HOME
CINEMA NEWS
GALLERY
TV NEWS
REVIEWS
CONTACT US
ಹೊಸಬರ ಧೀರನ್
ಟೆಕ್ಕಿ ಸ್ವಾಮಿ.ವೈ.ಬಿ.ಎನ್ ‘ಧೀರನ್’ ಚಿತ್ರಕ್ಕೆರಚನೆ,ಎರಡು ಹಾಡಿಗೆ ಸಾಹಿತ್ಯ, ನಿರ್ದೇಶನಜೊತೆಗೆ ನಾಯಕನಾಗಿ ಪಾದಾರ್ಪಣೆ ಮಾಡುತ್ತಿರುವುದು ಹೊಸ ಅನುಭವ. ಹತ್ತು ವರ್ಷಗಳ ಕಾಲ ಹಲವು ನಿರ್ದೇಶಕರ ಬಳಿ ಅನುಭವ ಪಡೆದುಕೊಂಡು ಸ್ವತಂತ್ರವಾಗಿಆಕ್ಷನ್‍ಕಟ್ ಹೇಳುತ್ತಿದ್‍ದಾರೆ. ದಿ ರನ್, ಥೀರೇಂದ್ರಕುಮಾರ್‍ಅಂತಲೂ ಶೀರ್ಷಿಕೆಗೆ ಹೋಲಿಸಬಹುದು. ಪ್ರಸಕ್ತ ಸಮಾಜದಲ್ಲಿ ನಡೆಯುವ ಘಟನೆಗಳನ್ನು ಸನ್ನಿವೇಶಗಳೊಂದಿಗೆ ಭಿನ್ನವಾಗಿ ಹೇಳುವ ಪ್ರಯತ್ನ ಮಾಡಲಾಗುತ್ತಿದೆ.ನೋಡುಗನಿಗೆ ನಮ್ಮ ನಡುವಿನ ಕತೆಅಂತ ಭಾವಿಸುವಂತೆ ಮಾಡುತ್ತದೆ.ಇಂದು ಏನೇ ತಪ್ಪು ನಡೆದರೂಜನರು ನೋಡಿಕೊಂಡು ಸುಮ್ಮನಿರುತ್ತಾರೆ.ಬಹುಶ: ಅದನ್ನು ಪ್ರಶ್ನೆ ಮಾಡಿ ಹೋರಾಟ ಮಾಡುವವನಿಗೆ ಧೀರನ್‍ಎಂದುಕರೆಯುತ್ತಾರೆ.

ಮಂಗಳೂರಿನರಕ್ಕಾಶೆಟ್ಟಿ ನಾಯಕಿ. ಪೋಷಕ ಪಾತ್ರಕ್ಕೆ ತೇಜಸ್ವಿನಿ, ತಪ್ಪುದಾರಿಗೆ ಹೋಗುತ್ತಿದ್ದ ಹುಡುಗರುಗಳನ್ನು ಸರಿದಾರಿಗೆತರುವಉತ್ತಮಇನ್ಸ್‍ಪೆಕ್ಟರ್ ಆಗಿ ಪ್ರಮೋದ್‍ಶೆಟ್ಟಿ, ಗಂಭೀರ ಪಾತ್ರದಲ್ಲಿ ಮಿಮಿಕ್ರಿದಯಾನಂದ್, ರಘುಪಾಂಡೇಶ್ವರ್, ರವೀಂದ್ರ, ಭಾಸ್ಕರ್ ಮುಂತಾದವರು ನಟಿಸಿದ್ದಾರೆ. ಆರ್.ಎಸ್.ಗಣೇಶ್‍ನಾರಾಯಣ್ ಸಂಗೀತವಿದೆ.ರಘು.ಎಸ್. ಸಂಕಲನ, ಕಲೈ ನೃತ್ಯ, ಜಿ.ಟಿ.ಶ್ರೀನಿವಾಸ್ ಸಾಹಸ, ಮಾಸ್ತಿ ಸಂಭಾಷಣೆ, ಸಂದೀಪ್‍ಹೊನ್ನಾಳಿ ಛಾಯಾಗ್ರಹಣ ಕೆಲಸ ಮಾಡಿದ್ದಾರೆ. ಚಿತ್ರದಟ್ರೈಲರ್‍ನ್ನು ಶಿವರಾಜ್‍ಕುಮಾರ್ ಬಿಡುಗಡೆ ಮಾಡಿ ಶುಭ ಹಾರೈಸಿರುವುದು ತಂಡಕ್ಕೆ ಖುಷಿ ತಂದಿದೆಯಂತೆ. ಬಾಕಿ ಶೇಕಡ 10 ರಷ್ಟರಚಿತ್ರೀಕರಣವನ್ನುಆದಷ್ಟು ಬೇಗನೆ ಮುಗಿಸಲು ತಂಡವುಯೋಜನೆ ಹಾಕಿಕೊಂಡಿದೆ.ಒಂದಷ್ಟುಸಿನಿಮಾಸಕ್ತರು ಸೇರಿಕೊಂಡುನಿರ್ಮಾಣ ಮಾಡುತ್ತಿದ್ದಾರೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
9/09/19

For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore