ಉಳಿದ ಭಾಷೆಗಳಲ್ಲಿ ದಂಡು ಪಾಳ್ಯಂ-4 ![]() ‘ದಂಡು ಪಾಳ್ಯಂ-4’ ಚಿತ್ರವು ನವಂಬರ್ಒಂದರಂದುಕನ್ನಡ ಮತ್ತುತೆಲುಗು ಭಾಷೆಯಲ್ಲಿತೆರೆಕಂಡಿತ್ತು. ಅಂದುಕೊಂಡಂತೆ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದೆ. ಇದರನ್ವಯ ಸಂತೋಷಕೂಟದಲ್ಲಿ ನಿರ್ಮಾಪಕ ವೆಂಕಟ್ ಕಹಿ-ಸಹಿ ವಿಷಯಗಳನ್ನು ಹಂಚಿಕೊಂಡರು. ಹಿಂದಿನ ದಂಡು ಪಾಳ್ಯ ನಿರ್ದೇಶಕರಿಂದದ್ರೋಹ,ಮೋಸ ಆಗಿತ್ತು. ಇವರಿಗೇನುಗೊತ್ತಿಲ್ಲವೆಂದು ಆ ಸಮಯದಲ್ಲಿ ಆಟ ಆಡಿಸಿದ್ದಾರೆ. ನಾನೇನು ಕಮ್ಮಿಇಲ್ಲ. ನನ್ನಲ್ಲೂ ಪ್ರತಿಭೆಎಂದುತೋರಿಸುವ ಸಲುವಾಗಿ ಈ ಚಿತ್ರಕ್ಕೆಕತೆ,ಚಿತ್ರಕತೆ ಬರೆದು ಬಂಡವಾಳ ಹಾಕಿದ್ದೇನೆಂದು ಸಂತೋಷಕೂಟದಲ್ಲಿಅನ್ನದಾತರು ಅಂತರಾಳದ ನೋವನ್ನು ಮಾದ್ಯಮದಎದುರು ಹೇಳಿಕೊಂಡರು. ಇನ್ನುಖುಷಿಯ ವಿಚಾರಅಂದರೆ, ಎಸಿಪಿ ಯಾಗಿ ಕಾಣಿಸಿಕೊಂಡಿದ್ದರಿಂದ ಒಂದರೆಡು ಚಿತ್ರಗಳಲ್ಲಿ ಅಭಿನಯಿಸಲುಕರೆ ಬಂದಿದೆ. ಸ್ಟಾರ್ ನಟರ ಕಾಲ್ಶೀಟ್ ಸಿಕ್ಕಿದೆ. ಇದರ ನಂತರಇದೇ ನಿರ್ದೇಶಕರೊಂದಿಗೆ ಹಾಸ್ಯಚಿತ್ರ ಮಾಡಲುಚಿಂತನೆ ನಡೆಸಲಾಗಿದೆ.ಅಪರಾಧವನ್ನು ಈ ರೀತಿ ಮಾಡಬಹುದಾಅಂತ ನೋಡಗರುಅಚ್ಚರಿ ವ್ಯಕ್ತಪಡಿಸಿದ್ದಾರೆ. ಡಿಸೆಂಬರ್ 13ರಿಂದ ತಮಿಳು, ಮಲೆಯಾಳಂ, ಮುಂದೆ ಉಳಿದಆರು ಭಾಷೆಗಳಲ್ಲಿ ಬಿಡುಗಡೆ ಮಾಡಲು ಸಿದ್ದತೆ ಮಾಡಿಕೊಂಡಿದೆ. ಹಿಂದಿನ ಚಿತ್ರಗಳು ಕಾಲ್ಪನಿಕಾಗಿಇದ್ದವು.ಇದರಲ್ಲಿತಂಡವು ಹೇಗೆ ಅಪರಾಧ ಮಾಡುತ್ತಿತ್ತುಎಂಬುದನ್ನುತೋರಿಸಲಾಗಿದೆಯಂತೆ.ಒಬ್ಬರಿಗೆಇಷ್ಟವಾದರೆ ಮತ್ತೋಬ್ಬರ ಪ್ರತಿಕ್ರಿಯೆ ಬೇರೆಯದೆಆಗಿರುತ್ತದೆ. ದೀರ್ಘ ಪಯಣದಲ್ಲಿಇಂತಹ ಪಾತ್ರ ನಿರ್ವಹಿಸಿದ್ದು ಖುಷಿ ನೀಡಿದೆ.ಮುಂದೆಯೂಇಂತಹುದೆ ಅರಸಿ ಬಂದರೆ ನಟಿಸಲು ಸಿದ್ದ ಅಂತಾರೆ ಸುಮನ್ರಂಗನಾಥ್. ನಿರ್ದೇಶಕ ಕೆ.ಟಿ.ನಾಯಕ್, ಕಲಾವಿದರುಗಳಾದ ಸಂಜೀವ್ಕುಮಾರ್, ಅರುಣ್ಬಚ್ಚನ್, ಬುಲೆಟ್ಸೋಮ ಮತ್ತುಜೀವಸೈಮನ್ಹಾಜರಿದ್ದರುಕಡಿಮೆ ಸಮಯತೆಗೆದುಕೊಂಡರು. ಸಿನಿ ಸರ್ಕಲ್.ಇನ್ ನ್ಯೂಸ್ 20/11/19 |
![]() ![]() |
ರಕ್ತಚರಿತ್ರೆಯಲ್ಲಿ ನೆತ್ತರ ವಾಸನೆ ![]() ದಂಡು ಪಾಳ್ಯ ಮೂರು ಸೀರೀಸ್ಗಳಲ್ಲಿ ಕೊಲೆ, ದರೋಡೆ,ರಕ್ತಪಾತ, ಅತ್ಯಾಚಾರಗಳನ್ನು ಹೇರಳವಾಗಿ ತೋರಿಸಲಾಗಿತ್ತು. ಅದರ ಮುಂದುವರೆದ ಭಾಗವೇ ‘ದಂಡುಪಾಳ್ಯA-೪’ ಚಿತ್ರವಾಗಿದೆ.ಒಂದುತAಡ ಉಳಿದರೆ, ಅದುಇನ್ನೊಂದುತAಡವನ್ನು ಉಳಿಸುತ್ತದೆ.ಅಲ್ಲದೆಇದಕ್ಕೆ ಪೂರಕವಾಗಿ ಬೇರೊಂದುತAಡವುಚಿಗುರುತ್ತದೆ. ಅದಕ್ಕೆಎದುರಿಗಿರುವತಂಡವನ್ನು ಮುಗಿಸುವುದೇ ಸರಿಯಾದದಾರಿಎಂದು ಹಂತಕರುಒAದಾಗುತ್ತಾರೆ. ಎಂಟು ಮಂದಿ ತಂಡವೊAದು ಮರಣದಂಡನೆಗೆ ಒಳಗಾದ ಗ್ಯಾಂಗ್ನ್ನು ಹೇಗಾದರೂ ಬಿಡಸಬೇಕೆಂದು ಪಣತೊಡುತ್ತಾರೆ. ಅದಕ್ಕಾಗಿ ವಕೀಲರ ಮೊರೆ ಹೋಗಬೇಕು.ಅದಕ್ಕೆ ವಿಟಮಿನ್ ಎಂ ಅವಶ್ಯವಾಗಿರುತ್ತದೆ.ಇದಕ್ಕಾಗಿ ಯೋಚಿಸಿದಾಗ ಅವರಿಗೆ ಸಿಗುವುದು ಮತ್ತದೆ ಮನೆಗಳು.ಮುಂದೆ ಏನೇನು ನಡೆಯುತ್ತವೆಅಂತ ಹಿಂದಿನದನ್ನು ನೆನಪಿಸಿಕೊಂಡರೆ ತಿಳಿಯುತ್ತದೆ.ಇದರಜೊತೆಗೆ ರಾಜಕಾರಣಿಗಳು ಇವರನ್ನು ಹೇಗೆ ದುರಪಯೋಗಪಡಿಸಿಕೊಳ್ಳುತ್ತಾರೆ ಎಂಬುದನ್ನುತೋರಿಸಲಾಗಿದೆ.ನಾವು ಊಹಿಸಿದಂತ ಕ್ಲೆöÊಮಾಕ್ಸ್ ತಿಳಿಯಲು ಸಿನಿಮಾ ನೋಡಬೇಕು. ನೀರೆ ಸುಮನ್ರಂಗನಾಥ್ ಮೊದಲಬಾರಿರಗಡ್ ಲುಕ್ದಲ್ಲಿ ‘ಸುಂದ್ರಿ’ ಹೆಸರಿನಲ್ಲಿಗ್ಲಾಮರ್ಇಲ್ಲದೆ ನಟಿಸಿರುವುದು ವಿಶೇಷ, ಈಕೆಯೊಂದಿಗೆಇಬ್ಬರು ಹುಡುಗಿಯರು, ಐವರುಖತರ್ನಾಕ್ ಪುರುಷರುಇರುತ್ತಾರೆ.ನಿರ್ಮಾಪಕ ವೆಂಕಟ್ಇನ್ಸ್ಪೆಕ್ಟರ್ಛಲಪತಿಯಾಗಿ ಕಾಣಿಸಿಕೊಂಡಿದ್ದಾರೆ.ಸಮಾಜದಲ್ಲಿ ಅಪರಾಧಗಳು ನಿಲ್ಲಲ್ಲ. ಜನರುಎಚ್ಚರಿಕೆಯಿಂದಇರಬೇಕೆAದು ಸಂದೇಶದಲ್ಲಿ ಹೇಳಿರುವುದು ಚೆನ್ನಾಗಿದೆ.ಮುಮೈತ್ಖಾನ್ಐಟಂ ಹಾಡಿಗೆ ಬಂದು ಹೋಗುತ್ತಾರೆ.ಉಳಿದಂತೆ ರಾಕ್ಲೈನ್ಸುಧಾಕರ್, ಸ್ನೇಹಾನಾಯರ್, ವೇಣುಬ್ಯಾನರ್ಜಿ ಮುಂತಾದವರು ಪಾತ್ರಕ್ಕೆ ನ್ಯಾಯತುಂಬಿದ್ದಾರೆ. ಕೆ.ಟಿ.ನಾಯಕ್ ನಿರ್ದೇಶನದಲ್ಲಿಒಟ್ಟಾರೆಒಮ್ಮೆ ನೋಡಬಲ್ ಚಿತ್ರ. ನಿರ್ಮಾಣ: ವೆಂಕಟ್ ಸಿನಿ ಸರ್ಕಲ್.ಇನ್ ವಿಮರ್ಶೆ *** 1/11/19 |
ಚಿತ್ರಮಂದಿರದಲ್ಲಿ ದಂಡುಪಾಳ್ಯಂ-4 |
![]() ![]() ![]() ![]() ![]() ![]() ![]() ![]() ![]() |
ದಂಡುಪಾಳ್ಯ ಅಲ್ಲ ದಂಡುಪಾಳ್ಯಂ ![]() ದಂಡುಪಾಳ್ಯ ಚಿತ್ರವು 2012ರಲ್ಲಿ ಬಿಡುಗಡೆಯಾಗಿ ನಂತರ ವಿವಾದವಾದ ಹಿನ್ನಲೆಯಲ್ಲಿ ಭಾಗ-2 ಮತ್ತು 3 ಟೈಟಲ್ನೊಂದಿಗೆ ತೆರೆಕಂಡಿತ್ತು. ಈಗ ‘ದಂಡುಪಾಳ್ಯಂ-4’ ಎನ್ನುವ ಚಿತ್ರವೊಂದು ಬೆಂಗಳೂರು, ಪಾವಗಡ ಸ್ಥಳಗಳಲ್ಲಿ ಸದ್ದಿಲ್ಲದೆ ಚಿತ್ರೀಕರಣ ಮುಗಿಸಿ ಸುದ್ದಿ ಮಾಡಲು ಮೊದಲಬಾರಿ ತಂಡವು ಮಾದ್ಯಮದ ಮುಂದೆ ಹಾಜರಾಗಿತ್ತು. ನಿರ್ಮಾಪಕ ವೆಂಕಟ್ ಹೇಳುವಂತೆ ಹಿಂದಿನ ಎರಡು ಚಿತ್ರಗಳಿಗೆ ಈ ಹೆಸರನ್ನು ಇಡದೆ, ಪಾರ್ಟ್ 2,3 ಎಂದು ತಿಳಿಸಲಾಗಿತ್ತು. ಇದನ್ನು ತಪ್ಪಾಗಿ ತಿಳಿದು ಅಲ್ಲಿನ ಜನರು ನ್ಯಾಯಲಯದಿಂದ ತಡೆ ಆದೇಶ ತಂದು ಸುಲಿಗೆ ಮಾಡಲು ಮುಂದೆ ಬಂದರು. ಸರಿಯಾದ ರೀತಿಯಲ್ಲಿ ವಾದ ಮಂಡಿಸಲಾಗಿ ಕೋರ್ಟ್ ನಮ್ಮ ಪರ ತೀರ್ಪು ನೀಡಿತು. ದಂಡುಪಾಳ್ಯಂ ಎಂಬುದು ತೆಲುಗು ಚಿತ್ರದ ಹೆಸರು. ಇದರಿಂದ ತೊಂದರೆ ಕೊಡುವವರು ಏನು ಮಾಡುವುದಕ್ಕೆ ಆಗುವುದಿಲ್ಲ. ಶೀರ್ಷಿಕೆ ಇದೆಯಾದರೂ ಜಾನರ್ ಬೇರೆಯಾಗಿರುತ್ತದೆ. ಅಪರಿಚಿತ ವ್ಯಕ್ತಿಗಳನ್ನು ಮನೆ ಒಳಗೆ ಬಿಟ್ಟುಕೊಂಡರೆ, ಹೇಗೆ ದುರುಪಹೋಗ ಪಡಿಸಿಕೊಳ್ಳುತ್ತಾರೆ. ಪೋಲೀಸ್ ಇಲಾಖೆಯು ಅಪರಾದಕ್ಕೆ ಕಡಿವಾಣ ಹಾಕಿದರೆ, ಕ್ರೈಮ್ ಹತೋಟಿಗೆ ಬರುತ್ತದೆ ಎಂಬುದನ್ನು ಹೇಳಲಾಗಿದೆ. ಹಣ ಹೂಡುವುದರ ಜೊತೆಗೆ ಇನ್ಸೆಪಕ್ಟರ್ ಪಾತ್ರ ಮಾಡಲಾಗಿದೆ. ಐದು ಭಾಷೆಗಳಲ್ಲಿ ಏಕಕಾಲಕ್ಕೆ ಭಾರತಾದ್ಯಂತ ಬಿಡುಗಡೆ ಮಾಡಲಾಗುವುದು ಎಂಬುದಾಗಿ ಚಿತ್ರದ ಕುರಿತು ಸಾಕಷ್ಟು ಮಾಹಿತಿ ನೀಡುತ್ತಾ ಹೋದರು. ನಿರ್ದೇಶಕ ಕೆ.ಟಿ.ನಾಯಕ್ ಕಲಾವಿದರು, ತಂತ್ರಜ್ಘರುಗಳ ಹೊಗಳಿಕೆಗೆ ಮಾತನ್ನು ಮೀಸಲಿಟ್ಟರು. ತಂಡದ ಲೀಡರ್ ಆಗಿ ಯಾರಿಗೂ ಭಯ ಬೀಳದ ಹುಡುಗಿಯೆಂದು ಪಾತ್ರದ ಪರಿಚಯ ಮಾಡಿಕೊಂಡರು ಸುಮನ್ರಂಗನಾಥ್. ತೆಲುಗು, ತಮಿಳು ಚಿತ್ರಗಳಲ್ಲಿ 38 ವರ್ಷಗಳಿಂದ ನಟಿಸಿತ್ತಿರುವ ಬ್ಯಾನರ್ಜಿ ಮೊದಲಬಾರಿ ಕನ್ನಡ ಚಿತ್ರದಲ್ಲಿ ಅಭಿನಯಿಸಿದ್ದರಿಂದ ಇದೇ ರೀತಿ ಕನ್ನಡ ಜನತೆ ಆಶಿರ್ವಾದ ನೀಡಬೇಕೆಂದು ಕೋರಿದರು. ಟಾಲಿವುಡ್ ಐಟಂ ಡ್ಯಾನ್ಸ್ ಖ್ಯಾತಿ ಮುಮೈತ್ಖಾನ್ ಎಂದಿನಂತೆ ಹೆಜ್ಜೆ ಹಾಕಿರುವುದಾಗಿ ಹೇಳಿಕೊಂಡರು. ತಾರಗಣದಲ್ಲಿ ಅರುಣ್ಬಚ್ಚನ್, ಸಂಜೀವಕುಮಾರ್, ಬುಲೆಟ್ಸೋಮ, ಜೀವ, ವಿಠಲ್, ರಿಚ್ಚಾಶಾಸ್ತ್ರೀ, ಸ್ನೇಹ ಮುಂತಾದವರು ನಟಿಸಿದ್ದಾರೆ. ಹಿನ್ನಲೆ ಸಂಗೀತ ಅರ್ಜುನ್ಜನ್ಯಾ, ನೃತ್ಯ ಬಾಬಬಾಸ್ಕಿ ನಿರ್ವಹಿಸಿದ್ದಾರೆ. ಸದ್ಯ ಪೋಸ್ಟ್ ಪ್ರೊಡಕ್ಷನ್ದಲ್ಲಿ ಬ್ಯುಸಿ ಇದ್ದು ಸೆಪ್ಟಂಬರ್ದಲ್ಲಿ ತೆರೆಕಾಣುವ ಸಾದ್ಯತೆ ಇದೆ. ಚಿತ್ರಗಳು: ಕೆ.ಎನ್.ನಾಗೇಶ್ಕುಮಾರ್ ಸಿನಿ ಸರ್ಕಲ್.ಇನ್ ನ್ಯೂಸ್ 13/07/18 |
![]() ![]() ![]() ![]() ![]() ![]() ![]() ![]() ![]() ![]() ![]() ![]() ![]() ![]() ![]() ![]() ![]() ![]() ![]() |