HOME
CINEMA NEWS
GALLERY
TV NEWS
REVIEWS
CONTACT US
ಹಲೋ ಯಮ ಖ್ಯಾತಿಯ ನಿರ್ದೇಶಕ ಇನ್ನಿಲ್ಲ
ಭದ್ರಕಾಳಿ ಚಿತ್ರದ ಮೂಲಕ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದ ಎ.ಆರ್.ಬಾಬು ಅವರು ಕಾಶಿನಾಥ್, ದೊಡ್ಡಣ್ಣ, ಸಾಧುಕೋಕಿಲ ಅಭಿನಯಿಸಿದ ‘ಹಲೋ ಯಮ’ ಸಿನಿಮಾ ಹಿಟ್ ಆಗಿದ್ದರಿಂದ ಹೆಸರು ತಂದುಕೊಟ್ಟಿತ್ತು. ನಂತರ ಜಿಬೂಂಬಾ, ಆಂದ್ರಹೆಂಡ್ತಿ, ಆಗೋದೆಲ್ಲ ಒಳ್ಳೆದಕ್ಕೆ ಮತ್ತು ಸೃಜನ್‍ಲೋಕೇಶ್ ಅಭಿನಯದ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳಿದ್ದರು. ಕತೆ,ಚಿತ್ರಕತೆ ಬರೆಯುವುದಲ್ಲಿ ನಿಸ್ಸೀಮರಾಗಿದ್ದ ಇವರ ಬಳಿ ಜೋಗಿ ಪ್ರೇಮ್ ಸಹಾಯಕರಾಗಿ ಅನುಭವ ಪಡೆದುಕೊಂಡಿದ್ದರು. ಕೆಲವು ವರ್ಷಗಳಿಂದ ಖಾಯಿಲೆಯಿಂದ ಬಳಲುತ್ತಿದ್ದ ಬಾಬು ಚಿಕಿತ್ಸೆ ಫಲಕಾರಿಯಾಗದೆ ನಗರದ ಅಫೋಲೋ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಪುತ್ರ ಸಹ ಅಪ್ಪನಂತೆ ಚಿತ್ರರಂಗದಲ್ಲಿ ತೊಡಗಿಕೊಂಡಿದ್ದಾರೆ. ಇವರ ಆತ್ಮಕ್ಕೆ ಶಾಂತಿ ಸಿಗಲೆಂದು ‘ಸಿನಿ ಸರ್ಕಲ್.ಇನ್ ನ್ಯೂಸ್’ ದೇವರಲ್ಲಿ ಪ್ರಾರ್ಥಿಸುತ್ತದೆ.
ಸಿನಿ ಸರ್ಕಲ್.ಇನ್ ನ್ಯೂಸ್
4/05/18
For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore