HOME
CINEMA NEWS
GALLERY
TV NEWS
REVIEWS
CONTACT US
ಕಾವೇರಿಯ ರಕ್ಷಣೆಗೆ ಪಣತೊಟ್ಟ ನಾಯಕನ ಧೈರ್ಯ
ಸರಣ ಕೊಲೆಗಳ ರಹಸ್ಯವನ್ನು ಕಂಡುಹಿಡಿಯಲು ಕ್ರೈಮ್‍ಬ್ರ್ಯಾಂಚ್ ಇನ್ಸ್‍ಪೆಕ್ಟರ್ ಕ್ರ್ಯಾಕ್(ವಿನೋದ್ ಪ್ರಭಾಕರ್)ಹುಬ್ಬಳ್ಳಿಯಿಂದ ಸಿಲಿಕಾನ್ ಸಿಟಿಗೆ ವರ್ಗವಾಗಿ ಬರುತ್ತಾನೆ. ತನಿಖಾ ಹಂತದಲ್ಲಿ ಅನೇಕ ಮಹತ್ವದ ಸುಳಿವುಗಳನ್ನು ಪತ್ತೆ ಹಚ್ಚಿದ ನಾಯಕನಿಗೆ ಬೆಂಗಳೂರಿನಲ್ಲಿ ನಡೆಯುವ ಕೊಲೆಗಳಿಗೂ ಚೆನ್ನೈನಲ್ಲಿರುವ ಸುಪಾರಿ ಹಂತಕರಿಗೂ ಸಂಬಂಧವಿದೆ ಎಂಬ ಬಗ್ಗೆ ಖಚಿತ ಮಾಹಿತಿ ಸಿಗುತ್ತದೆ. ಅದರ ಜಾಡನ್ನು ಹಿಡಿದ ಇನ್ಸ್‍ಪೆಕ್ಟರ್ ವಿನೋದ್ ಪ್ರಭಾಕರ್ ಪ್ರಕರಣದ ತನಿಖೆಗಾಗಿ ಚೆನ್ನೈಗೆ ತೆರಳುತ್ತಾನೆ. ಅದೇ ಸಮಯದಲ್ಲಿ ಕಾವೇರಿ ತನ್ನ ಸ್ನೇಹಿತೆಯ ಮದುವೆಗೆಂದು ಚೆನ್ನೈಗೆ ತೆರಳಿರುತ್ತಾಳೆ. ಆಕೆಯನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಕರೆತರುವ ಜವಾಬ್ದಾರಿಯೂ ವಿನೋದ್ ಮೇಲೆ ಬೀಳುತ್ತದೆ. ಈ ಕಾವೇರಿ ಯಾರು ಎಂಬ ಪ್ರಶ್ನೆ ನಿಮಗೆ ಬರಬಹುದು. ನಾಯಕ ಬೆಂಗಳೂರಿಗೆ ಬಂದ ಹೊಸದರಲ್ಲಿ ಪರಿಚಯವಾದ ಹುಡುಗಿಯೇ ಈ ಕಾವೇರಿ. ಇಲ್ಲಿ ಕೊಲೆಗಳನ್ನು ಮಾಡುತ್ತಿರುವವರು ಯಾರು, ಅದರ ಹಿಂದೆ ಯಾರ್ಯಾರಿದ್ದಾರೆ ಎಂಬ ಬಗ್ಗೆ ನಾಯಕ ಮಾಹಿತಿಗಳನ್ನು ಕಲೆಹಾಕುತ್ತಾ ಹೋದಂತೆ ನಾಯಕನಿಗೆ ಮತ್ತೊಂದು ಮಹತ್ವದ ಕೊಲೆ ಪ್ರಕರಣದ ಸುಳಿವು ಕೂಡ ಸಿಗುತ್ತದೆ. ಆ ಕೊಲೆಯನ್ನು ಮಾಡಿಸಿದವನು ಸಮಾಜದಲ್ಲಿ ಪ್ರಭಾವಿ ವ್ಯಕ್ತಿಯಾಗಿರುತ್ತಾನೆ. ಆತನ ಬಗ್ಗೆಯೂ ತಿಳಿದುಕೊಂಡ ನಾಯಕ ಕೊನೆಗೆ ಅದೆಲ್ಲವನ್ನೂ ಪತ್ತೆ ಹಚ್ಚುತ್ತಾನೆ. ಆ ಸರಣ ಕೊಲೆಗಳನ್ನು ಮಾಡಿಸುತ್ತಿರುವವರು ಯಾರು, ಏಕೆ ಅಷ್ಟೊಂದು ಜನರನ್ನು ಹತ್ಯೆ ಮಾಡುತ್ತಿದ್ದಾರೆ ಎಂಬುದನ್ನು ಕಂಡುಹಿಡಿದು, ಕಾವೇರಿಯನ್ನು ನಾಯಕ ಕರ್ನಾಟಕಕ್ಕೆ ಸುರಕ್ಷಿತವಾಗಿ ಕರೆತರುವಲ್ಲಿ ಯಶಸ್ವಿಯಾದನೇ ಎಂಬುದನ್ನು ಚಿತ್ರಮಂದಿರಗಳಲ್ಲಿ ನೋಡಿ.

ಈ ಹಿಂದೆ ಟೈಸನ್ ಚಿತ್ರದ ಹಿಟ್ ಕಾಬಿನೇಷನ್ ಎನಿಸಿಕೊಂಡಿದ್ದ ವಿನೋದ್ ಪ್ರಭಾಕರ್ ಹಾಗೂ ನಿರ್ದೇಶಕ ರಾಮ್‍ನಾರಾಯಣ್ ಜೋಡಿ ಕ್ರ್ಯಾಕ್ ಚಿತ್ರದಲ್ಲಿ ಮತ್ತೊಮ್ಮೆ ಪ್ರೇಕ್ಷಕರನ್ನು ರಂಜಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆನಂದಪ್ರಿಯ ಅವರ ಚುರುಕಾದ ಸಂಭಾಷಣೆಗಳು ಚಿತ್ರಕಥೆಯ ಓಟಕ್ಕೆ ಪೂರಕವಾಗಿ ಮೂಡಿಬಂದಿವೆ. ಚಿತ್ರದ ಎಲ್ಲಾ ಹಾಡುಗಳು ಸುಂದರವಾಗಿ ಮೂಡಿಬಂದಿವೆ. ಶರಣ್ ಹಾಡಿರುವ ಕಾವೇರಿ ಸೋ ಸಾರಿ ಹಾಡಂತೂ ಮನದಲ್ಲಿ ಉಳಿಯುತ್ತದೆ. ಚಿತ್ರದಲ್ಲಿ ಮೂಡಿಬಂದಿರುವ ಆ್ಯಕ್ಷನ್ ದೃಷ್ಯಗಳು ಮಾಸ್ ಪ್ರಿಯರನ್ನು ಸೆಳೆಯುತ್ತವೆ.

ವಿಜಯ್ ಸಿನಿಮಾಸ್ ಮೂಲಕ ಗಾಂಧಿನಗರದಲ್ಲಿ ವಿತರಕನಾಗಿ ಗುರುತಿಸಿಕೊಂಡಿರುವ ವಿಜಯ್‍ಕುಮಾರ್ ತಮ್ಮ ಸ್ನೇಹಿತ ಶಂಕರ್ ಇಳಕಲ್ ಅವರ ಜೊತೆ ಸೇರಿ ಮೊದಲ ಬಾರಿಗೆ ಈ ಚಿತ್ರವನ್ನು ನಿರ್ಮಿಸುವ ಮೂಲಕ ನಿರ್ಮಾಪಕರೂ ಆಗಿದ್ದಾರೆ. ನಾಯಕಿ ಆಕಾಂಕ್ಷ ಕಾವೇರಿ ಪಾತ್ರದಲ್ಲಿ ಗಮನಸೆಳೆಯುತ್ತಾರೆ. ಡಾ.ಶಮಿತಾ ಮಲ್ನಾಡ್ ಹಾಗೂ ಎಸ್.ಚಿನ್ನ ಅವರ ಸಂಗೀತ ಸಂಯೋಜನೆಯ ಹಾಡುಗಳು ಕೇಳಲು ಇಂಪಾಗಿವೆ.
-Cine Circle News
-16/09/17

ಆಡಿಯೋ-ಹಿಂದಿ, ಟ್ರೈಲರ್-ತಮಿಳು, ಹಾಡು-ತೆಲುಗು
ಬಹು ನಿರೀಕ್ಷಿತ ‘ಕ್ರ್ಯಾಕ್’ ಬಿಡುಗಡೆ ಮುಂಚೆ ನಿರ್ಮಾಪಕರು ಲಾಭದಲ್ಲಿ ಇರುವುದರಿಂದ ಖುಷಿಯಿಂದ ಕೊನೆ ಬಾರಿ ಮಾದ್ಯಮದವನ್ನು ತಂಡವು ಭೇಟಿ ಮಾಡಿತ್ತು. ರಚನೆ,ನಿರ್ದೇಶನ ಮಾಡಿರುವ ರಾಮ್‍ನಾರಾಯಣ್ ಹೇಳುವಂತೆ ಆಡಿಯೋ ಕೇಳಿದ ಬಾಂಬೆಯವರು ಹಿಂದಿಗೆ 50 ಲಕ್ಷಕ್ಕೆ ಡಬ್ಬಿಂಗ್ ಹಕ್ಕುಗಳನ್ನು ಪಡೆದುಕೊಂಡಿದ್ದಾರೆ. ಚಿತ್ರದಲ್ಲಿ ಬರುವ ಕಾವೇರಿ ಹಾಡಿಗೆ ಮನಸೋತು ಆಂದ್ರದವರು ತೆಲುಗು ಭಾಷೆಗೆ ರಿಮೇಕ್, ಹಾಗಯೇ ಟ್ರೈಲರ್ ನೋಡಿದ ಕಾಲಿವುಡ್ ಪಂಡಿತರು ವಿಶಾಲ್ ನಾಯಕತ್ವದಲ್ಲಿ ತಮಿಳಿನಲ್ಲಿ ನಿರ್ಮಾಣ ಮಾಡಲು ಮನಸ್ಸು ಮಾಡಿದ್ದಾರೆ. ಇವೆಲ್ಲವು ಚರ್ಚೆಯ ಹಂತದಲ್ಲಿದೆ. ಇದು ಶ್ರಮಕ್ಕೆ ಸಿಕ್ಕ ಪ್ರತಿಫಲ ಎನ್ನಬಹುದು. ನಿರ್ಮಾಪಕರಿಗೆ ಎರಡು ರೀಲ್ ಮಾತ್ರ ತೋರಿಸಲಾಗಿದೆ.ಇದರಿಂದ ಅವರಿಗೆ ಸಿನಿಮಾದ ಮೇಲೆ ನಂಬಿಕೆ ಹೆಚ್ಚಾಗಿದೆ. ಪ್ರೇಕ್ಷಕರಿಗೆ ಮೊದಲು ವಿನೋಧ್ ಅಭಿನಯ ನೋಡಬೇಕೆಂದು ಒಳಹೊಕ್ಕರೆ, ಹೊರಗೆ ಬರುವಾಗ ಅದ್ಬುತ ಪ್ರತಿಭೆ ಸಿಕ್ಕಂತೆ ಸಂತಸ ಪಡುತ್ತಾರೆ. ಇನ್ನೇನಿದ್ದರೂ ಬೆನ್ನು ತಟ್ಟುವಕೆಲಸ ಮಾದ್ಯಮದವರು ಮಾಡಬೇಕೆಂದು ಕೋರಿಕೊಂಡರು. ಮೊದಲ ಬಾರಿ ನನ್ನ ಪಾತ್ರಕ್ಕೆ ಧ್ವನಿ ನೀಡಿರುವುದು ಛಾಲೆಂಜಿಂಗ್ ಆಗಿತ್ತು. ಒಳ್ಳೆ ನಿರ್ದೇಶಕರಲ್ಲಿ ಕೆಲಸ ಮಾಡಿದ್ದು ತೃಪ್ತಿ ತಂದಿದೆ ಎನ್ನುವುದು ನಾಯಕಿ ಆಕಾಂಕ್ಷ ನುಡಿ.

ಮೂಲತ: ವಿತರಕನಾಗಿದ್ದರಿಂದ ನಿರ್ಮಾಣ ಮಾಡಿರುವುದು ಪ್ರಥಮ ಅನುಭವವಾಗಿದೆ. ವಿತರಕರು ಸಿನಿಮಾ ನೋಡಿ ಒಳ್ಳೆ ಬೆಲೆಗೆ ತೆಗೆದುಕೊಂಡಿದ್ದಾರೆ. ಒಂದೂವರೆ ತಿಂಗಳ ಹಿಂದೆ ಈ ದಿನದಂದೆ ಜನರಿಗೆ ತೋರಿಸಲು ಯೋಜನೆ ಹಾಕಿಕೊಳ್ಳಲಾಗಿತ್ತು. ಕ್ರ್ಯಾಕ್, ಮಂಟಲ್,ಲೂಸ್ ಪದಗಳನ್ನು ಹೆಂಗಸರು ಹೆಚ್ಚು ಇಷ್ಟಪಡುತ್ತಾರೆ. ಅದರಿಂದಾಗಿಯೇ ಶೀರ್ಷಿಕೆಯನ್ನು ಇಡಲಾಗಿದೆ ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರವಾದರು ವಿಜಯ್‍ಕುಮಾರ್.ವೈ. ಕೇರಳ ಮೂಲದ ಅರ್ಜುನ್ ಕನ್ನಡದಲ್ಲಿ ನಾಯಕನ ಎದುರಾಳಿಯಾಗಿ ಕಾಣ ಸಿಕೊಂಡಿರುವುದಾಗಿ, ಮುಂದೆ ಅವಕಾಶಗಳು ಸಿಗಬಹುದೆಂಬ ನಂಬಿಕೆ ಇದೆ ಎಂದರು,. ಅವಸಾನದಲ್ಲಿ ಮೈಕ್ ವಿನೋದ್‍ಪ್ರಭಾಕರ್‍ಗೆ ತಲುಪಿತು. ಅವರು ಎಂದಿನಂತೆ ಪ್ರತಿಯೊಬ್ಬ ನಾಯಕನಿಗೆ ಟ್ರಂಪ್ ಕಾರ್ಡ್ ಇರುತ್ತದೆ. ಟೈಸನ್ 25ನೇ ದಿನದಂದು ಚಿತ್ರಮಂದಿರಕ್ಕೆ ಭೇಟಿ ನೀಡಿದಾಗ ಹೆಚ್ಚಾಗಿ ಮಹಿಳೆಯರು ಬಂದಿರುವುದು ನೋಡಿ ಸೋಜಿಗ ಎನಿಸಿತು. ನಿರ್ಮಾಪಕರು ಲಾಭದಲ್ಲಿ ಇದ್ದರೆ ಸಾಲದು, ವಿತರಕರು ಇದೇ ರೀತಿ ಇರಬೇಕೆಂದು ಬಯಸುವವನು. ಮುಂದೆಯೂ ಮನರಂಜನೆ ಇರುವ ಚಿತ್ರಗಳನ್ನು ನೀಡುತ್ತೇನೆ. ಬೇರೆ ಭಾಷೆಗಳ ಮೇಲೆ ಪೈಪೋಟಿ ನಡೆಸಬೇಕು. ಕನ್ನಡ ಭಾಷೆಯ ಚಿತ್ರಕ್ಕೆ ನಾವುಗಳು ಸ್ಪರ್ಧಿಗಳಾಗಬಾರದು.. ಗೆಳಯ ಧ್ರುವಸರ್ಜಾ ಜೊತೆ ಇದರ ಬಗ್ಗೆ ಮಾತಾಡಿದ್ದೇನೆ. ಟೈಸನ್ ಮುಂಚೆ ಶೂನ್ಯದಲ್ಲಿದ್ದೆ. ಇಂದು ತಾರಕಕ್ಕೆ ಹೋಗಿದ್ದೆನೆಂದು ಎಲ್ಲರು ಹೇಳುತ್ತಿದ್ದರೆ ಅದಕ್ಕೆ ಕಾರಣ ರಾಮ್‍ನಾರಾಯಣ್. ಟೈಸನ್ ನಿರ್ಮಾಪಕರಿಗೆ ಒಂದು ರೂ.ಗೆ ಸಿನಿಮಾ ಮಾಡಿಕೊಡುತ್ತೇನೆಂದು ಹೇಳಿದಂತೆ ಮಾತನ್ನು ಉಳಿಸಿಕೊಳ್ಳುತ್ತೇನೆ. ಪ್ರತಿ ದೃಶ್ಯವು ನೋಡುಗರಿಗೆ ರಸದೌತಣ ನೀಡುತ್ತದೆ. ನಿರ್ದೇಶಕರು ಕಾನಿಫಿಡೆನ್ಸ್‍ನಲ್ಲಿ ಇದ್ದಾರೆ. ಆದರೆ ಓವರ್ ಕಾನಿಫಿಡೆನ್ಸ್ ಆಗಿಲ್ಲ. ನಟನೆ, ಸಂಭಾಷಣೆ ಹೇಳುವಾಗ ಅಪ್ಪನ ಸ್ಟೈಲ್‍ನಲ್ಲಿ ಮಾಡಬಾರದೆಂದು ಪ್ರಯತ್ನ ಪಟ್ಟರೂ ಆಗುತ್ತಿಲ್ಲ. ಏನು ಮಾಡೋಕೆ ಆಗೋಲ್ಲ ಅಂತ ನಕ್ಕರು ಕ್ರ್ಯಾಕ್ ಉರುಫ್ ವಿನೋಧ್‍ಪ್ರಭಾಕರ್. ಸಂಭಾಷಣೆ ಬರೆದಿರುವ ಆನಂದ್‍ಪ್ರಿಯಾ, ಸಂಗೀತ ನಿರ್ದೇಶಕಿ ಶಮಿತಾಮಲ್ನಾಡ್, ಕಂಠದಾನ ಕಲಾವಿದ ವಿಜಯ್‍ಶಂಕರ್ ಖುಷಿಯನ್ನು ಹಂಚಿಕೊಂಡರು. ಇದೇ ಶುಕ್ರವಾರದಂದು ರಾಜ್ಯದಂತ ಹುಚ್ಚನ ದರ್ಶನವಾಗಲಿದೆ.
-Cine Circle News
-12/09/17


CRACK AUDIO RELEASED
D
r Rajakumar Kalamandira in Rajajinagar was full with people to witness the launch of Kannada film Crack audio. All four songs were screened and there was good track for the film to go ahead with the publicity.
With this, Dr Shamita Malnad turned music composer for two songs. She was a playback singer all these years. Chinnu from Chennai has composed two songs.

After a dance number from Chaitanya Bhasker in Bharatanatyam followed another song Hachchevu Kannada Deepa….dance. before that the playback singer Shamita Malnad treated the spectators with lovely songs from Kannada cinema.

It was the launch of ‘REED’ audio on the occasion (one E is silent according to anchor Srinivas). Pratap and Keshav Murthy have evolved the new audio house from this film ‘Crack’.

The song Maro Maro Dham Maro….an introduction song of Vinod Prabhakar was released by Anand and Guru. Dindigal Theppeswamy, Shanker Ilkar and others joined stage for song ‘Ondu Sundara Sanje….song release on screen. Kishan with Nandini Vijaya Vittala a councilor released the song Build Aappu Illa….song with Manjunath and Jayaram.

The fourth song Nanage naane Kattikonda Ghori… I am sorry Cauvery (sung by comedy king Sharan) ….was released by veterans Dattanna and Umeshanna. This song was displayed for the second time, third time Umeshanna danced for the song with Vinod Prabhakar on stage.

Later the stage turned crowded with fifty plus actors, technicians, well wishers joining the stage for the launch of audio CD.

Chief guest at audio release of ‘Crack’ Diamond star Srinagara Kitty welcoming Shamita Malnad to the music direction field said the attendance of all the team members and their enthusiasm is a good sign for the film. For the good effort there will be good result he mentioned in his address.

We have worked very hard in the second combination with Vinod Prabhakar said Ramnarayan. Tyson was well received in our combination. Ramnarayan director thanked the music directors for keeping patience in giving good tunes. Chinnu from Chennai has also done background score for this film.

Vinod Prabhakar thanked the ‘Abhimani Devarugalu’ for support. He was ready to thrill audience with his film dialogues after the audio release.

The beautiful looking Akanksha in her second film in Kannada thanked for good opportunity. I have worked with Vinod’s father Tiger Prabhakar and worked with son in ‘Crack’ and wish good luck for his career stated Umeshanna.
-Cine Circle News
-26/07/17


ಟೈಗರ್ ನೆರಳಿನಿಂದ ಹೊರಬರುವ ಪಸೆ – ವಿನೋಧ್‍ಪ್ರಭಾಕರ್
ವಿನೋಧ್‍ಪ್ರಭಾಕರ್ ಇಲ್ಲಿಯವರೆವಿಗೂ ನಟಿಸಿದ ಚಿತ್ರಗಳು ಅಪ್ಪ ಟೈಗರ್ ಪ್ರಭಾಕರ್‍ರವರ ಡೈಲಾಗ್, ಹಾವಭಾವದಂತೆ ಕಂಡುಬಂದಿದೆ ಅಂತ ಹೇಳುತ್ತಿರುವುದರಿಂದ ಸಹಜವಾಗಿ ಬೇಸರ ಉಂಟು ಮಾಡಿದೆ. ಅವರ ಹೊಸ ಚಿತ್ರ ‘ಕ್ರ್ಯಾಕ್’ ಪತ್ರಿಕಾಗೋಷ್ಟಿಯಲ್ಲಿ ಇದೇ ವಿಷಯ ಮಾತನಾಡಿದ ವಿನೋಧ್ ಅಪ್ಪನ ನೆರಳಿನಿಂದ ಆಚೆ ಬರಬೇಕೆಂದು ಪ್ರಯತ್ನ ಪಡುತ್ತಿದ್ದೇನೆ. ಸ್ವಪ್ರತಿಭೆಯನ್ನು ತೋರಿಸುವ ಇಚ್ಚೆ ಇದೆ. ಉತ್ತಮ ವಿಮರ್ಶೆಗಳಿಂದ ಟೈಸನ್ ಎಲ್ಲರಿಗೂ ತಲುಪಿತು. ಒಂದು ಸಕ್ಸಸ್ ಕೊಡಲು ಹದಿನಾಲ್ಕು ವರ್ಷ ತೆಗೆದುಕೊಂಡೆ. ನನಗೆ ನಂಬರ್ ಮೇಲೆ ನಂಬಿಕೆ ಇಲ್ಲ. ಒಳ್ಳೆ ಚಿತ್ರ ಕೊಡಬೇಕು ಅಷ್ಟೆ. ನಿರ್ದೇಶಕರು ಕ್ರ್ಯಾಕ್‍ನಲ್ಲಿ ಲೀಡಿಂಗ್ ಸ್ಟಾರ್ ಎಂದು ಬಣ ್ಣಸಿಕೊಂಡಿದ್ದಾರೆ. ಇದರಿಂದ ಬೇರೆ ಇಮೇಜ್‍ಗೆ ಹೋಗಬಹುದು ಎಂಬ ನಂಬಿಕೆ. ಏನೇ ಆದರೆ ಟೈಗರ್ ಈಸ್ ಟೈಗರ್. ಅವರಿಗೆ ಸಾಟಿ ಯಾರು ಇಲ್ಲ ಎಂದರು. ಚಿತ್ರದ ಫಸ್ಟ್ ಲುಕ್, ಟ್ರೈಲರ್, ಮೇಕಿಂಗ್ ವಿಡಿಯೋ ತೋರಿಸಿದ ತರುವಾಯ ರಚನೆ,ಚಿತ್ರಕತೆ, ಸಾಹಿತಿ,ನಿರ್ದೇಶಕ ರಾಮ್‍ನಾರಾಯಣ್ ಸಿನಿಮಾ ಸಿದ್ದಗೊಳ್ಳುವುದು ತಡವಾಗಿದೆ. ನಾಯಕ ಪೋಲಿಸ್ ಆಫೀಸರ್ ಆಗಿದ್ದು ಎಲ್ಲರು ಅವರನ್ನು ಕ್ರ್ಯಾಕ್ ಎಂದು ಕರೆಯುತ್ತಾರೆ. ದುಷ್ಟರ ವಿರುದ್ದ ಹೋರಾಡಿದಾಗ ಕ್ಲೈಮಾಕ್ಸ್‍ನಲ್ಲಿ ಇವರು ಮಾಡಿದ್ದು ಸರಿ ಎನಿಸುತ್ತದೆ. ಅದು ಏನು ಅಂತ ಸಿನಿಮಾ ನೋಡಿ ಎಂದರು.

ನಾಯಕಿ ಆಕಾಂಕ್ಷ ಅವಕಾಶ ನೀಡಿದ್ದಕ್ಕೆ ಧನ್ಯವಾದ ತಿಳಿಸಿದರು. ಗಾಯಕಿ ಶಮಿತಾಮಲ್ನಾಡ್ ಮೊದಲ ಕಮರ್ಷಿಯಲ್ ಚಿತ್ರಕ್ಕೆ ಸಂಗೀತ ಸಂಯೋಜಿಸಿದ ಕಾರಣ ಆಡಿಯೋ ಬಿಡುಗಡೆ ಕಾರ್ಯಕ್ರಮದಲ್ಲಿ ಹೆಚ್ಚು ಮಾತನಾಡುವುದಾಗಿ ಹೇಳಿದರು. ಕೇರಳದ ಜೇಬಜ್.ಕೆ.ಗಣೇಶ್ ಛಾಯಗ್ರಾಹಕರಾಗಿ ಪರಿಚಯವಾಗಿದ್ದಾರೆ. ಉಳಿದಂತೆ ಸಂಭಾಷಣೆ ಆನಂದ್‍ಪ್ರಿಯಾ, ಸಂಕಲನ ವೆಂಕಟೇಶ್.ಯುಡಿವಿ, ಸಾಹಸ ವಿನೋಧ್,ಮಾಸ್‍ಮಾದ, ಕುಂಗುಫು ಚಂದ್ರು ಅವರದಾಗಿದೆ. ವಿಜಯ್‍ಕುಮಾರ್.ವೈ ಮತ್ತು ಗುಲ್ಬರ್ಗಾದ ಶಂಕರ್‍ಇಲ್ಕಲ್ ಸಿನಿಮಾ ಕೃಷಿಗೆ ಹಣ ಹೊಡಿದ್ದಾರೆ. ವಿತರಕ ವಿಜಯ್ ಪಾಲುದಾರರು. ಚಿತ್ರವು ಜುಲೈ ತಿಂಗಳಲ್ಲಿ ತೆರೆಕಾಣುವ ಸಂಭವವಿದೆ.

-7/06/17

VINOD PRABHAKAR’S NEW FILM ‘CRACK’ LAUNCHED
‘Crack’, a new Kannada film starring Vinod Prabhakar mounted the sets on Wednesday at a temple in Bengaluru. The film is being produced by Shankar Ilkal and Vijay Kumar under the banner Samooha Talkies. The film is being directed by Ramnarayan. Akanksha will be playing the female lead. Akanksha has earlier acted with Duniya Vijay in RX Suri.

Mayor of Bengaluru city Padmavathy sounded the clapboard and launched the film and Anand Reddy switched on the camera.

Ramnarayan said ‘Crack’ is another peculiar and a different kind of police film which will have all the entertaining elements without disclosing other details about the movie. He said the film will be shot in Bengaluru and Chennai. The songs will be shot in Chikkamagaluru. 

Playback singer Shamitha Malnad along with Chinna will be scoring music. For Shamitha, this will be her first commercial film for which she will be scoring the music. Jabez Ganesh is the cameraman. 
-18/11/16


For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore