ಪೋಲೀಸ್ ವ್ಯವಸ್ಥೆ ಮತ್ತು ಟಿಂಬರ್ ಮಾಫಿಯಾ ![]() ![]() ನೀನು ಇನ್ಸೆಪೆಕ್ಟರ್ ರವಿಕಾಂತ್ ಗನ್ನು ತೆಗೆದುಕೊಂಡು ಬಂದಲ್ಲಿ ನಮ್ಮ ಪ್ರೀತಿಗೆ ಬೆಲೆ ಇದೆ ಎಂದರ್ಥ ಎಂದು ಆಕೆ ಹೇಳುವಾಗಲೆ ‘ಚೂರಿ ಕಟ್ಟೆ’ ಸಿನಿಮಾವು ಒಂದು ಹಂತಕ್ಕೆ ಬಂದಿರುತ್ತದೆ. ಮಲೆನಾಡು ಪ್ರದೇಶಗಳಲ್ಲಿ ದಿಮ್ಮಿಗಳ ಕಳ್ಳಸಾಗಣೆ ಇಂದಿಗೂ ನಡೆಯುತ್ತಲೆ ಇದೆ. ಪರೋಕ್ಷವಾಗಿ ಅರಣ್ಯ ಇಲಾಖೆಯ ಅಧಿಕಾರಿಗಳು ಪ್ರೋತ್ಸಾಹ ನೀಡುತ್ತಿರುವುದರಿಂದ ಇದಕ್ಕೆ ಕಡಿವಾಣ ಹಾಕುವುದು ಕಷ್ಟ. ಅಂತಹ ಪ್ರದೇಶದಲ್ಲಿ ಹೇಗೆ ದಂದೆ ನಡೆಯುತ್ತದೆ ಎಂಬುದನ್ನು ಹಸಿ ಹಸಿಯಾಗಿ ಜೊತೆಗೆ ಸುಂದರ ಪ್ರೇಮಕತೆಯನ್ನು ಚಿತ್ರದಲ್ಲಿ ಕಟ್ಟಿಕೊಟ್ಟಿದ್ದಾರೆ. ಕತೆಯ ಕುರಿತು ಹೇಳುವುದಾದರೆ ಅದೊಂದು ಚೂರಿಕಟ್ಟೆ ಎನ್ನುವ ಗ್ರಾಮ ಅಲ್ಲಿ ದಟ್ಟವಾದ ಕಾಡು ಇರುವುದರಿಂದ ಟಿಂಬರ್ ಮಾಫಿಯಾ ಸುಲಭವಾಗಿ ಆಗುತ್ತಿರುತ್ತದೆ. ಒಂದು ಕಡೆ ಪೋಲೀಸರು ನಾಕಬಂದಿಯಲ್ಲಿದ್ದರೆ, ಮತ್ತೋಂದು ಕಡೆ ಭ್ರಷ್ಟ ಸಿಬ್ಬಂದಿಯಿಂದ ಮಾಹಿತಿ ತಿಳಿದುಕೊಂಡು ಕಣ್ ತಪ್ಪಿಸಿ ಸಾಗಾಣ ಕೆ ಆಗುತ್ತದೆ. ಅದೇ ಜಾಗದಲ್ಲಿ ಇರುವ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿ ಆದಿ (ಪ್ರವೀಣ್) ಜೊತೆಗೆ ಕಲಾ (ಪ್ರೇರಣಾ) ಇಬ್ಬರಲ್ಲಿ ಪ್ರೀತಿ ಚಿಮ್ಮುತ್ತದೆ. ಅಪ್ಪ ಇಲ್ಲದ ಮಾವನ ಮನೆಯಲ್ಲಿ ಅಮ್ಮನೊಂದಿಗೆ ಆಶ್ರಯ ಪಡೆದುಕೊಂಡಿರುತ್ತಾಳೆ ಆತ ಮಾಫಿಯಾದಲ್ಲಿ ಇರುವುದು ಗೊತ್ತಾಗಿ ಸಂಕಟ ಪಡುತ್ತಾಳೆ. ಮುಂದೆ ಆದಿಗೆ ಪೋಲೀಸ್ ಕಾನ್ಸೆಟೇಬಲ್ ಹುದ್ದೆಗೆ ತರಭೇತಿಗೆ ಹಾಜರಾಗಲು ಪತ್ರ ಬರುತ್ತದೆ. ಇದರ ಮಧ್ಯೆ ಕಳ್ಳಸಾಗಣೆಯನ್ನು ತಡೆಗಟ್ಟಲು ಪೋಲೀಸರಿಗೆ ಸಹಾಯ ಮಾಡುವಾಗ ಕಷ್ಟಕ್ಕೆ ಸಿಲುಕುತ್ತಾನೆ. ಅಲ್ಲಿಂದ ಕತೆಯಲ್ಲಿ ಹಲವು ಆಯಾಮಗಳು ತೆರೆದುಕೊಂಡು ಮುಂದೇನು ಆಗುತ್ತದೆ ಎಂಬುದನ್ನು ಹೇಳಲಿಕ್ಕೆ ಆಗದಷ್ಟು ಸನ್ನಿವೇಶಗಳು ಬರುತ್ತವೆ. ಅದನ್ನು ಸಿನಿಮಾ ನೋಡಿದಾಗ ಮಾತ್ರ ತಿಳಿಯುತ್ತದೆ. ವಿದ್ಯಾರ್ಥಿ ಹಾಗೂ ಭವಿಷ್ಯದ ಪೇದೆಯಾಗಿ ಎರಡು ಶೇಡ್ಗಳಲ್ಲಿ ಕಾಣ ಸಿಕೊಂಡಿರುವ ನಾಯಕ ಪ್ರವೀಣ್ ಆಕ್ಷನ್ ಮತ್ತು ಅಭಿನಯ ಎರಡರಲ್ಲೂ ಸೈ ಎನಿಸಿಕೊಂಡಿದ್ದಾರೆ. ಮುಗ್ದ ವಿದ್ಯಾರ್ಥಿ ಅಸಹಾಯಕ ಹುಡುಗಿಯಾಗಿ ಪ್ರೇರಣಾ ಮೊದಲ ಚಿತ್ರದಲ್ಲೆ ತಾನು ಮರಸುತ್ತವ ನಟಿಯಲ್ಲಿವೆಂದು ತನ್ನ ಪ್ರತಿಭೆಯನ್ನು ಧಾರೆ ಏರೆದಿದ್ದಾರೆ. ಪ್ರಾಮಾಣ ಕ ಪೋಲೀಸ್ ಅಧಿಕಾರಿ ಅಚ್ಯುತಕುಮಾರ್ ಇಡೀ ಸಿನಿಮಾ ಆವರಿಸಿಕೊಂಡಿರುವುದರಿಂದ ಅವರ ಹಾವಭಾವವನ್ನು ನೋಡುವುದೇ ಚೆಂದ. ಕಡಿಮೆ ಅವಧಿಯಲ್ಲಿ ಬಂದರೂ ಶರತ್ಲೋಹಿತಾಶ್ವ ಟಿಂಬರ್ ಮಾಫಿಯಾದ ಡಾನ್ ಆಗಿ ಪಾತ್ರಕ್ಕೆ ಸೂಕ್ತವಾಗಿದ್ದಾರೆ. ಬಾಲಾಜಿಮನೋಹರ್ ಖಳನಾಯಕನಾಗಿ ಅವರ ಕಣ್ಣೋಟ, ಗಡಸು ಕಂಠದಲ್ಲಿ ಹೇಳುವ ಡೈಲಾಗ್ ಸ್ಯಾಂಡಲ್ವುಡ್ಗೆ ಅದ್ಬುತ ವಿಲನ್ ಸಿಕ್ಕಂತೆ ಆಗಿದೆ. ಮಿಕ್ಕಂತೆ ಅರುಣ್ಬಾಲರಾಜ್, ದತ್ತಣ್ಣ, ಮಂಜುನಾಥಹೆಗ್ಗಡೆ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ನಿರ್ದೇಶಕ ರಾಘುಶಿವಮೊಗ್ಗ ಪ್ರಥಮ ಪ್ರಯತ್ನದಲ್ಲೆ ಪ್ರೇಕ್ಷಕರ ನಾಡಿಮಿಡಿತವನ್ನು ತಿಳಿದಿರುವಂತೆ ಸಂಭಾಷಣೆಗಳನ್ನು ಬರೆದು ಅದಕ್ಕೆ ಅನೂಹ್ಯ ದೃಶ್ಯಗಳನ್ನು ಸೇರಿಸಿರುವ ಶ್ರಮ ಪರದೆ ಮೇಲೆ ಕಾಣ ಸುತ್ತದೆ. ಸಂಗೀತ ವಾಸುಕಿವೈಭವ್, ಹಿನ್ನಲೆ ಸಂಗೀತ ನಾಬಿನ್ಪೌಲ್ ಪ್ಲಸ್ ಪಾಯಿಂಟ್ ಎನ್ನಬಹುದು. ಒಟ್ಟಾರೆ ಮಾಸ್, ಕ್ಲಾಸ್ ಇರುವ ಚಿತ್ರವು ಪಕ್ಕಾ ಪೈಸಾ ವಸೂಲ್ ಎಂದರೆ ತಪ್ಪಾಗಲಾರದು. ನಿರ್ಮಾಪಕರು: ಎಸ್.ನಯಾಜುದ್ದೀನ್,ಎಂ.ತುಳಸಿರಾಮುಡು ಸಿನಿ ಸರ್ಕಲ್ ಡಾಟ್ ಇನ್ ವಿಮರ್ಶೆ -26/01/18 |
ಚೂರಿಕಟ್ಟೆ ಆಗಮನಕ್ಕೆ ಸಿದ್ದತೆ |
![]() ![]() |
‘CHURIKATTE’ LAUNCHED Director Raghu told journalists that 70 percent of the shoot will happen in forests and it deals with timbre mafia and crime related to theft of forest wealth including poaching of sandalwood trees. The film will have a 45-day shoot schedule in Hosanagara, Shivamogga, Malnad regions and Savanadurga. The climax portion will be shot in Savanadurga, he said. The director said the film will have five fight sequences. Manjunath Hegde plays a forest officer while Achyuth Kumar plays a police officer. Praveen plays a college student who aspires to become a cop. Prerana who has been acting in television serials is debuting on the big screen and she plays a college student in the movie. Vasuki Vybhav will be composing the music for the film which will have five songs out of which he has himself penned the lyrics for one song. Advaita Gurumurthy is the cameraman and Prakash Karanji is the editor. The film will begin its regular shoot from next week. |
![]() ![]() ![]() ![]() ![]() ![]() ![]() ![]() |