HOME
CINEMA NEWS
GALLERY
TV NEWS
REVIEWS
CONTACT US
ಬಚ್ಚನ್ ನಿರ್ಮಾಪಕರ ಬ್ರಹ್ಮಚಾರಿ
ನೀನಾಸಂ ಸತೀಶ್ ‘ಬ್ರಹ್ಮಚಾರಿ’ ಚಿತ್ರದಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ. ಉಪ ಶೀರ್ಷಿಕೆಯಲ್ಲಿ ನೂರು ಪರ್ಸೆಂಟ್ ವರ್ಜಿನ್ ಅಂತ ಹೇಳಿಕೊಂಡಿದ್ದಾರೆ. ಕತೆಯಲ್ಲಿ ನಾಯಕನ ಪಾತ್ರಧಾರಿ ಬ್ರಹ್ಮಚಾರಿಯಾದಾಗ ಆತನ ಬದುಕಿನಲ್ಲಿ ಹಲವು ರೀತಿಯ ಪಯಣಗಳು ಬರುತ್ತವೆ. ಅವೆಲ್ಲಾವನ್ನು ಎದುರಿಸುತ್ತಾ ಹೇಗೆ ಯಶಸ್ಸು ಕಾಣುತ್ತಾನೆಂಬುದು ಒಂದು ಏಳೆಯ ಸಾರಾಂಶವಾಗಿದೆ. ತಾರಗಣದಲ್ಲಿ ದತ್ತಣ್ಣ, ಅಶೋಕ್, ಶಿವರಾಜ್.ಕೆ.ಆರ್.ಪೇಟೆ ಮುಂತಾದವರು ನಟಿಸುತ್ತಿದ್ದಾರೆ. ಮೊದಲ ಹಂತದ ಚಿತ್ರೀಕರಣವು ಬೆಂಗಳೂರಿನಲ್ಲಿ ನಡೆಯಲಿದೆ. ಚಂದ್ರಮೋಹನ್ ನಿರ್ದೇಶಕರಾಗಿ ಮೂರನೆ ಅನುಭವ. ಲೈಬ್ರೆರಿಯನ್ ಪಾತ್ರದಲ್ಲಿ ಅದಿತಿಪ್ರಭುದೇವ ನಾಯಕಿ. ನಾಲ್ಕು ಹಾಡುಗಳಿಗೆ ಧರ್ಮವಿಶ್ ಸಂಗೀತವಿದೆ. ಛಾಯಾಗ್ರಹಣ ರವಿ.ವಿ, ಸಂಕಲನ ಅರ್ಜುನ್, ನೃತ್ಯ ಮುರಳಿ ನಿರ್ವಹಿಸುತ್ತಿದ್ದಾರೆ. ಬಚ್ಚನ್ ನಿರ್ಮಾಣ ಮಾಡಿರುವ ಉದಯ್‍ಮೆಹತಾ ಕತೆ ಬರೆದು ಎರಡನೆ ಬಾರಿ ನೀನಾಸಂಸತೀಶ್ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಟೈಟಲ್‍ನಂತೆ ಗಣೇಶನ ಸನ್ನಿದಿಯಲ್ಲಿ ಮೊದಲ ದೃಶ್ಯದ ಚಿತ್ರೀಕರಣ ನಡೆಯಿತು.
ಸಿನಿ ಸರ್ಕಲ್.ಇನ್ ನ್ಯೂಸ್
15/04/19
For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore