HOME
CINEMA NEWS
GALLERY
TV NEWS
REVIEWS
CONTACT US

ಬಿಡುಗಡೆಯ ಹಾದಿಯಲ್ಲಿ ದೇವರು ಬೇಕಾಗಿದ್ದಾರೆ
ರಸ್ತೆ ಅಪಘಾತದಲ್ಲಿ ತನ್ನ ಕುಟುಂಬದವರನ್ನು ಕಳೆದುಕೊಂಡ ಆರು ತಿಂಗಳ ಮಗು ಅಪ್ಪುವನ್ನು ಊರಿನ ಮುಖ್ಯಸ್ಥ ರಂಗಣ್ಣ ಸಾಕುತ್ತಾರೆ. ಆತನಿಗೆ ಬುದ್ದಿ ಬಂದಾಗ ರಂಗಣ್ಣ ‘ಭಕ್ತಪ್ರಹ್ಲಾದ’ ಚಿತ್ರದ ಡಾ.ರಾಜ್‍ಕುಮಾರ್,ಪುನೀತ್‍ರಾಜ್‍ಕುಮಾರ್ ಡೈಲಾಗ್‍ನ್ನು ತೋರಿಸುತ್ತಾ ರಾಜಣ್ಣ ದೇವರನ್ನು ನೋಡಲು ಹೋಗಿದ್ದಾರೆಂದು ಹೇಳುತ್ತಾರೆ. ಇದನ್ನು ಅರಿತ ಮುಗ್ದ ಬಾಲಕನು ತನ್ನ ತಾಯಿ ದೇವರ ಬಳಿ ಇದ್ದಾರೆಂದು ತಿಳಿದು ದೇವರನ್ನು ಹುಡುಕುತ್ತಾ ಹೊರಡುವ ಕತೆಯೇ ‘ದೇವರು ಬೇಕಾಗಿದ್ದಾರೆ’ ಚಿತ್ರದ ಒಂದು ಏಳೆಯ ಸಾರಾಂಶವಾಗಿದೆ. ಭಾವನೆಗಳ ಸಮೂಹದಲ್ಲಿ ಸನ್ನಿವೇಶಗಳು ಇರಲಿದೆ. ಕೈವಾರ, ಗುಡಿಬಂಡೆ, ಬಾಗೇಪಲ್ಲಿ, ಬೆಂಗಳೂರು ಸುತ್ತ ಮುತ್ತ 33 ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ. ಜ್ಯೂವೇನ್‍ಸಿಂಗ್ ಸಂಗೀತವಿದೆ.

ಮಾಸ್ಟರ್‍ಅನೂಪ್ ಮುಖ್ಯ ಪಾತ್ರಕ್ಕೆ ಬಣ್ಣ ಹಚ್ಚಿದ್ದಾನೆ. ಈತನನ್ನು ಕಾಪಾಡುವ ಪಾತ್ರದಲ್ಲಿ ಹಿರಿಯ ನಟ ಶಿವರಾಮ್, ಪತ್ನಿ,ಸಂದ್ಗಿದ ತಾಯಿಯಾಗಿ ಶಾರದಾಜಾದೂಗರ್, ವಾರ್ಡನ್ ಆಗಿ ಶ್ರೀನಾಥ್, ಬಾಲಕನಿಗೆ ಸಹಾಯ ಮಾಡುವ ಸತ್ಯನಾಥ್, ಅವಕಾಶಕ್ಕಾಗಿ ಅಲೆದಾಡುವ ಪಾತ್ರಕ್ಕೆ ಪ್ರಸಾದ್‍ವಸಿಷ್ಟ ಮುಂತಾದವರ ತಾರಬಳಗವಿದೆ. ಮೂಲತ: ಸಂಕಲನಕಾರ ಆಗಿರುವ ಕೇಂಜ ಚೇತನ್‍ಕುಮಾರ್ ಕತೆ,ಚಿತ್ರಕತೆ ಬರೆದು ನಿರ್ದೇಶನ ಮಾಡಿದ್ದಾರೆ. ಪ್ರಪಂಚದಲ್ಲಿ ಸುಮಾರು ಎರಡು ಕೋಟಿ ಅನಾಥಮಕ್ಕಳು ಇದ್ದಾರೆ. ಮಕ್ಕಳಿಲ್ಲದವರು ಇಂತಹವನ್ನು ತೆಗೆದುಕೊಂಡರೆ ಅವರಿಗೂ ಆಸರೆ ನೀಡಿದಂತೆ ಆಗುತ್ತದೆಂದು ಅಭಿಪ್ರಾಯಪಟ್ಟಿದ್ದಾರೆ. ಛಾಯಾಗ್ರಹಣ ರುದ್ರಮುನಿಬೆಲಗೇರೆ ಅವರದಾಗಿದೆ. ಸಿನಿಮಾವು ಶುಕ್ರವಾರದಂದು ತೆರೆಕಾಣಲಿದೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
05/10/19





For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore