HOME
CINEMA NEWS
GALLERY
TV NEWS
REVIEWS
CONTACT US
ಕಾಲೇಜು ಹುಡುಗ ಹುಡುಗಿಯರ ಕಥನ
ಮೂರನೆ ಬಾರಿ ನಿರ್ದೇಶನ ಮಾಡಿರುವ ಶಂಕರ್‍ಅರುಣ್ ಅವರ ‘ಕಾಲೇಜು ಕುಮಾರಿ’ ಸಿನಿಮಾದಲ್ಲಿ ಕಾಮಿಡಿ, ಡಬ್ಬಲ್ ಮೀನಿಂಗ್ ಸಂಭಾಷಣೆ, ಸಾಹಸಎಲ್ಲವು ಪೂರ್ಣ ಪ್ರಮಾಣದ ಮನರಂಜನೆಯಿಂದ ಕೂಡಿದೆ ಅಂತ ಬಣ್ಣಸಿಕೊಳ್ಳುತ್ತಾರೆ. ಜೊತೆಗೆ ತಂದೆ-ತಾಯಿ ಹೆಣ್ಣುಮಕ್ಕಳನ್ನು ಯಾವ ರೀತಿ ಬೆಳೆಸ್ತಾರೆ. ಅವರ ದೃಷ್ಟಿಕೋನದಲ್ಲಿ ಆಕೆ ಚಿಕ್ಕವಳು, ಆದರೆ ಸಮಾಜಕ್ಕೆ ದೊಡ್ಡವಳಾಗಿರುತ್ತಾಳೆ. ಹೆಣ್ಣಿನಿಂದ ಯಶಸ್ಸು, ಸೋಲು ಎರಡು ಇದೆ ಎಂಬುದಕ್ಕೆ ಸಾಕಷ್ಟು ಪುರಾವೆಗಳು ಇದೆ. ಅದರಿಂದ ಕತೆಯಲ್ಲಿ ಎರಡನ್ನು ಸರಿಸಮನಾಗಿ ತೋರಿಸುವ ಪ್ರಯತ್ನ ಮಾಡಲಾಗಿದೆ. ಮತ್ತು ಒಂದು ಪ್ರೀತಿಗೆ ಮತ್ತೋಬ್ಬ ಪ್ರವೇಶ ಮಾಡಿದಾಗ ಏನಾಗುತ್ತದೆ. ಕುಡಿತ ಕಿಕ್ ಕೊಡುತ್ತದೆ. ಹುಡುಗೀರು ಡ್ಯಾಶ್ ಕೊಡುತ್ತಾರೆಂದು ಹೇಳಲಾಗಿದೆ.

ಕಾಲೇಜಿನಲ್ಲಿ ಹುಡುಗೀರು ಇಬ್ಬರು ಹುಡುಗರನ್ನು ಬಳಸಿಕೊಂಡು ಯಾವ ರೀತಿ ಮೋಸಮಾಡುತ್ತಾರೆ. ಇಂತಹ ಹುಡುಗಿಯುರ ಹಿಂದೆ ಹೋದರೆ ಏನಾಗುತ್ತೀರಾ. ಇವರೊಂದಿಗೆ ಎಚ್ಚರಿಕೆಯಿಂದ ಹೆಜ್ಜೆ ಹಾಕಿ ಎಂಬುದನ್ನು ಸಂದೇಶದ ಮೂಲಕ ಹೇಳಲಾಗಿದೆ. ನೈಜ ಘಟನೆಗಳನ್ನು ತೆಗೆದುಕೊಂಡು, ಅದಕ್ಕೆ ಕಾಲ್ಪನಿಕ ಸನ್ನಿವೇಶಗಳನ್ನು ಸೃಷ್ಟಿಸಲಾಗಿದೆ. ಚರಣ್‍ರಾಜ್, ಜೀವಾ ಮತ್ತು ವಿಕ್ರಮ್‍ಕಾರ್ತಿಕ್ ನಾಯಕರುಗಳು. ರುಚಿತ ನಾಯಕಿ. ಈಕೆ ಓದುತ್ತಿರುವ ಕಾಲೇಜಿನಲ್ಲಿ ನಡೆದ ಕೆಲವೊಂದು ಘಟನೆ ನೋಡಿದ್ದನ್ನು ನಿರ್ದೇಶಕರಿಗೆ ತಿಳಿಸಿದ್ದಾರೆ. ಅದನ್ನೆ ಚಿತ್ರಕತೆಯಾಗಿ ಮಾರ್ಪಡಿಸಲಾಗಿದೆ. ಹಾಡುಗಳಿಗೆ ಅವಶ್ಯಕತೆ ಇರುವುದಿಲ್ಲ. ಸಂಗೀತ ಉತ್ತಮ್‍ರಾಜ್, ಛಾಯಾಗ್ರಹಣ ವಿಘ್ನೇಶ್, ಸಂಕಲನ ಸುರೇಶ್ ಅವರದಾಗಿದೆ. ನಿರ್ದೇಶಕರೊಂದಿಗೆ ಸೋದರ ರಾಕಿ, ಗೆಳಯ ಕುಮಾರಸ್ವಾಮಿ ಒಕ್ಕರೂಲದಿಂದ ನಿರ್ಮಾಣ ಮಾಡಿದ್ದಾರೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
30/09/19

For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore