HOME
CINEMA NEWS
GALLERY
TV NEWS
REVIEWS
CONTACT US

ಕಳರಿ ಕುರಿತಚಿತ್ರದೇಹಿ
ಪುರಾತನ ಕಳರಿ ಕಲೆಯು ಇಂದಿನ ಯುವಜನಾಂಗದವರಿಗೆಏಕಾಗ್ರತೆ, ಖಚಿತತೆ, ಲಾಲಿತ್ಯ, ಆತ್ಮವಿಶ್ವಾಸ ಮೂಡಿಸಲಿದ್ದುಕಲೆಯುಬೌದ್ದಿಕ ಸ್ಥಿರತೆಯ ವೃದ್ದಿಗೂ ಸಹಕಾರಿಆಗುತ್ತದೆ.ಇದರಕುರಿತಂತೆ ‘ದೇಹಿ’ ಎನ್ನುವಚಿತ್ರದಲ್ಲಿಇzರವಿದ್ಯೆ ಪರಿಚಯ ಮಾಡಿಸಿದ್ದಾರೆ.ಎರಡು ತಮಿಳು ಚಿತ್ರಗಳಿಗೆ ಕೆಲಸ ಮಾಡಿರುವಧನಾ ನಿರ್ದೇಶನವಿದೆ.ರಚನೆ,ಚಿತ್ರಕತೆ ಮತ್ತು ಸಂಭಾಷಣೆ ಬಿ.ಜಯಮೋಹನ್‍ಅವರದಾಗಿದೆ. ಕತೆಯಲ್ಲಿ ದಿವ್ಯಾ ಮಾಡೆಲಿಂಗ್‍ಕ್ಷೇತ್ರದಲ್ಲಿ ಗುರುತಿಸಿಕೊಂಡಿರುತ್ತಾರೆ. ಭವಿಷ್ಯದಲ್ಲಿಉನ್ನತ ಬದುಕು ಕಟ್ಟಿಕೊಳ್ಳುವ ಬಯಕೆ ಹೊಂದಿರುತ್ತಾಳೆ.ಆದರೆ ಸಮಾಜದಲ್ಲಿ ನಡೆಯುವ ಕೆಲವು ಅಹಿತಕರ ಘಟನೆಗಳು ಅವಳ ಮನಸ್ಸನ್ನು ಘಾಸಿ ಮಾಡುತ್ತದೆ. ಆಗ ಅವಳಿಗೆ ನೆರವು ಬರುವುದುಇದೇ ಕಲೆ. ಇದರ ಮೂಲಕ ಬದುಕನ್ನು ಹೇಗೆ ಸುಂದರವಾಗಿಸಿಕೊಳ್ಳುತ್ತಾಳೆÉ ಎನ್ನುವುದುಒನ್ ಲೈನ್ ಸ್ಟೋರಿಯಾಗಿದೆ.

ಉಪಾಸನಾ ನಾಯಕಿ.ಈಕೆಯಗುರುವಾಗಿಕಿಶೋರ್ ಮತ್ತುಗುರುಕುಲಂನ 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಬಣ್ಣ ಹಚ್ಚಿದ್ದಾರೆ.ಚಿಕ್ಕಗುಬ್ಬಿಯಲ್ಲಿರುವಗುರುಕುಲಂ, ಹಂಪಿ, ಬೇಲೂರು ಸುತ್ತಮುತ್ತಚಿತ್ರೀಕರಣ ನಡೆಸಲಾಗಿದೆ. ಹಾಡುಗಳಿಗೆ ನೊಬಿನ್‍ಪೌಲ್ ಸಂಗೀತವಿದೆ. ಸೋಮವಾರ ವಿಜಯರಾಘವೇಂದ್ರಆಡಿಯೋ ಸಿಡಿಯನ್ನು ಬಿಡುಗಡೆ ಮಾಡಿದರು. ಅವರು ಮಾತನಾಡುತ್ತಾ ‘ಕಲ್ಲರಳಿಹೂವಾಗಿ’ ಪಾತ್ರದ ಸಲುವಾಗಿ ರಂಜನ್‍ಮುಲ್ಲರತ್ ಬಳಿ ಸದರಿ ಪಟುಗಳನ್ನು ಕಲಿತುಕೊಂಡಿದ್ದೆ. ಇಂದುಅವರು ನಿರ್ಮಾಣ ಮಾಡಿರುವುದು ಸಂತಸತಂದಿದೆ.ಇದನ್ನುಕಲಿತವರಿಗೆ ಮಾನಸಿಕ ಮಟ್ಟದಲ್ಲಿದೊಡ್ಡ ವಿಶ್ವಾಸ ಬರುತ್ತದೆ. ಜೊತೆಗೆ ನಮ್ಮನ್ನು ರಕ್ಷಿಸಿಕೊಳ್ಳಲು ಉಪಯೋಗವಾಗುತ್ತದೆ. ಅದರಲ್ಲೂ ಮಹಿಳೆಯರು ತರಭೇತಿ ಪಡೆದುಕೊಂಡರೆಒಂಟಿಯಾಗಿ ಹೋರಾಡಬಹುದೆಂದುತಂಡಕ್ಕೆ ಶುಭ ಹಾರೈಸಿದರು. ಹಲವು ಅಂತರರಾಷ್ಟ್ರೀಯ ಸಿನಿಮೋತ್ಸವಗಳ ವಿವಿಧ ವಿಭಾಗದಲ್ಲಿ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿರುವ ವಿನೂತನಚಿತ್ರವುಜನವರಿ 24ರಂದು ತೆರೆಕಾಣುತ್ತಿದೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
13/01/20

8 ಮತ್ತು 36 ನಿಮಿಷದಕಿರು ಚಿತ್ರಗಳು
ಮೈಸೂರಿನ ವಿನಯ್‍ಕುಮಾರ್.ಎಂ.ಜಿ 8.51 ನಿಮಿಷದ ‘ದಿ ಟ್ರೈನ್’ ಮತ್ತು 36 ನಿಮಿಷದ ‘ಎರಡು ಗೋಡೆಗಳು’ ಕಿರುಚಿತ್ರಗಳಗೆ ಕತೆ ಬರೆದು ನಿರ್ದೇಶನ ಮಾಡಿದ್ದಾರೆ. ಮೊದಲನೆಯದು 1930-35ರ ಕಾಲಘಟ್ಟದಲ್ಲಿ ನಡೆಯುವಕತೆಯಾಗಿದೆ. ಬಾಲಕನೊಬ್ಬಅಮ್ಮನೊಂದಿಗೆ ಪಾರ್ಕ್‍ಗೆ ಹೋಗುವುದು.ಅಲ್ಲಿರುವರೈಲಿನಲ್ಲಿ ಪ್ರಯಾಣ ಮಾಡಲು ಆಸೆ ಪಡುವುದು.ಆಕೆಯಲ್ಲಿ ಹಣವುಕಡಿಮೆಇರುವಕಾರಣತಾನು ಹೋಗದೆ ಅವನಿಗೆ ಟಿಕೆಟ್ ಖರೀದಿಸಿ ಕಳುಹಿಸುವುದು. ಖುಷಿಯಿಂದ ಅವನು ಚಾಲಕನ ಬಳಿ ಕುಳಿತುಕೊಂಡಾಗ ರೈಲು ಚಲಿಸುತ್ತದೆ. ಅಷ್ಟರಲ್ಲಿ ಹಿರಿಯಅಧಿಕಾರಿಯ ಪುಟ್ಟ ಮಗಳು ಬರುತ್ತಾಳೆ.ಅವರ ಸೂಚನೆ ಮೇರೆಗೆರೈಲು ಹಿಂದಕ್ಕೆ ಬರುತ್ತದೆ.ಅವಳು ಚಾಲಕನ ಪಕ್ಕಕ್ಕೆ ಬಂದಾಗ, ಆತನನ್ನು ಹಿಂಬದಿಗೆ ಕಳುಹಿಸಲಾಗುತ್ತದೆ. ಅಂದರೆ ಆ ಕಾಲದಲ್ಲೂ ಬಡವ,ಶ್ರೀಮಂತ, ಅಧಿಕಾರಇತ್ತುಎಂಬುದನ್ನು ಹೇಳಲಾಗಿದೆ. ಕಪ್ಪು ಬಿಳುಪು ಮಾದರಿಯಲ್ಲಿ ಮೂಕಿ ಚಿತ್ರಕ್ಕೆ ಪಾಶ್ವಿಮಾತ್ಯ ಸಂಗೀತ ಸಂಯೋಜಿಸಿದ್ದು, ಚಾರ್ಲಿಚಾಪ್ಲಿನ್‍ಚಿತ್ರ ನೋಡಿದಂತೆ ಭಾಸವಾಗುತ್ತದೆ.ಮಾಸ್ಟರ್ ಮಧುರಚೆನ್ನಿಗಸುಬ್ಬಣ್ಣ, ಗಿರಿಜಾಸಿದ್ದಿ ನಟಿಸಿದ್ದಾರೆ.ಟಿ.ಲಕ್ಷೀಕುಮಾರಿ ಮತ್ತು ದರ್ಶಿನಿವಿನಯ್‍ಕುಮಾರ್ ನಿರ್ಮಾಣವಿದೆ.

ಬಡತನ, ಸ್ಥಳಾಂತರ, ಸಂದರ್ಭಗಳು, ವಿನಾಶ ಹಾಗೂ ಮಾನವೀಯತೆಇವೆಲ್ಲವುಎರಡನೆದಯರಲ್ಲಿಎರಡು ಪಾತ್ರಗಳ ಮೂಲಕ ತೋರಿಸಲಾಗಿದೆ. ವಿಠಲ್‍ಕಾಮತ್, ಸೂರ್ಯನಾರಾಯಣ ಮುಂತಾದವರು ಬಣ್ಣ ಹಚ್ಚಿದ್ದಾರೆ.ಶ್ಯಾಂಹೊನ್ನೂರು ಬಂಡವಾಳ ಹೂಡಿದ್ದಾರೆ.ಎರಡು ಚಿತ್ರಗಳಿಗೂ ಛಾಯಾಗ್ರಹಣ ನಂದೀಶ್‍ರಾಮ್, ಸಂಗೀತ ವೈಶಾಕ್‍ಭಾರ್ಗವ್ ಕೆಲಸ ನಿರ್ವಹಿಸಿದ್ದಾರೆ. ಇತ್ತೀಚೆಗೆವಿಶೇಷ ಪ್ರದರ್ಶನಏರ್ಪಾಟು ಮಾಡಲಾಗಿ ವಿಧಾನ ಪರಿಷತ್ ಸದಸ್ಯ ಶ್ರೀಕಂಠೇಗೌಡ, ನಿರ್ಮಾಪಕರುಗಳಾದ ಟಿ.ಆರ್.ಚಂದ್ರಶೇಖರ್, ಬಿ.ಸುರೇಶ್ ಮುಂತಾದವರು ಹಾಜರಿದ್ದರು.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
11/01/20

For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore