HOME
CINEMA NEWS
GALLERY
TV NEWS
REVIEWS
CONTACT US
ಆಕ್ಷನ್ ಪ್ರಿಯರಿಗೆ ಇಷ್ಟವಾಗುವ ಚಾಣಾಕ್ಷ
ಕ್ಯಾಡ್‍ಬರೀಸ್ ಎಂದೇ ಗುರುತಿಸಿಕೊಂಡಿದ್ದ ಧರ್ಮಕೀರ್ತಿರಾಜ್ ಚೂಚ್ಚಲಬಾರಿ ‘ಚಾಣಾಕ್ಷ’ ಚಿತ್ರದ ಮೂಲಕ ತಾನು ಕೂಡ ಆಕ್ಷನ್ ಮಾಡಬಲ್ಲೆ ಎಂದು ನಿರೂಪಿಸಿದ್ದಾರೆ. ಕತೆ ಸಿಂಪಲ್ ಆಗಿದ್ದರೂ ಅದನ್ನು ತೋರಿಸಿರುವ ರೀತಿ ವಿನೂತನವಾಗಿದೆ. ತಂದೆಯ ಕನಸನ್ನು ನನಸು ಮಾಡಲು ಆತ ಮಾಡುತ್ತಿದ್ದ ವೃತ್ತಿಯಾದರೂ ಏನು? ಅದಕ್ಕಾಗಿ ತನ್ನ ಬುದ್ದಿವಂತಿಕೆಯನ್ನು ಹೇಗೆ ಉಪಯೋಗಿಸುತ್ತಾನೆ. ಸಿನಿಮಾ ಕುರಿತು ಹೇಳುವುದಾದರೆ ಕಥಾನಾಯಕ ಶಾಸಕರ 50 ಕೋಟಿಯನ್ನು ಲಪಟಾಯಿಸುತ್ತಾನೆ. ಇದರಿಂದ ಪೋಲೀಸರು ಇವನ ಬೆನ್ನ ಹಿಂದೆ ಬೀಳುತ್ತಾರೆ. ಇವರಿಂದ ತಪ್ಪಿಸಿಕೊಳ್ಳಲು ಒಂದು ಊರಿನಲ್ಲಿ ರಕ್ಷಣೆ ಪಡೆದುಕೊಳ್ಳುತ್ತಾನೆ. ಅಲ್ಲೊಂದು ಪ್ರೀತಿ ಚಿಗುರುತ್ತದೆ. ನಾಯಕನನ್ನು ಹಿಡಿಯಲು ಒಂದು ಕಡೆ ಶಾಸಕರ ಕಡೆಯವರು, ಮತ್ತೋಂದು ಕಡೆ ಪೋಲೀಸ್ ತಂಡವು ಹಿಡಿಯಲು ಹೋದಾಗ ನಡೆಯುವ ಎಂಟು ನಿಮಿಷದ ಸಾಹಸ ದೃಶ್ಯಗಳು ನೋಡುವಾಗ ಮೈ ಜುಂ ಅನಿಸುತ್ತದೆ. ಮುಂದೇನು ಆಗುತ್ತದೆ ಎಂಬುದನ್ನು ನಾವು ಹೇಳಿದರೆ ನೀವುಗಳು ಚಿತ್ರಮಂದಿರಕ್ಕೆ ಹೋಗುವುದಿಲ್ಲ. ಅದಕ್ಕಾಗಿ ಇಲ್ಲಿಯೇ ನಿಲ್ಲಿಸುವುದು ಸೂಕ್ತ.

ಡ್ಯಾನ್ಸ್, ಫೈಟುಗಳಲ್ಲಿ ಶ್ರಮವಹಿಸಿರುವ ಧರ್ಮಕೀರ್ತಿರಾಜ್ ನಟನೆ ಚಿತ್ರಕ್ಕೆ ಹೈಲೈಟ್ ಆಗಿದೆ. ನಾಯಕಿಯಾಗಿ ಅರ್ಚನರಾವ್ ನಗುವಿನಲ್ಲೆ ಕಾಲ ಕಳೆಯುತ್ತಾರೆ. ಒಂದು ಹಾಡಿಗೆ ಬಂದು ಹೋಗುವ ಸುಷ್ಮಿತಾಗೌಡ, ಐಟಂ ಹಾಡಿಗೆ ಮತ್ತೋಬ್ಬ ನಟಿ ಹೆಜ್ಜೆ ಹಾಕಿದ್ದಾರೆ. ತಂದೆಯಾಗಿ ವಿನೋಧ್‍ಆಳ್ವ ಕೆಲವೇ ನಿಮಿಷದಲ್ಲಿ ಕಾಣಿಸಿಕೊಳ್ಳುತ್ತಾರೆ. ನಗಿಸಲು ಕುರಿಸುನಿಲ್, ಖಳನಟನಾಗಿ ಶೋಭರಾಜ್ ಆರ್ಭಟಿಸಿದ್ದಾರೆ. ಕಡಕ್ ಪೋಲಿಸ್ ಅಧಿಕಾರಿಯಾಗಿ ಹುಬ್ಬಳ್ಳಿ ಭಾಷೆಯಲ್ಲಿ ಮಾತನಾಡಿರುವ ಅಭಯ್‍ಗೆ ಪಾತ್ರ ಸೂಟ್ ಆಗಿದೆ.ಅಭಿಮನ್‍ರಾಯ್ ರಾಗ ಸಂಯೋಜಿಸಿರುವುದರಲ್ಲಿ ಎರಡು ಗೀತೆಗಳು ಕೇಳಬಲ್. ನಿರ್ದೇಶಕರಾಗಿ ಮಹೇಶ್‍ಚಿನ್ಮಯ್ ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಥ್ರಿಲ್ಲರ್‍ಮಂಜು-ಡಿಫರೆಂಟ್‍ಡ್ಯಾನಿ-ವಿನೋಧ್ ಸಾಹಸ, ಕುಮಾರ್.ಸಿ.ಹೆಚ್. ಸಂಖಲನ, ಸಿ.ಎಸ್.ರಮೇಶ್‍ಛಾಯಾಗ್ರಹಣ ತ್ರ್ರಿಭುವನ್-5ಸ್ಟಾರ್‍ಗಣೇಶ್ ನೃತ್ಯ ಇವೆಲ್ಲವೂ ಸಿನಿಮಾಕ್ಕೆ ಪೂರಕವಾಗಿದೆ. ಈ ಕಾಲದ ಯುವ ಜನಾಂಗಕ್ಕೆ ಚಾಣಾಕ್ಷ ಇಷ್ಟವಾಗುತ್ತಾನೆ.
ನಿಮಾಪಕರು: ಜಿ.ವೆಂಕಟೇಶ್‍ಮೂರ್ತಿ
ಸಿನಿ ಸರ್ಕಲ್.ಇನ್ ವಿಮರ್ಶೆ
***
23/03/19ಅಬ್ಬರಿಸಲು ಬರುತ್ತಿದ್ದೇನೆ ಚಾಣಾಕ್ಷ
ಅಪ್ಪನ ಕನಸನ್ನು ಚಾಣಾಕ್ಷನಾಗಿ ಮಗ ಹೇಗೆ ನಿಭಾಯಿಸುತ್ತಾನೆ ಎಂಬುದು ‘ಚಾಣಾಕ್ಷ’ ಚಿತ್ರದ ಒನ್ ಲೈನ್ ಸ್ಟೋರಿಯಾಗಿದೆ. ಜೊತೆಗೆ ರೈತರ ಸಮಸ್ಯೆಗಳು, ಅದಕ್ಕೆ ಪರಿಹಾರ ಏನು ಎಂಬುದನ್ನು ಹೇಳುವ ಪ್ರಯತ್ನ ಮಾಡಲಾಗಿದೆ. ತಂದೆಯಾಗಿ ಹಿರಿಯ ನಟ ವಿನೋಧ್‍ಆಳ್ವ, ಅಣ್ಣ ಮಾಡುವ ಒಳ್ಳೆ ಕೆಲಸಗಳಿಗೆ ಅಡ್ಡಗಾಲು ಹಾಕುವ ತಮ್ಮನಾಗಿ ಪ್ರದೀಪ್. ಕಡಕ್ ಪೋಲೀಸ್ ಅಧಿಕಾರಿಯಾಗಿ ಹುಬ್ಬಳ್ಳಿ ಭಾಷೆಯಲ್ಲಿ ಮಾತನಾಡುವ ಅಭಯ್, ನಗಿಸಲು ಕೆಂಪೆಗೌಡ ಮುಂತಾದವರು ನಟಿಸಿದ್ದಾರೆ. ಕತೆ ಬರೆದು ನಿರ್ದೇಶನ ಮಾಡಿರುವುದು ಮಹೇಶ್‍ಚಿನ್ಮಯ್. ಸಂಗೀತ ಅಭಿಮನ್‍ರಾಯ್ ಅವರದಾಗಿದೆ.

ಛಾಯಾಗ್ರಹಣ ಸಿ.ಹೆಚ್.ರಮೇಶ್, ಸಂಕಲನ ಕುಮಾರ್.ಸಿ.ಹೆಚ್, ಸಾಹಸಗಳಿಗೆ ವಿನೋಧ್, ಡಿಫರೆಂಟ್‍ಡ್ಯಾನಿ, ನೃತ್ಯ ತ್ರಿಭುವನ್-5ಸ್ಟಾರ್ ಗಣೇಶ್ ಅವರು ನಿರ್ವಹಿಸಿದ್ದಾರೆ. ಬಿಡುಗಡೆ ಮುಂಚೆ ಬಾಲಿವುಡ್‍ಗೆ ಡಬ್ಬಿಂಗ್ ಹಕ್ಕುಗಳು ನಲವತ್ತು ಲಕ್ಷಕ್ಕೆ ಮಾರಾಟವಾಗಿದೆ. 1994ರಲ್ಲಿ ತೆರೆಕಂಡಿದ್ದ ಲಾಕಪ್‍ಡೆತ್ ಆಕ್ಷನ್‍ದಂತೆ ಇದರಲ್ಲೂ ಅಂತಹುದೆ ದೃಶ್ಯಗಳು ಇರುವುದು ಪ್ಲಸ್ ಪಾಯಿಂಟ್ ಆಗಿದೆ. ಹಿಂದಿನ ಚಿತ್ರದಲ್ಲಿ ಕೆಲಸ ಮಾಡಿದ ಥ್ರಿಲ್ಲರ್‍ಮಂಜು ಸಾರಥ್ಯದಲ್ಲಿ ಶೂಟ್ ಮಾಡಲಾಗಿದೆ. ನಾಯಕನನ್ನು ಪರಿಚಯಿಸುವಾಗ ಎಂಟು ನಿಮಿಷದ ದೃಶ್ಯಗಳಲ್ಲಿ ಬೈಕ್, ರೋಪ್ ಎಲ್ಲವು ಕಾಣಿಸಿಕೊಳ್ಳುತ್ತದಂತೆ. ನವಗ್ರಹ ಚಿತ್ರದಲ್ಲಿ ಕ್ಯಾಡ್‍ಬರೀಸ್ ಅಂತ ಗುರುತಿಸಿಕೊಂಡಿದ್ದ ಧರ್ಮಕೀರ್ತಿರಾಜ್ ಈ ಸಿನಿಮಾದ ಮೂಲಕ ಆಕ್ಷನ್ ಹೀರೋ ಆಗಿ ಕಾಣಿಸಿಕೊಂಡಿದ್ದಾರೆ. ಅರ್ಚನರಾವ್ ನಾಯಕಿ. ಒಂದು ಹಾಡಿಗೆ ಸುಶ್ಮಿತಾಗೌಡ ಹೆಜ್ಜೆ ಹಾಕಿದ್ದಾರೆ. ಜಿ.ವೆಂಕೆಟೇಶಮೂರ್ತಿ ನಿರ್ಮಾಣ ಮಾಡಿರುವ ಚಿತ್ರವು 100 ಕ್ಕೂ ಹೆಚ್ಚು ಕೇಂದ್ರಗಳಲ್ಲಿ ಶುಕ್ರವಾರದಂದು ತೆರೆಗೆ ಬರಲಿದೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
20/03/19For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore