HOME
CINEMA NEWS
GALLERY
TV NEWS
REVIEWS
CONTACT US
ಚಮಕ್ ನಿರ್ಮಾಪಕರಿಗೆ ಚಮತ್ಕಾರ ನೀಡಿದೆ
‘ಚಮಕ್’ ಸಿನಿಮಾದ ಬಂಡವಾಳ ಶೇಕಡ 99.99ರಷ್ಟು ವಾಪಸ್ಸು ಬಂದಿದೆ, ಚಿತ್ರರಂಗದ ಭಾಷೆಯಲ್ಲಿ ಹೇಳುವುದಾದರೆ ಐ ಯಾಮ್ ಸೇಫ್ ಎಂದು ನಿರ್ಮಾಪಕ ಟಿ.ಆರ್.ಚಂದ್ರಶೇಖರ್ ಪ್ರಾಮಣ ಕವಾಗಿ ಚಿತ್ರದ ಸಂತೋಷಕೂಟದಲ್ಲಿ ಸಂತಸವನ್ನು ಹಂಚಿಕೊಳ್ಳುತ್ತಿದ್ದರು. ಮಾತು ಮುಂದುವರೆಸುತ್ತಾ ಪ್ರಜಾಪ್ರಭುತ್ವದಲ್ಲಿ ನಾಲ್ಕು ಅಂಗಗಳು ಇರುವಂತೆ, ಈ ರಂಗದಲ್ಲಿ ಮೊದಲನೆಯದಾಗಿ ಕಲಾವಿದರು, ತಂತ್ರಜ್ಘರು , ಎರಡನೆಯದು ವೀಕ್ಷಕ ಸಮೂಹ, ಮೂರನೆಯದಾಗಿ ದೈವಕೃಪೆ, ಕೊನೆಯದಾಗಿ ಮುಖ್ಯವಾದುದು ಮಾದ್ಯಮಾಂಗ. ಇದರ ಪರಿಣಾಮಗಳಿಂದಲೇ ಒಂದು ಹಂತಕ್ಕೆ ಹಿಟ್ ಆಗಿದೆ. ಬಿಲ್ಡರ್, ಟೆಕ್ಕಿ ಕಂಪೆನಿ, ಹೋಟೆಲ್ ವ್ಯವಹಾರ ನೋಡಿಕೊಳ್ಳುತ್ತಿರುವ ನಾನು ಮಗನ ಒತ್ತಾಯಕ್ಕೆ ಮಣ ದು ಈ ರಂಗಕ್ಕೆ ಬಂದಿದ್ದೇನೆ. ಮುಂದೆಯೂ ಉತ್ತಮ ಚಿತ್ರಗಳನ್ನು ಕೊಡುವ ಪಸೆ ಇದೆ. ಚಿತ್ರರಂಗಕ್ಕೆ ಕಲೆ, ವಾಣ ಜ್ಯ ಅಂತ ಎರಡು ಮುಖಗಳು ಇವೆ. ಎರಡನೆಯ ಉಳಿದರೆ ಸಿನಿಮಾರಂಗ ಗಟ್ಟಿಯಾಗಿ ನೆಲೆಯೂರಲು ಸಾದ್ಯವಾಗುತ್ತದೆ. ಕನಸನ್ನು ಕಟ್ಟಿಕೊಂಡು ಕ್ಷೇತ್ರಕ್ಕೆ ಬಂದಿರುವುದು ಫಲ ನೀಡಿದೆ. ಗಡಿಯಾಚೆ, ವಿದೇಶದಲ್ಲಿ ಬಿಡುಗಡೆ ಮಾಡಲಾಗಿದ್ದು ಎಲ್ಲಾ ಕಡೆ ಕಲೆಕ್ಷನ್ ಚೆನ್ನಾಗಿ ಬರುತ್ತಿದೆ. ಕನಿಷ್ಟ 15 ಕೇಂದ್ರಗಳಲ್ಲಿ ಶತದಿನ ಪೂರೈಸಲಿದೆ. 100 ದಿನದ ಕಾರ್ಯಕ್ರಮದಲ್ಲಿ ಚಾರ್ಟ್‍ಡ್ ಅಕೌಂಟೆಂಟ್‍ರೊಂದಿಗೆ ಪೂರ್ಣ ಲೆಕ್ಕದ ವಿವರವನ್ನು ಕೊಡುತ್ತೇನೆಂದು ನಿರ್ಮಾಫಕರು ಹೇಳುವಾಗ ಸಂತೋಷದ ಬೆವರಿನ ನೀರು ಅವರ ಮುಖದಲ್ಲಿ ಹರಿದಾಡುತ್ತಿತ್ತು.

ನಿರ್ದೇಶಕರು ಮೊದಲ ಸಲ ಚಿತ್ರಕತೆ ನೀಡಿದಂತೆ ಸಿನಿಮಾ ಮಾಡಿದ್ದಾರೆ. ಸಾಧುಕೋಕಿಲ, ಗಿರಿ ಸಣ್ಣ ಪಾತ್ರದಲ್ಲಿ ಕಾಣ ಸಿಕೊಂಡರೂ ಜನರು ಎಂಜಾಯ್ ಮಾಡಿದ್ದಾರೆ. ಖುಷಿಯಾಗಿದೆ ಅಂತ ನಕ್ಕರು ಗಣೇಶ್. ನಟನೆ ಮಾಡಿಸಿದಕ್ಕೆ, ಅವಕಾಶ ನೀಡಿದಕ್ಕೆ ಥ್ಯಾಂಕ್ಸ್ ಎಂದು ನಗುನಗುತ್ತಲೆ ಚುಟುಕು ಮಾತನಾಡಿದ್ದು ರಶ್ಮಿಕಾಮಂದಣ್ಣಾ. ನಮ್ಮದು ಶೇಕಡ 100ರಷ್ಟು ಚಿತ್ರವೆಂದು ಹೇಳಲು ಬರುವುದಿಲ್ಲ. ಮೊದಲಬಾರಿ ಅದ್ದೂರಿ ಚಿತ್ರಕ್ಕೆ ಕೆಲಸ ಮಾಡಲಾಗಿದೆ. ನಿರ್ಮಾಪಕರು ಸುರಕ್ಷಿತವಾಗಿದ್ದಾರೆಂದು ಹೇಳಿದ್ದಾರೆ. ಧನ್ಯವಾದಗಳು. ಅವರು ಈ ರೀತಿ ಇದ್ದರೆ ಚಿತ್ರವು ಗೆದ್ದಂತೆ. ಅಕ್ಷರರೂಪದ ಕತೆಯನ್ನು ಸಿನಿಮಾರೊಪಕ್ಕೆ ತಂದ ಎಲ್ಲರಿಗೂ ಕೃತಜ್ಘತೆಗಳು ಎಂದು ನಿರ್ದೇಶಕ ಸುನಿ ಸಂತೋಷದಿಂದ ಹೇಳುವಲ್ಲಿಗೆ ಅಂದಿನ ಸಕ್ಸಸ್ ಮೀಟ್‍ಗೆ ಮಂಗಳ ಹಾಡಲಾಯಿತು.
-8/01/18\
ಸುಳ್ಳೇ ಸುಳ್ಳು ಖುಷಿಯೇ ಖುಷಿ
ನಿಜವೆಂಬುದು ಶಾಶ್ವತ., ಸುಳ್ಳು ತಾತ್ಕಾಲಿಕವೆಂದು ಹಿರಿಯರು ಹೇಳಿರುವ ಗಾಧೆ ಮಾತು ‘’ಚಮಕ್’ ಚಿತ್ರಕ್ಕೆ ಅನ್ವಯಿಸುತ್ತದೆ. ಕೇವಲ ಒಂದು ಸುಳ್ಳು ಹೇಳಿ ಮದುವೆ ಆದರೂ ಮುಂದೆ ಏನೇನು ಫಜೀತಿಗಳು ಆಗುತ್ತವೆ ಎಂಬುದನ್ನು ಮನರಂಜನಾತ್ಮಕವಾಗಿ ಹೇಳಲಾಗಿದೆ. ಚಿತ್ರದಲ್ಲಿ ನಾಯಕ ಖುಷ್ ಒಬ್ಬ ಪ್ರಸೂತಿ ತಜ್ಘ. ವೈದ್ಯನಾಗಿದ್ದರೂ ಪಬ್ಬು-ಕ್ಲಬ್ಬು, ಗುಂಡು-ತುಂಡು ಅಂತ ಬಿಂದಾಸ್ ಜೀವನ ನಡೆಸುವ ವ್ಯಕ್ತಿತ್ವದವನಾಗಿರುತಾನೆ. ನಾಯಕಿ ಖುಷಿ ಸಂಪ್ರದಾಯಸ್ಥದವಳಾಗಿ ಸದಾ ಖುಷಿಯಿಂದ ಇರಬೇಕೆಂದು ಬಯಸುವ ಹುಡುಗಿ. ಇಬ್ಬರು ಒಂದೊಂದು ಸುಳ್ಳನ್ನು ಹೇಳಿ ಮದುವೆಯಾಗುತ್ತಾರೆ. ತರುವಾಯ ಮುಂದೆ ಅದು ಬಯಲಾಗುತ್ತಾ ಹೋದಾಗ ಇಬ್ಬರ ಪ್ರೀತಿ ಮಧ್ಯೆ ಬಿರುಕು ಹುಟ್ಟುತ್ತದೆ. ಅದು ದೂರಕ್ಕೆ ಹೋಗುವ ಹೊತ್ತಿಗೆ ಮತ್ತೆ ಪ್ರೀತಿ ಹುಟ್ಟುತ್ತದೆ. ಆದರೆ ಕಾಲ ಮಿಂಚಿರುತ್ತದೆ. ಇಷ್ಟರಲ್ಲೆ ಆಕೆ ಗರ್ಭಿಣ ಯಾಗುತ್ತಾಳೆ. ನೀವು ತಂದೆದಯಾಗುತ್ತಿರಿ, ನೀವು ತಾಯಿ ಆಗುತ್ತಿದ್ದೀರಿ, ನೀವು ಅಜ್ಜ-ಅಜ್ಜಿಯಾಗುತ್ತಿರುವಿರಿ ಎಂದು ಹೇಳುವಾಗ ಮನೆಯಲ್ಲಿ ಸಂಭ್ರಮ,ಸಡಗರ,ಭವಿಷ್ಯದ ಕನಸುಗಳು ನಾಯಕನ ಪಾತ್ರದಲ್ಲಿ ಚನ್ನಾಗಿ ಕಾಣ ಸಿಕೊಂಡಿದೆ. ಗೆಳೆಯನ ಮಾತುಗಳನ್ನು ಕೇಳಿ ಅದರಂತೆ ನಡೆದುಕೊಳ್ಳುತ್ತಾನೆ. ಅದು ತುಂಬ ದಿನ ನಡೆಯದೆ ಪತ್ನಿಯ ಅಸಲು ಮುಖ ಬಯಲಾಗುತ್ತದೆ. ಮುಂದೇನು ಎಂಬುದನ್ನು ಚಿತ್ರ ನೋಡಬೇಕು.

ಸಂಬಂದಗಳು ಮೊಬೈಲ್ ಫೋನ್ ಮೂಲಕ ನಡೆಯುತ್ತದೆ. ಹೆಸರಿಗೆ ತಕ್ಕಂತೆ ಮಾತುಗಳು ಇದ್ದರೂ ಕೆಲವೊಮ್ಮೆ ಅರ್ಥ ಮಾಡಿಕೊಳ್ಳುವುದು ಕಷ್ಟವಾಗುತ್ತದೆ. ಆಧುನಿಕತೆಯ ಬದುಕನ್ನು ಚೆನ್ನಾಗಿ ತೋರಿಸಿರುವ ನಿರ್ದೇಶಕ ಸಿಂಪಲ್ ಸುನಿ ಪ್ರತಿ ಸನ್ನಿವೇಶದಲ್ಲಿ ಶ್ರಮ ಕಾಣ ಸುತ್ತದೆ. ಜ್ಯೋಡೂಸ್ಯಾಂಡಿ ಹಾಡುಗಳನ್ನು ಕೇಳುವಂತೆ ಮಾಡಿದರೆ, ಅದನ್ನು ಚೆನ್ನಾಗಿ ನೋಡುವುಂತೆ ಸೆರೆಹಿಡಿರುವ ಸಂತೋಷ್.ರೈ.ಪಾತಾಜೆ ಕೆಲಸ ಶೋಭೆ ತಂದಿದೆ. ಗಣೇಶ್ ಎಂದಿನಂತೆ ಚಮಕ್ ಚಮಕ್ ಸಂಭಾಷಣೆಗಳನ್ನು ಸುಲಲಿತವಾಗಿ ಹೇಳುತ್ತಾ ಪಾತ್ರದಲ್ಲಿ ತಲ್ಲೀನತೆ ತೋರಿಸಿರುವುದು ಕಂಡುಬಂದಿದೆ. ರಶ್ಮಿಕಾಮಂದಣ್ಣ ಅಭಿನಯದ ಜೊತೆಗೆ ತೆರೆ ಮೇಲೆ ಚೆಂದ ಕಾಣ ಸುತ್ತಾರೆ. ಸಾಧುಕೋಕಿಲ, ದಡಿಯಗಿರಿ ಹಾಸ್ಯವು ಪ್ರೇಕ್ಷಕರನ್ನು ನಗೆಲೋಕಕ್ಕೆ ಕರೆದುಕೊಂಡು ಹೋಗುತ್ತದೆ. ಉಳಿದಂತೆ ಸುಮಿತ್ರಾ, ರಘುರಾಮ್, ವಿಜಯಲಕ್ಷೀ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಸಾಹಿತ್ಯ ಪ್ರಿಂiÀiರಾಗಿರುವ ಪ್ರಸಿದ್ದ ಉದ್ಯಮಿ ಟಿ.ಆರ್.ಚಂದ್ರಶೇಖರ್ ಮೊದಲ ಪ್ರಯತ್ನದಲ್ಲೆ ಒಳ್ಳೆ ಚಿತ್ರವನ್ನು ಜನರಿಗೆ ನೀಡಿರುವುದು ಖುಷಿಯ ಸಂಗತಿ.
-31/12/17
ಡಿಸೆಂಬರ್ ಕೊನೆವಾರ ಚಮಕ್‍ಗೆ ಅದೃಷ್ಟದ ಸಂಕೇತ
‘ಚಮಕ್’ ಚಿತ್ರವು ಇದೇ ತಿಂಗಳು 29ರಂದು ತೆರೆಕಾಣುತ್ತಿರುವ ಕಾರಣ ಬಿಡುಗಡೆಪೂರ್ವ ಪತ್ರಿಕಾಗೋಷ್ಟಿಯನ್ನು ನಿರ್ಮಾಪಕರು ಹಮ್ಮಿಕೊಂಡಿದ್ದರು. ಅಂಕಿ-ಅಂಶಗಳ ಪ್ರಕಾರ ಚಿತ್ರಕ್ಕೆ ಒಳ್ಳೆಯದೇ ಆಗುತ್ತಾ ಬಂದಿದೆ. ಮೊದಲಬಾರಿ ಸ್ಟಾರ್ ಮತ್ತು ಬಿಗ್ ಬಜೆಟ್ ಚಿತ್ರ ಮಾಡಿದ್ದೇನೆ. ಕತೆ ಬರೆಯಲು 2-3 ವರ್ಷ ಸಮಯ ತೆಗೆದುಕೊಳ್ಳಲಾಗಿದೆ. ವೈದ್ಯನಾಗಿ ಗಣೇಶ್ ಒಡ್ಕಾ ನೀರು, ಸಂಪ್ರದಾಯಸ್ಥ ಹುಡುಗಿಯಾಗಿ ರಶ್ಮಿಕಾಮಂದಣ್ಣಾ ತೀರ್ಥ. ಮನರಂಜನೆ, ಭಾವನಾತ್ಮಕ ಅಂಶಗಳು ಹೇರಳವಾಗಿದೆ. ಮುಂಗಾರುಮಳೆ, ಕಿರಿಕ್ ಪಾರ್ಟಿ 29ರಂದು ತೆರೆಕಂಡಿತ್ತು. ಅದರಂತೆ ಇದು ಸಹ ಅದೇ ದಿನ ಬರುತ್ತಿರುವುದರಿಂದ ಸಹಜವಾಗಿ ಸಕರಾತ್ಮಕವಾಗುತ್ತದೆಂಬ ನಂಬಿಕೆ ಇದೆ ಎಂದರು ನಿರ್ದೇಶಕ ಸುನಿ. ಶೀರ್ಷಿಕೆ ನೋಡಿ ಟಾಕೀಸ್ ಒಳಗಡೆ ಬಂದರೆ ಚಮಕ್ ಚಮಕ್ ದೃಶ್ಯಗಳು ಮನರಂಜನೆ ನೀಡುತ್ತದೆ. ಒಂದೊಂದು ಚಮಕ್ ಕೊಡುತ್ತಾ ಹೋಗುತ್ತದೆ. ಮದುವೆ ಆಗದೆ ಇರುವವರು, ಆಗುವವರು, ಆಗಿರುವವರು ಇದನ್ನು ನೋಡಲೇ ಬೇಕು. ಎಲ್ಲಾ ವರ್ಗಕ್ಕೂ ಆರೋಗ್ಯಕರವಾದ ಸಿನಿಮಾ ಅಂತ ಬಣ್ಣನೆ ಮಾಡಿದರು ನಾಯಕಿ ರಶ್ಮಿಕಾಮಂದಣ್ಣಾ.

ಸಕಲೇಶಪುರ ಅದೃಷ್ಟದ ಜಾಗ. ಅದೇ ಜಾಗದಲ್ಲಿ ನಿರ್ದೇಶಕರು ಕತೆ ಹೇಳಿದಾಗ ಇಷ್ಟವಾಯಿತು. ಬಿಡುಗಡೆ ದಿನಾಂಕ ನನ್ನ ಬದುಕನ್ನು ಬದಲಾಯಿಸಿದ ದಿನವಾಗಿದೆ. ಪ್ರಸೂತಿ ವೈದ್ಯನಾಗಿ ತರಲೆ, ಕೀಟಲೆ ಮಾಡುತ್ತಾ ಮದುವೆ ನಂತರ ಭಾವನೆಗಳಿಗೆ ಬೆಲೆ ಕೊಡುತ್ತನೆ. ಸಾಮಾಜಿಕ ಜಾಲತಾಣದಲ್ಲಿ ನೋಡಿರುವ ಹುಡುಗಿಯನ್ನು ನೋಡಲು ಬಂದಾಗ ಆಗುವ ಫಜೀತಿಯನ್ನು ನಿರ್ದೇಶಕರು ಚೆನ್ನಾಗಿ ತೋರಿಸಿದ್ದಾರೆ. ಬಾಂದವ್ಯ, ಸಂಭಂದಗಳು ದೂರ ಹೋದಂತೆ ಏನೆಲ್ಲಾ ಆಗುತ್ತೆ ಎಂಬುದನ್ನು ಬೋರ್ ಆಗದಂತೆ ಸನ್ನಿವೇಶಗಳನ್ನು ಸೃಷ್ಟಸಿರುವುದು ಧನಾತ್ಮಕ ಅಂಶವಾಗಿದೆ. ರಶ್ಮಿಕಾರವರು ಮುಂದಿನವಾರ ಇರುವ ದೃಶ್ಯಕ್ಕೆ ಒಂದು ವಾರದ ಮುಂಚೆ ಸಂಭಾಷಣೆಗಳನ್ನು ಕರಗತ ಮಾಡಿಕೊಳ್ಳುತ್ತಿದ್ದರು. ನಿರ್ಮಾಪಕರ ಸಿನಿಮಾ ಅಭಿರುಚಿ ಚೆನ್ನಾಗಿರುವುದರಿಂದಲೇ ಇದು ತೆರೆಗೆ ಬರುವ ಮುನ್ನವೆ ಮೂರು ಚಿತ್ರಗಳನ್ನು ನಿರ್ಮಾಣ ಮಾಡುತ್ತಿದ್ದಾರೆ. ಇದೇ ತಿಂಗಳು ಮುಂಗಾರುಮಳೆ, ಶೈಲು, ಶ್ರಾವಣ ಸುಬ್ರಮಣ , ಮಳೆಯಲಿಜೊತೆಯಲಿ , ಸುಂದರಾಂಗಜಾಣ ತೆರೆಕಂಡು ಹಣ ಮಾಡಿತ್ತು. ಭಯ, ಖುಷಿ ಎರಡು ಒಟ್ಟಿಗೆ ಆಗುತ್ತಿದೆ ಅಂತ ಗಣೇಶ್ ಹೇಳಿದರು.

ನಿರ್ದೇಶಕರು ಕತೆ ಹೇಳಿದ್ದು, ಸಿನಿಮಾ ನೋಡಿದಂತೆ ಆಯಿತು. ಮೈಸೂರಿನಲ್ಲಿ ಉದ್ಯಮ ನಡೆಸುತ್ತಿರುವ ನಾನು ನಿರ್ಮಾಣ ಮಾಡುತ್ತೇನೆಂದು ಕನಸಿನಲ್ಲಿ ಎಣ ಸಿರಲಿಲ್ಲ. ಕನ್ನಡದ ಅಭಿಮಾನ, ಹಾಸ್ಯ ಪ್ರಿಯಾನಾಗಿದ್ದರಿಂದ ಕತೆಯ ತಿರುಳು ಇಷ್ಟವಾಗಿದೆ. ಬಿಡುಗಡೆ ಒಂದು ವಾರದ ನಂತರ ಅಮೇರಿಕಾದ 72 ಕೇಂದ್ರಗಳು, ಹಾಗು ಮತ್ತಷ್ಟು ದೇಶಗಳಲ್ಲಿ ಜನರಿಗೆ ತೋರಿಸಲು ಯೋಜನೆ ಹಾಕಲಾಗಿದೆ. ಆದ್ಯಾತ್ಮದಲ್ಲಿ ಒಲವು ಇರುವುದರಿಂದ ವೈಕುಂಠ ಏಕಾದಶಿ ಅಂದೇ ಬರಲಿದೆ. ಇದರಿಂದ ನನಗೂ ಅದೃಷ್ಟವೆಂದು ಭಾವಿಸಿದ್ದೇನೆ. ಸಂವಿಧಾನದಲ್ಲಿ ಪಿ.ಹೆಚ್‍ಡಿ ಮಾಡುತ್ತಿರುವುದಾಗಿ ಟಿ.ಆರ್.ಚಂದ್ರಶೇಖರ್ ಸಾಧನೆಗಳನ್ನು ನೆನಪು ಮಾಡಿಕೊಂಡರು.

ಭಾರತದಲ್ಲಿ ಮೊದಲಬಾರಿ ಹ್ಯಾರಿ ಅಲೆಕ್ಸ್ 560 ಕ್ಯಾಮಾರದಲ್ಲಿ ಇಟಲಿಯ ಸುಂದರ ತಾಣಗಳನ್ನು ಸೆರೆಹಿಡಿಯಲಾಗಿದೆ. ನಿರ್ಮಾಪಕರು ಧಾರಳವಾಗಿ ಖರ್ಚು ಮಾಡಿದ್ದರಿಂದಲೇ ಚಿತ್ರವು ಚೆನ್ನಾಗಿ ಮೂಡಿಬಂದಿದೆ ಎಂದು ಹೊಗಳಿದ್ದು ಛಾಯಗ್ರಾಹಕ ಸಂತೋಷ್‍ರೈಪಾತಾಜೆ. ನಾಯಕಿ ಅಜ್ಜಿಯಾಗಿ ಕಾಣ ಸಿಕೊಂಡಿರುವ ವಿಜಯಲಕ್ಷೀ ಅವಕಾಶ ನೀಡಿದ್ದಕ್ಕೆ ಥ್ಯಾಂಕ್ಸ್ ಎನ್ನುವಲ್ಲಿಗೆ ಎಲ್ಲರ ಮಾತುಗಳಿಗೆ ವಿರಾಮ ಹಾಕಲಾಯಿತು.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿಸರ್ಕಲ್ ಡಾಟ್ ಇನ್ ನ್ಯೂಸ್
-27/12/17\ವರ್ಷದ ಕೊನೆವಾರದಂದು ಜನರಿಗೆ ಚಮಕ್
‘ಚಮಕ್’ ಶೀರ್ಷಿಕೆ ಹೇಳುವಂತೆ ಸಿನಿಮಾದಲ್ಲಿ ಹಲವು ಚಮಕ್‍ಗಳು ನಡೆದಿವೆ. ಬಿಡುಗಡೆ ಸನಿಹಕ್ಕೆ ಬರುತ್ತಿರುವಂತೆ ತಂಡವು ಹಲವು ಮಾಹಿತಿಗಳನ್ನು ಬಿಚ್ಚಿಡುತ್ತಿದ್ದಾರೆ. ಚಿತ್ರದ ಸನ್ನಿವೇಶದಲ್ಲಿ ನಾಯಕ ಗಣೇಶ್ ಮತ್ತು ನಾಯಕಿ ರಶ್ಮಿಕಾಮಂದಣ್ಣ ಮದುವೆ ಬಳಿಕ ಪ್ರಯಾಣ ಮಾಡುವ ಸನ್ನಿವೇಶದಲ್ಲಿ ಒಂದು ಹಾಡು ಬರುತ್ತದೆ. ಆ ಹಾಡಿನಲ್ಲಿ ಒಂದೂವರೆ ನಿಮಿಷಕಾಲ ಸ್ಕೂಬಾ ಡೈವಿಂಗ್ ಮಾಡಿದ್ದಾರೆ. ಇದನ್ನು ಇಟಲಿಯಲ್ಲಿ ದೃಶ್ಯವನ್ನು ಚಿತ್ರೀಕರಿಸಲು ಯೋಜನೆ ಹಾಕಲಾಗಿತ್ತು. ಅಲ್ಲಿ ಸೂಕ್ತ ರಕ್ಷಣೆ ಸಿಗದ ಕಾರಣ ಮುರುಡೇಶ್ವರ ಬಳಿ ಇರುವ ನೇತ್ರಾಣ ದ್ವೀಪದಲ್ಲಿ ಸೆರೆಹಿಡಿಯಲಾಗಿದೆ. ಹಾಗಂತ ಇಬ್ಬರು ಏಕ್‍ದಂ ನೀರಿಗೆ ಇಳಿದಿಲ್ಲ. ತರಬೇತುದಾರ ಗಣೇಶ್ ಒಂದು ದಿನ ತರಭೇತಿ ನೀಡಿದ ಬಳಿಕ ಆಳಕ್ಕೆ ಇಳಿಸಿದ್ದಾರೆ. ಪ್ರಾರಂಭದಲ್ಲಿ ಭಯಗೊಂಡವರು ಒಳಗೆ ಹೋದ ಮೇಲೆ ಯಶಸ್ವಿಯಾಗಿ ಕೆಲಸ ಮುಗಿಸಿಕೊಟ್ಟು, ಕೆಲಹೊತ್ತು ಅದೇ ಜಾಗದಲ್ಲಿ ಆಟವಾಡಿದ್ದಾರೆ. ಅರ್ಧ ದಿವಸದಲ್ಲಿ ಚಿತ್ರೀಕರಣ ಮುಗಿಸಲು ಯೋಜನೆ ಹಾಕಲಾಗಿತ್ತು. ಆದರೆ ಒಂದು ದಿನ ಸಮಯ ತೆಗೆದುಕೊಂಡರೂ ಚೆನ್ನಾಗಿ ಬಂದಿದೆಯಂತೆ.

ಅಂಡರ್‍ವಾಟರ್‍ನಲ್ಲಿ ಡಿಪಿ5 ಕ್ಯಾಮಾರ ಬಳಸಿ ಸೆರೆಹಿಡಿಯಲಾಗಿದೆ. ಇದಲ್ಲದೆ ಇವರಿಬ್ಬರ ಫಸ್ಟ್‍ನೈಟ್ ಟೀಸರ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವುದು ಚಿತ್ರಕ್ಕೆ ಪ್ಲಸ್ ಪಾಯಿಂಟ್ ಆಗಿದೆ. ಸಿಂಪಲ್ ಖ್ಯಾತಿಯ ಸುನಿ ರಚಿಸಿ ನಿರ್ದೇಶನ ಮಾಡಿರುವ ಸಿನಿಮಾವನ್ನು ಕ್ರಿಸ್ಟಲ್ ಪಾರ್ಕ್ ಬ್ಯಾನರ್‍ನಲ್ಲಿ ಚಂದ್ರಶೇಖರ್ ನಿರ್ಮಾಣ ಮಾಡಿರುವ ಚಿತ್ರಕ್ಕೆ ಯುಎ ಪ್ರಮಾಣಪತ್ರ ಸಿಕ್ಕಿದೆ.
-13/12/17
ಸ್ಯಾಂಡಲ್‍ವುಡ್ ಕಾರ್ಯಕ್ರಮದಲ್ಲಿ ಟಾಲಿವುಡ್ ಸಮ್ಮೋಹಿನಿ
ನಾಲ್ಕು ಸುದ್ದಿಗೋಷ್ಟಿಗಳನ್ನು ಮುಗಿಸಿಕೊಂಡು ‘ಚಮಕ್’ ಚಿತ್ರದ ಹಾಡುಗಳ ಅನಾವರಣ ಕಾರ್ಯಕ್ರಮಕ್ಕೆ ದೂರದ ಸ್ಥಳಕ್ಕೆ ತಲುಪುವಲ್ಲಿಗೆ ಪತ್ರಕರ್ತರು ಹೈರಾಣಾಗಿದ್ದರು. ಜೀವನದಲ್ಲಿ ಯಾರಿಗೂ ಚಮಕ್ ಮಾಡಿಲ್ಲ. ಗಣೇಶ್‍ರಿಗೆ ಕತೆಯನ್ನು ಹೇಳಿದಾಗ ಚಮಕ್ ಚಮಕ್ ತಿರುವುಗಳು ಇರುವುದರಿಂದ ಇದನ್ನೆ ಇಡಬಹುದು ಅಂತ ಸಲಹೆ ನೀಡಿದರು. ಗೈನಾಲಾಜಿಸ್ಟ್ ವೈದ್ಯನಾಗಿ ಮಾತಾಡೋ ಶ್ರೀರಾಮನಾಗಿ ಕಾಣ ಸಿಕೊಂಡಿದ್ದಾರೆ. ಐದು ಸಾಹಿತಿಗಳಿಗೆ ಅವಕಾಶ ಮಾಡಿಕೊಡಲಾಗಿದೆ ಎಂದು ಎಲ್ಲರನ್ನು ಪರಿಚಯಿಸಿದರು ನಿರ್ದೇಶಕ ಸುನಿ. ಹೆಜ್ಜೆ ಹಾಕುತ್ತಾ ವೇದಿಕೆಗೆ ಆಗಮಿಸಿದ ಗಣೇಶ್ ಇಲ್ಲಿಯವರೆವಿಗೂ ಮಳೆ ಯಾವಾಗ ನೋಡ್ತೀರಾ ಅಂತ ಕೇಳುತ್ತಿದ್ದರು. ಈಗ ಲೈಟ್ ಯಾವಾಗ ಆಫ್ ಮಾಡ್ತಿರಾ ಎಂದು ಕೇಳುತ್ತಾರೆ. ಕಾಮಿಡಿ ಟೈಮ್ 1000 ಕಂತುಗಳಲ್ಲಿ ಸಾಕಷ್ಟು ಜನರಿಗೆ ಚಮಕ್ ಮಾಡಿದ್ದೇನೆ. ಹರೆ ಹರೆ ಇಷ್ಟದ ಹಾಡು ಎಂದರು. ಕಿರಿಕ್ ಹೇಗಿದೆಯೋ ಅದೇ ರೀತಿ ಚಿತ್ರ ಇರಲಿದೆ. ಹೊಸ ಪ್ರಯತ್ನ ನೋಡಿ ಹರಿಸಿ ಎಂದು ಹುಸಿನಗೆ ಬೀಸುತ್ತಾ ಹೇಳಿದ್ದು ನಾಯಕಿ ರಶ್ಮಿಕಾಮಂದಣ್ಣಾ.

ನಂತರ ತೆಲುಗು ನವನಟ ವಿಜಯ್ ದೇವಕೊಂಡ ವೇದಿಕಗೆ ಬಂದಾಗ ಕಾರ್ಯಕ್ರಮಕ್ಕೆ ಮೆರುಗು ಬಂತು. ಅವರು ಒಂದು ವಿಡಿಯೋ ಹಾಡನ್ನು ಅನಾವರಣಗೊಳಿಸಿ ಭಾರತದ ಕ್ರಿಕೆಟ್ ತಂಡದಲ್ಲಿ ಕರ್ನಾಟಕದವರು ಹೆಚ್ಚಿಗೆ ಇದ್ದರು. ರಜನಿಕಾಂತ್, ಐಶ್ವರ್ಯರಾಯ್, ಅನುಷ್ಕಾಶೆಟ್ಟಿ ಇವರೆಲ್ಲರೂ ಇಲ್ಲಿನವರೆ ಆಗಿರುವುದು ಖುಷಿ ನೀಡಿದೆ. ಮಫ್ತಿ ಟ್ರೈಲರ್ ನೋಡಿದಾಗ ಇಂತಹುದೆ ಪಾತ್ರ ಮಾಡಬೇಕಂಬ ಬಯಕೆ ಇದೆ. ಮುಂಗಾರು ಮಳೆ ಡಿಸೆಂಬರ್ 29ರಂದು ತೆರೆಕಂಡಿರುವುದಾಗಿ ಕೇಳಿದ್ದೇನೆ. ಇದು ಸಹ ಅದೇ ದಿನಾಂಕದಂದು ಬಿಡುಗಡೆಯಾಗಲಿದೆ ತಂಡಕ್ಕೆ ಒಳ್ಳೆಯದಾಗಲಿ ಎಂದಾಗ ಶಿಳ್ಳೆ, ಜೈಕಾರ ಕೇಳಿಬಂತು. ಸಂಗೀತ ನಿರ್ದೇಶಕ ಜ್ಯೂಡೋಸ್ಯಾಂಡಿ ಲೈವ್ ಆಗಿ ಒಂದು ಹಾಡನ್ನು ಪ್ರದರ್ಶಸಿದರೆ, ಪ್ರತಿಭೆ ದೀಪಾನಾಯ್ಡು ಬೆಲ್ಲಿ ನೃತ್ಯ ಮನಮೋಹಕವಾಗಿತ್ತು. ನಿರ್ಮಾಪಕ ಟಿ.ಆರ್.ಚಂದ್ರಶೇಖರ್ ಮಾತನಾಡುವ ಗೋಜಿಗೆ ಹೋಗಲಿಲ್ಲ. ಇದೇ ಸಂದರ್ಭದಲ್ಲಿ ಪದ್ಮಶ್ರೀ ಪುರಸ್ಕ್ರತೆ ಸುಪ್ರಿಅಜ್ಜಿಯನ್ನು ಗೌರವಿಸಲಾಯಿತು.
-05/12/17
For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore