HOME
CINEMA NEWS
GALLERY
TV NEWS
REVIEWS
CONTACT US
ದಾರಿಯಾವುದಯ್ಯವೈಕುಂಠಕ್ಕೆ
ವಿನೂತನ ಶೀರ್ಷಿಕೆಯ ‘ದಾರಿಯಾವುದಯ್ಯಾ ವೈಕುಂಠಕೆ’ ಚಿತ್ರವೊಂದುರೇಣುಕಾಂಬ ಸ್ಟುಡಿಯೋದಲ್ಲಿ ಸರಳವಾಗಿ ಮಹೂರ್ತ ಆಚರಿಸಿಕೊಂಡಿತು. ಸೋದರ ನಿರ್ಮಾಣ ಮಾಡುತ್ತಿರುವಚಿತ್ರಕ್ಕೆಮಾಜಿ ಸಭಾಪತಿವೀರಣ್ಣ.ಎಂ.ಮತ್ತಿಕಟ್ಟಿ ಮೊದಲ ದೃಶ್ಯಕ್ಕೆಕ್ಲಾಪ್ ಮಾಡಿದರೆ, ಮಾಜಿ ಸಚಿವಅಭಯ್‍ಚಂದ್ರಜೈನ್‍ಕ್ಯಾಮಾರ ಚಾಲು ಮಾಡಿ ಶುಭ ಹಾರೈಸಿದರು.ಮನುಷ್ಯತ್ವಇಲ್ಲದೆ ಬರೀ ಹಣಅಂತಓಡಾಡಿಕೊಂಡು ಮಜಾ ಮಾಡುತ್ತಿದ್ದವನು ಆಕಸ್ಮಿಕವಾಗಿ ಸ್ಮಶಾನಕ್ಕೆ ಬರುತ್ತಾನೆ. ಅಲ್ಲಿಗೆ ಬಂದು ಹೋದ ಮೇಲೆ ಅವನ ಮನಸ್ಥಿತಿ ಹೇಗಿರುತ್ತದೆಎನ್ನುವುದೇಕಥಾಹಂದರ.ವೈಕುಂಠಕ್ಕೆ ಹೋಗುವ ಆಸಕ್ತಿಯುಳ್ಳ ಪಾತ್ರಧಾರಿಗಳು ಕಾಣಿಸಿಕೊಳ್ಳುವುದರಿಂದ ಇದೇ ಶೀರ್ಷಿಕೆಯನ್ನು ಇಡಲಾಗಿದೆಎಂಬುದಾಗಿ ನಿರ್ದೇಶಕ ಸಿದ್ದುಪೂರ್ಣಚಂದ್ರ ವ್ಯಾಖ್ಯಾನ ನೀಡುತ್ತಾರೆ.‘ಕೃಷ್ಣ ಗಾರ್ಮೆಂಟ್ಸ್’ ನಿರ್ದೇಶನ ಮಾಡಿರುವಇವರಿಗೆಎರಡನೇ ಅವಕಾಶ. ಹಾರರ್, ಥ್ರಿಲ್ಲರ್, ಆಕ್ಷನ್ ಮತ್ತು ಪ್ರೀತಿಇಲ್ಲದೆಇರುವುದು ವಿಶೇಷ. ಶೇಕಡ 80 ರಷ್ಟು ದೃಶ್ಯಗಳು ಸ್ಮಶಾನದಲ್ಲಿ ನಡೆಯಲಿದೆ.ಅದಕ್ಕಾಗಿರಾಮನಗರದ ಸುಡುಗಾಡಿನಲ್ಲಿ ಮನೆಯ ಸೆಟ್‍ನ್ನು ಹಾಕಲಾಗುತ್ತಿದೆ.

ಅಪರಾಧಿ ವ್ಯಕ್ತಿಯನ್ನು ಭಾವನೆಗಳ ಮೂಲಕ ಬೇರೆಯವರು ಹೊಡೆಯುತ್ತಾ ಹೋಗುತ್ತಾರೆ.ಆಗ ಆತನ ಬದುಕಿನಲ್ಲಿಏನೆಲ್ಲಾಆಗುತ್ತೆ.ಅದನ್ನು ಹಂಗೇ ನಿಭಾಯಿಸುತ್ತಾನೆಎನ್ನುವಂತ ಪಾತ್ರದಲ್ಲಿ ವರ್ಧನ್‍ತೀರ್ಥಹಳ್ಳಿ ನಾಯಕನಾಗಿದ್ವಿತೀಯಚಿತ್ರ.ಪ್ರೀತಿಯಲ್ಲಿ ಬಿದ್ದಾಗಅದಕ್ಕೆ ಎಷ್ಟು ಬೆಲೆ ಕೊಡುತ್ತಾಳೆ ಎಂದು ಹೇಳುವ ಪೂಜಾ ನಾಯಕಿ. ಉಳಿದಂತೆ ಬಲರಾಜವಾಡಿ,ಅರುಣ್‍ಮೂರ್ತಿ, ಸಿದ್ದಾರ್ಥ, ಶೀಬಾ, ಪ್ರಶಾಂತ್‍ರಾವ್ ಮುಂತಾದವರಅಭಿನಯವಿದೆ.ನಟನಾಗಿದ್ದ ಮಧುಹೆಗಡೆ ಹೊಸ ಪ್ರಯೋಗಎನ್ನುವಂತೆ ಸಂಗೀತಒದಗಿಸುತ್ತಿದ್ದಾರೆ.ನಿತಿನ್‍ಛಾಯಾಗ್ರಹಣ, ರಾಜೀವ್ ಸಂಕಲನವಿದೆ. ಡಾ.ಶರಣಪ್ಪ.ಎಂ.ಕೊಟಗಿನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ.
ಸಿನಿ ಸರ್ಕಲ್.ಇನ್ ನ್ಯೂಸ್
11/02/20


For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore