HOME
CINEMA NEWS
GALLERY
TV NEWS
REVIEWS
CONTACT US
ಬ್ರಹ್ಮಚಾರಿಟ್ರೆöÊಲರ್ ಬಿಡುಗಡೆ
‘ಬ್ಯಹ್ಮಚಾರಿ’ ಹಾಸ್ಯಚಿತ್ರದಟೀಸರ್‌ಜೂನ್‌ದಲ್ಲಿಅನಾವರಣಗೊಂಡಿತ್ತು. ಈಗ ಪಾತ್ರಗಳ ಪರಿಚಯ ಮಾಡಿಸಲು ತುಣುಕುಗಳು ಬಿಡುಗಡೆಯಾಗಿದೆ. ಏನು ತಪ್ಪು ಮಾಡದೆಇದ್ದವನಿಗೆ ಕಷ್ಟಗಳು ಎದುರಾಗುತ್ತವೆ. ಪ್ರಸಕ್ತ ಸಮಾಜದಲ್ಲಿ ಹಲವರಿಗೆ ವೈಯಕ್ತಿಕ ಸಮಸ್ಯೆಗಳನ್ನು ಇತರರೊಂದಿಗೆ ಹಂಚಿಕೊಳ್ಳುವುದು ಮುಜುಗರ ಅನಿಸುತ್ತದೆ.ಇದರಿಂದಅAತರಾಳದಲ್ಲಿ ವೇದನೆಅನುಭವಿಸುತ್ತಿರುತ್ತಾರೆ.ಇವುಗಳ ಪರಿಹಾರಕ್ಕೆ ಹುಡುಕಿಕೊಂಡು ಹೋಗುವಾಗ ಬೇರೊಂದು ವಿಷಯದ ಪಯಣವು ತೆರೆದುಕೊಳ್ಳುತ್ತದೆ.ಸನ್ನಿವೇಶಗಳು ಕಾಮಿಡಿಯಾಗಿರುವುದರಿಂದಎಲ್ಲರೂ ನೋಡಬಹುದಾದದಚಿತ್ರವಾಗಿದೆ.

ನೀನಾಸಂ ಸತೀಶ್ ನಾಯಕ.ಅದಿತಿಪ್ರಭುದೇವ ನಾಯಕಿ.ಇವರೊಂದಿಗೆದತ್ತಣ್ಣ, ಅಚ್ಯುತಕುಮಾರ್, ಶಿವರಾಜ್.ಕೆ.ಆರ್.ಪೇಟೆ, ಅಶೋಕ್, ದತ್ತಣ್ಣ, ಪದ್ಮಜರಾವ್ ಮುಂತಾದವರು ಅಭಿನಯಿಸಿದ್ದಾರೆ. ಚಂದ್ರಮೋಹನ್‌ಆಕ್ಷನ್‌ಕಟ್ ಹೇಳಿದ್ದಾರೆ.ಚೇತನ್‌ಕುಮಾರ್ ಸಾಹಿತ್ಯದ ‘ಹಿಡಿಕೋತಡ್‌ಕೋ’ ಡ್ಯುಯೆಟ್‌ಗೀತೆಯು ಹಿಟ್‌ಆಗಿರುವುದುತಂಡಕ್ಕೆ ಸಂತಸತAದಿದೆ.ಪಾತ್ರಧಾರಿಗಳಿಗೆ ನಗು ತರಿಸದೆ, ನೋಡುಗರಿಗೆ ಬಾಯಿ ತೆರೆಯುವಂತೆ ಮಾಡುತ್ತದೆ.ಮೂರು ಹಾಡುಗಳಿಗೆ ಧರ್ಮವಿಶ್ ಸಂಗೀತ, ಸಂಕಲನ ಅರ್ಜುನ್, ನೃತ್ಯ ಮುರಳಿ, ಕಲೆ ಹೊಸಮನೆಮೂರ್ತಿ-ಪ್ರಕಾಶ್‌ಅವರದಾಗಿದೆ.ಅನುಭವದ ಪ್ರೇರಣೆಯಿಂದ ನಿರ್ಮಾಪಕಉದಯ್.ಕೆ.ಮೆಹ್ತಾಕತೆ ಬರೆದಿದ್ದಾರೆ.ಟ್ರೆöÊಲರ್ ಬಿಡುಗಡೆ ಸಮಾರಂಭಕ್ಕೆರಿಶಬ್‌ಶೆಟ್ಟಿ, ಭರಾಟೆ ನಿರ್ಮಾಪಕ ಸುಪ್ರಿತ್, ಮಹೇಶ್‌ಕುಮಾರ್ ಮುಂತಾದವರು ಹಾಜರಿದ್ದು ಶುಭ ಹಾರೈಸಿದರು.
ಚಿತ್ರಗಳು: ಕೆ.ಎನ್.ನಾಗೇಶ್‌ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
4/11/19ಬ್ರಹ್ಮಚಾರಿಟ್ರೈಲರ್ ಬಿಡುಗಡೆ
ಕಲಾವಿದರ ಸಂಘದಲ್ಲಿ ‘ಬ್ಯಹ್ಮಚಾರಿ’ ಟ್ರೈಲರ್‍ನ್ನುಅನಾವರಣಗೊಂಡಿತು. ಚಿತ್ರಕ್ಕೆ ಶುಭಹಾರೈಸಲು ಬಂದವರಲ್ಲಿ ಬಹುತೇಕಗಣ್ಯರುಬ್ರಹ್ಮಚಾರಿಗಳು ಎಂಬುದುವಿಶೇಷ. ಅದರಲ್ಲೂ ಹಿರಿಯ ಬ್ರಹ್ಮಚಾರಿ ಹಾಗೂ ಸೈಕಲಾಜಿ ಪಾತ್ರ ಮಾಡಿರುವದತ್ತಣ್ಣ ಮಾತನಾಡಿ ಸಿನಿಮಾಕ್ಕೆ ಹಣ ಹೂಡಲು ಬರುವವರು ಮೊದಲುಉದಯ್ ಬಳಿ ಸಲಹೆ ಪಡೆದು ಬಂದರೆದಾರಿ ಸುಲಭವಾಗುತ್ತದೆ. ಮಧ್ಯದತಲೆಮಾರಿನಲ್ಲಿಅದ್ಬುತನಿರ್ಮಾಪಕ.ನಿರ್ದೇಶಕರುಕಾಮಿಕಲ್ ಸನ್ನಿವೇಶಗಳನ್ನು ಚೆನ್ನಾಗಿ ಸೃಷ್ಟಿಸುತ್ತಾರೆಂದುಎಲ್ಲರನ್ನು ಹೊಗಳುತ್ತಾ ಹೆಚ್ಚು ಸಮಯತೆಗೆದುಕೊಂಡರು.ಒಳ್ಳೆ ವಿಷಯವನ್ನುಕಲ್ಪನೆರೀತಿಯಲ್ಲಿ ಹೇಳುವ ಪ್ರಯತ್ನ ಮಾಡಲಾಗಿದೆ. ಶೀರ್ಷಿಕೆ, ಕೆಳಗಡೆ ತಾಳಿ, 100 ಪರ್ಸೆಂಟ್ ವರ್ಜಿನ್‍ಕುತೂಹಲಕ್ಕೆಉತ್ತರಚಿತ್ರಮಂದಿರದಲ್ಲಿ ಸಿಗುತ್ತದೆ ಎಂದುನಿರ್ದೇಶಕಚಂದ್ರಮೋಹನ್ ಹೇಳಿದರು.

ಈ ಕತೆಗೆಸತೀಶ್‍ನೀನಾಸಂಅವರನ್ನು ಹೂರತುಪಡಿಸಿ ಬೇರೆಯಾರು ಸೂಟ್ ಆಗುವುದಿಲ್ಲವೆಂದು ಅನಿಸಿತು.ಎಲ್ಲಾಕಲಾವಿದರುಚೆನ್ನಾಗಿ ಅಭಿನಯಿಸಿದ್ದಾರೆ. ಹತ್ತು ವರ್ಷ ಕಳೆದಿದ್ದು ಗೊತ್ತಾಗಲೇಇಲ್ಲಎಂದು ನಿರ್ಮಾಪಕಉದಯ್.ಕೆ.ಮೆಹ್ತಾಹೇಳಿದರು. ಪತ್ನಿಯಾಗಿ ಅಭಿನಯಿಸಿರುವ ಅದಿತಿಪ್ರಭುದೇವ ಹೆಚ್ಚೇನು ಹೇಳಲಿಲ್ಲ.

ಮಾದ್ಯಮದ ಪ್ರೋತ್ಸಾಹದಿಂದಇಲ್ಲಿಯವರೆಗೂ ಬಂದಿದ್ದೇನೆ. ಪ್ರತಿಯೊಬ್ಬರುಒಂದು ಹಂತದಲ್ಲಿಅವರೇ ಮುಖ್ಯರಾಗಿರುತ್ತಾರೆ. ಅಯೋಗ್ಯ ಹಿಟ್‍ಆದಸಂದರ್ಭದಲ್ಲಿ ಮಾಸ್ ಹೀರೋ ಆಗಿ ಗುರುತಿಸಿಕೊಂಡಿದ್ದೆ.ಆ ಸಮಯದಲ್ಲಿ ನಿರ್ದೇಶಕರಕತೆಯನ್ನುಅಸಡ್ಡೆಯಿಂದ ಕೇಳಲು ಶುರುಮಾಡಿದೆ.ಅವರುಒಂದು ಲೈನ್ ಶುರು ಮಾಡಿದಾಗ ನಗುಬಂತು.ನಂತರಒಂದೊಂದು ಸನ್ನಿವೇಶವನ್ನು ಹೇಳುವಾಗ ನಗು ತಾನಾಗೆ ಬರುತ್ತಿತ್ತು.ಚಿತ್ರೀಕರಣ ಸಂದರ್ಭದಲ್ಲಿಯಾರಿಗಾದರೂ ಬೇಜಾರು ಮಾಡಿದ್ದರೆ, ಅಭಿಮಾನಿಗಳಿಗೆ ಸೆಲ್ಪಿ ತೆಗೆದುಕೊಳ್ಳಲು ನಿರಾಕರಿಸಿದ್ದಾರೆ, ಇಂದುಕ್ಷಮೆಕೋರುತ್ತೇನೆಎಂದುನಾಯಕ ನೀನಾಸಂಸತೀಶ್ ಮೈಕ್ ಕೆಳಗಿಟ್ಟರು.

ಸಂಗೀತ ನಿರ್ದೇಶಕಧರ್ಮವಿಶ್, ಗೆಳಯನಾಗಿ ಕಾಣಿಸಿಕೊಂಡಿರುವ ಶಿವರಾಜ್.ಕೆ.ಆರ್.ಪೇಟೆ, ಅಶೋಕ್‍ಚಿತ್ರದಕುರಿತಂತೆ ಮಾಹಿತಿ ಹಂಚಿಕೊಂಡರು. ಬಹದ್ದೂರ್‍ಚೇತನ್, ಮಹೇಶ್‍ಕುಮಾರ್, ದೇವರಾಜಪೂಜಾರಿ,ಚಂದ್ರಶೇಖರಬಂಡಿಯಪ್ಪ, ನಂದೀಶ್, ಶಿವತೇಜಸ್, ಮುಂತಾದವರುಹಾಜರಿದ್ದರು.
ಸಿನಿ ಸರ್ಕಲ್.ಇನ್ ನ್ಯೂಸ್
21/06/19
For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore