HOME
CINEMA NEWS
GALLERY
TV NEWS
REVIEWS
CONTACT US
ಹಾರರ್, ಥ್ರಿಲ್ಲರ್ ದೇವಯಾನಿ
ಭಾರತೀಯ ಸಂಸ್ಕ್ರತಿಯಲ್ಲಿ ಭೂತ, ಪ್ರೇತಗಳನ್ನು ನಂಬುತ್ತಾರೆ. ಅದರ ಆಧಾರದ ಮೇಲೆ ‘ದೇವಯಾನಿ’ ಚಿತ್ರವೊಂದು ಶೇಕಡ 60ರಷ್ಟು ಚಿತ್ರೀಕರಣವನ್ನು ಬೆಂಗಳೂರು, ದೇವದುರ್ಗದಲ್ಲಿ ಮುಗಿಸಿದ್ದಾರೆ. ಸಿನಿಮಾದ ಕುರಿತು ಹೇಳುವುದಾದರೆ ಕಾಲೇಜಿನಲ್ಲಿ ಸಂಶೋಧನೆ ಮಾಡುವ ವಿದ್ಯಾರ್ಥಿಯೊಬ್ಬ ಈ ವಿಷಯದ ಕುರಿತಂತೆ ಪ್ರಯೋಗ ಮಾಡಲು ಪರಕಾಯ ಪ್ರವೇಶ ಮಾಡುತ್ತಾನೆ. ಮುಂದೆ ಪ್ರೀತಿಸಿದವಳಿಂದ ಸಮಸ್ಯೆ ಎದುರಾಗುತ್ತದೆ. ಅದೆಲ್ಲಾವನ್ನು ದಾಟಿಕೊಂಡು ಹೇಗೆ ಹೊರಗೆ ಬರುತ್ತಾನೆಂದು ಹಾರರ್, ಥ್ರಿಲ್ಲರ್ ರೂಪದಲ್ಲಿ ತೋರಿಸುವ ಪ್ರಯತ್ನ ಮಾಡಲಾಗುತ್ತಿದೆ.

ಕಾಲೇಜು ಹುಡುಗನಾಗಿ ಗೋಪಿಕೃಷ್ಣ ನಾಯಕ. ಪ್ರೀತಿಯಲ್ಲಿ ಬಿದ್ದು ಘಟನೆಯದಿಂದ ನರಳುವ ರಾಗ ಮತ್ತು ಎಂಸಿಎ ಮುಗಿಸಿ, ಯಾರು ತಪ್ಪು ಮಾಡುತ್ತಾರೋ ಅವರನ್ನು ಶೀರ್ಷಿಕೆ ರೂಪದಲ್ಲಿ ಶಿಕ್ಷೆಗೆ ಗುರಿಪಡಿಸುವ ಪಾತ್ರದಲ್ಲಿ ಅರ್ಚನಾ, ನಾಯಕಿಯರು. ಕಾಮಿಡಿ ಇನ್ಸೆಪೆಕ್ಟರ್ ಆಗಿ ಕಾಣಿಸಿಕೊಂಡಿರುವ ಅಮೋಘ್ ಉರುಫ್ ಜನಾರ್ಧನ್ ಈ ಬಾರಿ ಅಭಿರಾಮ್ ಹೆಸರಿನೊಂದಿಗೆ ಗುರುತಿಸಿಕೊಂಡಿದ್ದಾರೆ. ಉಳಿದಂತೆ ಬಾಬು, ರೋಹಿತ್, ಪ್ರಕಾಶ್, ಹರೀಶ್, ಪಲ್ಲವಿ, ಅನು, ಮಾಲಿನಿ, ಸುಪ್ರಿಯಾ,. ಸತ್ತೀಗೌಡ, ಕೋವಿರಾಜ್‍ಗುಲ್ಬರ್ಗಾ ಮುಂತಾದವರು ಬಣ್ಣ ಹಚ್ಚಿದ್ದಾರೆ. ಸಮಾಗಮ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳಿದ್ದ ಕಸ್ತೂರಿಜಗನ್ನಾಥ ಚಿತ್ರಕತೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಹಾಡುಗಳಿಗೆ ರಾಂಮೋಹನ್.ಇ.ಡಿ. ಸಂಗೀತ ಒದಗಿಸಿದ್ದು, ಸಾಹಸ ರಾಖಿರಮೇಶ್, ಛಾಯಾಗ್ರಹಣ ರವಿ,ಕಾರ್ಯಕಾರಿ ನಿರ್ಮಾಪಕ ಮಂಜುನಾಥ ಅವರದಾಗಿದೆ. ಕುಮ್ಮಟ್ಟಿಶೇಷಾರೆಡ್ಡಿ, ಕುಮ್ಮಟ್ಟಿಸುಬ್ಬರಾಮಿರೆಡ್ಡಿ ಸಹ ನಿರ್ಮಾಪಕರು.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
12/03/19


For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore