HOME
CINEMA NEWS
GALLERY
TV NEWS
REVIEWS
CONTACT US
ಉಪೇಂದ್ರ ಪುತ್ರಿ ಚಿತ್ರದ ಫಸ್ಟ್‍ಲುಕ್ ಬಿಡುಗಡೆ
ರಿಯಲ್‍ಸ್ಟಾರ್ ಉಪೇಂದ್ರ ಪುತ್ರಿ ಚಿತ್ರರಂಗಕ್ಕೆ ಬರುತ್ತಿದ್ದಾರೆಂದು ಸುದ್ದಿ ಹರಡಿತ್ತು. ಅದು ‘ದೇವಕಿ’ ಸಿನಿಮಾದ ಮೂಲಕ ನಿಜವಾಗಿದೆ. ಶೀರ್ಷಿಕೆ ಹೆಸರಿನಲ್ಲಿ ಪ್ರಿಯಾಂಕಾಉಪೇಂದ್ರ ನಟಿಸಿದ್ದಾರೆ. 2016 ಕೊಲ್ಕತ್ತಾದಲ್ಲಿ ನಡೆದ ಹೆಣ್ಣು ಮಕ್ಕಳ ಅಪಹರಣದ ನೈಜ ಘಟನೆಯಾಗಿದ್ದರಿಂದ ಅಲ್ಲಿಯ ಭಾಗದಲ್ಲಿಯೇ ಸಂಪೂರ್ಣ ಚಿತ್ರೀಕರಣವನ್ನು ನಡೆಸಲಾಗಿದೆ. ಶೇಕಡ 70 ಭಾಗದಷ್ಟು ರಾತ್ರಿ ಸನ್ನಿವೇಶಗಳು ಬರಲಿದ್ದು, ಚಿತ್ರದಲ್ಲಿ ಪ್ರಿಯಾಂಕಉಪೇಂದ್ರ-ಐಶ್ವರ್ಯಾಉಪೇಂದ್ರ ತಾಯಿ ಮಗಳಾಗಿ ಕಾಣಿಸಿಕೊಂಡಿರುವುದು ವಿಶೇಷ. ಎಫ್‍ಎಂದಲ್ಲಿ ಜೂನಿಯರ್ ಆರ್‍ಜೆ ಆಗುವುದಕ್ಕಾಗಿ ಅಡಿಷನ್‍ಗೆ ನೀಡಲು ಹೋದಾಗ, ಅಲ್ಲಿಂದ ಕಾಣೆಯಾಗುತ್ತಾರೆ. ಮುಂದೆ ತಾಯಿ ತನ್ನ ಮಗಳನ್ನು ಹೇಗೆ ಹುಡುಕುತ್ತಾರೆ. ಅಮ್ಮ ಮಗಳ ತೊಳಲಾಟ ಹೇಗಿರುತ್ತದೆ ಎಂಬುದು ಒಂದು ಏಳೆಯ ಕತೆಯಾಗಿದೆ.

ಸ್ಟಾರ್ ನಟರ ಮಕ್ಕಳನ್ನು ಮುದ್ದಾಗಿ ಬೆಳೆಸಿರುತ್ತಾರೆ ಎಂಬುದು ಕೇಳಿಬರುತ್ತದೆ. ಆದರೆ ರಾತ್ರಿ ಹೂತ್ತಿನ ಚಿತ್ರೀಕರಣದಲ್ಲಿ ಅಮ್ಮನೊಂದಿಗೆ ಬೆಳಗಿನ ಜಾವದವರೆಗೂ ಪಾಲ್ಗೋಂಡು ತಂಡಕ್ಕೆ ಖುಷಿ ನೀಡಿದ್ದಾರೆ. 10 ವರ್ಷದ ನಂತರ ತಾಯ್ನಾಡಿನಲ್ಲಿ ಮಗಳೊಂದಿಗೆ ಅಭಿನಯಿಸಿದ್ದು ನೆಮ್ಮದಿ ತಂದಿದೆ ಎಂದು ಪ್ರಿಯಾಂಕಾಉಪೇಂದ್ರ ಸಂತಸ ವ್ಯಕಪಡಿಸಿದ್ದಾರೆ. ಮದನ್‍ಬೆಳ್ಳಿಸಾಲು ಸಾಹಿತ್ಯ, ನೊಬಿನ್‍ಪೌಲ್ ಸಂಗೀತ,ಗುರುಪ್ರಸಾದ್‍ಕಶ್ಯಪ್ ಸಂಭಾಷಣೆ ಇದೆ. ಸಂಕಲನ ಸಿ.ರವಿಚಂದ್ರನ್, ಛಾಯಾಗ್ರಹಣ ಹೆಚ್.ಸಿ.ವೇಣು, ಕಲಾ ನಿರ್ದೇಶಕ ಶಿವಕುಮಾರ್ ಅವರದಾಗಿದೆ. ಚಿತ್ರದ ಟ್ರೈಲರ್ ಬುದುವಾರ ಕಲಾವಿದರ ಸಂಘದಲ್ಲಿ ಲೋಕಾರ್ಪಣೆಗೊಂಡಿತು. ಮಗಳ ದೃಶ್ಯಗಳನ್ನು ನೋಡಿದ ಉಪೇಂದ್ರ ಸಂತಸಗೊಂಡು ಪೋಸ್ಟರ್‍ನ್ನು ಬಿಡುಗಡೆ ಮಾಡಿ ತಂಡಕ್ಕೆ ಶುಭ ಹಾರೈಸಿದರು. ಕಲಾವಿದರುಗಳಾದ ಶ್ರೀಧರ್, ಸಂಜೀವ್, ವಾಣಿಜ್ಯ ಮಂಡಳಿ ಕಾರ್ಯದರ್ಶಿ ಬಾ.ಮ.ಹರೀಶ್, ನಟಿ ಪಾರುಲ್‍ಯಾದವ್ ಉಪಸ್ತಿತರಿದ್ದರು. ರವೀಶ್.ಆರ್.ಸಿ ಮತ್ತು ಅಕ್ಷಯ್.ಸಿ.ಎಸ್. ನಿರ್ಮಾಣ ಮಾಡಿರುವ ಚಿತ್ರವು ಸದ್ಯದಲ್ಲೆ ಬಿಡುಗಡೆಯಾಗುವ ಸಾದ್ಯತೆ ಇದೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
14/03/19

For advertisements contact editor
K N Nagesh Kumar, Photo Journalist
Website Desined by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore