HOME
CINEMA NEWS
GALLERY
TV NEWS
REVIEWS
CONTACT US

ಅಗಲಿದ ಮಂಜುನಾಥನ ಗೆಳಯರ ಕಥನ
ಚಿತ್ರದ ಶೀರ್ಷಿಕೆಯಲ್ಲಿ ಲೇಟ್ ಎಂದು ಹೇಳಿಕೊಂಡಿರುವ ‘ದಿ!! ಮಂಜುನಾಥನ ಗೆಳೆಯರು’ ಚಿತ್ರವು ಕ್ರೈಮ್, ಥ್ರಿಲ್ಲರ್ ಕತೆಯಾಗಿದೆ. ಐದು ಇಂಜಿನಿಯರಿಂಗ್ ಕಾಲೇಜು ಹುಡುಗರು ತುಂಬ ವರ್ಷಗಳ ನಂತರ ಪೋಲೀಸ್ ಠಾಣೆಯಲ್ಲಿ ಭೇಟಿಯಾಗುತ್ತಾರೆ. ಆಗ ಸಾಕಷ್ಟು ತಿರುವುಗಳು, ಹಾಸ್ಯ, ಪ್ರೀತಿ ಸಂಬಂದಗಳು ಬಿಚ್ಚಿಕೊಂಡಾಗ ಮಂಜುನಾಥನ ಸನ್ನಿವೇಶಗಳು ಯಾವ ರೀತಿ ಬರುತ್ತದೆಂದು 2.03 ಗಂಟೆಯಲ್ಲಿ ನವಿರಾಗಿ ತೋರಿಸಲಾಗಿದೆ. ಎಣ್ಣೆ ಪಾರ್ಟಿ ಕಿರುಚಿತ್ರ ನಿರ್ದೇಶಿಸಿ ಹೆಸರು ಮಾಡಿ, ಪ್ರೇರಿತಗೊಂಡ ಎನ್.ಡಿ.ಅರುಣ್ ರಚನೆ, ಚಿತ್ರಕತೆ, ಸಾಹಿತ್ಯ, ನಿರ್ದೇಶನದ ಜೊತೆಗೆ ಹಣ ಹೂಡಿದ್ದಾರೆ. ಇವರು ಸ್ಕಿಪ್ಟ್ ಸಿದ್ದಪಡಿಸಲು ಏಳು ತಿಂಗಳು ಸಮಯ ತೆಗೆದುಕೊಂಡಿದ್ದಾರಂತೆ. ಮಾಜಿ ಐಬಿಎಂ ಉದ್ಯೋಗಿ ರುದ್ರಪ್ರಯೋಗ್ ನಾಯಕ. ಕಿರಿಕ್ ಪಾರ್ಟಿಯಲ್ಲಿ ನಟಿಸಿದ್ದ ಶಂಕರ್‍ಮೂರ್ತಿ ಅವರೊಂದಿಗೆ ಮೋಹನ್‍ದಾಸ್, ಸುಂಗಾರಿನಾಗರಾಜ್, ಸಚಿನ್, ನವೀನ್, ಅವಿನಾಶ್‍ಮುದ್ದಪ್ಪ, ಪೋಲೀಸ್ ಆಯುಕ್ತರಾಗಿ ಸತ್ಯಜಿತ್, ಮತ್ತು ಕಲೆ ಜವಬ್ದಾರಿಯನ್ನು ಹೊತ್ತುಕೊಂಡಿದ್ದ ರವಿಪೂಜಾರ್ ಕೆಲಸದ ಜೊತೆಗೆ ಬಣ್ಣ ಹಚ್ಚಿದ್ದಾರೆ. ಬಾಂಬೆ ಮೂಲದ ಶೀತಲ್‍ಪಾಂಡ್ಯ ನಾಯಕಿ.

ನಾಲ್ಕು ಹಾಡುಗಳಿಗೆ ವಿನಯ್‍ಕುಮಾರ್ ರಾಗ ಒದಗಿಸಿದ್ದರೆ, ಹಿನ್ನಲೆ ಸಂಗೀತವನ್ನು ಸತೀಶ್‍ಆರ್ಯನ್ ನಿರ್ವಹಿಸಿದ್ದಾರೆ. ಸಂಕಲನ ಸಿ.ಕೆ.ಕುಮಾರ್, ಛಾಯಗ್ರಹಣ ಪೂರ್ಣ-ಮೊಹಮ್ಮದ್‍ಆಮೀನ್ ಅವರದಾಗಿದೆ. ಯುಎ ಪ್ರಮಾಣ ಪತ್ರ ಪಡೆದುಕೊಂಡಿರುವ ಸಿನಿಮಾವನ್ನು ಸದ್ಯದಲ್ಲೆ ತೆರೆ ಕಾಣಿಸಲು ನಿರ್ಮಾಪಕರು ಯೋಜನೆ ಹಾಕಿಕೊಂಡಿದ್ದಾರೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
10/07/18

For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore