HOME
CINEMA NEWS
GALLERY
TV NEWS
REVIEWS
CONTACT US
ಕಾಲೇಜ್ ಕುಮಾರ್ ಗೆಲುವಿನ ನಗೆ
ತಂದೆ-ಮಗನ ಬಾಂದ್ಯವದ ಕುರಿತ ‘ಕಾಲೇಜ್ ಕುಮಾರ್’ ಚಿತ್ರವು ಯಶಸ್ವಿ 25 ದಿನಗಳನ್ನು ಪೂರೈಸಿದ ಹಿನ್ನಲೆಯಲ್ಲಿ ನಿರ್ಮಾಪಕರು ಸಣ್ಣದೊಂದು ಔತಣಕೂಟ ಏರ್ಪಾಟು ಮಾಡಿದ್ದರು. ಮೊದಲು ಮಾತನಾಡಿದ ನಿರ್ದೇಶಕ ಹರಿಸಂತೋಷ್ ಫ್ಯಾಮಲಿ ಆಡಿಯನ್ಸ್ ಹೆಚ್ಚಾಗಿ ಚಿತ್ರಮಂದಿರಕ್ಕೆ ಬರುತ್ತಿದ್ದಾರೆ. ಪ್ರಾರಂಭದಿಂದಲೂ ಒಳ್ಳೆಯ ತಂತ್ರಜ್ಘರು, ಕಲಾವಿದರನ್ನು ನೀಡಿದ್ದರಿಂದಲೇ ಉತ್ತಮ ಚಿತ್ರ ಮೂಡಿಬರಲು ಸಾದ್ಯವಾಯಿತು. ತೆಲುಗಿನಲ್ಲಿ ನಿರ್ಮಿಸಲು ಉತ್ಸುಕರಾಗಿದ್ದಾರೆ. ತಮಿಳು ಚಿತ್ರಕ್ಕೆ ಸಂಬಂದಿಸಿದಂತೆ ವಾರದಲ್ಲಿ ಎಲ್ಲವು ತಿಳಿಯಲಿದೆ ಎಂದರು. ಒಳ್ಳೆ ಚಿತ್ರದಲ್ಲಿ ಭಾಗಿಯಾಗಿದ್ದೇನೆಂದು ಹೇಳಲು ಹೆಮ್ಮೆಯಾಗುತ್ತದೆ. ಎರಡನೆ ಚಿತ್ರವನ್ನು ಜನರು ಇಷ್ಟಪಟ್ಟಿದ್ದಾರೆ. ಮುಂದೆ ಇಂತಹುದೆ ಸಿನಿಮಾಗಳಲ್ಲಿ ತೊಡಗಿಕೊಳ್ಳುವ ಬಯಕೆ ಇದೆ. ಕೆಲಸ ಮಾಡಿದ್ದು ತೃಪ್ತಿ ನೀಡಿದೆ ಎಂಬ ನುಡಿ ನಾಯಕ ವಿಕ್ಕಿ ಅವರಿಂದ ಕೇಳಿಬಂತು. ನಿರ್ಮಾಪಕರು ಶ್ರದ್ದೆಯಿಂದ ಸಿನಿಮಾ ಮಾಡಿದ್ದಾರೆ. ಪ್ರತಿ ಜಿಲ್ಲೆಯ ಚಿತ್ರಮಂದಿರದಲ್ಲಿ ಸಿನಿಮಾವನ್ನು ಬಿಡುಗಡೆ ಮಾಡಿದ್ದಾರೆ. ಒಬ್ಬ ನಿರ್ಮಾಪಕರಿಗೆ ಗೆದ್ದು ಬರುವುದು ಕಷ್ಟವಾಗುತ್ತದೆ. ಎಲ್ಲಾ ಕಡೆಗಳಲ್ಲಿ ಪ್ರಚಾರ ನಡೆಸಿದ ಕಾರಣ ಹೆಚ್ಚು ಜನರಿಗೆ ತಲುಪಿದೆ. ಸಿನಿಮಾವನ್ನು ಗೆಲ್ಲಿಸುವ ಜವಬ್ದಾರಿ ಪ್ರತಿ ಕಲಾವಿದರಿಗೂ ಇರುತ್ತದೆ. ಒಟ್ಟಾರೆ ಕಾಲೇಜು ಕುಮಾರ ತಂಡದಲ್ಲಿ ಭಾಗಿಯಾಗಿರುವುದು ಅದೃಷ್ಟವೆಂದು ಭಾವಿಸುತ್ತೇನೆ ಎಂಬ ಸಂತಸದ ಮಾತು ಶೃತಿ ಅವರದು.

ಅವಸಾನದಲ್ಲಿ ನಿರ್ಮಾಪಕ ಎಲ್.ಪದ್ಮನಾಭ ಅವರ ಬೇಸರದ ನುಡಿ ಹೀಗಿತ್ತು: ಪ್ರತಿ ಚಿತ್ರ ಬಿಡುಗಡೆ ಸಂದರ್ಭದಲ್ಲಿ ಕಲಾವಿದರು ನಾವು ಕರೆದಾಗ ಬರುವುದು ಒಳ್ಳೆಯ ಬೆಳವಣ ಗೆ. ತೆರೆಕಂಡ ನಂತರ ನಮಗೂ ಸಂಬಂದವಿಲ್ಲ ಅನ್ನುವುದು ತಪ್ಪು ಕಲ್ಪನೆಯಾಗಿರುತ್ತದೆ. ನಾಯಕಿ ಸಂಯುಕ್ತ ಹೆಗಡೆ ವರ್ತನೆ ಖೇದ ತರಿಸಿದೆ. 90 ದಿವಸ ನಮ್ಮ ಜೊತೆ ಕುಟುಂಬದವರಂತೆ ಇದ್ದರು. ಅವರು ಕೇಳಿದಂತೆ ಕ್ಯಾರವಾನ್ ಒದಗಿಸಲಾಗಿತ್ತು. ಇಷ್ಟೆಲ್ಲಾ ಮಾಡಿದರೂ ನಿರ್ಮಾಪಕರಿಗೆ ಬೇಸರ ತರಿಸುವ ಕೆಲಸ ಮಾಡುವುದು ಶೋಭೆಯಲ್ಲ. ಕಿರಿಕ್ ಪಾರ್ಟಿಯಲ್ಲಿ ಎರಡನೆ ನಾಯಕಿಯಾಗಿದ್ದವರನ್ನು ಕರೆತಂದು, ನಮ್ಮ ಚಿತ್ರಕ್ಕೆ ನಾಯಕಿ ಮಾಡಿದ್ದು ತಪ್ಪು ಅನಿಸಿದೆ. ಕರ್ನಾಟಕ ಚಲನಚಿತ್ರ ವಾಣ ಜ್ಯ ಮಂಡಳಿ, ನಿರ್ದೇಶಕ, ನಿರ್ಮಾಪಕ, ಕಲಾವಿದರ ಸಂಘಕ್ಕೆ ಇಂದೇ ದೂರು ನೀಡಲಾಗುವುದು. ಇನ್ನು ಮುಂದೆ ಯಾವುದೇ ನಿರ್ದೇಶಕ, ನಿರ್ಮಾಪಕರಾಗಲಿ ಈಕೆಯನ್ನು ಆಯ್ಕೆ ಮಾಡುವ ಮುನ್ನ ಒಂದು ಬಾರಿ ಯೋಚಿಸುವುದು ಸೂಕ್ತ . ಚಿತ್ರರಂಗಕ್ಕೆ ಇಂತಹವರಿಂದ ಯಾವುದೇ ರೀತಿಯ ಕೊಡುಗೆ ಇಲ್ಲ ಎಂದರು.
-29/11/17
ಕಾಲೇಜ್ ಕುಮಾರ್‍ಗೆ ಫಿದಾ ಆದ ತಾರೆಯರು
ಹರಿಸಂತೋಷ್ ನಿರ್ದೇಶನದ ‘ಕಾಲೇಜ್ ಕುಮಾರ್’ ಚಿಡುಗಡೆಯಾದ ಮೂರೆ ದಿನದಲ್ಲಿ ಎಲ್ಲಾ ಕಡೆಗಳಲ್ಲಿ ಅದ್ಬುತ ಗಳಿಕೆ ಕಂಡುಬರುತ್ತಿದೆ. ಇದರಿಂದ ಖುಷಿಗೊಂಡ ನಿರ್ಮಾಪಕ ಎಲ್.ಪದ್ಮನಾಭರವರು ಭಾನುವಾರ ಸೆಲೆಬ್ರಿಟಿ ಪ್ರದರ್ಶನವನ್ನು ಏರ್ಪಾಟು ಮಾಡಿದ್ದರು. ಚಿತ್ರದ ನಾಯಕಿ ಸಂಯುಕ್ತ ಹೆಗಡೆ ಹೊರತುಪಡಿಸಿ ನಾಯಕ ವಿಕ್ಕಿ, ರವಿಶಂಕರ್, ಶೃತಿ, ತಂಡದವರು ಹಾಜರಿದ್ದರು. ನಿರ್ದೇಶಕರುಗಳಾದ ರಂಗಿತರಂಗದ ಅನೂಪ್‍ಭಂಡಾರಿ, ಚೌಕ ಖ್ಯಾತಿ ತರುಣ್‍ಸುದೀರ್, ಭರ್ಜರಿ ಚೇತನ್‍ಕುಮಾರ್, ಐರಾವತ ಎ.ಪಿ.ಅರ್ಜುನ್, ಕಲಾವಿದರ ಪೈಕಿ ಜೈಜಗದೀಶ್, ಮೇಘನಾರಾಜ್, ಪ್ರಮೀಳಾಜೋಷಾಯ್, ಅನಿತಾಭಟ್, ಪಟ್ರೆ ಅಜಿತ್, ರಾಧಿಕಾಚೇತನ್, ನವರಸನ್, ವೈರಾ ನಾಯಕಿ ಪ್ರಿಯಾಂಕಮಲ್ನಾಡ್, ಮಾನ್ವಿತಾಹರೀಶ್, ವಾಣ ಶ್ರೀ, ರಾಮರಾಮ ರೇ ನಾಯಕ ನಟರಾಜ್, ನಿರ್ಮಾಪಕ ರಾಮು, ಮಾಜಿ ಸಚಿವೆ ಲೀಲಾವತಿ.ಆರ್.ಪ್ರಸಾದ್ ಮತ್ತು ಶೃತಿ ಪೋಷಕರು ಚಿತ್ರ ವೀಕ್ಷಿಸಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ತಂದೆ-ಮಗನ ಬಾಂದವ್ಯದ ಕತೆಯ ಜೊತೆಗೆ ನವಿರು ಪ್ರೇಮ ಸನ್ನಿವೇಶಗಳು ಇರುವುದು ವಿಶೇಷವಾಗಿದೆ.
-15/11/17

ತಂದೆ-ಮಗನ ಜುಗಲ್‍ಬಂದಿ
ಕಾಲೇಜಿನಲ್ಲಿ ಮಗ ಫೈಲು, ತಾನು ಸೋತು ಹೋದೆ ಎಂದು ನೊಂದುಕೊಂಡು ಮಾತನಾಡುತ್ತಾನೆ. ನನಗೆ ವಿದ್ಯೆ ಹತ್ತೋದಿಲ್ಲ, ಓದೋದು ಎಷ್ಟು ಕಷ್ಟ ಅಂತ ನಿಮಗೆ ತಿಳಿದಿಲ್ಲ. ಬಾಯಿಲ್ಲಿ ಹೇಳಿದಷ್ಟು ಸುಲಭವಲ್ಲ. ಇನ್ನು ಮುಂದೆ ಓದೊಲ್ಲ, ಬೇಕಿದ್ದರೆ ನೀವು ಕಾಲೇಜಿಗೆ ಹೋಗಿ, ಪಾಸು ಮಾಡಿ ಅಂತ ಮಗ ಆಕ್ರೋಶದಿಂದ ಛಾಲೆಂಜ್ ಮಾಡುತ್ತಾನೆ. ಕೊಸೇ ನನ್ನ ಕನಸು ಅಂದು ಕೊಂಡಿದ್ದ ಆತನು ಮಗನ ಸವಾಲನ್ನು ಸ್ವೀಕರಿಸಿ ಪರೀಕ್ಷೆಯಲ್ಲಿ ಪಾಸಾಗುವ ಜವಬ್ದಾರಿ ಅಪ್ಪನಿಗೆ ಆದರೆ, ಮನೆ ನಡೆಸಿ ಅಪ್ಪನನ್ನು ಕಾಲೇಜು ಓದಿಸುವ ಜವಬ್ದಾರಿ ಮಗನದು ಆಗುತ್ತದೆ. ಇಬ್ಬರಲ್ಲಿ ಯಾರು ಸರಿಯಾಗಿ ನಿಭಾಯಿಸುತ್ತಾರೆ ಎಂಬುದನ್ನು ‘ಕಾಲೇಜು ಕುಮಾರ್’ ಚಿತ್ರವನ್ನು ಒಮ್ಮೆ ಸಂತೋಷದಿಂದ ನೋಡಬಹುದು. ಟೈಟಲ್ ಕೇಳಿದಾಕ್ಷಣ ಇದೊಂದು ಕಾಲೇಜು ಸ್ಟೋರಿ ಎಂದು ಕೊಂಡು ಚಿತ್ರಮಂದಿರಕ್ಕೆ ಹೋದರೆ ಅಲ್ಲಿ ನೋಡುವುದೇ ಬೇರೆಯಾಗಿರುತ್ತದೆ. ಮಕ್ಕಳನ್ನು ಬಲವಂತವಾಗಿ ಓದಿಸಿ ತಮ್ಮ ಆಸೆಯನ್ನು ತೋರಿಸುವ ತಂದೆ-ತಾಯಂದಿರ ಕತೆ, ಇದಕ್ಕೆ ತದ್ವಿರುದ್ದವಾಗಿ ಮಗ ಓದದೆ ತುಂಟಾಟ ಮಾಡಿ ದಾರಿ ತಪ್ಪಿದ ಮಗನಂತೆ ವರ್ತಿಸುವುದು. ಓದಿಗೆ ವಯಸ್ಸು ಅಡ್ಡ ಬರುವುದಿಲ್ಲ ಎಂಬ ಸಂದೇಶವನ್ನು ಹೇಳಲಾಗಿದೆ. ಇವೆಲ್ಲಾ ಸನ್ನಿವೇಶಗಳು ಒಂದೇ ಸೂರಿನಡಿಯಲ್ಲಿ ಬಂದರೂ ಯಾವುದನ್ನು ಭೋಧನೆ ಮಾಡದೆ ನೋಡುಗರಿಗೆ ಬೋರ್ ಆಗದಂತೆ ದೃಶ್ಯಗಳು ಇರುವುದು ಪ್ಲಸ್ ಪಾಯಿಂಟ್ ಎನ್ನಬಹುದು.

ಯಾವುದೇ ವಿಷಯವನ್ನು ರಬ್ಬರ್‍ನಂತೆ ಎಳೆಯದೆ ಚಿಕ್ಕದಾಗಿ ತೋರಿಸಿರುವದರಿಂದ ಪೂರ್ತಿ ಸಿನಿಮಾ ಪ್ರೇಕ್ಷಕನಿಗೆ ನಿದ್ದೆ ಮಾಡಲು ಬಿಡುವುದಿಲ್ಲ. ಸೆಂಟಿಮೆಂಟ್, ಕಾಮಿಡಿ, ಲವ್ ಎಲ್ಲವೂ ಚೆನ್ನಾಗಿ ಮೂಡಿಬಂದಿದೆ. ಆಕ್ಷನ್ ಸಿನಿಮಾಗಳಿಗೆ ಹೆಚ್ಚು ಒತ್ತು ಕೊಡುತ್ತಿದ್ದ ಹರಿಸಂತೋಷ್ ಈ ಬಾರಿ ಕತೆಯ ಬಗ್ಗೆ ಹೆಚ್ಚು ಗಮನ ನೀಡಿರುವುದು ಕಾಣ ಸುತ್ತದೆ. ಚಿತ್ರದಲ್ಲಿ ನಾಯಕ ವಿಕ್ಕಿಗಿಂತ ಹೆಚ್ಚು ಗಮನ ಸೆಳೆಯುವುದು ಆರ್ಮುಗಂ ಖ್ಯಾತಿ ರವಿಶಂಕರ್ ಅಭಿನಯ ಮರೆಯಲಿಕ್ಕೆ ಆಗುವುದಿಲ್ಲ. ಒಂದು ರೀತಿಯಲ್ಲಿ ಇವರನ್ನು ನಾಯಕ ಅಂತ ಕರೆದರೂ ತಪ್ಪಿಲ್ಲ. ಚೆಲ್ಲು ಚೆಲ್ಲಾದ ಹುಡುಗನಾಗಿ ವಿಕ್ಕಿ ನಟನೆ ಪರವಾಗಿಲ್ಲ. ಸಂಯುಕ್ತಹೆಗಡೆ ಎಂದಿನಂತೆ ಬಜಾರಿ ಪಾತ್ರದಲ್ಲಿ ಕಾಣ ಸಿಕೊಂಡಿದ್ದಾರೆ. ತಾಯಿಯಾಗಿ ಶೃತಿ, ನಗಿಸಲು ಸಾಧುಕೋಕಿಲ, ಆತಂಕವನ್ನು ತೋರಿಸಲು ಅಚ್ಯುತ್‍ಕುಮಾರ್, ಸಿಟ್ಟಿಗಾಗಿ ಪ್ರಕಾಶ್‍ಬೆಳವಾಡಿ ಇವೆಲ್ಲವು ಚಿತ್ರಕ್ಕೆ ಆಕ್ಷಿಜನ್‍ನಂತೆ ಬಂದುಹೋಗುತ್ತದೆ. ಅರ್ಜುನ್‍ಜನ್ಯಾ ಸಂಗೀತದಲ್ಲಿ ಟೈಟಲ್ ಸಾಂಗ್, ನವಾಬನಾಗು ಹಾಡುಗಳು ಕೇಳಬಲ್. ಮೊದಲ ಚಿತ್ರದಲ್ಲಿ ಎಡವಿದ್ದ ಎಲ್.ಪದ್ಮನಾಭ ಈ ಬಾರಿ ಒಳ್ಳೆಯ ಸಿನಿಮಾ ನೀಡಿ ತಾನು ಸದುಭಿರುಚಿಯ ಚಿತ್ರ ನೀಡಬಲ್ಲೆ ಎಂದು ಸಾಬೀತು ಮಾಡುವಲ್ಲಿ ಯಶಸ್ಸನ್ನು ಕಂಡಿದ್ದಾರೆ.
-11/11/17

ಕಾಲೇಜು ಕುಮಾರ್ ಟ್ರೈಲರ್ ಲೋಕಾರ್ಪಣೆ
ಎರಡು ವಾರಗಳ ಹಿಂದೆ ‘ಕಾಲೇಜ್ ಕುಮಾರ್’ ಸಿನಿಮಾದ ಧ್ವನಿಸಾಂದ್ರಿಕೆಯು ಚೌಡಯ್ಯ ಸ್ಮಾರಕ ಮೆಮೋರಿಯಲ್‍ದಲ್ಲಿ ಅದ್ದೂರಿಯಾಗಿ ಅನಾವರಣಗೊಂಡಿತ್ತು. ಈಗ ವಿಡಿಯೋ ಹಾಡುಗಳು ಹಾಗೂ ಟ್ರೈಲರ್ ಬಿಡುಗಡೆ ಕಾರ್ಯಕ್ರಮವು ಮುತ್ತಪ್ಪರೈ ನಿವಾಸದಲ್ಲಿ ನಡೆಯಿತು. ಮಾದ್ಯಮದವರು ಸಿಟಿಯಿಂದ ಟ್ರಾಫಿಕ್ ದಾಟಿಕೊಂಡು ಸ್ಥಳಕ್ಕೆ ಹೋಗುವಷ್ಟರಲ್ಲಿ ವರುಣನ ಆಗಮನವಾಯಿತು. ಅನುರಾಧಮುತ್ತರೈ ಹಾಡುಗಳನ್ನು ಬಿಡುಗಡೆ ಮಾಡಿದರೆ, ಮುತ್ತಪ್ಪರೈ ಟ್ರೈಲರ್ ಲೋಕಾರ್ಪಣೆಗೊಳಿಸಿ ಮಾತನಾಡಿದರು. ಎಂ.ಆರ್. ಪಿಕ್ಚರ್ಸ್‍ನಿಂದ ಎರಡನೆ ಸಿನಿಮಾವಾಗಿದೆ. ಟೈಟಲ್ ಕೇಳಿದಾಗ ಹಳೆಯ ನೆನಪುಗಳು ಬರುತ್ತವೆ. ವಿದ್ಯಾಭಾಸದ ಅವಧಿಯಲ್ಲಿ ಮೂರು ಹೈಸ್ಕೂಲ್, ಐದು ಕಾಲೇಜುಗಳನ್ನು ಬದಲಾಯಿಸಿದ್ದೇನೆ. ಮಿತ್ರರು ಹೆಚ್ಚಿಗೆ ಸಿಗುತ್ತಾರೆಂಬ ನಂಬಿಕೆಯಿಂದ ಈ ರೀತಿ ಮಾಡಬೇಕಾಯಿತು. ಜಯ ಕರ್ನಾಟಕ ಸಂಘದಲ್ಲಿ 25 ಲಕ್ಷ ಸದಸ್ಯರು ಇದ್ದಾರೆ. ಇವರೆಲ್ಲರು ಸಿನಿಮಾ ನೋಡಿ ತಂಡಕ್ಕೆ ಹರಸಬೇಕು. ತಮ್ಮ ಮಕ್ಕಳು ರಾಜಕೀಯ, ಸಿನಿಮಾ, ಸರ್ಕಾರಿ ಉದ್ಯೋಗದಲ್ಲಿರಬೇಕೆಂದು ಬಯಸುವ ಪೋಷಕರಿಗೆ ಇದರಲ್ಲಿ ಸಂದೇಶವನ್ನು ಹೇಳಲಾಗಿದೆ. ನಿರ್ದೇಶಕರು ಅಲೆಮಾರಿ ಯಾದರೆ ನಿರ್ಮಾಪಕ ಹಠಮಾರಿ ಪದ್ದು ಎಂದರು.

ಇದಕ್ಕೂ ಮುನ್ನ ಅರ್ಜುನ್ ಜನ್ಯಾ ಮೈಕ್ ತೆಗೆದುಕೊಂಡು ಈ ದಿನದ ಗಳಿಗೆ ಎಂದೂ ಮರೆಯಲಿಕ್ಕೆ ಸಾಧ್ಯವಿಲ್ಲ. ಎಲ್ಲ ವಿದ್ಯಾರ್ಥಿಗಳು, ತಂದೆ-ತಾಯಿ ನೋಡೋ ಚಿತ್ರ. ಒಳ್ಳೆ ಬ್ಯಾನರ್‍ನಲ್ಲಿ ಕೆಲಸ ಮಾಡಿದೆ ಅಂತ ಮಾತಿಗೆ ವಿರಾಮ ಹಾಕಿದರು. ಸಮಯ ತೆಗೆದುಕೊಂಡು ಕತೆ ಸಿದ್ದಪಡಿಸಲಾಗಿದೆ. ಅರ್ಜುನ್‍ಜನ್ಯಾ ಸರ್ ನಿರ್ಮಾಪಕರಿಗೆ ಪರಿಚಯಿಸಿದರು. ಎಂಆರ್ ಬ್ಯಾನರ್‍ನಲ್ಲಿ ಇಂತಹ ಚಿತ್ರ ಬಂದಿದೆ ಎಂದು ನಕರಾತ್ಮಕವಾಗಿ ಮಾತನಾಡಬಾರದು. ಅದಕ್ಕಂದೆ ಡಬ್ಬಲ್ ಮೀನಿಂಗ್ ಇಲ್ಲದ ಒಳ್ಳೆ ಅಂಶ ಇರುವ ಸಿನಿಮಾ ಮಾಡಲಾಗಿದೆ. ಅಣ್ಣ ಲೋರ್ಕಾಪಣೆ ಮಾಡಿದ್ದು ನಮ್ಮೆಲ್ಲರ ಪುಣ್ಯ ಅಂತ ಹೇಳಿಕೊಂಡರು ನಿರ್ದೇಶಕ ಹರಿಸಂತೋಷ್. ನಿರ್ಮಾಪಕರಾದ ಎಲ್.ಪದ್ಮನಾಭ ಹೆಚ್ಚೇನು ಹೇಳದೆ ಮೌನಕ್ಕೆ ಶರಣಾದರು. ಕುಮಾರ್ ಆರ್ಭಟ ನೋಡಲು ನವೆಂಬರ್ 10ರ ವರೆಗೆ ಕಾಯಬೇಕಾಗಿದೆ.
-29/10/17
ಕಾಲೇಜ್ ಕುಮಾರ್ ಹಾಡಿಗೆ ಡಮಾರ್
‘ಕಾಲೇಜ್‍ಕುಮಾರ್’ ಚಿತ್ರದ ಧ್ವನಿಸಾಂದ್ರಿಕೆ ಅನಾವರಣ ಕಾರ್ಯಕ್ರಮವು ಚೌಡಯ್ಯ ಮೆಮೋರಿಯಲ್ ಹಾಲ್‍ನಲ್ಲಿ ಅದ್ದೂರಿಯಾಗಿ ನಡೆಯಿತು. ಡ್ಯಾನ್ಸ್ ಗ್ರೂಪ್‍ರೊಂದಿಗೆ ಹೆಜ್ಜೆ ಹಾಕಿದ ನಿರ್ಮಾಪಕ ಪದ್ಮನಾಭ ಮಾತನಾಡುತ್ತಾ ಅರ್ಜುನ್‍ಜನ್ಯಾ ಸಂಗೀತ ಕೇಳುತ್ತಿದ್ದರೆ ಕುಣ ಯೋಣಾ ಅನಿಸುತ್ತೆ. ನಾನು ಲಾಸ್ಟ್ ಬೆಂಚ್ ವಿದ್ಯಾರ್ಥಿ. ಬ್ಯಾಂಕಾಕ್, ಪಟ್ಟಾಯಂನಲ್ಲಿ ಚಿತ್ರೀಕರಣ ನಡೆಸಿದೆ. ಇತ್ತೀಚೆಗೆ ಜೋರಾಗಿ ಮಳೆ ಬರುತ್ತಿದೆ. ಪತ್ರಕರ್ತರು ಮಳೆ ಇದ್ದಂಗೆ. ಕರ್ನಾಟಕದಲ್ಲಿ ಜಾಸ್ತಿ ಮಳೆಬಂದಂತೆ ಸಿನಿಮಾಗೆ ಬನ್ನಿ. ಸಚಿವ ಎ.ಮಂಜು ಕಾಲೇಜಿನಲ್ಲಿ ಶೂಟಿಂಗ್ ಮಾಡಲು ಅನುಮತಿ ಕೊಡಿಸಿದರು. ಅವರಿಗೆ ಥ್ಯಾಂಕ್ಸ್ ಎಂದರು. ಅಪ್ಪನ ಹೆಸರನ್ನು ಸೇರಿಸಿಕೊಂಡು ಹರಿಸಂತು ಆಗಿದ್ದೇನೆ. ಅರ್ಜುನ್ ಸರ್‍ಗೆ ಕತೆ ಹೇಳಿದಾಗ ಯಾರಿಗೂ ಹೇಳಬೇಡವೆಂದು ನಿರ್ಮಾಪಕರನ್ನು ಪರಿಚಿಯಿಸಿದರು. ಹೆಚ್ಚು ಖರ್ಚು ಮಾಡಿಸಿದ್ದೇನೆ. ಕತೆಗೆ ಇಮೇಜ್ ಇರುವ ನಾಯಕ ಅವಶ್ಯಕತೆ ಇರಲಿಲ್ಲ. ಫೈಟ್ ಇಲ್ಲ. ಹಠ ಮಾಡಿ ಸಂಯುಕ್ತಹೆಗಡೆಯವರನ್ನು ಆಯ್ಕೆ ಮಾಡಿಕೊಳ್ಳಲಾಯಿತು. ವಿಕ್ಕಿ-ಸಂಯುಕ್ತಹೆಗಡೆ, ರವಿಶಂಕರ್-ಶೃತಿ ನಾಲ್ಕು ಪಿಲ್ಲರುಗಳು. ಆರನೇ ತರಗತಿಯಲ್ಲಿರುವಾಗಲೇ ಅಪ್ಪನ ಜೊತೆ ಸೆಟ್‍ಗೆ ಹೋಗಿ ಕೆಲಸ ಮಾಡುತ್ತಿದ್ದಾಗಲೇ ಚಿತ್ರರಂಗದ ಸೆಳತ ಬಂತು ಎಂದು ನೆನಪಿನಂಗಳಕ್ಕೆ ಜಾರಿದ್ದು ನಿರ್ದೇಶಕರು.

ಧ್ರುವಸರ್ಜಾ ಬಂದಾಗ ಸಭಾಂಗಣಕ್ಕೆ ಮೆರುಗು ಬಂತು. ಅವರು ವೇದಿಕೆಗೆ ಬಂದು ಸಂತು ಟೈಮ್ ತಗೊಂಡು ಸಿನಿಮಾ ಮಾಡಿದ್ದಾರೆ. ಇಂದು ಅರ್ಜುನ್‍ಜನ್ಯಾ ಹೀರೋ. ನಾನು ಸಹ ಮೊದಲನೇ ದಿನ ಚಿತ್ರಮಂದಿರದಲ್ಲಿ ನೋಡುತ್ತೇನೆಂದು ಭರ್ಜರಿ ಚಿತ್ರದ ಡೈಲಾಗ್ ಹೇಳಿ ಅಭಿಮಾನಿಗಳನ್ನು ರಂಜಿಸಿದರು. ಫಸ್ಟ್ ಬೆಂಚ್‍ನಲ್ಲಿರುವವರು ಕ್ಲಾಸ್, ಲಾಸ್ಟ್ ಬೆಂಚ್‍ನಲ್ಲಿರೋರು ಮಲ್ಟಿಟ್ಯಾಲೆಂಟೆಡ್ ಚಿತ್ರಗಳನ್ನು ಮಾಡುತ್ತಾರೆ. ಶೃತಿ ಅಭಿನಯದ ಬಗ್ಗೆ ಮಾತನಾಡುವ ಆಗಿಲ್ಲ. ರವಿಶಂಕರ್ ಕುಟುಂಬ ಪರಿಚಯವಿದೆ. ಸಂಯುಕ್ತ ಹೆಗಡೆ ಆಲ್ ಇನ್ ಒನ್ ಪಟಾಕಿ ಪಾಕೆಟ್ ತರಹ. ಟಿವಿ ರಿಯಾಲಿಟಿ ಷೋದಲ್ಲಿ ನೋಡುವಾಗಲೆ ಈಕೆ ಏನಾದರೂ ಮಾಡುತ್ತಾಳೆ ಅಂದುಕೊಂಡಿದ್ದೆ. ಅದರಂತೆ ಆಗಿದೆ. ಭವಿಷ್ಯದಲ್ಲಿ ಅದ್ಬುತ ನಟಿ ಆಗ್ತಿಯಾ ಎಂದು ಹೇಳಿದರು ಮಾಲಾಶ್ರೀ.

ಸಂಯುಕ್ತ ಹೆಗಡೆ ಅವರೊಂದಿಗೆ ಹೆಜ್ಜೆ ಹಾಕಿದ ಅರ್ಜುನ್ ಜನ್ಯಾ ಮೈಕ್ ತೆಗೆದುಕೊಂಡು ಇಷ್ಟದ ನಟ ರವಿಶಂಕರ್. ಸೆಂಟಿಮೆಂಟ್ ಹಾಡಿನಲ್ಲಿ ಅವರು ಚೆನ್ನಾಗಿ ಅಭಿನಯಿಸಿದ್ದಾರೆ. ಅದು ಚಿತ್ರದ ಜೀವಾಳ. ಮಧ್ಯಮ ವರ್ಗದ ದಂಪತಿಗೆ ಗಂಡು ಮಗು ಆದಾಗ ಅವರ ಖುಷಿ, ನೋವು ಎಲ್ಲವನ್ನು ಹಾಡಿನಲ್ಲಿ ತೋರಿಸಲಾಗಿದೆ. ನಾಗೇಂದ್ರಪ್ರಸಾದ್ ಸಾಹಿತ್ಯದಲ್ಲಿ ಮೈಸೂರಿನ ನಿತಿನ್‍ರಾಜರಾಂಶಾಸ್ತ್ರೀ ಅವರನ್ನು ಗಾಯಕರಾಗಿ ಪರಿಚಯಿಸಲಾಗಿದೆ ಅಂತ ವಿವರ ನೀಡಿದರು. ಇಂತಹ ಪಾತ್ರ ಸಿಕ್ಕಿದು ನನ್ನ ಸುಕೃತ. ಹಾಡಿನಲ್ಲಿ ನಟಿಸಿದ್ದು ಹೊಸ ಅನುಭವ ತಂದುಕೊಟ್ಟಿತ್ತು. ಆರ್ಮುಗಂ ಕೋಟೆಯಿಂದ ಹೊರ ಬಂದಿದ್ದೇನೆ ಎಂಬುದು ರವಿಶಂಕರ್ ಮಾತು. ಕಲಾವಿದರಾದವರು ಎಂತಹ ಪಾತ್ರ ಕೊಟ್ಟರು ಅಭಿನಯಿಸಬೇಕು. ಚಿತ್ರಜೀವನದಲ್ಲಿ ಇದು ತೂಕದ ಪಾತ್ರ. ರವಿ ಸರ್ ನಟನೆ ಅಮೋಘವಾಗಿದೆ. ಆರಡಿ ಕಟೌಟ್ ಆದರೆ ರವಿಯವರು ಏಳಡಿ ಕಟೌಟ್. ನಾನು ಅವರ ದೊಡ್ಡ ಅಭಿಮಾನಿ. ಪ್ರಭುದ್ದತೆ ಇರುವ ಕತೆ. ನಿರ್ಮಾಪಕರು ತಂದೆ ಸ್ಥಾನದಲ್ಲಿ ನಿಂತು ಸಿನಿಮಾ ಮಾಡಿದ್ದಾರೆಂದು ಶೃತಿ ನಿರ್ಗಮಿಸಿದರು.

ಹೊಸ ಗಾಯಕ ಚಿಂತನ್ ನಮ್ಮ ಜಿಲ್ಲೆಯವರು. ರವಿಶಂಕರ್ ಚಿತ್ರಗಳನ್ನು ನೋಡುತ್ತಾ ಇಂತಹ ಪಾತ್ರ ಮಾಡಬೇಡಿ ಎಂದು ಹೇಳಿದ್ದೆ. ಇಂದು ಅವರನ್ನು ಕ್ಷಮೆ ಯಾಚಿಸುತ್ತೇನೆ. ಭಾವನೆಗಳು ತುಂಬಿದ ಗೀತೆಯಲ್ಲಿ ಅವರು ತೋರಿಸಿರುವ ಆಂಗಿಕ ನಟನೆ ಮೋಡಿ ಮಾಡಿದೆ. ಯಾವುದೇ ಸಮಾರಂಭ ವಿರಲಿ ಶೃತಿ ಅವರನ್ನು ಕರೆದರೆ ಒಂದು ಗಂಟೆ ಮುಂಚಿತವಾಗಿ ಬರುತ್ತಾರೆ. ಎಲ್ಲರಿಗೂ ಒಂದು ತಾಯಿ ಇದ್ದರೆ ಅವರಿಗೆ ಇಬ್ಬರು ತಾಯಂದಿರು. ನಿರ್ದೇಶಕರು ತಂದೆ ಹೆಸರನ್ನು ಸೇರಿಸಿಕೊಂಡಿರುವುದು ಅಪ್ಪನ ಮೇಲಿರುವ ಗೌರವ ತೋರಿಸುತ್ತದೆ. ಪದ್ಮನಾಭ ಎರಡನೆ ಸಿನಿಮಾ ಮಾಡಿದ್ದಾರೆಂದರೆ ಕಿಲಾಡಿ ಇರಬೇಕು. ಲಹರಿಯ ಮನೋಹರ್‍ರವರು ಬೆಳ್ಳಿಕಾಲುಂಗುರ ಹತ್ತು ಲಕ್ಷ ಸಿಡಿ ಮಾರಾಟವಾಗಿತ್ತು ಎಂದು ಹೇಳಿದ್ದರು. ಅದರಂತೆ ಈ ಚಿತ್ರವು ಆಗಲಿ. ನಿಷ್ಟಾವಂತ ನಿರ್ದೇಶಕರನ್ನು ಆಯ್ಕೆ ಮಾಡಿಕೊಂಡಿದ್ದೀರಾ. ಮಾಲಾಶ್ರೀ-ಸಂಯುಕ್ತ ಇಬ್ಬರ ಅಭಿಮಾನಿಯಾಗಿರುವೆ. ಬೆಳಿತಾ ಕನ್ನಡವನ್ನು ಮರೆಯಬೇಡಿ. ದುಡ್ಡು ದೊಡ್ಡದಲ್ಲ ಮಾನ್ಯತೆ ದೊಡ್ಡದು. ಪ್ರಸಕ್ತ ಚಿತ್ರರಂಗ ಕಷ್ಟದಲ್ಲಿದೆ. ನೀವುಗಳು ದೊಡ್ಡವರಾಗಿ ಸಹಕರಿಸಬೇಕು. ಒಬ್ಬ ನಿರ್ಮಾಪಕ ಉಳಿದರೆ 100 ಕುಟುಂಬಕ್ಕೆ ಆಶ್ರಯ ಸಿಗುತ್ತದೆಂದು ಮಾತಿಗೆ ವಿರಾಮ ಹಾಕಿದರು ವಾಣ ಜ್ಯ ಮಂಡಳಿ ಅಧ್ಯಕ್ಷ ಸಾರಾಗೋವಿಂದು.

ಚಿತ್ರಕ್ಕೆ ಅರ್ಜುನ್‍ಜನ್ಯಾ ನಾಯಕ. ನಿರ್ಮಾಪಕರು ಸೋದರನಂತೆ ಪ್ರೋತ್ಸಾಹ ನೀಡಿದ್ದಾರೆ. ರವಿಶಂಕರ್ ಮುಂದೆ ನಟನೆ ಮ ಾಡುವುದು ಕಷ್ಟವಾಗಿತ್ತು . ಅವರು ಒಂಥರ ಕನ್ನಡಿ ಇದ್ದಂಗೆ. ಮೊದಲನಿಂದಲೂ ನಾಚಿಕೆ ಸ್ವಭಾವ ಇರುವುದರಿಂದ ಹೆಚ್ಚು ಹೊತ್ತು ವೇದಿಕೆ ಮೇಲೆ ಇರೋಲ್ಲ ಎನ್ನುತ್ತಾರೆ ನಾಯಕ ವಿಕ್ಕಿ. ಒಳ್ಳೆ ತಂತ್ರಜ್ಘರು ಇರೋದ್ರಿಂದ ಅಭಿನಯಿಸಲು ಸುಲಭವಾಯಿತು. ರವಿ-ಶೃತಿ ಅವರ ಜೊತೆ ಮೊದಲ ದಿನ ನಟಿಸುವಾಗ ಭಯವಾಯಿತು. ಇಬ್ಬರು ಧೈರ್ಯ ನೀಡಿದರು. ವಿಕ್ಕಿ ದೊಡ್ಡ ಪರೋಡಿ. ಪರದೆ ಹಿಂದೆ ಅವರ ಮಾತುಗಳು ಜೋರಾಗಿ ಇರುವುದಾಗಿ ಟಾಂಗ್ ಕೊಟ್ಟರು ಸಂಯುಕ್ತಹೆಗ್ಗಡೆ. ಸಂದೇಶ ಇರುವ ಸಿನಿಮಾಗಳು ಬರುತ್ತಿರುವುದು ಸಂತಸದ ವಿಷಯ. ಒಂಬತ್ತು ಪ್ರಶಸ್ತಿಗಳನ್ನು ಪಡೆದುಕೊಂಡಿರುವ ಕನ್ನಡ ಚಿತ್ರರಂಗವನ್ನು ನಾವುಗಳು ಬೆಳಸಬೇಕು, ಉಳಿಸಬೇಕು ಅಂತ ಕರೆ ನೀಡಿದರು ಸಚಿವ ಎ.ಮಂಜು.

ಪುಟಾಣ ಯಶಿತಾ ಧ್ರುವಸರ್ಜಾ, ರವಿಶಂಕರ್ ಚಿತ್ರದ ಡೈಲಾಗ್‍ಗಳನ್ನು ಮಾಸ್ ರೀತಿಯಲ್ಲಿ ಹೇಳಿದ್ದು, ಪೂಜಾ-ಪ್ರತೀಕ್ ಶ್ಯಾಡೋ ಪ್ರದರ್ಶನ, ಸಂಯುಕ್ತ ಹೆಗಡೆ ನೃತ್ಯ, ವ್ಯಾಸರಾಜ್-ಅಲೋಕ್ ಗಾಯನ ಎಲ್ಲವು ಕಣ್ತುಂಬಿಕೊಂಡಿತು. ಕೆ.ಮಂಜು, ಉಮೇಶ್‍ಬಣಕಾರ್, ಚೇತನ್‍ಕುಮಾರ್, ಎನ್.ಎಂ.ಸುರೇಶ್ ಹಲವು ಗಣ್ಯರುಗಳು ಸಿಡಿ ಬಿಡುಗಡೆಗೆ ಸಾಕ್ಷಿಯಗಿದ್ದರು. ಪವನ್‍ಕುಮಾರ್ ಕನ್ನಡ ಪ್ರಾಧ್ಯಾಪಕ-ರಶ್ಮಿ ಇಂಗ್ಲೀಷ್ ಲೆಕ್ಚರರ್ ಆಗಿ ಹಾಸ್ಯದಲ್ಲಿ ನಡೆಸಿಕೊಟ್ಟ ಕಾರ್ಯಕ್ರಮ ಕಳಸಪ್ರಾಯವಾಗಿತ್ತು.
-16/10/17ಯಲಹಂಕದ ಶೇಷಾದ್ರಿಪುರ ಕಾಲೇಜಿನಲ್ಲಿ `ಕಾಲೇಜ್ ಕುಮಾರ್’ ಚಿತ್ರದ ಮೊದಲ ಹಾಡು ಬಿಡುಗಡೆ
ಎಂ.ಆರ್.ಪಿಕ್ಚ್‍ರ್ಸ್ ಲಾಂಛನದಲ್ಲಿ ಎಲ್.ಪದ್ಮನಾಭ್ ಅವರು ನಿರ್ಮಿಸುತ್ತಿರುವ, ಹರಿ ಸಂತೋಷ್(ಅಲೆಮಾರಿ ಸಂತು) ನಿರ್ದೇಶನದ `ಕಾಲೇಜ್ ಕುಮಾರ್’ ಚಿತ್ರದ ಮೊದಲ ಹಾಡು ಯಲಹಂಕದ ಶೇಷಾದ್ರಿಪುರ ಕಾಲೇಜಿನಲ್ಲಿ ಬಿಡುಗಡೆಯಾಯಿತು.
ಅರ್ಜುನ್ ಜನ್ಯ ಸಂಗೀತ ನೀಡಿರುವ, ನಿರ್ದೇಶಕ ಹರಿ ಸಂತೋಷ್ ರಚಿಸಿರುವ `ಲಾಸ್ಟ್ ಬೆಂಚ್ ಬಾಯ್ಸ್’ ಎಂಬ ಗೀತೆ ಶೇಷಾದ್ರಿಪುರ ಕಾಲೇಜಿನಲ್ಲಿ ಬಿಡುಗಡೆಯಾಯಿತು. ಅಲೋಕ್, ವ್ಯಾಸರಾಜ್ ಹಾಗೂ ವಾಸುಕಿ ವೈಭವ್ ಈ ಗೀತೆಯನ್ನು ಹಾಡಿದ್ದಾರೆ. ಖ್ಯಾತ ನಟ ರವಿಶಂಕರ್, ನಾಯಕ ವಿಕ್ಕಿ ವರುಣ್(ಕೆಂಡಸಂಪಿಗೆ), ಸಂಯುಕ್ತ ಹೆಗಡೆ(ಕಿರಿಕ್ ಪಾರ್ಟಿ), ನಿರ್ಮಾಪಕ ಎಲ್.ಪದ್ಮನಾಭ್, ನಿರ್ದೇಶನ ಹರಿ ಸಂತೋಷ್, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ, ಗಾಯಕರಾದ ಅಲೋಕ್, ವ್ಯಾಸರಾಜ್, ವಾಸುಕಿ ವೈಭವ್ ಸೇರಿದಂತೆ ಚಿತ್ರತಂಡದ ಸದಸ್ಯರು ಈ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಮೂರು ಸಾವಿರಕ್ಕು ಅಧಿಕ ವಿದ್ಯಾರ್ಥಿಗಳು ಈ ಸುಂದರ ಸಮಾರಂಭಕ್ಕೆ ಸಾಕ್ಷಿಯಾದರು.

ಹರಿ ಸಂತೋಷ್ ರಚನೆ ಹಾಗೂ ನಿರ್ದೇಶನದ ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಎ.ಅನಘನ್ ಛಾಯಾಗ್ರಹಣ ಹಾಗೂ ಕೆ.ಎಂ.ಪ್ರಕಾಶ್ ಸಂಕಲನ ಈ ಚಿತ್ರಕ್ಕಿದೆ. ವಿಕ್ಕಿ ವರುಣ್, ಸಂಯುಕ್ತ ಹೆಗಡೆ, ರವಿಶಂಕರ್, ಶ್ರುತಿ, ಪ್ರಕಾಶ್ ಬೆಳವಾಡಿ, ಸಾಧುಕೋಕಿಲ, ಅಚ್ಯುತ ಕುಮಾರ್ ಮುಂತಾದವರು `ಕಾಲೇಜ್ ಕುಮಾರ್’ ಚಿತ್ರದ ತಾರಾಬಳಗದಲ್ಲಿದ್ದಾರೆ.
-10/10/17
COLLEGE KUMAR SHOOTING CONCLUDES
P
roducer L Padmanabha of film College Kumar was seen relieved on Saturday. The reason: Friday was the last day of College Kumar shooting that was held near Gavi Gangadhareshwara Temple. Padmanabha, who lost a huge amount of money by producing Kannada film John Johny Janardhan that was released last year, is happy with the completion of his second film College Kumar.

“The budget of College Kumar has escalated by 60 per cent because we did not compromise on quality. We were also particular to have particular artistes for this film. It was completed in a single schedule,’’ said Padmanabha.

Speaking on the occasion, director Hari Santosh alias Santhu of Alemari fame expressed gratitude to the producer for providing everything to complete the shooting of College Kumar. “Producer Padmanabha did not allow me to take a few days leave but managed to have holidays for three days. Today (Saturday) is the last day of 54-day shooting,’’ said Santhosh.

Appreciating cinematographer Anbazhagan from Tamil Nadu, producer Padmanabha said Anbazhagan would be an asset to film industry. “I have to thank Ravishankar, Shruthi and other artistes for completing the shooting of this film in one schedule. I have learnt a lot by being producer of this film. I consider this film as a practical test for me in making films. I can sit in my office and monitor my next film in the near future,’’ he said.

Shruthi and Ravishankar have showered praises on each them. “I am a fan of Ravishankar. I wanted to share the screen with him. My dream has become true with this film,’’ says Shruthi.

Ravishankar appreciated Shruthi’s performance in this film and recalled how he became her fan after watching her performance in Tamil film Kalki.
-Cine Circle News
-16/07/17

COLLEGE KUMAR’ LAUNCHED
K
annada film ‘College Kumar’ mounted the sets on May Day in Bengaluru with Kichcha Sudeep gracing the occasion. The film is being produced by L Padmanabha who earlier produced John Jaani Janardhan. The film is being directed by Santhu who has rechristened himself as Santhu Harish. College Kumar is produced under the banner of M R Films. The film stars Vicky of Kenda Sampige fame, Samyuktha Hegde of ‘Kirik Party’, Shruthi and Ravishankar.

Director Santhu told reporters that he is confident that the film’s subject will be accepted by the people. Alagan is cameraman of this film. The film is about the relationship between father and son. The film will be shot in the veterinary hospital campus near Hebbal for 20 days.

Padmanabha said he had suggested the name of Ravishankar to play the father and Shruthi also agreed to play mother.

Vicky said he had rejected 49 subjects before accepting this offer. He said the film has fun, seriousness and is a family entertainer. He said it would be a challenge to work with Ravishankar and Shruthi. Samyuktha Hegde said the film has shades of Kirik Party and that she plays a villainous lover.

Ravishankar said he has a different role in the film. He said he plays father in the film and that his interaction with son will be interesting. He also said he was waiting for an opportunity to act with Shruthi. He said Samyuktha Hegde has double energy compared to Kirik Party in this film.
-5/02/17


For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore