HOME
CINEMA NEWS
GALLERY
TV NEWS
REVIEWS
CONTACT US
ನವಿರಾದ ಪ್ರೇಮಕತೆದಿಯಾ
‘ದಿಯಾ’ ಚಿತ್ರವುಮನಸ್ಸನ್ನುಕದಡುತ್ತದೆ.ಕೇವಲ ಮೂರು ಪ್ಲಸ್‍ಒಂದು ಪಾತ್ರದಲ್ಲಿ ಸುಂದರ ಪ್ರೀತಿಗಾಥೆಯನ್ನು ತೋರಿಸಿರುವ ರೀತಿ ಪ್ರೇಕ್ಷಕನಿಗೆಎಲ್ಲೂ ಮೊಬೈಲ್ ನೋಡದಂತೆ ಮಾಡಿದೆ.ಇಬ್ಬರು ಹುಡುಗರು, ಒಬ್ಬಳು ಹುಡುಗಿಯ ಸುತ್ತ ಲವ್ ಸ್ಟೋರಿಗಳು ಬಂದಿದೆ.ಆದರೆ ವಿನೂತನವಾಗಿ ಹೇಳಿರುವ ರೀತಿ ನಿಜಕ್ಕೂ ಖುಷಿ ಕೊಡುತ್ತದೆ. ಇಂಜಿನಿಯರಿಂಗ್‍ಕಾಲೇಜಿನಲ್ಲಿಆತ ರಚಿಸಿರುವ ಚಿತ್ರಗಳು, ಸ್ಪುರದ್ರೂಪಿ ಮೈಕಟ್ಟಿಗೆ ಮನಸೋತು ಪ್ರೇಮಿಸಲು ಶುರು ಮಾಡುತ್ತಾಳೆ.ಆ ಕಡೆಯಿಂದಲೂ ಅವನು ಇದೇ ಮಾಡುತ್ತಿರುತ್ತಾನೆ. ಕೊನೆಗೆ ಇಬ್ಬರಿಗೂಗೊತ್ತಾಗಿ ಹಕ್ಕಿಗಳಂತೆ ಹಾರಾಡುವಾಗಘೋರಘಟನೆ ನಡೆಯುತ್ತದೆ, ನಂತರಆಕೆಯ ಬಾಳಿನಲ್ಲಿ ಮತ್ತೋಬ್ಬನ ಪ್ರವೇಶವಾಗುತ್ತದೆ.ಇದರ ಮಧ್ಯೆಅಮ್ಮ-ಮಗನ ಬಾಂದವ್ಯದ ದೃಶ್ಯಗಳು ನಮಗೆ ಗೊತ್ತಿಲ್ಲದಂತೆ ಕಣ್ಣುಗಳು ಒದ್ದೆಯಾಗುತ್ತದೆ.

ನಾಯಕಿ ಖುಷಿ, ನಾಯಕರುಗಳಾದ ದೀಕ್ಷಿತ್, ಪೃಥ್ವಿಅಂಬರ್‍ಛಾಲೆಂಜ್‍ಎನ್ನುವಂತೆಚೆನ್ನಾಗಿ ನಟಿಸಿದ್ದಾರೆ, ನಾಯಕಿಗೆಧ್ವನಿ ನೀಡಿರುವಕಂಠದಾನಕಲಾವಿದೆ ಹಾಗೆಯೇಕಂಚಿನಕಂಠದ ದೀಕ್ಷಿತ್‍ಧ್ವನಿ ಚಿತ್ರಕ್ಕೆ ಕಳಸವಿಟ್ಟಂತೆ ಇದೆಎಂದರೆತಪ್ಪಾಗಲಾರದು. ಅಮ್ಮನಾಗಿ ಪವಿತ್ರಾಲೋಕೇಶ್ ವೈದ್ಯೆಯಾಗಿಗಂಭೀರ ನಟನೆಇದೆ.6-5=2 ಹಾರರ್‍ಚಿತ್ರ ನೀಡಿದ್ದ ನಿರ್ದೇಶಕಅಶೋಕ.ಕೆ.ಎಸ್. ಈ ಬಾರಿಅದಕ್ಕೆ ವಿರುದ್ದವಾದಕತೆಯನ್ನು ಆರಿಸಿಕೊಂಡಿರುವ ಅವರ ಪ್ರಯತ್ನ ಸಪಲವಾಗಿದೆ.ಅಜನೀಶ್‍ಲೋಕನಾಥ್ ಹಿನ್ನಲೆ ಸಂಗೀತಕ್ಕೆ ವಿಶಾಲ್‍ವಿಟ್ಠಲ್-ಸೌರಭ್‍ವಾಘ್‍ಮರೆಛಾಯಾಗ್ರಹಣಚಿತ್ರವನ್ನು ನೋಡಿಸಿಕೊಂಡು ಹೋಗುವಂತೆ ಮಾಡಿದೆ.ಅರ್ಥಪೂರ್ಣ ಸನ್ನಿವೇಶಗಳ ನಡುವೆ ಹಾಡುಗಳು ಶಾಂತಿಭಂಗ ಮಾಡತ್ತದೆಎಂದುಅರಿತಿದ್ದರಿಂದಇದಕ್ಕೆ ಅವಕಾಶ ಮಾಡಿಕೊಡದೆಇರುವುದು ಒಳ್ಳೆಯದೇ ಆಗಿದೆ.ಜೀವನ ಬೇಗನೆ ಬರುತ್ತೆ.ಇರುವಷ್ಟು ದಿನ ಇಷ್ಟಪಟ್ಟಿದ್ದನ್ನುಅನುಭವಿಸಬೇಕು.ಬದುಕು ಸೋಜಿಗಗಳಿಂದ ತುಂಬಿಕೊಂಡಿದೆ.
ನಿರ್ಮಾಣ: ಕೃಷ್ಣಚೈತನ್ಯ
****
ಸಿನಿ ಸರ್ಕಲ್.ಇನ್ ವಿಮರ್ಶೆ
7/02/20


ಚಿತ್ರಮಂದಿರದಲ್ಲಿ ದಿಯಾ
‘6-5=2’ ನಿರ್ದೇಶಕಕೆ.ಎಸ್. ಅಶೋಕ್‍ಆಕ್ಷನ್‍ಕಟ್ ಹೇಳಿರುವ ‘ದಿಯಾ’ ಚಿತ್ರವನ್ನು ನಿರ್ಮಾಣ ಮಾಡಿರುವುದುಕರ್ವಕ್ಕೆ ಹಣ ಹೂಡಿದ್ದಕೃಷ್ಣಚೈತನ್ಯ.ಜೀವನಪೂರ್ತಿ ಸೋಜಿಗಗಳು ಎಂಬ ಇಂಗ್ಲೀಷ್‍ಅಡಿಬರಹಇರಲಿದೆ. ಬದುಕಿನ ನೆನಪುಗಳ ಹೆಜ್ಜೆಗಳಂತೆ ಸಾಗುತ್ತಾಮೂರು ಪಾತ್ರಗಳ ಸುತ್ತನವಿರಾದ ಪ್ರೀತಿಕತೆಯುತೆಗೆದುಕೊಂಡು ಹೋಗುತ್ತದೆ.ಎರಡು ಸಂರ್ಕೀಣ ಪ್ರೇಮಕತೆ ವ್ಯತ್ಯಾಸಗಳಿಗೆ ವಿವರಣೆ ನೀಡಿ, ಕೊನೆಯಲ್ಲಿಮಿಶ್ರಣ ಮಾಡಿರುವುದುವಿಶೇಷ.ಶೂನ್ಯದಿಂದ ಹತ್ತರವರೆಗಿನಪಯಣದಲ್ಲಿರೋಮಾಂಟಿಕ್‍ಚಿತ್ರವುಸಾಗುತ್ತದೆ. ಕತೆಯಲ್ಲಿಅರ್ಥಪೂರ್ಣಸನ್ನಿವೇಶಗಳು ಇರುವುದರಿಂದ ಸಾಹಸ,ಹಾಡುಗಳಿಗೆ ಅವಕಾಶ ಮಾಡಿಕೊಂಡಿಲ್ಲ. ಅಂತರ್ಮುಖ ಹುಡುಗನಾಗಿ,ಕಾಲೇಜಿನಿಂದ ಕೆಲಸದತನಕ ಸಾಗುವ ಪಾತ್ರದಲ್ಲಿ ದೀಕ್ಷಿತ್, ತುಳು ಭಾಷೆಯ ಪೃಥಿಅಂಬರ್ ನಾಯಕರುಗಳು.

ಅಂತರ್ಮುಖಿ,ಯಾರಜೊತೆಗೂ ಸೇರದೆ, ಲವ್‍ಲ್ಲಿಬಿದ್ದಾಗಅದನ್ನು ನಿಭಾಯಿಸುವ ಹುಡುಗಿಯಾಗಿಖುಷಿ ಕಾಣಿಸಿಕೊಂಡಿದ್ದಾರೆ. ಮತ್ತೋಂದು ಮುಖ್ಯ ಪಾತ್ರಕ್ಕೆಪವಿತ್ರಾಲೋಕೇಶ್ ನಟನೆಇದೆ. ಹಿನ್ನಲೆ ಸಂಗೀತಅಜನೀಶ್‍ಲೋಕನಾಥ್, ಛಾಯಾಗ್ರಹಣ ವಿಶಾಲ್‍ವಿಟ್ಟಲ್-ಸೌರಭ್‍ವಾಘ್‍ಮಗೆ, ಸಂಕಲನ ನವೀನ್‍ರಾಜ್, ವರ್ಣಾಂಲಕಾರಖುರ್ಷದಾಬಾನುಅವರದಾಗಿದೆ. ಬೆಂಗಳೂರು, ಉಡುಪಿ,ಮಂಗಳೂರು ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಶ್ರೀ ಸ್ವರ್ಣಲತಾ ಪ್ರೊಡಕ್ಷನ್ಸ್ ಮೂಲಕ ನಿರ್ಮಾಣಗೊಂಡಿರುವಚಿತ್ರವನ್ನುಕೆಆರ್‍ಜಿ ಮೂಲಕ ಫೆಬ್ರವರಿ 7ರಂದು 100 ಕೇಂದ್ರಗಳಲ್ಲಿ ಬಿಡುಗಡೆಯಾಗುತ್ತಿದೆ.
ಸಿನಿ ಸರ್ಕಲ್.ಇನ್ ನ್ಯೂಸ್
29/01/20


ಕಾಡಿನ ಹಿನ್ನಲೆಯಚಿತ್ರ
ಯುರೋಪಿಯನ್ ಸ್ಟೈಲ್‍ದಲ್ಲಿ ನಿರೂಪಣೆಇರುವ ‘ದಿಯಾ’ ಚಿತ್ರಕ್ಕೆ 6-5=2 ಆಶೋಕ್ ನಿರ್ದೇಶನ, ಕರ್ವ ನಿರ್ಮಾಣ ಮಾಡಿರುವಕೃಷ್ಣಚೈತನ್ಯ ಬಂಡವಾಳ ಹೂಡಿದ್ದಾರೆ.ಮೂರು ಪಾತ್ರಗಳ ಸುತ್ತಕತೆಯು ಸಾಗುತ್ತದೆ.ಮೂವತ್ತಾರು ತಿಂಗಳ ಶ್ರಮ ಹಾಗೂ ಗೆಳಯ ಆಕ್ಷನ್‍ಕಟ್ ಹೇಳುತ್ತಿರುವುದರಿಂದ ನಂಬಿಕೆ ಮೇಲೆ ಬಂಡವಾಳ ಹೂಡಿದ್ದಾರಂತೆ.ಮುಂದಾಳತ್ವ ವಹಿಸುವ ಮಹಿಳೆಗೆ ಶೀರ್ಷಿಕೆ ಹೆಸರಿನಲ್ಲಿಕರೆಯುತ್ತಾರೆ. ಶೂನ್ಯದಿಂದ ಹತ್ತರವರೆಗೆಪಯಣದಲ್ಲಿರೋಮಾಂಟಿಕ್‍ಚಿತ್ರವುಸಾಗುತ್ತದೆ. ಕತೆಯಲ್ಲಿಅರ್ಥಪೂರ್ಣ ನಿರೂಪಣೆಇರುವುದರಿಂದ ಸಾಹಸ,ಹಾಡುಗಳಿಗೆ ಅವಕಾಶ ಮಾಡಿಕೊಂಡಿಲ್ಲ. ಅಂತರ್ಮುಖಿ ಹುಡುಗನಾಗಿ ದೀಕ್ಷಿತ್ ನಾಯಕ.

ಪ್ರೀತಿಯನ್ನುತೋರ್ಪಡಿಸುವ ಪಾತ್ರದಲ್ಲಿ ಖುಷಿ ನಾಯಕಿ.ಇಪ್ಪತ್ತೈದು ಬಾರಿಅಡಿಷನ್‍ದಲ್ಲಿ ಪಾಲ್ಗೋಂಡುಅಂತಿಮವಾಗಿಆಯ್ಕೆಯಾಗಿರುವ ಪೃಥ್ವಿಗೆಇದರ ನಂತರ ಹದಿನೈದು ಸಿನಿಮಾಗಳಿಗೆ ಸಹಿ ಮಾಡಿದ್ದಾರೆ. ಟ್ರೈಲರ್ ಬಿಡುಗಡೆ ಮಾಡಿದ ಶ್ರೀಮುರಳಿ ಮಾತನಾಡಿಚಿತ್ರವನ್ನು ಈಗಾಗಲೇ ನೋಡಿದ್ದೇನೆ. ಮೂವರುಚಿತ್ರಕ್ಕೆ ಶಕ್ತಿ ತುಂಬಿದ್ದಾರೆ. ತಂಡಕ್ಕೆ ಒಳ್ಳೆಯದಾಗಲೆಂದು ಹರಿಸಿದರು. ಕಲಾವಿದರುಗಳಾದ ಆರ್‍ಜೆ.ರೋಹಿತ್, ತಿಲಕ್, ಅಯೋಗ್ಯ ನಿರ್ದೇಶಕ ಮಹೇಶ್‍ಕುಮಾರ್ ಮತ್ತು ಭರಾಟೆ ನಿರ್ಮಾಪಕ ಸುಪ್ರಿತ್ ಉಪಸ್ತಿತರಿದ್ದು ಶುಭಹಾರೈಸಿದರು.ಹಿನ್ನಲೆ ಸಂಗೀತಅಜನೀಶ್‍ಲೋಕನಾಥ್, ಛಾಯಾಗ್ರಹಣ ವಿಶಾಲ್‍ವಿಟ್ಟಲ್-ಸೌರಭ್‍ವಾಘ್‍ಮಗೆ, ಸಂಕಲನ ನವೀನ್‍ರಾಜ್‍ಅವರದಾಗಿದೆ.ಮುಂದಿನ ತಿಂಗಳು 8ರಂದು ಸಿನಿಮಾವು ಬಿಡುಗಡೆಯಾಗುತ್ತಿದೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
05/10/19

For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore