾಯಗ್ರಹಣ ಪೂರ್ಣ-ಮೊಹಮ್ಮದ್‍ಆಮೀನ್ ಅವರದಾಗಿದೆ. ಪ್ರಚಾರದ ಸಲುವಾಗಿ ಬೆಂಕಿಪೊಟ್ಟಣದಲ್ಲಿ ಚಿತ್ರದ ವಿವರವನ್ನು ಮುದ್ರಣ ಮಾಡಿಸಲಾಗಿದೆ. ಯುಎ ಪ್ರಮಾಣ ಪತ್ರ ಪಡೆದುಕೊಂಡಿರುವ ಸಿನಿಮಾವು ಆಗಸ್ಟ್ 17ರಂದು ಸುಮಾರು 35 ಕೇಂದ್ರಗಳಲ್ಲಿ ತೆರೆಕಾಣಿಸಲು ನಿರ್ಮಾಪಕರು ಸಿದ್ದತೆಗಳನ್ನು ಮಾಡಿಕೊಂಡಿದ್ದಾರೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
7/08/18



For advertisements contact editor
K N Nagesh Kumar, Photo Journalist
Website Desined by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore