HOME
CINEMA NEWS
GALLERY
TV NEWS
REVIEWS
CONTACT US
ತಾಯಿ-ಮಗನ ಕಥೆ ಭಾವನೆಗಳ ವ್ಯಥೆ
ಅದು ಮದ್ಯಮ ವರ್ಗದ ಕುಟುಂಬ. ಅಪ್ಪ ಸರ್ಕಾರಿ ಉದ್ಯೋಗಿ. ಕಿರಿ ಮಗ ಟೆಕ್ಕಿ, ಹಿರಿಯವ ನಿರುದ್ಯೋಗಿ. ಸಮಯ ಕಳೆಯಲು ಗೆಳಯರೊಂದಿಗೆ ಸಿಗರೇಟು, ಕುಡಿತದ ದಾಸನಾಗಿರುತ್ತಾನೆ. ಮೊದಲೇ ಕಾರ್ಪೋರೇಶನ್ ಶಾಲೆಯಲ್ಲಿ ಓದಿರುವುದರಿಂದ ಇಂಗ್ಲೀಷ್ ಕಬ್ಬಿಣದ ಕಡಲೆಯಾಗಿರುತ್ತದೆ. ಒಂದೇ ಮಾತಲ್ಲಿ ಹೇಳುವುದಾದರೆ ಆತ ಪ್ರತಿಭಾವಂತ. ಐವತ್ತು ಸಾವಿರ ಸಂಬಳ ಸಿಕ್ಕರೂ ಹೋಗದೆ ಬಿಲ್ಡರ್ ಆಗುವ ಕನಸು. ಅದನ್ನು ಈಡೇರಿಸಿಕೊಳ್ಳುತ್ತಾನಾ? ಎಂಬುದು ‘ಬೃಹಸ್ಪತಿ’ ಚಿತ್ರದ ಒಂದು ಏಳೆಯ ಕತೆಯಾಗಿದೆ. ಬುದ್ದಿವಂತ ನಿರುದ್ಯೋಗಿಯ ಕತೆಯನ್ನು ಸುತ್ತಿ ಬಳಸದೆ ನೇರವಾಗಿ ಹೇಳುವ ಪ್ರಯತ್ನ ಮಾಡಲಾಗಿದೆ. ಅಮ್ಮ-ಮಗನ ಬಾಂದವ್ಯ, ಅಪ್ಪನ ಸಿಟ್ಟು, ತಮ್ಮನ ಮುಗ್ದತೆ ಇವೆಲ್ಲವು ಆರಂಭದಲ್ಲಿ ಬಂದು ಹೋಗುತ್ತದೆ. ಇವೆಲ್ಲವು ಕ್ಲಾಸ್ ಆದರೆ ವಿರಾಮದ ನಂತರ ಸನ್ನಿವೇಶಗಳು ಮಾಸ್ ರೂಪ ಪಡೆದುಕೊಳ್ಳುತ್ತದೆ. ಪ್ರೇಕ್ಷಕನಿಗೆ ನಿರೂಪಣೆ ಇನ್ನಷ್ಟು ಫಾಸ್ಟ್ ಇದ್ದರೆ ಚೆನ್ನಾಗಿರುತ್ತಿತ್ತು ಅನಿಸುವುದುಂಟು. ತಾಯಿ ತೀರಿಕೊಂಡಾಗ ಅದರ ಅಪವಾದ ನಾಯಕನ ಮೇಲೆ ಬರುತ್ತದೆ. ಅಲ್ಲಿಂದ ದುಖ:ಭರಿತನಾಗಿ ಬದುಕನ್ನು ನೋಡಲು ಪ್ರಯತ್ನಿಸಿದಾಗ ಏನೆಲ್ಲಾ ಘಟನೆಗಳು ಎದುರಾಗುತ್ತವೆ ಎಂಬುದನ್ನು ಸಿನಿಮಾ ನೋಡುವುದು ಒಳಿತು.

ತಮಿಳಿನ ವಿಐಪಿ ಚಿತ್ರವನ್ನು ನಿರ್ದೇಶಕ ನಂದಕಿಶೋರ್ ಪಾತ್ರಗಳ ಹೆಸರು, ಲೋಕೇಶ್ ಹೂರತುಪಡಿಸಿದರೆ ಮಿಕ್ಕೆಲ್ಲಾ ಅಂಶಗಳನ್ನು ಶ್ರದೆಯಿಂದ ಯಥಾವತ್ತಾಗಿ ಭಟ್ಟಿ ಇಳಿಸಿದ್ದಾರೆ. ಮನೋರಂಜನ್‍ರವಿಚಂದ್ರನ್‍ಗೆ ಎರಡನೆ ಚಿತ್ರವಾಗಿರುವುದರಿಂದ ಅಭಿನಯದಲ್ಲಿ ಸುಧಾರಣೆ ಕಂಡುಬಂದಿದೆ. ಅದರಲ್ಲೂ ಮೂರು ನಿಮಿಷ ಎದುರಾಳಿಗೆ ಹೇಳುವ ಡೈಲಾಗ್ ಎಲ್ಲರನ್ನು ಮೆಚ್ಚಿಸುತ್ತದೆ. ಆಮದು ನಾಯಕಿ ಮಿಸ್ಟಿಚಕ್ರವರ್ತಿಗೆ ಹೆಚ್ಚು ಸ್ಕೋಪ್ ಸಿಕ್ಕಿಲ್ಲ. ತಂದೆಯಾಗಿ ಸಾಯಿಕುಮಾರ್, ತಾಯಿ ಪಾತ್ರದಲ್ಲಿ ಸಿತಾರ ಪಾತ್ರಕ್ಕೆ ಜೀವ ತುಂಬಿದ್ದಾರೆ. ಸೀರಿಯಸ್ ಆಗಿ ಹೋಗುವಾಗ ನಗಿಸಲಂತಲೇ ಸಾಧುಕೋಕಿಲ, ಕುರಿಪ್ರತಾಪ್ ದೃಶ್ಯಗಳು ಬರುತ್ತವೆ. ಉಳಿದಂತೆ ಅವಿನಾಶ್, ಪ್ರಕಾಶ್‍ಬೆಳವಾಡಿ, ದರ್ಶ್ ನಟನೆ ಇದೆ. ಹರಿಕೃಷ್ಣ ಸಂಗೀತ ಮೋಜು ಮಾಡಿಲ್ಲ. ಸತ್ಯಹೆಗಡೆ ಕ್ಯಾಮಾರ ಕೆಲಸ ಕೆಲವು ಕಡೆ ಕಣ ್ಣಗೆ ತಂಪು ಕೊಡುತ್ತದೆ. ಒಟ್ಟಾರೆ ಒಮ್ಮೆ ನೋಡಲು ಅಡ್ಡಿಯಿಲ್ಲ.
ನಿರ್ಮಾಪಕರು: ರಾಕ್‍ಲೈನ್ ವೆಂಕಟೇಶ್
-6/01/18

ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಹೊಗಳಿಕೆ ಮಾತುಗಳು
ರಾಕ್‍ಲೈನ್ ವೆಂಕಟೇಶ್ ನಿರ್ಮಾಣದ, ರವಿಚಂದ್ರನ್ ಹಿರಿಯ ಪುತ್ರ ಮನೋರಂಜನ್‍ರವಿಚಂದ್ರನ್ ಎರಡನೆ ಚಿತ್ರ ‘ಬೃಹಸ್ಪತಿ’ ಚಿತ್ರದ ಧ್ವನಿಸಾಂದ್ರಿಕೆಯು ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಸರಳವಾಗಿ ಅನಾವರಣಗೊಂಡಿತು. ಪ್ರಾರಂಭದಲ್ಲಿ ಖಳನಾಯಕ ತಾರಕ್‍ಅಪ್ಪಯ್ಯ ಮತ್ತು ನಾಯಕ ಇಬ್ಬರು ಲೈವ್ ಆಗಿ ಕಂಗಣ ್ಣನಿಂದ ಮಾತನಾಡುವುದನ್ನು ವೇದಿಕೆಯಲ್ಲಿ ಪ್ರದರ್ಶಿಸಿದರು. ಇದರಲ್ಲಿ ವಿಶೇಷತೆ ಇದೆ. ಸುಮಾರು ಮೂರು ಪುಟಗಳ ಸಂಭಾಷಣೆಯನ್ನು ನಿಲ್ಲಿಸದೆ ಸುಲಲಿತವಾಗಿ ನಾಯಕ ಹೇಳಿದ್ದು ಎಲ್ಲರ ಅಚ್ಚರಿಗೆ ಕಾರಣವಾಗಿತ್ತು. ಶಾಸಕ ಮುನಿರತ್ನ ಮಾತನಾಡಿ ಅವರ ಪ್ರತಿಭೆಯನ್ನು ಇಂದೇ ನೋಡಿದ್ದು. ಅಪ್ಪನನ್ನು ಮೀರಿಸಿದ್ದೀರಾ. ಒಳ್ಳೆ ಭವಿಷ್ಯ ಇದೆ. ಚಿತ್ರರಂಗಕ್ಕೆ ಮಾಸ್ ಹೀರೋ ಸಿಕ್ಕಿದ್ದಾರೆ. ರವಿಚಂದ್ರನ್ ನೇರವಾಗಿ ಮಾತನಾಡಿ ತೊಂದರೆ ಕೊಟ್ಟಿದ್ದಾರೆ. ಚಿತ್ರರಂಗ ಬೆಳೆಯಬೇಕು ಎಂಬುದು ನಮ್ಮಲ್ಲರ ಅಭಿಮತವಾಗಿದೆ ಎಂದರು. ಶೀರ್ಷಿಕೆಯನ್ನು ಯೋಗರಾಜಭಟ್, ಶ್ರೀಕಾಂತ್ ನೀಡಿದ್ದಕ್ಕೆ ಥ್ಯಾಂಕ್ಸ್. ಸೆಟ್‍ನಲ್ಲಿ ಅವರು ಹೇಳಿದ ಡೈಲಾಗ್ ನೋಡಿ ಎಲ್ಲರು ಚಪ್ಪಾಳೆ ತಟ್ಟಿದ್ದರು. ಮುಂದಿನ ವರ್ಷ ಬಿಡುಗಡೆ ಮಾಡುವ ಯೋಜನೆ ಇದೆ ಎಂಬುದು ನಿರ್ಮಾಪಕರ ಮಾತಾಗಿತ್ತು.

ಹೆಚ್ಚು ಸಮಯ ತೆಗೆದುಕೊಳ್ಳುತ್ತೇನೆಂದು ಅನುಮತಿ ಪಡೆದುಕೊಂಡ ಜಗ್ಗೇಶ್ ಮೊದಲು ಹೇಳಿದ್ದು ಮನೋರಂಜನ್ ಸೂಪರ್ ಮಗ. ಮುಂದೆ ಸರ್ಕಸ್ ಕಂಪೆನಿಯ ಕತೆಯನ್ನು ಹೇಳಿ, ರವಿಚಂದ್ರನ್‍ರವರು ಬೇಟೆಯಾಡುವ ಮಗನಂತೆ ಬೆಳೆಸಿದ್ದಾರೆ. ಯಾರು ಸ್ವತ: ಶ್ರಮ ಪಡುತ್ತಾರೋ ಅವರೇ ನಿಜವಾದ ಕಲಾವಿದರಾಗುತ್ತಾರೆಂದು ರಣಧೀರ ಚಿತ್ರೀಕರಣದ ಘಟನೆಗಳನ್ನು ನೆನಪಿಸಿಕೊಂಂಡು ಎಲ್ಲರನ್ನು ನಗಿಸಿದರು. ಆಗಿನ ಕಾಲಕ್ಕೆ ಒಂದು ಕೋಟಿ ಅಂದರೆ ಸಾಮಾನ್ಯದ ಮಾತಲ್ಲ. ಚಿತ್ರರಂಗದ ಶೋಮ್ಯಾನ್ ಅಂತ ಛಾಪು ಮೂಡಿಸಿದ್ದರು. ಇಂದು ಇಲ್ಲಿಗೆ ಬಂದಿರುವುದು ಬಾಡಿ ಚಾರ್ಜ್ ಆಗಿದೆ. ರವಿರವರು ಹಲವು ಸುಂದರ ನಾಯಕಿಯರನ್ನು ದೇಣ ಗೆ ನೀಡಿದ್ದಾರೆ. ಮಾದ್ಯಮದವರು ಸೇರಿ ಇಂತಹ ನಟರನ್ನು ಮೇಲಕ್ಕೆ ಎತ್ತಬೇಕು. ನಮ್ಮ ಕನ್ನಡ, ಚಿತ್ರರಂಗ, ಮನೆ ಉಳಿಯಬೇಕೆಂಬ ಸ್ವಾರ್ಥ ನನ್ನಲ್ಲಿದೆ. ನಂತರ ಬೇರೆ ಭಾಷೆ ಅಂತ ದೀರ್ಘ ಕಾಲದ ಮಾತಿಗೆ ವಿರಾಮ ಹಾಕಿದರು.

ಮನೋರಂಜನ್ ಹೈಬ್ರೀಡ್ ಬೀಜ ಆಗಿದ್ದಾರೆ. ಫಲವತ್ತಾದ ಮಣ್ಣು ಅಂದರೆ ರಾಕ್‍ಲೈನ್‍ವೆಂಕಟೇಶ್, ಬಿತ್ತಿರೋದು ನಂದಕಿಶೋರ್, ಕಲರ್ ಆಗಿ ಮಾಡಿದ್ದು ಹರಿಕೃಷ್ಣ, ಬೆಳಕು ನೀಡಿರುವುದು ಸತ್ಯಹೆಗಡೆ, ನಾನೊಂದು ಸಣ್ಣ ಹುಳುವಾಗಿ ನಟಿಸಿದ್ದೇನೆ. ಇದು ಮರವಾಗಿ ಬೆಳೆಯಲು ಎಲ್ಲರ ಸಹಕಾರಬೇಕು ಅಂತಾರೆ ಸಾಧುಕೋಕಿಲ. ನಿರ್ಮಾಪಕರು ಇಂತಹ ಪಾತ್ರ ಮಾಡಬೇಕೆಂದು ಕರೆಸಿದಾಗ ಭಯವಿತ್ತು. ತಮಿಳಿನಲ್ಲಿ ಧನುಷ್‍ರವರ 25ನೇ ಸಿನಿಮಾವಾಗಿದೆ. ಸಾಧು ಸರ್ ಪ್ರೋತ್ಸಾಹ ಮಾಡಿದ್ದರಿಂದ ಉದ್ದದ ಡೈಲಾಗ್ ಹೇಳಲು ಸಹಕಾರಿ ಆಯ್ತು ಅಂತ ಚಿತ್ರೀಕರಣದ ಅನುಭವಗಳನ್ನು ಹಂಚಿಕೊಂಡಿದ್ದು ಮನೋರಂಜನ್‍ರವಿಚಂದ್ರನ್. ರಾಕ್‍ಲೈನ್ ಸರ್ ನನಗೆ ಗಾಡ್‍ಫಾದರ್ ಇದ್ದಂತೆ. ಅಭಿನಯ ಹೇಗೆ ಮಾಡಬೇಕೆಂದು ನಂದಕಿಶೋರ್ ಅವರಿಂದ ಕಲಿತಿದ್ದೇನೆ ಎಂದು ಅವರಿಗೆ ಗೌರವ ಸಲ್ಲಿಸಿದರು ಸೋದರ ವಿಕ್ರಂರವಿಚಂದ್ರನ್. ರಣಧೀರ ಚಿತ್ರದಲ್ಲಿ ಒಳ್ಳೆ ಪಾತ್ರ ನೀಡಿದ್ದಾರೆಂದು ಅಪ್ಪ ಹೇಳಿದ್ದು ನೆನಪು ಇದೆ. ಅವರ ಋಣ ತೀರಿಸಲು ರವಿ ಸರ್ ಮಗನ ಚಿತ್ರಕ್ಕೆ ಪ್ರೀತಿಯಿಂದ ಆಕ್ಷನ್ ಕಟ್ ಹೇಳಿದ್ದು ಖುಷಿ ತಂದಿದೆ ಎಂದರು ನಿರ್ದೇಶಕ ನಂದಕಿಶಶೋರ್. ರವಿಚಂದ್ರನ್ ಪತ್ನಿ, ಪುತ್ರಿ, ಸಿನಿಪಂಡಿತರು ಸುಂದರ ಸಮಾರಂಭದಲ್ಲಿ ಉಪಸ್ತಿತರಿದ್ದರು.
-16/12/17

For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore