HOME
CINEMA NEWS
GALLERY
TV NEWS
REVIEWS
CONTACT US
ಅಂಡರ್‍ವಲ್ರ್ಡ್ ಪ್ರಭುತ್ವಕ್ಕಾಗಿ ಗ್ಯಾಂಗ್‍ವಾರ್
ದಾದಾ ಈಸ್ ಬ್ಯಾಕ್ ಈವಾರ ರಿಲೀಸಾಗಿರುವ ರೌಡಿಸಂ ಕಥೆ ಹೊಂದಿರೋ ಚಿತ್ರ. ಇದರ ಹೆಸರೇ ಹೇಳುವಂತೆ ಇದೊಂದು ಕ್ರೈಮ್ ಹಿನ್ನೆಲೆಯಲ್ಲಿ ನಡೆಯುವ ಗ್ಯಾಂಗ್‍ವಾರ್ ಕಥಾಹಂದರ ಹೊಂದಿದ ಸಿನಿಮಾ. ಬಹಳ ದಿನಗಳ ನಂತರ ಕನ್ನಡದಲ್ಲಿ ಇಂಥಾ ಸಿನಿಮಾ ಬಂದಿರುವುದು ನೆಮ್ಮದಿಯ ವಿಷಯವೇ. ಸಿಲಿಕಾನ್ ಸಿಟಿ ಎಂದೇ ಹೆಸರಾದ ಬೆಂಗಳೂರು ಅಂಡರ್‍ವಲ್ರ್ಡ್‍ನ್ನು ಆಳಲು ಟಿಪ್ಪು ಮತ್ತು ಡೆಲ್ಲಿ ಎಂಬ ಇಬ್ಬರು ಗ್ಯಾಂಗ್‍ಸ್ಟರ್‍ಗಳು ನಡೆಸುವ ಹೋರಾಟದ ಕಥೆಯೇ ದಾದಾ ಈಸ್ ಬ್ಯಾಕ್ ಚಿತ್ರದ ಜೀವಾಳ. ಸದ್ಯ ಬೆಂಗಳೂರು ಭೂಗತ ಲೋಕವನ್ನು ಆಳುತ್ತಿರುವ ಸೋಮಶೇಖರ್ ಅಲಿಯಾಸ್ ಟಿಪ್ಪುದಾದಾ (ಪಾರ್ಥಿಬನ್)ನಿಂದ ಹೇಗಾದರೂ ಮಾಡಿ ಭೂಗತ ಲೋಕವನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳಬೇಕು ಎಂದು ಡೆಲ್ಲಿ(ಶರತ್ ಲೋಹಿತಾಶ್ವ) ಹೊಂಚು ಹಾಕುತ್ತಿರುತ್ತಾನೆ. ಆದರೆ, ಟಿಪ್ಪು ದಾದಾನ ರೈಟ್ ಅಂಡ್ ಲೆಫ್ಟ್ ಹ್ಯಾಂಡ್ ಆಗಿರುವ ದೊಡ್ಡ(ಅಜಯïರಾಜï ಅರಸ್) ಮತ್ತು ಚಿಕ್ಕ(ಅರುಣï) ಅದಕ್ಕೆ ಅಡ್ಡವಾಗಿರುತ್ತಾರೆ. ಡೆಲ್ಲಿ ಏನೇ ಪ್ರಯತ್ನ ಮಾಡಿದರೂ ಅದಕ್ಕೆ ಚಿಕ್ಕ ಮತ್ತು ದೊಡ್ಡ ಸದಾ ಅಡ್ಡಗಾಲು ಹಾಕುತ್ತಿರುತ್ತಾರೆ. ಹೀಗೆ ಸಾಗುವ ಕಥೆಯಲ್ಲಿ ಹೊಸ ಟ್ವಿಸ್ಟ್ ಕೂಡ ಇದೆ. ಅವರಿಬ್ಬರ ಲೈಫ್‍ನಲ್ಲಿ ಚೆಂದದ ಯುವತಿಯ ಎಂಟ್ರಿ ಆಗುತ್ತದೆ. ಅವಳು ಬಂದಮೇಲೆ ಅವರಿಬ್ಬರ ಜೀವನದಲ್ಲಿ ಏನೇನು ಬದಲಾವಣೆಗಳಾಗುತ್ತದೆ ಎನ್ನುವುದನ್ನು ನಾವು ಹೇಳುವುದಕ್ಕಿಂತ ಥಿಯೇಟರಿಗೆ ಹೋಗಿ ಚಿತ್ರ ನೋಡಿದರೇನೇ ಚೆನ್ನ.

ದಾದಾ ಈಸ್ ಬ್ಯಾಕ್ ಚಿತ್ರದಲ್ಲಿ ಭೂಗತಲೋಕದ ಬಗ್ಗೆ ಸಾಕಷ್ಟು ಹೊಸ ವಿಷಯಗಳನ್ನು ನಿರ್ದೇಶಕ ಸಂತೋಷ್ ಹೇಳುವ ಪ್ರಯತ್ನ ಮಾಡಿದ್ದಾರೆ. ಈ ಚಿತ್ರದಲ್ಲಿ ಕ್ರೈಮïಗಿಂತ ಹೆಚ್ಚಾಗಿ ತ್ಯಾಗದ ಕಥೆಯಿದೆ. ಫಸ್ಟ್ ಹಾಫ್‍ನಲ್ಲಿ ರೌಡಿಸಂ ಹಾಗೂ ಪ್ರೇಮಕಥೆ ತುಂಬಿದ್ದರೆ, ಸೆಕೆಂಡ್ ಹಾಫ್‍ನಲ್ಲಿ ಕಥೆ ಗಂಭೀರವಾಗಿ ಸಾಗುತ್ತದೆ. ಚಿತ್ರದಲ್ಲಿ ಬರುವ ಅನಿರೀಕ್ಷಿತ ಟ್ವಿಸ್ಟ್ ಪ್ರೇಕ್ಷಕರನ್ನು ಹಿಡಿದಿಡುತ್ತದೆ.

ತಮಿಳಿನ ಪಾರ್ಥಿಬನ್ ಈ ಚಿತ್ರದ ಮೂಲಕ ಕನ್ನಡಕ್ಕೆ ಬಂದಿದ್ದಾರೆ. ಅವರು ದಾದಾನ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಚಿತ್ರದ ನಾಯಕರಾದ ಅರುಣï ಹಾಗೂ ಅಜಯï ಇಬ್ಬರಿಗೂ ಹೊಂದುವಂಥ ಪಾತ್ರವಿದೆ. ಶ್ರಾವ್ಯ ತೆರೆಮೇಲೆ ಮುದ್ದು ಮುದ್ದಾಗಿ ಕಾಣ ಸುತ್ತಾರೆ. ಆಕೆಯ ಅಭಿನಯಕ್ಕೆ ಚಿತ್ರದಲ್ಲಿ ಅವಕಾಶವಿಲ್ಲ. ಇನ್ನು ಶರತ್ ಲೋಹಿತಾಶ್ವ, ಸುಧಾರಾಣ , ದತ್ತಣ್ಣ ಇವರೆಲ್ಲ ತಮ್ಮ ಪಾತ್ರಗಳಿಗೆ ಸೂಕ್ತ ನ್ಯಾಯ ಒದಗಿಸಿz್ದÁರೆ.
-24/07/17
ಈ ವಾರ 21-7-2017 ತೆರೆಗೆ ‘’ದಾದಾ ಈಸ್ ಬ್ಯಾಕ್’’
ಕೆಲವೇ ವರ್ಷಗಳ ಹಿಂದೆ `ಗೊಂಬೆಗಳ ಲವ್’ ಎನ್ನುವ ಚಿತ್ರವೊಂದು ತೆರೆಗೆ ಬಂದಿತ್ತು. ಯಾವ ನಿರೀಕ್ಷೆಯೂ ಇಲ್ಲದೆ ಬಿಡುಗಡೆಯಾಗಿದ್ದ ಸಿನಿಮಾ ರಿಲೀಸ್ ಆದ ನಂತರ ಕನ್ನಡದ ಪ್ರೇಕ್ಷಕರು ಮತ್ರವಲ್ಲದೆ, ಜಗತ್ತಿನಾದ್ಯಂತ ಈ ಚಿತ್ರ ಟಾಕ್ ಕ್ರಿಯೇಟ್ ಮಾಡಿತ್ತು.

ಮೊದಲ ಚಿತ್ರದಲ್ಲೇ ಕ್ರಿಯಾಶೀಲ ನಿರ್ದೇಶಕ ಎಂದು ಹೆಸರು ಮಾಡಿದ್ದ ಸಂತೋಷ್ ತಮ್ಮ ಎರಡನೇ ಚಿತ್ರ ದಾದಾ ಈಸ್ ಬ್ಯಾಕ್. ಈ ಚಿತ್ರ ಇದೇ ವಾರ ರಾಜ್ಯಾದ್ಯಂತ ತೆರೆಗೆ ಬರುತ್ತಿದೆ. `ಹುಕುಂ' ಎನ್ನುವ ಪದ ಈ ಚಿತ್ರದ ಕತೆಗೆ ಪ್ರಮುಖ ಲೀಡ್ ಆಗಿದೆಯಂತೆ. ಪಕ್ಕಾ ಮಾಸ್ ಎಂಟರ್‍ಟ್ರೈನ್‍ಮೆಂಟ್ ಕಥಾ ಹಂದರ ಹೊಂದಿರುವ ಈ ಚಿತ್ರದಲ್ಲಿ ರೌಡಿಸಂ ಬಗ್ಗೆ ಈವರೆಗೆ ಬರದ ಅನೇಕ ಸಂಗತಿಗಳು ಅನಾವರಣವಾಗಿವೆಯಂತೆ. ಈ ಹಿಂದೆ ಗೊಂಬೆಗಳ ಲವ್ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದ ಅರುಣ್ ದಾದಾ ಈಸ್ ಬ್ಯಾಕ್ ಚಿತ್ರದಲ್ಲೂ ಹೀರೋ ಆಗಿ ನಟಿಸಿದ್ದಾರೆ. ಶ್ರಾವ್ಯ ನಾಯಕಿಯಾಗಿ ಕಾಣ ಸಿಕೊಂಡಿದ್ದಾರೆ. ಇನ್ನು ಶರತ್ ಲೋಹಿತಾಶ್ವ, ದತ್ತಣ್ಣ, ಸುಧಾರಾಣ , ಅಜಯ್‍ರಾಜ್ ಅರಸ್ ಸೇರಿದಂತೆ ಅನೇಕ ನಟರ ತಾರಾಗಣವಿದೆ. ವಿಶೇಷವೆಂದರೆ, ತಮಿಳಿನ ಖ್ಯಾತ ನಟ ಪಾರ್ಥಿಬನ್ ಈ ಚಿತ್ರದಲ್ಲಿ ಬಹುಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.

ಆ್ಯಪಲ್ ಫಿûಲಂಸ್ ಮತ್ತು ದಯಾನಂದ್ ಸೌಂಡ್ಸ್ ಲಾಂಛನದಲ್ಲಿ ಅಜಯ್ ರಾಜ್ ಅರಸ್ ಮತ್ತು ಡಾ||ಆರ್.ಶಂಕರ್ ಅವರು ನಿರ್ಮಿಸಿರುವ ಈ ಚಿತ್ರಕ್ಕೆ ನಾಗೇಶ್ ಆಚಾರ್ಯ ಅವರ ಛಾಯಾಗ್ರಹಣವಿದೆ. ಅನೂಪ್ ಸೀಳಿನ್ ಸಂಗೀತ ನಿರ್ದೇಶನ ಹಾಗೂ ಅಕ್ಷಯ್ ಪಿ ರಾವ್ ಸಂಕಲನ ಈ ಚಿತ್ರಕ್ಕಿದೆ.
-21/07/17
ದಾದಾ ಚಿತ್ರಕ್ಕೆ ದಾದಾಗಳ ಸಹಕಾರ
‘ದಾದಾ ಈಸ್ ಬ್ಯಾಕ್’ ಚಿತ್ರಕ್ಕೆ ಗಾಂಧಿನಗರದ ದೊಡ್ಡ ಎರಡು ವಿತರಣಾ ಸಂಸ್ಥೆಯು ಬಿಡುಗಡೆ ಮಾಡಲು ಮುಂದೆ ಬಂದಿದ್ದಾರೆ. ಇದರನ್ವಯ ನಿರ್ಮಾಪಕ ಶಂಕರ್ ಮಾದ್ಯಮಗಳ ಮುಂದೆ ನಮ್ಮ ಚಿತ್ರಕ್ಕೆ ಇವರಿಬ್ಬರ ಆಗಮನದಿಂದ ದಾದಾಗಳು ಬಂದಂತೆ ಆಗಿದೆ ಎಂದು ಖುಷಿಯಿಂದ ಹೇಳಿಕೊಂಡರು. ಮೈಸೂರು ಟಾಕೀಸ್‍ನ ಜಾಕ್ ಮಂಜು ತಮ್ಮ ಮಾತಿನಲ್ಲಿ ಚಿತ್ರವು ಚೆನ್ನಾಗಿ ಬಂದಿರುವುದರಿಂದ ಹುಡುಗರಿಗೆ ಪ್ರೋತ್ಸಾಹ ನೀಡಬೇಕು ಎನ್ನುವ ದೃಷ್ಟಿಯಿಂದ ಅದ್ದೂರಿ ಪ್ರಚಾರದೊಂದಿಗೆ ತೆರೆಗೆ ತರಲು ಯೋಜನೆ ಹಾಕಲಾಗಿದೆ. ಏಕಕಾಲಕ್ಕೆ ತಮಿಳಿನಲ್ಲಿ ರಿಲೀಸ್ ಮಾಡದೆ, ಆ ಭಾಷೆಯ ಸಂಪೂರ್ಣ ಹಕ್ಕುಗಳನ್ನು ಮಾರಾಟ ಮಾಡುವ ಇರಾದೆ ಇದೆ. ತಮಿಳು ಚಿತ್ರಮಂದಿರದಲ್ಲಿ ಕನ್ನಡ ಸಿನಿಮಾಗಳು ಗಳಿಕೆ ಬರುವುದಿಲ್ಲ ಅನ್ನುವುದು ತಪ್ಪು ಕಲ್ಪನೆ. ಶಾರದ, ನಟರಾಜ ಚಿತ್ರಮಂದಿರಗಳಲ್ಲಿ ಮಾಸ್ತಿಗುಡಿ, ಚೌಕ ಹಣ ಗಳಿಸಿತು ಎಂದು ವರದಿ ನೀಡಿದರು. ಅನೂಪ್‍ಸೀಳನ್ ಸಂಗೀತದಿಂದ ಪ್ಲಸ್ ಪಾಯಿಂಟ್ ಆಗಿದೆ. ಸಿನಿಮಾ ಒಂದು ರೇಂಜ್‍ಗೆ ತೆಗೆದುಕೊಂಡು ಹೋಗಲಿದೆ ಎಂಬ ನಂಬಿಕೆ ಇದೆ ಅಂತಾರೆ ಹಿರಿಯ ನಿರ್ಮಾಪಕ,ವಿತರಕ ಕನಕಪುರ ಶ್ರೀನಿವಾಸ್.

ಗೊಂಬೆಗಳ ಲವ್ ನಂತರ ನಿರ್ದೇಶಕರು ನನ್ನನ್ನು ಮಾಸ್ ಲುಕ್‍ನಲ್ಲಿ ಕಮರ್ಷಿಯಲ್ ಹೀರೋ ರೀತಿಯಲ್ಲಿ ತೋರಿಸಿದ್ದಾರೆ. ಕೊನೆವರೆಗೂ ತಮಿಳು ನಟ ಪಾರ್ಥಿಬನ್ ಅದೇ ಹೆಸರಿನಲ್ಲಿ ಇರುತ್ತಾರೆ. ಚಿತ್ರಕತೆಗೆ ತಕ್ಕಂತೆ ಅವರನ್ನು ಬಳಸಲಾಗಿದೆ ಎಂಬ ಮಾತು ನಾಯಕ ಅರುಣ್ ಅವರದಾಗಿತ್ತು. ಅವಸಾನದಲ್ಲಿ ನಿರ್ದೇಶಕ ಸಂತೋಷ್ ಸವಿಸ್ತಾರವಾಗಿ ಹೇಳಿಕೊಂಡಿದ್ದು ಹೀಗೆ: ಪ್ರಾರಂಭದಲ್ಲಿ ದಾದಾ ಪಾತ್ರಕ್ಕೆ ಅಮಿತಾಬ್‍ಬಚ್ಚನ್‍ರನ್ನು ಆಯ್ಕೆ ಮಾಡುವ ಸಲುವಾಗಿ ಅವರ ಆಪ್ತಸಹಾಯಕರಲ್ಲಿ ಒಂದು ಸುತ್ತಿನ ಮಾತುಕತೆ ನಡೆಸಲಾಗಿತ್ತು. ಅದು ಕೈಗೂಡದೆ ಇದ್ದಾಗ ಅನಿಲ್‍ಕಪೂರ್, ಮೋಹನ್‍ಲಾಲ್ ಕಾಲ್‍ಶೀಟ್ ಪ್ರಯತ್ನ ಸಪಲವಾಗಲಿಲ್ಲ. ಕೊನೆಗೆ ಪಾರ್ಥಿಬನ್ ಸೂಕ್ತ ನಟ, ದೃಡಕಾಯದ ಮೈಕಟ್ಟು ಇರುವುದರಿಂದ ಅವರನ್ನು ಕೋರಿಕೊಂಡಾಗ ಸಂತೋಷದಿಂದ ನಟಿಸಿ ತಮ್ಮ ಪಾತ್ರಕ್ಕೆ ಡಬ್ ಮಾಡಿದ್ದಾರೆ. ಪ್ರೀತಿ, ಗ್ಯಾಂಗ್‍ವಾರ್ ಕ್ಲೈಮಾಕ್ಸ್‍ನಲ್ಲಿ ಕುಟುಂಬದ ಭಾವನೆಗಳನ್ನು ತೋರಿಸಲಾಗಿದೆ ಎಂದರು. ಚಿತ್ರವು ಸೆನ್ಸಾರ್ ಅಂಗಳದಲ್ಲಿದ್ದು, ನಂತರ ಜನರಿಗೆ ತೋರಿಸಲು ದಾದಾಗಳು ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ.
-28/06/17


DADA IS BACK’ AUDIO LAUNCHED
T
he audio of Kannada film Dada is Back was released at a function in Bengaluru. The film is produced by R Shankar while it is written and directed by Santosh. The film stars Parthiban, Ajay Raj Urs, Shravya Rao and Arun in lead roles. Anoop Seelin has scored the music. Jack Manju is distributing the film.

Speaking on the occasion, Sa Ra Govindu all the artistes are equal be it from any language. He urged film-makers to choose a good story and take enough time to make a good film.

Director Santosh said the film progressed after Parthiban gave his green signal to the story. He said Parthiban sports a ‘panche’ and a white shirt in the movie. He said Parthiban is the film’s biggest strength and that the film moves with ‘hukum’ culture which means order. He said he took a lot of time to write the songs and screenplay as it had to be different from Gombegala Love. He said the film focuses on love, friendship, relationships and humanity.

Arun said the film has a gang war and has been shot in City Market. He said he plays a guy who is seen with Parthiban in the movie and how he looks after him. Ajay said the audiences will get what they want from the movie.

Shravya Rao said the picturisation of the bus stop had been done well. She said the film is a beautiful and a cute love story and she plays a girl who works in a post office.

Distributor Jack Manju said it was gratifying that the team invested the money on the project by themselves instead of going in search of producers.

Parthiban said press is plus for the artistes. He said the director had done a positive political stunt through this movie. He said he likes Kannada but found it difficult to speak the language fluently. He said Cauvery water dispute is politically instigated. He said the real cultural exchange happens when artistes from other states shine in another state. He said he does not have a market but still he got a role to do in a Kannada because of the director. He said he was happy to be acting in a film which has a Vishnuvardhan film title.

Earlier, four songs of the film were screened. Bigg Boss winner Pratham was also present. Manche Gowda of Government Employees Association was also present.
-27/05/18ಕಿಚ್ಚ ಸುದೀಪ್ ಅವರಿಂದ ಅನಾವರಣ
ಕೆಲವೇ ವರ್ಷಗಳ ಹಿಂದೆ `ಗೊಂಬೆಗಳ ಲವ್’ ಎನ್ನುವ ಚಿತ್ರವೊಂದು ತೆರೆಗೆ ಬಂದಿತ್ತು. ಯಾವ ನಿರೀಕ್ಷೆಯೂ ಇಲ್ಲದೆ ಬಿಡುಗಡೆಯಾಗಿದ್ದ ಸಿನಿಮಾ ರಿಲೀಸ್ ಆದ ನಂತರ ಕನ್ನಡದ ಪ್ರೇಕ್ಷಕರು ಮತ್ರವಲ್ಲದೆ, ಜಗತ್ತಿನಾದ್ಯಂತ ಈ ಚಿತ್ರ ಟಾಕ್ ಕ್ರಿಯೇಟ್ ಮಾಡಿತ್ತು.

ಮೊದಲ ಚಿತ್ರದಲ್ಲೇ ಕ್ರಿಯಾಶೀಲ ನಿರ್ದೇಶಕ ಎಂದು ಹೆಸರು ಮಾಡಿದ್ದ ಸಂತೋಷ್ ತಮ್ಮ ಎರಡನೇ ಚಿತ್ರವನ್ನು ಸಂಪೂರ್ಣಗೊಳಿಸಿದ್ದಾರೆ. ಇನ್ನೇನು ತೆರೆಗೆ ಬರಲು ಅಣ ಯಾಗಿರುವ `ದಾದಾ ಈಸ್ ಬ್ಯಾಕ್'ನ ಟ್ರೇಲರ್ ಈಗ ಬಿಡುಗಡೆಯಾಗಿದೆ. ಮಾತ್ರವಲ್ಲ, ಬಿಡುಗಡೆಯಾದ ಎರಡೇ ದಿನಕ್ಕೆ ಯೂ ಟ್ಯೂಬ್‍ನಲ್ಲಿ ಸಂಚಲನ ಮೂಡಿಸಿದೆ. ಟ್ರೈಲರ್ ಬಿಡುಗಡೆಗೂ ಮುನ್ನ ಟ್ರೇಲರ್ ಬಗ್ಗೆಯೇ ಒಂದು ಟ್ರೇಲರ್ ಬಿಡುಗಡೆ ಮಡಿ ಹೊಸತನಕ್ಕೆ ಮುನ್ನುಡಿ ಹಾಕಿದ್ದರು ಸಂತೋಷ್.

ಈಗ `ದಾದಾ ಈಸ್ ಬ್ಯಾಕ್' ಚಿತ್ರದ ಟ್ರೇಲರ್ ಅನ್ನು ಕಿಚ್ಚ ಸುದೀಪ್ ಇತ್ತೀಚೆಗೆ ಟೌನ್ ಹಾಲ್ ಆವರಣದಲ್ಲಿ ಬಿಡುಗಡೆಗೊಳಿಸಿದ್ದರು. ``ದಾದಾ' ಅಂದಕೂಡಲೇ ನಮ್ಮ ತಲೆಗೆ ಬರೋದು ಸಾಹಸ ಸಿಂಹ ಡಾ. ವಿಷ್ಣುವರ್ಧನ್ ಅವರ ಹೆಸರು. ಅವರ ಹೆಸರಲ್ಲಿ ಸಿನಿಮಾ ಮಾಡಿದ್ದಾರೆ. ಅವರ ಆಶೀರ್ವಾದ ಕೂಡಾ ಸಿಕ್ಕರೆ ಸಿನಿಮಾ ದೊಡ್ಡ ಹೆಸರು ಮಾಡೋದರಲ್ಲಿ ಸಂಶಯವಿಲ್ಲ. ಈ ಚಿತ್ರದ ಟ್ರೇಲರ್ ನೋಡಿದರೆ ಅದು ಖಂಡಿತಾ ಸಾಧ್ಯವಾಗುತ್ತದೆ ಅನ್ನೋ ನಂಬಿಕೆ ನನಗಿದೆ'' ಎಂದು ದಾದಾ ಈಸ್ ಬ್ಯಾಕ್ ಚಿತ್ರದ ಬಗ್ಗೆ ಒಳ್ಳೆಯ ಮಾತುಗಳನ್ನಾಡಿದ್ದರು. ಈ ಟ್ರೇಲರ್ ಅನ್ನು ನೋಡಿದ ಯಾರಿಗಾದರೂ ಹಾಗನ್ನಿಸದೇ ಇರಲಾರದು.

ಟ್ರೇಲರ್ ಬಿಡುಗಡೆ ಸಂದರ್ಭದಲ್ಲಿ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಆರ್.ವಿ. ದೇವರಾಜ್ ಅವರ ಪುತ್ರ ಆರ್.ವಿ.ಯುವರಾಜ್, ನಿರ್ಮಾಪಕ ಕನಕಪುರ ಆರ್ ಶ್ರೀನಿವಾಸ್ ಮತ್ತು ಬಿಗ್‍ಬಾಸ್ ಖ್ಯಾತಿಯ ಪ್ರಥಮ್ ಸೇರಿದಂತೆ ಚಿತ್ರರಂಗದ ಅನೇಕ ಗಣ್ಯರು ಪಾಲ್ಗೊಂಡಿದ್ದರು.

`ಹುಕುಂ' ಎನ್ನುವ ಪದ ಈ ಚಿತ್ರದ ಕತೆಗೆ ಪ್ರಮುಖ ಲೀಡ್ ಆಗಿದೆಯಂತೆ. ಹೀಗಾಗಿ ಇದೇ ಶಬ್ದವನ್ನು ಬಳಸಿ ಟ್ರೇಲರ್ ಕೂಡಾ ತಯಾರಿಸಲಾಗಿದೆ. `ಸಿನಿಮಾದ ಕಂಟೆಂಟ್ ಏನಿದೆಯೋ ಅದನ್ನೇ ಟ್ರೇಲರ್ ನಲ್ಲಿ ಬಳಸಬೇಕು' ಅನ್ನೋದು ನಿರ್ದೇಶಕ ಸಂತೋಷ್ ಅವರ ಪ್ಲಾನ್ ಆಗಿತ್ತಂತೆ. ಹಾಗೆಯೇ ಟ್ರೇಲರ್ ಅನ್ನು ಮೂಡಿಸಿದ್ದಾರೆ.

ಪಕ್ಕಾ ಮಾಸ್ ಎಂಟರ್‍ಟ್ರೈನ್‍ಮೆಂಟ್ ಕಥಾ ಹಂದರ ಹೊಂದಿರುವ ಈ ಚಿತ್ರದಲ್ಲಿ ರೌಡಿಸಂ ಬಗ್ಗೆ ಈವರೆಗೆ ಬರದ ಅನೇಕ ಸಂಗತಿಗಳು ಅನಾವರಣವಾಗಿವೆಯಂತೆ. ಈ ಹಿಂದೆ ಗೊಂಬೆಗಳ ಲವ್ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದ ಅರುಣ್ ದಾದಾ ಈಸ್ ಬ್ಯಾಕ್ ಚಿತ್ರದಲ್ಲೂ ಹೀರೋ ಆಗಿ ನಟಿಸಿದ್ದಾರೆ. ಶ್ರಾವ್ಯ ನಾಯಕಿಯಾಗಿ ಕಾಣ ಸಿಕೊಂಡಿದ್ದಾರೆ. ಇನ್ನು ಶರತ್ ಲೋಹಿತಾಶ್ವ, ದತ್ತಣ್ಣ ಸೇರಿದಂತೆ ಅನೇಕ ನಟರ ತಾರಾಗಣವಿದೆ. ವಿಶೇಷವೆಂದರೆ, ತಮಿಳಿನ ಖ್ಯಾತ ನಟ ಪಾರ್ತಿಬನ್ ಈ ಚಿತ್ರದಲ್ಲಿ ಬಹುಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಅನೂಪ್ ಸಿಳೀನ್ ಅತ್ಯುತ್ತಮವಾದ ಸಂಗೀತ ನೀಡಿದ್ದಾರೆ.

ಆಪಲ್ ಫಿಲಮ್ಸ್ ಮತ್ತು ದಯಾನಂದ್ ಸೌಂಡ್ಸ್ ಬ್ಯಾನರ್ ಅಡಿಯಲ್ಲಿ ಡಾ ಶಂಕರ್, ಅಜಯ್ ರಾಜ್ ಅರಸ್ ಈ ಚಿತ್ರವನ್ನು ನಿರ್ಮಿಸಿದ್ದಾರೆ.
ಗೊಂಬೆಗಳ ಲವ್ ಚಿತ್ರದ ಮೂಲಕ ಕ್ರಿಯಾಶೀಲ ತಂಡ ಎನಿಸಿಕೊಂಡ ಈ ಚಿತ್ರತಂಡ `ದಾದಾ ಈಸ್ ಬ್ಯಾಕ್`ನಲ್ಲೂ ಹೊಸ ದಾಖಲೆ ನಿರ್ಮಿಸುವ ಎಲ್ಲ ಸಾಧ್ಯತೆಗಳು ಗೋಚರಿಸುತ್ತಿವೆ.
-2/04/17

DADA IS BACK’ COMPLETES SHOOT
A
fter Gombegala Love, director Santosh has completed shoot for his next film ‘Dada Is Back’, a film on gang wars and human relationships and is eyeing a release in March. The film is produced by Dr  Shankar and Ajay Raj Urs. The film stars Parthiban, Arun, Sharath Lohitaswa, Ajay Raj Urs, Shravya, Dattanna and Sudha Rani among others. Nagesh Acharya is the cameraman and Anoop Seelin has scored the music.

Director Santosh told reporters on Thursday that the film a gang wars is a commercial film with action sequences. Anoop Seelin has scored music for seven years with trailer launch likely to happen soon. He said audiences can expect what they saw in Gombegala Love. He said the film runs on three tracks. While one track is about gang wars, the other one is a family track and another one is about relationships.

He said Parthiban wanted to act in Kannada movies but he hadn’t got the right opportunity. He said the Tamil actor who has also directed films made a lot of preparation in terms of getting the right look for the role and also learnt Kannada by seeing Rajkumar and Vishnuvardhan’s films. The director said there is no reference to Vishnuvardhan in the film as the title might suggest.

Dattanna said he saw Gombegala Love and appreciated the director’s work in taking up such a subject at a young age. He said Dada Is Back also upholds the human relations which has been handled well adding that it is a challenge for both the director and actor.

Producer Ajay Raj Urs said the director is the real hero of the movie that has three heroes – Parthiban, Arun and Ajay. He said the director has saved Rs 25 lakh of the film’s budgeted cost and added that all the artistes had worked with a lot of trust and conviction.

Arun said the film is made in the commercial format but in a different genre. He said Ajay is being introduced and expressed happiness about sharing screen space with Parthiban who will be seen in his first Kannada film. He said the film has a unique climax that is riveting and audiences can expect another round of Gombegala Love kind of response.

Shravya Rao said the film has all the elements – romance, love, comedy and emotion. She said she had been waiting for the completion of the film and its release. She said she plays a lower middle-class girl working in a garment unit in this love story.

The director said the film’s audio release is expected to happen soon adding that the film will release in March. 
-6/01/17

For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore