HOME
CINEMA NEWS
GALLERY
TV NEWS
REVIEWS
CONTACT US
ಪಾರ್ವತಮ್ಮನ ಟ್ರೈಲರ್ ಬಿಡುಗಡೆ
ಚಿತ್ರರಂಗದ ಅಮ್ಮ ಅಂದರೆ ಅದು ಪಾರ್ವತಮ್ಮರಾಜ್‍ಕುಮಾರ್ ಎಂಬುದು ತಿಳಿದಿರುವ ವಿಷಯ. ಈಗ ‘ಡಾಟರ್ ಆಫ್ ಪಾರ್ವತಮ್ಮ’ ಚಿತ್ರವೊಂದು ಸಿದ್ದಗೊಂಡಿದೆ. ಹಾಗಂತ ಅಮ್ಮನ ಜೀವನ ಕತೆಯಾಗಿರದೆ ತನಿಖೆ ಕುರಿತ ಸಿನಿಮಾವಾಗಿದೆ ಎಂದು ತಂಡವು ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಸ್ಪಷ್ಟಪಡಿಸಿತು. ಡಾಟರ್ ಆಗಿ ಹರಿಪ್ರಿಯಾ ಮಾತನಾಡಿ ಹನ್ನೊಂದು ವರ್ಷಗಳಲ್ಲಿ ಇದು 25ನೇ ಚಿತ್ರವಾಗಿರುವುದು ಸಂತಸ ತಂದಿದೆ. ಶುರುವಿನಲ್ಲಿ ಬಂದಾಗ ಅಮ್ಮನನ್ನು ಭೇಟಿ ಮಾಡಿ ಆರ್ಶಿವಾದ ಪಡೆದುಕೊಂಡಿದ್ದೆ. ಯಾವುದೇ ಹಿನ್ನಲೆ ಇಲ್ಲದೆ ಇಲ್ಲಿಯವರೆಗೂ ಸಾಗುತ್ತಾ ಬಂದಿದ್ದೇನೆ. ತನಿಖಾಧಿಕಾರಿಯಾಗಿ ಮಹತ್ವದ ಕೇಸ್‍ನ್ನು ಭೇದಿಸುವುದೇ ಚಿತ್ರದ ಸಾರಾಂಶವಾಗಿದೆ. ಸುಮಲತಾ ಮೇಡಂ ಜೊತೆ ನಟಿಸಿದ್ದು ಮರೆಯಲಾಗದ ಅನುಭವ ಎಂದರು.

ಪಾರ್ವತಮ್ಮ ಹೆಸರಿಗೆ ಒಂದು ಶಕ್ತಿ, ಪ್ರೀತಿ ಮತ್ತು ಆಕರ್ಷಣೆ ಇದೆ. ಚಿತ್ರದಲ್ಲಿ ಪಾರ್ವತಮ್ಮನಾಗಿ ವೈಯಕ್ತಿಕ ಬದುಕಿನಲ್ಲಿ ಭಾವನೆಗಳು ಬಂದಾಗ ಜೀವನವನ್ನು ಹೇಗೆ ನಿಭಾಯಿಸುತ್ತಾಳೆ. ಮಗಳನ್ನು ಉತ್ತಮ ಸ್ಥಾನದಲ್ಲಿ ತರುವಲ್ಲಿ ಶ್ರಮ ಇರುತ್ತದೆ. ಇಲ್ಲಿಯವರೆಗೂ ಮಾಡಿರದ ಪಾತ್ರವಾಗಿದೆ. ನಿರ್ದೇಶಕರು ಕತೆ ಹೇಳಿದಾಗ ಇದೇ ಟೈಟಲ್ ಫಿಕ್ಸ್ ಆಗಿರಲಿಲ್ಲ. ಶೀರ್ಷಿಕೆ ಮಹಿಳಾ ಆಧಾರಿತ ಕತೆಯಂದು ಹೇಳಲಾಗಿದೆ ಅಂತ ಸುಮಲತಾ ಪಾತ್ರದ ಪರಿಚಯ ಮಾಡಿಕೊಂಡರು.

ಪೂಜಾರಿ ಮಗನಾಗಿ ತಿರುವ ಕೊಡುವ ಪಾತ್ರಕ್ಕೆ ಸೂರಜ್‍ಗೌಡ, ಡಿಲಿವರ್ ಬಾಯ್ ಆಗಿ ಪ್ರಭು, ಅಧಿಕಾರಿಗೆ ಸಹಾಯಕರಾಗಿ ತರಂಗವಿಶ್ವ, ಸಂಗೀತ ನಿರ್ದೇಶಕ ಮಿಥುನ್‍ಮುಕುಂದನ್ ಚುಟುಕು ಮಾತನಾಡಿದರು. ವಿನಯ್‍ರಾಜ್‍ಕುಮಾರ್ ಹಾಗೂ ಶಿಷ್ಯನ ಚಿತ್ರಕ್ಕೆ ಶುಭ ಹಾರೈಸಲು ಪವನ್‍ಒಡೆಯರ್ ಆಗಮಿಸಿದ್ದರು.

ಕತೆ ರಚಿಸಿ ಮೊದಲಬಾರಿ ನಿರ್ದೇಶನ ಮಾಡಿರುವ ಜೆ.ಶಂಕರ್ ಚಿತ್ರಕ್ಕೆ ಶಶಿಧರ.ಕೆ.ಎಂ, ವಿಜಯಲಕ್ಷೀಕೃಷ್ಣೆಗೌಡ, ಸಂದೀಪ್‍ಶಿವಮೊಗ್ಗ ಮತ್ತು ಶ್ವೇತಮಧುಸೂದನ್ ಜಂಟಿಯಗಿ ಹಣ ಹೂಡಿದ್ದಾರೆ.
ಸಿನಿ ಸರ್ಕಲ್.ಇನ್ ನ್ಯೂಸ್
7/10/18
For advertisements contact editor
K N Nagesh Kumar, Photo Journalist
Website Desined by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore