HOME
CINEMA NEWS
GALLERY
TV NEWS
REVIEWS
CONTACT US

ಮತದಾನ ಪ್ರತಿಯೊಬ್ಬರ ಹಕ್ಕು - ಎಸ್.ಎ.ಚಿನ್ನೆಗೌಡ
ದಿನಾಂಕ 18 ಮತ್ತು ನಡೆಯುವ ಲೋಕಸಭಾ ಚುನಾವಣೆಗೆ ನಾವುಗಳು ತಪ್ಪದೆ ಮತ ಚಲಾಯಿಸಬೇಕೆಂದು ಕರ್ನಾಟಕ ವಾಣಿಜ್ಯ ಮಂಡಳಿ ಅಧ್ಯಕ್ಷ ಎಸ್.ಎ.ಚಿನ್ನೆಗೌಡ ಮಾನ್ಯ ಸದಸ್ಯರುಗಳು, ಚಿತ್ರರಂಗವನ್ನು ಕೋರಿಕೊಂಡರು. ಅವರು ಮಾತನಾಡುತ್ತಾ ಪ್ರತಿಯೊಬ್ಬ ಪ್ರಜೆಗೆ ಸಂವಿಧಾನ ಕಲ್ಪಿಸಿರುವ ಪವಿತ್ರವಾದುದು ಮತದಾನದ ಹಕ್ಕು. ಅದು ಸರ್ವಸ್ವತಂತ್ರವಾಗಿದೆ. ಅದು ದೇಶದ ಹಿತಕ್ಕಾಗಿ ಮತ ಚಲಾಯಿಸುವುದು ಪ್ರತಿಯೊಬ್ಬರ ಮೂಲಭೂತಕರ್ತವ್ಯವಾಗಿದೆ. ಮತದಿಂದ ವಂಚಿತರಾಗಬೇಡಿ. ಬಸವನಗುಡಿ ಕ್ಷೇತ್ರದಲ್ಲಿ ಮತ ಚಲಾಯಿಸಿದವರಿಗೆ ಅಲ್ಲಿನ ಕೆಲವು ಅಂಗಡಿಗಳು ರಿಯಾಯತಿ ದರದಲ್ಲಿ ಸಾಮಾನು ನೀಡುವುದಾಗಿ ಹೇಳಿದ್ದಾರೆ. ದಿನಾಂಕ 18 ಮತ್ತು 23 ರಂದು ನಡೆಯುವ ಚುನಾವಣೆಯಲ್ಲಿ ತಮಗೆ ಯಾವುದೇ ಕೆಲಸವಿದ್ದರೂ ಅದನ್ನು ಪಕ್ಕಕ್ಕೆ ಇಟ್ಟು, ಆದ್ಯ ಕರ್ತವ್ಯವೆಂದು ಮೊದಲು ಮತದಾನ ಮಾಡಬೇಕೆಂದು ಕರೆ ನೀಡಿದರು. ಇದಕ್ಕೂ ಮುನ್ನ ಸದಸ್ಯರೊಂದಿಗೆ ‘ಮತ ಚಲಾಯಿಸಿ’ ಎನ್ನುವ ಘೋಷಣೆ ಕೂಗಲಾಯಿತು. ಈ ಸಂದರ್ಭದಲ್ಲಿ ಮಾಡೆಲಿಂಗ್ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಅಣ್ಣಾವ್ರರ ಹುಟ್ಟಹಬ್ಬದ ಸಲುವಾಗಿ ಅಂದು ವಿಶೇಷ ವ್ಯಕ್ತಿಯಿಂದ ಡಾ.ರಾಜ್. ಉಪನ್ಯಾಸ ಮತ್ತು ರಾಮನವಮಿ ಆಚರಣೆಯನ್ನು ನಡೆಸಲು ಯೋಜನೆ ಹಾಕಿಕೊಳ್ಳಲಾಗಿದೆ ಎಂಬುದಾಗಿ ವಾಣಿಜ್ಯ ಮಂಡಳಿ ಕಚೇರಿಯಿಂದ ಮಾಹಿತಿ ಲಭ್ಯವಾಗಿದೆ.
ಸಿನಿ ಸರ್ಕಲ್.ಇನ್ ನ್ಯೂಸ್
14/04/19

For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore