HOME
CINEMA NEWS
GALLERY
TV NEWS
REVIEWS
CONTACT US
63ನೇ ದಿನದಲ್ಲಿ ಕೆಮಿಸ್ಟ್ರೀ ಆಫ್ ಕರಿಯಪ್ಪ
‘ಕೆಮಿಸ್ಟ್ರಿ ಆಫ್ ಕರಿಯಪ್ಪ’ ಸತತ 63 ದಿನಗಳ ಕಾಲ ಚಿತ್ರಮಂದಿರದಲ್ಲಿ ಇರುವುದರಿಂದ ನಿರ್ಮಾಪಕರು ಸಣ್ಣದೊಂದು ಸಮಾರಂಭ ನಡೆಸಿ ಫಲಕಗಳನ್ನು ವಿತರಿಸಲಾಯಿತು.

ಸತ್ಯ ಘಟನೆಯ ಸೂಕ್ಷ ವಿಷಯಗಳ ಚಿತ್ರಕ್ಕೆ ಕಡಿಮೆ ಬಜೆಟ್‍ನಲ್ಲಿ ನಿರ್ಮಾಣ ಮಾಡಿರುವುದು ಇತರರಿಗೆ ನಾಂದಿಯಾಗಿದೆ. ಒಳ್ಳೆಯ ಅಂಶಗಳು ಇದ್ದರೆ ಅದೇ ಹೀರೋ ಆಗುತ್ತದೆ. ಮುಖ್ಯವಾಗಿ ಕತೆ ಚೆನ್ನಾಗಿದ್ದರೆ ನಿರ್ದೇಶಕರು ಗೆದ್ದಂಗೆ. ಇದಕ್ಕೆ ಪೂರಕವಾಗಿ ಕಲಾವಿದರು ಅಗತ್ಯವಾಗಿರುತ್ತದೆ. ತಬಲನಾಣಿ ಚೆನ್ನಾಗಿ ನಟಿಸಿ ಇತರರನ್ನು ಮೇಲಕ್ಕೆ ಎತ್ತಿದ್ದಾರೆ. ಚಿಕ್ಕ, ದೊಡ್ಡ ವಿಡಂಬನಾತ್ಮಕ ವಿಚಾರಗಳು, ಅಬ್ಬರದ ಪ್ರಚಾರವಿಲ್ಲದೆ ಈ ಮಟ್ಟಿಗೆ ಹೋಗಿದೆ. ಇದೊಂದು ಉತ್ತಮವಾದ ದಿನ. ಇನ್ನಷ್ಟು, ಮತ್ತುಷ್ಟು ಸಿನಿಮಾ ಮಾಡ್ತಾ ಇರಿ ಎಂದು ತಂಡವನ್ನು ನೀನಾಸಂ ಸತೀಶ್ ಹುರುದುಂಬಿಸಿದರು.

ಸತ್ಯ ಎಲ್ಲಿ ಇರುತ್ತದೆಯೋ ಅಲ್ಲಿ ಸುಖ ಇರುತ್ತದೆ. ಸತ್ಯಕ್ಕೆ ಸಾವಿಲ್ಲ. ಅದರಲ್ಲಿ ನೋವು ಇರುತ್ತದೆ. ನಮ್ಮಂತ ಕಲಾವಿದರು ಕಲಿಯುಗದಲ್ಲಿ ಕಲಿತಾನೆ ಇರಬೇಕಾಗುತ್ತದೆ. ಮಾತೇ ಬಂಡವಾಳ ಆಗಿದ್ದರಿಂದ ನಿರ್ದೇಶಕರು ಅಂದು ಕೊಂಡ ಬಜೆಟ್‍ದಲ್ಲಿ ಮಾಡಿ ಮುಗಿಸಿದ್ದಾರೆ. ಗೆಲುವು ನಮ್ಮ ಕೈನಲ್ಲಿ ಇಲ್ಲ. ಅದು ಆಗಬೇಕು. ಯಾರು ದೊಡ್ಡೋರಲ್ಲ. ಯಾರನ್ನು ಕಡೆಗಣಿಸಬಾರದು. ನಿರ್ದೇಶಕರ ತಾಳ್ಮಗೆ ಧನ್ಯವಾದ. ಬೆಂಕಿ ಹೃದಯಕ್ಕೆ ಕಟ್ಟಿಕೊಡಬೇಕು. ಬೇರಯವರಿಗೆ ಕಾವು ಕೊಟ್ಟರೆ ಅಹಂ ಆಗುತ್ತದೆ. ಪ್ರತಿಭೆ, ಶ್ರಮ ಜೊತೆಗೆ ಅದೃಷ್ಟ ಇದ್ದರೆ ನಮ್ಮನ್ನು ಎಲ್ಲಿಗೋ ತೆಗೆದುಕೊಂಡು ಹೋಗುತ್ತದೆ. 113 ಚಿತ್ರಗಳಲ್ಲಿ ನಟಿಸಿದ್ದರೂ ಇಲ್ಲಿರುವ ಹೊಂದಾಣಿಕೆ ಎಲ್ಲಿಯೂ ಕಂಡಿಲ್ಲ. ಇದಕ್ಕೆ ಸಾಕ್ಷಿ ಕೆಮಿಸ್ಟ್ರೀ ಆಫ್ ಕರಿಯಪ್ಪನೆಂದು ತಬಲನಾಣಿ ಕಿವಿ ಮಾತು ಹೇಳಿದರು.

ನಾಯಕ ಚಂದನ್, ನಾಯಕಿ ಸಂಜನಾಆನಂದ್ ಮೊದಲ ಚಿತ್ರದಲ್ಲೆ ಗೆಲುವು ಕಂಡಿದ್ದಕ್ಕೆ ಖುಷಿ ಎಂಬುದು ಒಕ್ಕರೂಲ ಮಾತಾಗಿತ್ತು. ಕರಿಯಪ್ಪ ನಮ್ಮ ಬಾಳಿನಲ್ಲಿ ಬಣ್ಣ ತುಂಬಿದ್ದಾರೆ. ಎಲ್ಲರ ಸಹಕಾರದಿಂದ ಸಕ್ಸಸ್ ಕಂಡಿದೆ. ಇದೇ ತಂತ್ರಜ್ಘರೊಂದಿಗೆ ಮುಂದೊಂದು ಸಿನಿಮಾ ಮಾಡುತ್ತಿರುವುದಾಗಿ ನಿರ್ದೇಶಕ ಕುಮಾರ್ ಮಾತಿಗೆ ವಿರಾಮ ಹಾಕಿದರು.

ಕರಿಯಪ್ಪ ಸಂಸಾರ ಚೆನ್ನಾಗಿದೆ ಎಂಬುದಕ್ಕೆ ಇಂದು ಎಲ್ಲರೂ ಸೇರಿರುವುದು ಕಾರಣವಾಗಿದೆ ಎಂದು ನಿರ್ಮಾಪಕ ಡಾ.ಡಿ.ಎಸ್.ಮಂಜುನಾಥ್ ಸಿನಿಮಾ ಹುಟ್ಟಿದ ಬಗೆಯನ್ನು ನೆನಪು ಮಾಡಿಕೊಂಡರು. ವಿತರಕ ವಿಜಯ್, ಅಯೋಗ್ಯ ನಿರ್ದೇಶಕ ಮಹೇಶ್‍ಕುಮಾರ್, ಗುಲ್ಟು ನಾಯಕ ನವೀನ್‍ಶಂಕರ್, ಗಾಯಕ ನವೀನ್‍ಸಜ್ಜು, ಸಂಗೀತ ನಿರ್ದೇಶಕ ಆರವ್‍ರುಶಿಕ್, ಸುಪ್ರತ್. ಭರ್ಜರಿಚೇತನ್‍ಕುಮಾರ್ ಮುಂತಾದವರು ಶುಭ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಸಿನಿ ಸರ್ಕಲ್.ಇನ್ ನ್ಯೂಸ್
20/05/19
ನಾಯಕನ ಮೇಲೆ ಕರಿಯಪ್ಪನಿಗೆ ಸಿಟ್ಟು
ನಾಯಕಿಯರು ಪ್ರಚಾರಕ್ಕೆ ಬರುತ್ತಿಲ್ಲವೆಂದು ಪ್ರಸಕ್ತ ಸುದ್ದಿಯಾಗುತ್ತಿದೆ. ಪರಂತು ಈಗ ‘ಕೆಮಿಸ್ಟ್ರೀ ಆಫ್ ಕರಿಯಪ್ಪ’ ಚಿತ್ರದ ನಾಯಕ ಚಂದನ್‍ಆಚಾರ್ ಅವರ ಮೇಲೆ ನಿರ್ಮಾಪಕ ಡಾ.ಮಂಜುನಾಥ್.ಡಿ.ಎಸ್. ಕಿಡಿ ಕಾರಿದ್ದಾರೆ. ಸಂತೋಷಕೂಟದಲ್ಲಿ ಅವರು ಮಾತನಾಡುತ್ತಾ ಭಾನುವಾರ ದಿನದ ಕಲೆಕ್ಷನ್ ಮೊತ್ತವನ್ನು ಯೋಧರ ಕುಟುಂಬಕ್ಕೆ ನೀಡಲಾಗಿದೆ. ಇಲ್ಲಿಯವರೆಗೂ ಮಲ್ಟಿಫ್ಲೆಕ್ಸ್‍ಗಳಲ್ಲಿ ತುಂಬಿದ ಪ್ರದರ್ಶನ ಕಾಣುತ್ತಿದೆ. ಪತ್ರಿಕೆಗಳಲ್ಲಿ ಉತ್ತಮ ವಿಮರ್ಶೆ ಬಂದ ಕಾರಣ ಜನರು ಚಿತ್ರಮಂದಿರಕ್ಕೆ ಬರುತ್ತಿದ್ದಾರೆ. ಇದಕ್ಕಾಗಿ ಮಾದ್ಯಮದವರಿಗೆ ಥ್ಯಾಂಕ್ಸ್ ಹೇಳಬೇಕಾಗುತ್ತದೆ. ಮೊದಲವಾರ ಒಟ್ಟಾರೆ 80 ಲಕ್ಷ ಬಂದಿದೆ. ನಾಯಕ ಪ್ರಚಾರಕ್ಕೆ ಬರುತ್ತಿಲ್ಲ. ಚಿತ್ರೀಕರಣದಲ್ಲೂ ಸರಿಯಾದ ಸಮಯಕ್ಕೆ ಬರುತ್ತಿಲ್ಲವೆಂದು ನಿರ್ದೇಶಕರು ಈಗ ಹೇಳುತ್ತಾರೆ. ಯಾವುದೇ ಸಂಭಾವನೆ ಉಳಿಸಿಕೊಳ್ಳದೆ ಚುಕ್ತ ಮಾಡಲಾಗಿದೆ. ಇವರ ವಿರುದ್ದ ಕಲಾವಿದರ ಸಂಘ ಮತ್ತು ವಾಣಿಜ್ಯ ಮಂಡಳಿಗೆ ದೂರ ನೀಡಲು ಚಿಂತನೆ ನಡೆಸಲಾಗಿದೆ. ಮೊದಲೇ ತಿಳಿಸಿದಂತೆ ಸೇಫ್ ಆಗಿದ್ದು, ಕರಿಯಪ್ಪ ನಮ್ಮೆಲ್ಲರನ್ನು ಕೈ ಹಿಡಿದರೆಂದು ಖುಷಿಯಿಂದ ಹೇಳಿಕೊಂಡರು. ಮೊದಲ ಸಿನಿಮಾದಲ್ಲೆ ಒಳ್ಳೆ ಪ್ರತಿಭೆ ತೋರಿಸುವ ಅವಕಾಶ ಸಿಕ್ಕಿದ್ದಕ್ಕೆ ಖುಷಿಯಾಗಿದೆ ಅಂತಾರೆ ನಾಯಕಿ ಸಂಜನಾಆನಂದ್.

ಬರವಣಿಗೆಯಿಂದ ಟಾಕೀಸ್‍ನಲ್ಲಿ ಶಿಳ್ಳೆ, ಚಪ್ಪಾಳೆ ಬರುತ್ತಿರುವುದನ್ನು ನೋಡಿದಾಗ ಶ್ರಮ ಸಾರ್ಥಕವಾಗಿದೆ ಎನ್ನುತ್ತಾರೆ ರಚನೆ, ನಿರ್ದೇಶನ ಮಾಡಿರುವ ಕುಮಾರ್. ಕರ್ನಾಟಕದ ಜನರು ಒಂದು ಬಾರಿಯಾದರೂ ಕರಿಯಪ್ಪನನ್ನು ನೋಡಬೇಕೆಂದು ಹೆಂಡತಿಯಾಗಿ ಕಾಣಿಸಿಕೊಂಡಿರುವ ಅಪೂರ್ವ ಮನವಿ ಮಾಡಿದರು. ನಿರ್ಮಾಪಕರು ಅಪಾಯವನ್ನು ಲೆಕ್ಕಿಸದೆ ಬಿಡುಗಡೆ ಮಾಡಿದ್ದಕ್ಕೆ ಸಕ್ಸಸ್ ಕಂಡಿದ್ದಾರೆ. ಮುಂದಿನವಾರದಿಂದ ಹೆಚ್ಚಿನ ಐದು ಕೇಂದ್ರಗಳಲ್ಲಿ ಬಿಡುಗಡೆಯಾಗಲಿದೆ ಎಂದು ವಿತರಕ ವಿಜಯ್ ಹೇಳಿದರು.

ಜನರು ಅಪ್ಪಿಕೊಂಡು ನಮ್ಮಂತ ಸಣ್ಣ ಕಲಾವಿದರ ಚಿತ್ರಕ್ಕೆ ಆರ್ಶಿವಾದ ಮಾಡಿದ್ದಾರೆ. ಈ ಚಿತ್ರದಿಂದ ನಾಲ್ಕು ಅವಕಾಶಗಳು ಒದಗಿಬಂದಿದೆ. ಎರಡರಲ್ಲಿ ತಂದೆ, ಮಾಸ್ಟರ್, ಉಡಾಫೆ. ನಾಯಕನ ಕುರಿತು ಪ್ರಸ್ತಾಪಿಸುತ್ತಾ ಈ ಮಣ್ಣು ಅಹಂಕಾರ ತೋರಿದವರನ್ನು ಎಂದಿಗೂ ಬಿಟ್ಟಿಲ್ಲ. ಅವರ ಜೀವನದ ಜವಬ್ದಾರಿಯನ್ನು ತಿಳಿದುಕೊಂಡರೆ ಮುಂದಕ್ಕೆ ಹೋಗುತ್ತಾರೆ. ಮಿಕ್ಕಿದ್ದು ಅವರಿಗೆ ಬಿಟ್ಟಿದ್ದು. ನಿರ್ದೇಶಕರು ನನ್ನ ಮೇಲೊಂದು ‘ನ್ಯಾನೋ ನಾರಾಯಪ್ಪ’ ಚಿತ್ರ ಮಾಡಲು ಒಂದು ಏಳೆ ಕತೆ ಹೇಳಿದ್ದಾರೆ ಅಂತ ತಬಲನಾಣಿ ಮಾತಿಗೆ ವಿರಾಮ ಹಾಕಿದರು.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
27/02/19
ಕರಿಯಪ್ಪ ನಿರ್ಮಾಪಕರಿಂದ ಯೋಧ ಗುರು ಕುಟುಂಬಕ್ಕೆ ಧನಸಹಾಯ
ಹಾಸ್ಯ ಚಿತ್ರ ‘ಕೆಮಿಸ್ಟ್ರೀ ಆಫ್ ಕರಿಯಪ್ಪ’ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದೆ. ನಿರ್ಮಾಪಕ ಡಾ.ಡಿ.ಎಸ್.ಮಂಜುನಾಥ್ ಅವರಿಗೆ ಒಂದು ಕಡೆ ಸಂತೋಷವಾಗಿದ್ದರೆ, ಪುಲ್ವಾಮದಲ್ಲಿ ಆತ್ಮಾಹುತಿ ದಾಳಿಗೆ ತುತ್ತಾದ ವೀರಯೋಧರುಗಳ ಮರಣ ನೋವು ತಂದಿದೆಯಂತೆ. ಅದರಲ್ಲಿ ಮಂಡ್ಯಾ ಮೂಲದವರು ಒಬ್ಬರಾಗಿರುವುದು ಖೇದದ ವಿಷಯವಾಗಿದೆ. ಇದಕ್ಕಾಗಿ ನಿರ್ಮಾಪಕರು ಭಾನುವಾರ ಗಳಿಕೆಯಾದ ಹಣವನ್ನು ಗುರು ಅವರ ಕುಟುಂಬಕ್ಕೆ ನೀಡಲು ನಿರ್ಣಯ ತೆಗೆದುಕೊಂಡಿದ್ದರು. ಅದರಂತೆ ದುಖ:ತಪ್ತರ ಮನೆಗೆ ತೆರೆಳಿ ಸಾಂತ್ವನ ಹೇಳಿ ಚೆಕ್ ಮೂಲಕ ಹಣವನ್ನು ಪಾವತಿಸಿದ್ದಾರೆ. ಇದೇ ಸಂದರ್ಭದಲ್ಲಿ ಕಲಾವಿದರಾದ ತಬಲನಾಣಿ, ಅಪೂರ್ವ ಮತ್ತು ನಾಯಕಿ ಸಂಜನಾಆನಂದ್ ಉಪಸ್ತಿತರಿದ್ದರು.
ಸಿನಿ ಸರ್ಕಲ್.ಇನ್ ನ್ಯೂಸ್
23/02/19
ಕರಿಯಪ್ಪನ ಕೆಮಿಸ್ಟ್ರೀ ವರ್ಕ್‍ಔಟ್ ಆಯ್ತು
‘ಕೆಮಿಸ್ಟ್ರೀ ಆಫ್ ಕರಿಯಪ್ಪ’ ಚಿತ್ರದ ಕಾಲು ಭಾಗವು ಹುಡುಗಿ ಹುಡುಕಾಟ. ಉಳಿದ ಅರ್ಧಭಾಗ ಮದುವೆ, ನಂತರ ನ್ಯಾಯಾಲಯದಲ್ಲಿ ನಡೆಯುವ ವಿಚ್ಚೇದನ ನಾಟಕ. ಇವೆಲ್ಲವನ್ನು ಹಾಸ್ಯದಲ್ಲಿ ತೋರಿಸುವ ಪ್ರಯತ್ನ ಮಾಡಲಾಗಿದೆ. ಮಂಡ್ಯಾ ಜಿಲ್ಲೆಯಲ್ಲಿ ನಡೆದ ನೈಜ ಘಟನೆ ಆಧಾರಿತ ಕತೆಯಲ್ಲಿ ಅಪ್ಪ, ಅಮ್ಮ, ಮಗ, ಸೊಸೆ ನಾಲ್ಕು ಜನರ ಸುತ್ತ ಕತೆ ಸಾಗುತ್ತದೆ. ಸಿನಿಮಾವು ಕಾಮಿಡಿ, ಭಾವನೆಗಳು, ವಿಚಾರ ಇರಲಿದೆ. ಹಳ್ಳಿ ಮನೆಯಲ್ಲಿ ನಡೆಯುವುದನ್ನು ಪಾತ್ರವಾಗಿ ತೋರಿಸಲಾಗಿದೆ. ಚಿಕ್ಕ ಸಂಸಾರದಲ್ಲಿ ಅರ್ಥ ಮಾಡಿಕೊಂಡರೆ ಬದುಕು ಸುಲಭ. ಎಲ್ಲರಿಗೂ ಸಮಸ್ಯೆ ಇರುತ್ತದೆ. ಜಗಳವಾಡದೆ ಸಮಂಜಸವಾಗಿ ಮಾತನಾಡಿದರೆ ಕಷ್ಟಗಳು ಬಗೆ ಹರಿಯುತ್ತೆ. ಮಾತೇ ಬಂಡವಾಳ ಆಗಿದೆ. ಮಕ್ಕಳನ್ನು ಲೋಕ ಜ್ಘಾನ ಇಲ್ಲದೆ ಬೆಳಸಿದರೆ, ಮುಂದೆ ತಂದೆಯಾದವನ ಕರ್ತವ್ಯ ಏನಾಗುತ್ತದೆ. ಅದನ್ನು ತಿದ್ದಿ ಹೇಗೆ ಸರಿದಾರಿಗೆ ಎಂಬುದು ಒಂದು ಏಳೆಯ ಸಾರಾಂಶವಾಗಿದೆ.

ತಬಲನಾಣಿ ಇಡೀ ಚಿತ್ರವನ್ನು ಕರಿಯಪ್ಪನಾಗಿ ಹೆಗಲೆ ಮೇಲೆ ಹೊತ್ತುಕೊಂಡಿದ್ದಾರೆ ಎನ್ನಬಹುದು. ಅವರ ಅಭಿನಯ, ಹಾವಬಾವ ಎಲ್ಲವನ್ನು ನೋಡುವುದೇ ಖುಷಿ ಕೊಡುತ್ತದೆ. ಪ್ರತಿ ದೃಶ್ಯದಲ್ಲೂ ಕಾಮಿಡಿ ಮಾಡುತ್ತಾ ಸೂಕ್ಷ ವಿಷಯಗಳನ್ನು ಸಂದೇಶದ ಮೂಲಕ ಬೆಳಕು ಚೆಲ್ಲುವ ಪ್ರಯತ್ನ ಮಾಡಿರುವುದು ಕಂಡುಬರುತ್ತದೆ. ನಾಯಕ ಚಂದನ್‍ಆಚಾರ್ ಮೈಕಟ್ಟಿಗೆ ಹೇಳಿ ಮಾಡಿಸಿದಂತ ಪಾತ್ರವಾಗಿದೆ. ನಾಯಕಿ ಸಂಜನಾಆನಂದ್ ನಟನೆ ಕೆಲವು ಕಡೆ ಚೂಚ್ಚಲ ಚಿತ್ರ ಅನಿಸುವುದಿಲ್ಲ. ಉಳಿದಂತೆ ಕರಿಯಪ್ಪನ ಹೆಂಡತಿಯಾಗಿ ಅಪೂರ್ವ, ಮೈಕೋನಾಗರಾಜ್, ಸುಚೇಂದ್ರಪ್ರಸಾದ್, ರಾಕ್‍ಲೈನ್ ಸುಧಾಕರ್ ಕೊಟ್ಟ ಪಾತ್ರವನ್ನು ಚೆನ್ನಾಗಿ ನಿಭಾಯಿಸಿದ್ದಾರೆ. ಆರವ್‍ರಿಶಿಕ್ ಸಂಗೀತದಲ್ಲಿ ‘ಸುಪ್ರಭಾತ ಶುರುವಾಯ್ತು’ ಗುನುಗುವಂತಿದೆ. ಶಿವಸೇನ ಛಾಯಾಗ್ರಹಣ ಕೋರ್ಟ್ ಸೀನ್ ಚೆಂದ ಕಾಣಿಸುತ್ತದೆ. ನಿರ್ಮಾಪಕ ಡಾ.ಡಿ.ಎಸ್.ಮಂಜುನಾಥ್ ವಕೀಲ ಪಾತ್ರ ಚಿಕ್ಕದಾಗಿದ್ದರೂ ಗಮನ ಸೆಳೆಯುತ್ತಾರೆ. ಈಗಿನ ತಲೆಮಾರಿನ ಚಿತ್ರವಾಗಿದ್ದರಿಂದ ಎಲ್ಲರೂ ಇಷ್ಟಪಡುವಂತಿದೆ.
ಸಿನಿ ಸರ್ಕಲ್.ಇನ್ ವಿಮರ್ಶೆ
***
17/02/19

ತೆರೆಗೆ ಸಿದ್ದ ಕೆಮಿಸ್ಟ್ರೀ ಆಫ್ ಕರಿಯಪ್ಪ
ಹಾಸ್ಯ ಚಿತ್ರ ‘ಕೆಮಿಷ್ಟ್ರೀ ಆಫ್ ಕರಿಯಪ್ಪ’ ತಂಡವು ಕೊನೆ ಬಾರಿ ಮಾದ್ಯಮದ ಮುಂದೆ ಹಾಜರಾಗಿತ್ತು. ಹಳ್ಳಿ ಮನೆಯಲ್ಲಿ ನಡೆಯುವುದನ್ನು ಪಾತ್ರವಾಗಿ ತೋರಿಸಲಾಗಿದೆ. ಚಿಕ್ಕ ಸಂಸಾರದಲ್ಲಿ ಅರ್ಥ ಮಾಡಿಕೊಂಡರೆ ಬದುಕು ಸುಲಭ ಎಂಬುದು ಚಿತ್ರದ ತಿರುಳಾಗಿದೆ. ತುಂಬಾ ಜವಬ್ದಾರಿ ಇರುವ ಮಕ್ಕಳು ಹುಟ್ಟಿದರೆ ತಂದೆಯಾದವನ ಕರ್ತವ್ಯ ಏನಾಗುತ್ತದೆ. ಮನೆಗೆ ದೀಪ ಹಚ್ಚ ಬೇಕಾದವಳು, ಬೆಂಕಿ ಹಚ್ಚುವಂತಹ ಕೆಲಸ ಮಾಡಿದರೆ ಪರಿಣಾಮ ಎಲ್ಲಿಗೆ ಹೋಗುತ್ತದೆ. ಇದನ್ನು ಪರಿಹರಿಸುವುದು ಹೇಗೆಂದು ಹಾಸ್ಯದ ಮೂಲಕ ತೋರಿಸಲಾಗಿದೆ ಅಂತ ಕರಿಯಪ್ಪನಾಗಿ ನಟಿಸಿರುವ ತಬಲನಾಣಿ ವ್ಯಾಖ್ಯಾನವನ್ನು ತೆರೆದಿಟ್ಟರು.

35 ವರ್ಷದ ಯುವಕನ ಮನಸ್ಸು ಸಮಾಜದ ಮೇಲೆ ಹೇಗೆ ಕಾಣಿಸುತ್ತದೆ. ರ್ಯಾಂಬೋದಲ್ಲಿ ನಾಣಿ ಸರ್ ಅವರೊಂದಿಗೆ ನಟಿಸುವಾಗ ಸೈಕೆಲ್ ಹೊಡೆದಿದ್ದೆ. ಇಂದು ಅವರೊಂದಿಗೆ ನಾಯಕನಾಗಿ ನಟಿಸಿದ್ದು ಖುಷಿ ತಂದಿದೆ ಅಂತಾರೆ ಚಂದನ್‍ಆಚಾರ್. ಅಪ್ಪ ಮಗನ ಸಂಸಾರವನ್ನು ಉಳಿಸಲು ಏನೆಲ್ಲಾ ಕಸರತ್ತು ಮಾಡುತ್ತಾನೆ ಎಂಬುದು ಹೇಳಲಾಗಿದೆ. ಸೊಸೆಯಾಗಿ ಮೊದಲ ಚಿತ್ರದಲ್ಲಿ ಅವಕಾಶ ನೀಡಿದ್ದಕ್ಕೆ ಥ್ಯಾಂಕ್ಸ್ ಎಂದರು ನಾಯಕಿ ಸಂಜನಾಆನಂದ್.

ಬಿಡುಗಡೆ ಮುಂಚೆ ಲಾಭದಲ್ಲಿದ್ದೇನೆಂದು ಖುಷಿಯಿಂದ ನಿರ್ಮಾಪಕ ಡಾ.ಮಂಜುನಾಥ್.ಡಿಎಸ್ ಮಾತನಾಡಿದರು. ಮುಂದುವರೆಸುತ್ತಾ ಮಂಡ್ಯಾ ಜಿಲ್ಲೆಯಲ್ಲಿ ನಡೆದ ನೈಜ ಘಟನೆ ಆಧಾರಿತ ಕತೆಯಲ್ಲಿ ಅಪ್ಪ, ಅಮ್ಮ, ಮಗ, ಸೊಸೆ ನಾಲ್ಕು ಜನರ ಸುತ್ತ ಕತೆ ಸಾಗುತ್ತದೆ. ಎರಡನೆ ಬಾರಿ ನಿರ್ಮಾಣಮಾಡಿ ವಕೀಲ ಪಾತ್ರಕ್ಕೆ ಬಣ್ಣ ಹಚ್ಚಿರುವುದು ಖುಷಿ ತಂದಿದೆ. ಸಿನಿಮಾವು ಕಾಮಿಡಿ, ಭಾವನೆಗಳು, ವಿಚಾರ ಇರಲಿದೆ. ಯಾವುದೇ ದೃಶ್ಯಕ್ಕೆ ಕತ್ತರಿ ಹಾಕದೆ ಯುಎ ಪ್ರಮಾಣ ಪತ್ರ ನೀಡಿದ್ದಾರೆ. ನಾಲ್ಕು ವಿತರಕರು ತುಣುಕುಗಳನ್ನು ನೋಡಿ ತಾವಾಗಿಯೇ ಮುಂದೆ ಬಂದು ಬಿಡುಗಡೆ ಮಾಡಲು ಆಸಕ್ತಿ ತೋರಿಸಿದ್ದಾರೆ. ವಾಹಿನಿ, ಡಿಜಿಟಲ್ ಹಕ್ಕುಗಳು ಉತ್ತಮ ಬೆಲೆಗೆ ನೀಡಲಾಗಿದೆ ಎಂದರು. ವಿತರಕ ವಿಜಯ್ ಮುಖಾಂತರ ಇದೇ ಶುಕ್ರವಾರದಂದು ಚಿತ್ರವು ಬಿಡುಗಡೆಯಾಗಲಿದೆ.
ಸಿನಿ ಸರ್ಕಲ್.ಇನ್ ನ್ಯೂಸ್
10/02/19ಕರಿಯಪ್ಪನ ಹಾಡು ಪಾಡು
ಸಂಯುಕ್ತ-2 ನಿರ್ಮಾಪಕ ‘ಕೆಮಿಸ್ಟ್ರೀ ಆಫ್ ಕರಿಯಪ್ಪ’ ಹಾಸ್ಯ ಚಿತ್ರಕ್ಕೆ ಹಣ ಹೂಡಿದ್ದಾರೆ. ಪ್ರಚಾರದ ಮೊದಲ ಹಂತವಾಗಿ ಆಡಿಯೋ ಸಿಡಿಯು ಕಲಾವಿದರ ಸಂಘದಲ್ಲಿ ಅನಾವರಣಗೊಂಡಿತು. ನೈಜ ಘಟನೆ ಆಧಾರಿತ ಕತೆಯಾಗಿದೆ ಅಂತ ಸಿನಿಮಾ ಹುಟ್ಟಿದ ಬಗೆಯನ್ನು ನೆನಪು ಮಾಡಿಕೊಂಡ ಡಾ.ಡಿ.ಎಸ್.ಮಂಜುನಾಥ್ ಬೇರೆ ಚಿತ್ರ ನಿರ್ಮಾಣ ಮಾಡುವುದನ್ನು ಪಕ್ಕಕ್ಕೆ ಇಟ್ಟು ಇದನ್ನು ತೆಗೆದುಕೊಳ್ಳಲಾಯಿತು. ವಕೀಲನ ಪಾತ್ರಕ್ಕೆ ಬಣ್ಣ ಹಚ್ಚಿರುವುದಾಗಿ ಹೇಳಿಕೊಂಡರು.

ಬಣ್ಣ ಕಪ್ಪು ಇರುವುದೇ ವರವಾಯಿತು. ಅದಕ್ಕೆ ಕರಿಯಪ್ಪನಾಗಿ ನಟಿಸಲು ಅವಕಾಶ ಸಿಕ್ಕಿತ್ತು. ಹಳ್ಳಿ ಮನೆಯಲ್ಲಿ ನಡೆಯುವುದನ್ನು ಪಾತ್ರವಾಗಿ ತೋರಿಸಲಾಗಿದೆ. ಚಿಕ್ಕ ಸಂಸಾರದಲ್ಲಿ ಅರ್ಥ ಮಾಡಿಕೊಂಡರೆ ಬದುಕು ಸುಲಭ ಎಂಬುದು ಚಿತ್ರದ ತಿರುಳಾಗಿದೆ. ತುಂಬಾ ಜವಬ್ದಾರಿ ಇರುವ ಮಕ್ಕಳು ಹುಟ್ಟಿದರೆ ತಂದೆಯಾದವನ ಕರ್ತವ್ಯ ಏನಾಗುತ್ತದೆ. ಮನೆಗೆ ದೀಪ ಹಚ್ಚ ಬೇಕಾದವಳು, ಬೆಂಕಿ ಹಚ್ಚುವಂತಹ ಸೊಸೆ ಬಂದರೆ ಪರಿಣಾಮ ಎಲ್ಲಿಗೆ ಹೋಗುತ್ತದೆ. ಇದನ್ನು ಪರಿಹರಿಸುವುದು ಹೇಗೆಂದು ಹಾಸ್ಯದ ಮೂಲಕ ತೋರಿಸಲಾಗಿದೆ ಎಂದು ವ್ಯಾಖ್ಯಾನವನ್ನು ತಬಲನಾಣಿ ಕೊಟ್ಟರು.

35 ವರ್ಷದ ಯುವಕನ ಮನಸ್ಸು ಸಮಾಜದ ಮೇಲೆ ಹೇಗೆ ಕಾಣಿಸುತ್ತದೆ. ರ್ಯಾಂಬೋದಲ್ಲಿ ನಾಣಿ ಸರ್ ಅವರೊಂದಿಗೆ ನಟಿಸುವಾಗ ಸೈಕೆಲ್ ಹೊಡೆದಿದ್ದೆ. ಇಂದು ಅವರೊಂದಿಗೆ ನಾಯಕನಾಗಿ ನಟಿಸಿದ್ದು ಖುಷಿ ತಂದಿದೆ ಅಂತಾರೆ ಚಂದನ್.
ಅಪ್ಪ ಮಗನ ಸಂಸಾರವನ್ನು ಉಳಿಸಲು ಏನೆಲ್ಲಾ ಕಸರತ್ತು ಮಾಡುತ್ತಾನೆ ಎಂಬುದು ಹೇಳಲಾಗಿದೆ. ಸೊಸೆಯಾಗಿ ಮೊದಲ ಚಿತ್ರದಲ್ಲಿ ಅವಕಾಶ ನೀಡಿದ್ದಕ್ಕೆ ಥ್ಯಾಂಕ್ಸ್ ಎಂದರು ನಾಯಕಿ ಸಂಜನಾಆನಂದ್.

‘ಊರ್ವಶಿ ಅವಳು’ ಹಾಡು ವೈರಲ್ ಆಗಿದೆ. ಕುಟುಂಬ ಸಮೇತ ನೋಡಬಹುದಾದ ಸಿನಿಮಾ. ಮುಂದಿನ ತಿಂಗಳು ಬಿಡುಗಡೆ ಮಾಡಲು ಯೋಜನೆ ಹಾಕಿಕೊಂಡಿದೆ ಎಂಬುದು ನಿರ್ದೇಶಕ ಕುಮಾರ್ ಮಾತು.

ಸಿಂಕ್ ಸೌಂಡ್‍ದಲ್ಲಿ ಡಬ್ಬಿಂಗ್ ಮಾಡಿರುವುದು ಛಾಲೆಂಜಿಂಗ್ ಆಗಿತ್ತು. ಮೂರು ಹಾಡುಗಳಿಗೆ ಸಾಹಿತ್ಯವನ್ನು ನಿರ್ದೇಶಕರು ರಚಿಸಿದ್ದಾರೆಂದು ಸಂಗೀತ ನಿರ್ದೇಶಕ ಅರವ್‍ರಿಶಿಕ್ ಹೇಳಿದರು. ಗೆಳಯನ ಚಿತ್ರಕ್ಕೆ ಶುಭ ಹಾರೈಸಲು ಮಿತ್ರ ಆಗಮಿಸಿದ್ದರು. ಸ್ಯಾಂಡಲ್‍ವುಡ್‍ನಲ್ಲಿ ಪ್ರಥಮ ಎನ್ನುವಂತೆ 2ಡಿಯಲ್ಲಿ ಸಿದ್ದಪಡಿಸಿರುವ ಅನಿಮೇಶನ್ ಪಾತ್ರಗಳು, ಎರಡು ಹಾಡು ಮತ್ತು ಟ್ರೈಲರ್‍ನ್ನು ತೋರಿಸಲಾಯಿತು. ಶೋಕಗೀತೆಗೆ ಧ್ವನಿಯಾಗಿರುವ ವಾಣಿಹರಿಕೃಷ್ಣ ಉಪಸ್ತಿತರಿದ್ದರು.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
23/01/19
For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore