HOME
CINEMA NEWS
GALLERY
TV NEWS
REVIEWS
CONTACT US
ಭ್ರಮಾ ಲೋಕದಲ್ಲೊಂದು ವಿನೂತನಚಿತ್ರಕಥಾ
ರವಿವರ್ಮನಚಿತ್ರಕಲೆಯಲ್ಲಿ ಅರಳುವ ಕಲಾಕೃತಿಗೆಜೀವ ನೀಡುವುದುಅಸಾಧ್ಯ. ಆದರೆಅವನದೇಕಲ್ಪನೆಯಲ್ಲಿ ಕಲಾಕೃತಿಗಳು ಜೀವಂತವಾಗಿರುತ್ತದೆ.ಆತನಧೋರಣೆಯಲ್ಲಿಒಂದು ಸುಂದರಕಲಾಕೃತಿಯನ್ನುಚೆಂದವಾಗಿಸಬಹುದು, ಇಲ್ಲವೆ ವಿರೂಪಗೊಳಸಬಹುದು.ಹಾಗೆ ಕಲಾವಿದನೊಬ್ಬನಿಂದ ವಿರೂಪಗೊಂಡಕಲಾಕೃತಿಯೇ ‘ಚಿತ್ರಕಥಾ’ ಸಿನಿಮಾದಒನ್ ಲೈನ್ ಸ್ಟೋರಿಯಾಗಿದೆ.ಅಸಹಜವಾದಕಥನದಲ್ಲಿ ವಾಸ್ತವ ಮತ್ತು ಭ್ರಮೆ ಇವುಗಳ ನಡುವಿನ ವ್ಯಥೆಯಾಗಿದೆ.ಶೀರ್ಷಿಕೆ ಕೇಳಿದಾಗ ಚಿತ್ರವೊಂದರ ಒಳಗಿನ ಸಿನಿಮಾ ಅನಿಸಬಹುದು.ಅದನ್ನು ಪೂರ್ಣವಾಗಿ ಆ ರೀತಿ ಹೇಳದೆ ಕಲಾವಿದನೊಬ್ಬನ ಭ್ರಮೆಯ ಲೋಕವನ್ನುಚಿತ್ರದ ಮೂಲಕ ಬಿಚ್ಚಿಡುವ ಪ್ರಯತ್ನ ಮಾಡಲಾಗಿದೆ.ಕಥಾನಾಯಕರಾಣಾಗೆತಾನೊಬ್ಬಚಿತ್ರ ನಿರ್ದೇಶಕನಾಗುವ ಕನಸು.ಆದರೆ ಬರುವ ಅಡೆತಡೆಗಳಿಂದ ಆಸೆಯು ಭಗ್ನಗೊಳ್ಳುತ್ತಲಿರುವುದರಿಂದ ಕೊರತೆಕಾಡುತ್ತಿರುತ್ತದೆ.ಮತ್ತೋಂದುಕಡೆ ಪ್ರೀತಿಸಿದ ಹುಡುಗಿ ಸಿಗುತ್ತಿಲ್ಲವೆಂಬ ನೋವು.ಇದರಿಂದಕುಡುಕನಾಗುತ್ತಾನೆ. ಇದರ ಮಧ್ಯೆಅಘೋರಿ ಎಂಬ ಪಾತ್ರವು ಇವನಿಗೆ ತೊಂದರೆಕೊಡುತ್ತದೆ.ಇದನ್ನು ಬೆನ್ನು ಹತ್ತುವ ಸೈಕ್ರಿಯಾಟಿಕ್ ವೈದ್ಯೆ.ಇದರ ನಂತರ ಬೇರೆ ಭಾಗವೊಂದು ತೆರೆದುಕೊಳ್ಳುತ್ತದೆ.ಅದುಯಾವರೀತಿಯದ್ದುಎಂದು ಹೇಳುವುದೇ ಚಿತ್ರದ ಸಾರಾಂಶವಾಗಿದೆ.

ಹಿರಿಯ ಕಲಾವಿದರುಗಳಾದ ಬಿ.ಜಯಶ್ರೀ, ಸುಧಾರಾಣಿ, ದಿಲೀಪ್‍ರಾಜ್ ಇವರುಗಳ ನಟನೆಯಿಂದ ಸಿನಿಮಾಕ್ಕೆ ಕಳೆ ಬಂದಿದೆ. ಹೊಸಬರುಗಳಾದ ಸುಜಿತ್‍ರಾಥೋಡ್, ಸುಕ್ತಾ,ಮೇಘ ನೀಡಿದ ಕೆಲಸವನ್ನುಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಮೊದಲ ಪ್ರಯತ್ನದಲ್ಲೆ ನಿರ್ದೇಶಕ ಯಶಸ್ವಿಬಾಲಾದಿತ್ಯ ಶ್ರಮ ಪರದೆ ಮೇಲೆ ಕಾಣಿಸುತ್ತದೆ. ಥ್ರಿಲ್ಲರ್‍ಜಾನರ್‍ಆಗಿರುವುದರಿಂದಚೇತನ್‍ಕುಮಾರ್ ಸಂಗೀತ ಪರಿಣಾಮಕಾರಿಯಾಗಿದೆ. ಇದಕ್ಕೆ ಪೂರಕಎನ್ನುವಂತೆಛಾಯಾಗ್ರಹಣ, ಸಂಕಲನ ಸನ್ನಿವೇಶಕ್ಕೆಅಡ್ಡಿಉಂಟು ಮಾಡಿಲ್ಲ. ಸೈಕಲಾಜಿಕಲ್‍ಥ್ರಿಲ್ಲರ್‍ಅದರಲ್ಲೂ ಪ್ರೇಮಿಗಳಿಗೆ ಹೇಳಿ ಮಾಡಿಸಿದಂತಿದೆ .
ನಿರ್ಮಾಣ: ಪ್ರಜ್ವಲ್.ಎಂ.ರಾಜಾ
ಸಿನಿ ಸರ್ಕಲ್.ಇನ್ ವಿಮರ್ಶೆ
***
13/07/19

ಬಿಡುಗಡೆಗೆ ಸಿದ್ದ ಚಿತ್ರಕಥಾ
ಹೊಸಬರೇಸೇರಿಕೊಂಡು‘ಚಿತ್ರಕಥಾ’ ಸಿನಿಮಾವನ್ನು ಸಿದ್ದಪಡಿಸಿದ್ದಾರೆ. ಒಬ್ಬಕಲಾವಿದಕಷ್ಟಪಟ್ಟುಒಂದು ಹಂತದಾಟಿದ ಮೇಲೆ, ಆತನಗುರಿ,ಕಲೆಗೆಗುರುತು ಸಿಗುತ್ತದೆ. ಅದನ್ನು ಗಳಿಸಲು ಬಣ್ಣದ ಲೋಕದ ಪಯಣದಲ್ಲಿಯಾವರೀತಿಯಲ್ಲಿ ಮಾನಸಿಕವಾಗಿ ಸಿದ್ದನಾಗುತ್ತಾನೆ, ಈ ದಾರಿಯ ಮಧ್ಯೆ ಬರುವ ಅವಘಡಗಳನ್ನು ಹೇಗೆ ಎದುರಿಸುತ್ತಾನೆಎಂಬುದನ್ನು ಸೆಸ್ಪನ್ಸ್ ,ಥ್ರಿಲ್ಲರ್ ಮಾದರಿಯಲ್ಲಿತೋರಿಸಲಾಗಿದೆ. ಆನಿಮೇಶನ್‍ದಲ್ಲಿ ಪರಣಿತರಾಗಿರುವ ಯಶಸ್ವಿಬಾಲಾದಿತ್ಯಾ ಕತೆ ಬರೆದು ನಿರ್ದೇಶನ ಮಾಡಿದ್ದಾರೆ. ಬೆಂಗಳೂರು, ಕೇರಳ, ಮಂಗಳೂರು, ಮಡಕೇರಿಕಡೆಗಳಲ್ಲಿ ಕ್ಯಾಮಾರಓಡಾಡಿದೆ.

ಸುಜಿತ್‍ರಾಥೋಡ್ ನಾಯಕನಾಗಿ ನಿರ್ದೇಶಕನ ಪಾತ್ರದಲ್ಲಿ ನಟಿಸಿದ್ದಾರೆ. ವೈದ್ಯೆಯಾಗಿ ಸುಧಾರಾಣಿ, ಜೀವನದಅರ್ಥ ತಿಳಿಸುವ ತಬಲಾನಾಣಿ, ನಟನಾಗಿ ದಿಲೀಪ್‍ರಾಜ್, ಕೊರವಂಜಿ ಹೇಳುವ ಹಿರಿಯ ನಟಿ ಬಿ.ಜಯಶ್ರೀ ನಟನೆಜೊತೆಗೆಒಂದು ಹಾಡಿಗೆಕಂಠದಾನ ಮಾಡಿದ್ದಾರೆ. ಹೊಸ ಪ್ರತಿಭೆಗಳಾದ ಮೇಧಾ, ಆದರ್ಶ್.ಹಚ್.ಎಸ್., ಅನುಷಾರಾವ್. ಮಹಂತೇಶ್ ತಾರಬಳಗದಲ್ಲಿ ಇದ್ದಾರೆ. ಎರಡು ಹಾಡುಗಳಿಗೆ ಚೇತನ್‍ಕುಮಾರ್ ಸಂಗೀತವಿದೆ. ಛಾಯಾಗ್ರಹಣತನ್ವಿಕ್.ಜಿ, ಸಂಕಲನ ಮಧುತುಂಬಕೆರೆ, ಕಲೆ ರಘುಪ್ರವೀಣ್‍ಕೃಷ್ಣಮೂರ್ತಿ ನಿರ್ವಹಿಸಿದ್ದಾರೆ. ಇಂಜನಿಯರ್ ಸಹಪಾಠಿ ನಾಯಕನಾಗುತ್ತಿರುವಕಾರಣ ಪ್ರಜ್ವಲ್.ಎಂ.ರಾಜ ನಿರ್ಮಾಣ ಮಾಡಿರುವಚಿತ್ರವು ಶುಕ್ರವಾರದಂದು ಬಿಡುಗಡೆಯಾಗಲಿದೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
9/07/19

ನವಪ್ರತಿಭೆಗಳಿಂದ ಸಿದ್ದಗೊಂಡಿರುವ ಚಿತ್ರ
ಬಣ್ಣದ ಲೋಕಕ್ಕೆ ಯುವ ಪ್ರತಿಭೆಗಳು ಹೆಚ್ಚಾಗಿ ಬರುತ್ತಿರುವುದು ಆರೋಗ್ಯಕರ ಬೆಳವಣಿಗೆಯಾಗಿದೆ. ಅದರಂತೆ ಇಪ್ಪತ್ತೈದು ವರ್ಷ ಒಳಗಿನವರು ಸೇರಿಕೊಂಡು ‘ಚಿತ್ರಕಥಾ’ ಸಿನಿಮಾವನ್ನು ಸಿದ್ದಪಡಿಸಿದ್ದಾರೆ. ಒಬ್ಬ ಕಲಾವಿದ ಕಷ್ಟಪಟ್ಟು ಒಂದು ಹಂತ ದಾಟಿದ ಮೇಲೆ, ಆತನ ಗುರಿ,ಕಲೆಗೆ ಗುರುತು ಸಿಗುತ್ತದೆ. ಅದನ್ನು ಗಳಿಸಲು ಬಣ್ಣದ ಲೋಕದ ಪಯಣದಲ್ಲಿ ಯಾವ ರೀತಿಯಲ್ಲಿ ಮಾನಸಿಕವಾಗಿ ಸಿದ್ದನಾಗುತ್ತಾನೆ, ಈ ದಾರಿಯ ಮಧ್ಯೆ ಬರುವ ಅವಘಡಗಳನ್ನು ಹೇಗೆ ಎದುರಿಸುತ್ತಾನೆ ಎಂಬುದನ್ನು ಸೆಸ್ಪನ್ಸ್ ,ಥ್ರಿಲ್ಲರ್ ಮಾದರಿಯಲ್ಲಿ ತೋರಿಸಲಾಗಿದೆ. ಆನಿಮೇಶನ್‍ದಲ್ಲಿ ಪರಣಿತರಾಗಿರುವ ಯಶಸ್ವಿಬಾಲಾದಿತ್ಯಾ ಕತೆ ಬರೆದು ನಿರ್ದೇಶನ ಮಾಡಿದ್ದಾರೆ. ಬೆಂಗಳೂರು, ಕೇರಳ, ಮಂಗಳೂರು, ಮಡಕೇರಿ ಕಡೆಗಳಲ್ಲಿ ಕ್ಯಾಮಾರ ಓಡಾಡಿದೆ.

ಸುಜಿತ್‍ರಾಥೋಡ್ ನಾಯಕನಾಗಿ ನಿರ್ದೇಶಕನ ಪಾತ್ರದಲ್ಲಿ ನಟಿಸಿದ್ದಾರೆ. ವೈದ್ಯೆಯಾಗಿ ಸುಧಾರಾಣಿ, ಜೀವನದ ಅರ್ಥ ತಿಳಿಸುವ ತಬಲಾನಾಣಿ, ನಟನಾಗಿ ದಿಲೀಪ್‍ರಾಜ್, ಕೊರವಂಜಿ ಹೇಳುವ ಹಿರಿಯ ನಟಿ ಬಿ.ಜಯಶ್ರೀ ನಟನೆ ಜೊತೆಗೆ ಒಂದು ಹಾಡಿಗೆ ಕಂಠದಾನ ಮಾಡಿದ್ದಾರೆ. ಹೊಸ ಪ್ರತಿಭೆಗಳಾದ ಮೇಧಾ, ಆದರ್ಶ್.ಹಚ್.ಎಸ್., ಅನುಷಾರಾವ್. ಮಹಂತೇಶ್ ತಾರಬಳಗದಲ್ಲಿ ಇದ್ದಾರೆ. ಎರಡು ಹಾಡುಗಳಿಗೆ ಚೇತನ್‍ಕುಮಾರ್ ಸಂಗೀತವಿದೆ. ಛಾಯಾಗ್ರಹಣ ತನ್ವಿಕ್.ಜಿ, ಸಂಕಲನ ಮಧುತುಂಬಕೆರೆ, ಕಲೆ ರಘುಪ್ರವೀಣ್‍ಕೃಷ್ಣಮೂರ್ತಿ ನಿರ್ವಹಿಸಿದ್ದಾರೆ. ಇಂಜನಿಯರ್ ಸಹಪಾಠಿ ನಾಯಕನಾಗುತ್ತಿರುವ ಕಾರಣ ಪ್ರಜ್ವಲ್.ಎಂ.ರಾಜ ನಿರ್ಮಾಣ ಮಾಡಿದ್ದಾರೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
31/05/19
For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore