HOME
CINEMA NEWS
GALLERY
TV NEWS
REVIEWS
CONTACT US
ಬಿಂದಾಸ್ ಆಗಿ ಇದ್ದರೆ ಗೂಗ್ಲಿಯಂತೆ ಡ್ಯಾನ್ಸ್ ಮಾಡಬಹುದು
ಮಕ್ಕಳಿಗೆ ಪೋಷಕರಾದವರು ಕೇವಲ ಶಿಕ್ಷಣದ ಬಗ್ಗೆ ಮಹತ್ವ ಕೊಡದೆ, ಅವರ ಪ್ರತಿಭೆಗೆ ಪ್ರೋತ್ಸಾಹ ನೀಡಿದಲ್ಲಿ ಅವರು ಸಮಾಜದಲ್ಲಿ ಉನ್ನತ ಸ್ಥಾನಕ್ಕೆ ಹೋಗುತ್ತಾರೆಂದು ‘ಬಿಂದಾಸ್ ಗೂಗ್ಲಿ’ ಚಿತ್ರದಲ್ಲಿ ಸಂದೇಶದ ಮೂಲಕ ಹೇಳುವ ಪ್ರಯತ್ನ ಮಾಡಿದ್ದಾರೆ. ಡ್ಯಾನ್ಸ್ ಕುರಿತ ಕತೆಯಾಗಿದ್ದರಿಂದ ಕಲಾವಿದರಿಂದ ಹೆಚ್ಚು ನೃತ್ಯ ಮಾಡಿಸಿದ್ದಾರೆ. ಅದೊಂದು ಗುರುಕುಲ ಕಾಲೇಜು. ಅಲ್ಲಿನ ವಾತವರಣ ಕೇವಲ ಶಿಕ್ಷಣಕ್ಕೆ ಮಾತ್ರ ಮೀಸಲು. ಕೆಲವು ವಿದ್ಯಾರ್ಥಿಗಳು ಡ್ಯಾನ್ಸ್ ಬಗ್ಗೆ ಆಸಕ್ತಿ ಇದ್ದು, ತಾವೆ ಚಿತ್ರೀಕರಿಸಿ ಯುಟ್ಯೂಬ್‍ನಲ್ಲಿ ಅಪ್‍ಲೋಡ್ ಮಾಡುತ್ತಾರೆ. ಇದು ಪ್ರಿನ್ಸಿಪಾಲ್‍ಗೆ ತಿಳಿದು ಎಚ್ಚರಿಕೆ ನೀಡುತ್ತಾರೆ. ಮುಂದೆ ಇದೇ ಪ್ರಿನ್ಸಿಪಾಲ್‍ರಿಂದ ಪ್ರೋತ್ಸಾಹ ಸಿಗುತ್ತದೆ. ಅವರು ಈ ರೀತಿ ಬದಲಾಗಲು ಬಲವಾದ ಕಾರಣಗಳಾದರೂ ಏನು? ಸ್ಪರ್ಧೆಯಲ್ಲಿ ಜಯಶಾಲಿಯಾಗುತ್ತಾರಾ ಎಂಬುದನ್ನು ನಾವು ಹೇಳುವ ಬದಲು ಚಿತ್ರ ನೋಡಿದಾಗ ಎಲ್ಲವು ತಿಳಿಯುತ್ತದೆ. ಕಾಲೇಜು ಅಂಗಳದಲ್ಲಿ ನಡೆಯುವ ತರಲೆ, ತುಂಟಾಟಗಳನ್ನು ಚೆಂದವಾಗಿ ತೋರಿಸಲಾಗಿದೆ.

ನಿರ್ಮಾಪಕರ ಎರಡನೆ ಪುತ್ರ ಆಕಾಶ್‍ವಿಜಯ್‍ಅನ್ವೇಕರ್ ಡ್ಯಾನ್ಸ್, ಫೈಟ್, ಅಭಿನಯ ಎಲ್ಲದರಲ್ಲೂ ಅದ್ಬುತವಾಗಿ ಅಭಿನಯಿಸಿರುವುದು ಚಂದನವನಕ್ಕೆ ಭರವಸೆಯ ನಟ ಸಿಕ್ಕಂತೆ ಆಗಿದೆ. ವಿಶೇಷ ಮುಖ್ಯ ಪಾತ್ರದಲ್ಲಿ ಧರ್ಮಕೀರ್ತಿರಾಜ್ ಕೋಚ್ ಆಗಿ ಪಾತ್ರಕ್ಕೆ ಮೋಸ ಮಾಡಿಲ್ಲ. ನಾಯಕಿ ಶಿಲ್ಪ ಬಿಂದಾಸ್ ಆಗಿ ಗ್ಲಾಮ್ ಲುಕ್‍ನಲ್ಲಿ ಚೆಂದ ಕಾಣಿಸುತ್ತಾರೆ. ಪೋಷಕ ಪಾತ್ರದಲ್ಲಿ ನಮಿತಾರತ್ನಾಕರ್, ಮಮತಾರಾವುತ್ , ವಾಣಿಶ್ರೀ, ರಾಮಕೃಷ್ಣ, ಕುರಿರಂಗ ಸ್ಪರ್ಧೆಗೆ ಬಿದ್ದವರಂತೆ ಅಭಿನಯದಲ್ಲಿ ಮುಳುಗಿರುವುದು ಪರದೆ ಮೇಲೆ ಕಂಡುಬರುತ್ತದೆ. ಪ್ರಾರಂಭದಿಂದ ಕೊನೆವರೆಗೂ ಕಾಣಿಸಿಕೊಳ್ಳುವ ನಿರ್ಮಾಪಕ ವಿಜಯ್‍ಅನ್ವೇಕರ್ ಪ್ರಿನ್ಸಿಪಾಲ್ ಆಗಿ ಪಾತ್ರಕ್ಕೆ ಹೊಂದಿ ಕೊಂಡಿದ್ದಾರೆ. ಮೊದಲ ಚಿತ್ರವಾದರೂ ಗಂಭೀರ ಮತ್ತು ಭಾವನಾತ್ಮಕ ಸನ್ನಿವೇಶಗಳಲ್ಲಿ ಅಭಿನಯಿಸಿರುವುದು ಪ್ಲಸ್ ಪಾಯಿಂಟ್. ವಿನುಮನಸು ಸಂಗೀತದಲ್ಲಿ ಎರಡು ಹಾಡುಗಳು ಕೇಳಬಲ್. ಮಾಥ್ಯರಾಜನ್ ಛಾಯಗ್ರಹಣದಲ್ಲಿ ಕಾಲೇಜ್‍ನ್ನು ಸುಂದರವಾಗಿ ಸೆರೆಹಿಡಿಯಲಾಗಿದೆ. ಎರಡು ದೃಶ್ಯಗಳಲ್ಲಿ ಬೆಳಗಾಂ ಸಂಸದ ಬಂದು ಹೋಗುತ್ತಾರೆ. ಇದಕ್ಕೆಲ್ಲಾ ಕಲಶವಿಟ್ಟಂತೆ ಸಂತೋಷ್‍ಕುಮಾರ್ ಕತೆ, ನಿರ್ದೇಶನ ಹೈಲೈಟ್ ಎನ್ನಬಹುದು. ಒಮ್ಮೆ ಬಿಂದಾಸ್ ಆಗಿ ಸಿನಿಮಾ ನೋಡಿದರೆ ಅಡ್ಡಿಯೇನಿಲ್ಲ.
ಸಿನಿ ಸರ್ಕಲ್.ಇನ್ ವಿಮರ್ಶೆ
***
8/09/18
ಬಿಡುಗಡೆ ಸನಿಹದಲ್ಲಿ ಬಿಂದಾಸ್ ಗೂಗ್ಲಿ
ಹೊಸಬರ ‘ಬಿಂದಾಸ್ ಗೂಗ್ಲಿ’ ಸಿನಿವಾವೊಂದು ಬೆಳಗಾಂ, ದಾಂಡೇಲಿ ತಟಗಳಲ್ಲಿ ಚಿತ್ರೀಕರಣ ನಡೆಸಿದೆ. ನೃತ್ಯಕ್ಕೆ ಸಂಬಂದಪಟ್ಟ ಕತೆಯು ಕಾಲೇಜು ಅಂಗಳದಲ್ಲಿ ನಡೆಯಲಿದೆ. ಜೀವನದಲ್ಲಿ ಶಿಕ್ಷಣ ಎಷ್ಟು ಮುಖ್ಯವಾಗಿರುತ್ತೋ, ಅಷ್ಟೇ ಪ್ರಾಮುಖ್ಯತೆಯನ್ನು ಕಲೆಯ ಮೇಲೂ ನೀಡಬೇಕು. ಅದನ್ನು ಕಲಿತಲ್ಲಿ ನಮ್ಮನ್ನು ಎಲ್ಲಿಗೋ ಕರೆದುಕೊಂಡು ಹೋಗುತ್ತದೆ. ವಿದ್ಯಾರ್ಥಿಗಳು ಡ್ಯಾನ್ಸ್ ಮಾಡುವುದನ್ನು ನೋಡಿದ ಪ್ರಾಂಶುಪಾಲರು ಕೋಚ್ ಮೂಲಕ ಅವರಿಗೆ ಸೂಕ್ತ ತರಭೇತಿ ಕೊಡಿಸಿ, ಚಾಂಪಿಯನ್ ಆಗುವಂತೆ ಮಾಡುವುದು ಒಂದು ಏಳೆಯ ಸಾರಾಂಶವಾಗಿದೆ. ಇದರ ಜೊತೆಗೆ ಗೆಳತನ, ಪ್ರೀತಿಯನ್ನು ತೋರಿಸುವ ಪ್ರಯತ್ನ ಮಾಡಲಾಗಿದೆ .

ನಿರ್ಮಾಪಕರ ಎರಡನೆ ಪುತ್ರ ಆಕಾಶ್‍ವಿಜಯ್‍ಅನ್ವೆಕರ್ ಓದುತ್ತಾ ಡ್ಯಾನ್ಸ್ ಸ್ಫರ್ಧೆಯಲ್ಲಿ ಭಾಗವಹಿಸಿ ಗೆಲುವನ್ನು ಕಾಣುವ ಪಾತ್ರದಲ್ಲಿ ನಾಯಕ. ಕೋಚ್ ಪಾತ್ರಕ್ಕೆ ಬಣ್ಣ ಹಚ್ಚಿರುವ ಧರ್ಮಕೀರ್ತಿರಾಜ್. ಮಗಳ ತಾಯಿಯಾಗಿ ವಿಧುವೆ, ಬದುಕಿಗಾಗಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುವ ನಮಿತಾರತ್ನಾಕರ್ ಇವರಿಗೆ ಜೋಡಿಯಾಗಿದ್ದಾರೆ. ಬೆಳಗಾವಿಯ ಶಿಲ್ಪ ನಾಯಕಿ. ಇವರೊಂದಿಗೆ ನಾಯಕನ ಪೋಷಕರಾಗಿ ಕೀರ್ತಿರಾಜ್,ವಾಣಿಶ್ರೀ. ಉಪಪ್ರಾಂಶುಪಾಲರಾಗಿ ರಾಮಕೃಷ್ಣ, ಖಳನಟನಾಗಿ ಧನ್‍ವೀರ್, ಮಮತಾರಾವುಡ್ ನಟನೆ ಇದೆ. ಬಿಟ್ಸ್ ಸೇರಿದಂತೆ ಹನ್ನೊಂದು ಹಾಡುಗಳಿಗೆ ವಿನುಮನಸು ಸಂಗೀತವಿದೆ. ಛಾಯಗ್ರಾಹಕ ಮಾಥ್ಯೂರಾಜನ್, ಸಂಕಲನ ವೆಂಕಟೇಶ್.ಯುಡಿವಿ ನಿರ್ವಹಿಸಿದ್ದಾರೆ. ಇಂಜನಿಯರ್ ಆಗಿದ್ದು ಸದ್ಯ ಒಡವೆ ವ್ಯವಹಾರ ನಡೆಸುತ್ತಿರುವ ಕುಂದಾ ನಗರಿಯ ವಿಜಯ್‍ಅನ್ವೆಕರ್ ಮಕ್ಕಳ ಪಸೆಯನ್ನು ನಿವಾರಿಸಲು ನಿರ್ಮಾಣ ಮಾಡಿರುವುದು ಅಲ್ಲದೆ ಬ್ರಿಗೇಡಿಯರ್ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಬೆಳಗಾಂ ಸಂಸದ ಸುರೇಶ್‍ಅಂಗಡಿ ಗೆಳತನದ ಸಲುವಾಗಿ ಅತಿಥಿಯಾಗಿ ಕಾಣಿಸಿಕೊಂಡಿರುವುದು ವಿಶೇಷ. ಅಪ್ಪನ ಸಹಾಯಕ್ಕೆ ಹಿರಿ ಪುತ್ರ ಭೂಷಣ್‍ವಿಜಯ್‍ಅನ್ವೆಕರ್ ಸಹ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ. ಚಿತ್ರವು ಇದೇ ಶುಕ್ರವಾರದಂದು ರಾಜ್ಯಾದ್ಯಂತ ತೆರೆಕಾಣಲಿದೆ.
4/09/18


ಬಿಂದಾಸ್ ಹಾಡುಗಳು
ಡ್ಯಾನ್ಸ್ ಆಧಾರಿತ ಕಾಲೇಜು ಅಂಗಳದಲ್ಲಿ ನಡೆಯುವ ಕತೆ ಇರುವ ‘ಬಿಂದಾಸ್ ಗೂಗ್ಲಿ’ ಸಿನಿಮಾದ ಚಿತ್ರೀಕರಣ ಬೆಳಗಾಂ, ದಾಂಡೇಲಿ ತಟಗಳಲ್ಲಿ ನಡೆದಿದೆ. ಪ್ರಚಾರದ ಮೊದಲ ಹಂತವಾಗಿ ಹನ್ನೊಂದು ಗೀತೆಗಳ ಪೈಕಿ, ಐದು ಹಾಡುಗಳ ಬಿಡುಗಡೆ ಕಾರ್ಯಕ್ರಮವು ಇತ್ತೀಚೆಗೆ ನಡೆಯಿತು. ನಿರ್ಮಾಪಕ ವಿಜಯ್‍ಅನ್ವೇಕರ್ ಮಾತನಾಡಿ ಚಿತ್ರದಲ್ಲಿ ಡಬ್ಬಲ್ ಮೀನಿಂಗ್ ಸಂಭಾಷಣೆಗಳು ಇಲ್ಲ. ಪ್ರತಿಯೊಂದು ಹಾಡಿನಲ್ಲಿ ಸಂದೇಶವನ್ನು ಹೇಳಲಾಗಿದೆ. ಬಾಕಿ ಹಾಡುಗಳನ್ನು ಬೆಳಗಾಂದಲ್ಲಿ ಅನಾವರಣಗೊಳಿಸಲಾಗುವುದು. ಮುಂಗಾರು ಮಳೆ, ಗಿರಿಕನ್ಯೆ ರೀತಿಯಂತೆ ಹಾಡುಗಳು ಸುಂದರವಾಗಿ ಮೂಡಿಬಂದಿದೆ. ಒಂದು ಪಾತ್ರಕ್ಕೆ ಬಣ್ಣ ಹಚ್ಚಿದ್ದೇನೆ. ಮುಂದೆ ಅವಕಾಶಗಳು ಒದಗಿಬಂದಲ್ಲಿ ನಟಿಸಲು ಚಿಂತೆಯಿಲ್ಲ. ಕನ್ನಡ ಜನತೆಯು ಪ್ರೋತ್ಸಾಹ ನೀಡಿದಲ್ಲಿ ಮುಂದೆಯೂ ನಿರ್ಮಾಣ ಮಾಡುವುದಾಗಿ ಹೇಳಿದರು.

ಜೀವನದಲ್ಲಿ ಶಿಕ್ಷಣ ಎಷ್ಟು ಮುಖ್ಯವಾಗಿರುತ್ತೋ, ಅಷ್ಟೇ ಪ್ರಾಮುಖ್ಯತೆಯನ್ನು ಕಲೆಯ ಮೇಲೂ ನೀಡಬೇಕು. ಅದನ್ನು ಕಲಿತಲ್ಲಿ ನಮ್ಮನ್ನು ಎಲ್ಲಿಗೋ ಕರೆದುಕೊಂಡು ಹೋಗುತ್ತದೆ. ವಿದ್ಯಾರ್ಥಿಗಳು ಡ್ಯಾನ್ಸ್ ಮಾಡುವದನ್ನು ನೋಡಿದ ಪ್ರಾಂಶುಪಾಲರು ಕೋಚ್ ಮೂಲಕ ಅವರಿಗೆ ಸೂಕ್ತ ತರಭೇತಿ ಕೊಡಿಸಿ, ಚಾಂಪಿಯನ್ ಆಗುವಂತೆ ಮಾಡುವುದು ಒಂದು ಏಳೆಯ ಸಾರಾಂಶವಾಗಿದೆ. ಇದರ ಜೊತೆಗೆ ಗೆಳತನ, ಪ್ರೀತಿಯನ್ನು ತೋರಿಸುವ ಪ್ರಯತ್ನ ಮಾಡಲಾಗಿದೆ ಎಂಬುದರ ವ್ಯಾಖ್ಯಾನವನ್ನು ನಿರ್ದೇಶಕ ಸಂತೋಷ್‍ಕುಮಾರ್ ಬಿಚ್ಚಿಟ್ಟರು.

ನಿರ್ಮಾಪಕರ ಎರಡನೆ ಪುತ್ರ ನಾಯಕ ಆಕಾಶ್‍ವಿಜಯ್‍ಅನ್ವೆಕರ್ ಓದುತ್ತಾ ಡ್ಯಾನ್ಸ್ ಸ್ಫರ್ಧೆಯಲ್ಲಿ ಭಾಗವಹಿಸಿ ಗೆಲವುವನ್ನು ಕಾಣುವ ಪಾತ್ರವೆಂದು ಎಂದು ಮುಗ್ದವಾಗಿ ಮಾತನಾಡಿದರು. ನಾಯಕಿ ಶಿಲ್ಷಾ ಹುಟ್ಟುಹಬ್ಬದಂದು ಸಿಡಿ ಬಿಡುಗಡೆ ಮಾಡಿದ್ದು ಖುಷಿ ಅಂತಾರೆ. ಕೋಚ್ ಪಾತ್ರಕ್ಕೆ ಬಣ್ಣ ಹಚ್ಚಿರುವ ಧರ್ಮಕೀರ್ತಿರಾಜ್, ಜೋಡಿಯಾಗಿರುವ ನಿಮಿತಾರತ್ನಾಕರ್ ಮತ್ತು ಮಮತಾರಾವುತ್ ಉಪಸ್ತಿತರಿದ್ದರು.

ಡಾ.ರಾಜ್‍ಕುಮಾರ್ ಪುತ್ರಿ ಲಕ್ಷೀ,ಗೋವಿಂದರಾಜ್ ಮತ್ತು ವಿಜಯರಾಘವೇಂದ್ರ, ದೊಡ್ಡಣ್ಣ, ವಿ.ಮನೋಃರ್ ಆಡಿಯೋ ಸಿಡಿ ಬಇಡುಗಡೆ ಮಾಡಿ ತಂಡಕ್ಕೆ ಶುಭ ಹಾರೈಸಿದರು. ಸಂಗೀತ ವಿನುಮನಸು, ಛಾಯಗ್ರಾಹಕ ಮಾಥ್ಯೂರಾಜ ಉಪಸ್ತಿತರಿದ್ದರು. ಬೆಳಗಾಂ ಸಂಸದ ಸುರೇಶ್‍ಅಂಗಡಿ ಗೆಳತನದ ಸಲುವಾಗಿ ಅತಿಥಿಯಾಗಿ ಕಾಣಿಸಿಕೊಂಡಿದ್ದಾರಂತೆ. ಅಪ್ಪನ ಸಹಾಯಕ್ಕೆ ಹಿರಿ ಪುತ್ರ ಭೂಷಣ್‍ವಿಜಯ್‍ಅನ್ವೆಕರ್ ಸಹ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ.
ಸಿನಿ ಸರ್ಕಲ್.ಇನ್ ನ್ಯೂಸ್
16/07/18
ಎರಡು ಚಿತ್ರಗಳ ಹೆಸರಿನ ಶೀರ್ಷಿಕೆ
ಪುನೀತ್‍ರಾಜ್‍ಕುಮಾರ್ ಅಭಿನಯದ ಬಿಂದಾಸ್, ಯಶ್ ನಟನೆಯ ಗೂಗ್ಲಿ ಚಿತ್ರಗಳು ಹಿಟ್ ಚಿತ್ರವಾಗಿತ್ತು. ಈಗ ಇವೆರಡು ಸೇರಿಕೊಂಡಿರುವ ‘ಬಿಂದಾಸ್ ಗೂಗ್ಲಿ’ ಚಿತ್ರವೊಂದು ಸದ್ದಿಲ್ಲದೆ ಬೆಳಗಾಂ, ದಾಂಡೇಲಿ ತಟಗಳಲ್ಲಿ ಚಿತ್ರೀಕರಣ ಮುಗಿಸಿ, ಎರಡು ಹಾಡುಗಳನ್ನು ಬಾಕಿ ಉಳಿಸಿಕೊಂಡು ಸುದ್ದಿ ಮಾಡಲು ತಂಡವು ಮಾದ್ಯಮದ ಎದುರು ಹಾಜರಾಗಿತ್ತು. ಎರಡನೆ ಬಾರಿ ನಿರ್ದೇಶಕನ ಕ್ಯಾಪ್ ಹಾಕಿಕೊಂಡಿರುವ ಸಂತೋಷ್‍ಕುಮಾರ್ ಹೇಳುವಂತೆ, ನೃತ್ಯಕ್ಕೆ ಸಂಬಂದಪಟ್ಟ ಕತೆಯು ಕಾಲೇಜು ಅಂಗಳದಲ್ಲಿ ನಡೆಯಲಿದೆ. ಜೀವನದಲ್ಲಿ ಶಿಕ್ಷಣ ಎಷ್ಟು ಮುಖ್ಯವಾಗಿರುತ್ತೋ, ಅಷ್ಟೇ ಪ್ರಾಮುಖ್ಯತೆಯನ್ನು ಕಲೆಯ ಮೇಲೂ ನೀಡಬೇಕು. ಅದನ್ನು ಕಲಿತಲ್ಲಿ ನಮ್ಮನ್ನು ಎಲ್ಲಿಗೋ ಕರೆದುಕೊಂಡು ಹೋಗುತ್ತದೆ. ಪ್ರತಿಭೆ ಇರುವವರು ಬಿಂದಾಸ್ ಗುಣ ಹೊಂದಿರುತ್ತಾರೆ. ವಿದ್ಯಾರ್ಥಿಗಳು ಡ್ಯಾನ್ಸ್ ಮಾಡುವದನ್ನು ನೋಡಿದ ಪ್ರಾಂಶುಪಾಲರು ಕೋಚ್ ಮೂಲಕ ಅವರಿಗೆ ಸೂಕ್ತ ತರಭೇತಿ ಕೊಡಿಸಿ, ಚಾಂಪಿಯನ್ ಆಗುವಂತೆ ಮಾಡುವುದು ಒಂದು ಏಳೆಯ ಸಾರಾಂಶವಾಗಿದೆ . ಇದರ ಜೊತೆಗೆ ಗೆಳತನ, ಪ್ರೀತಿಯನ್ನು ತೋರಿಸುವ ಪ್ರಯತ್ನ ಮಾಡಲಾಗಿದೆ ಎಂದರು.

ಕೋಚ್ ಪಾತ್ರಕ್ಕೆ ಬಣ್ಣ ಹಚ್ಚಿರುವ ಧರ್ಮಕೀರ್ತಿರಾಜ್ ಚಿತ್ರದಲ್ಲಿ ನಟಿಸಿದ್ದಕ್ಕೆ ಸಂತಸ ತಂದಿದೆ ಎನ್ನುತ್ತಾರೆ. ಇವರಿಗೆ ಜೋಡಿಯಾಗಿರುವ ನಿಮಿತಾರತ್ನಾಕರ್ ಮಗಳ ತಾಯಿಯಾಗಿ ವಿಧುವೆ, ಬದುಕಿಗಾಗಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುವ ಪಾತ್ರ. ಎಂದಷ್ಟೇ ಹೇಳಿದರು. ನಿರ್ಮಾಪಕರ ಎರಡನೆ ಪುತ್ರ ಆಕಾಶ್‍ವಿಜಯ್‍ಅನ್ವೆಕರ್ ಚಿಕ್ಕಂದಿನಿಂದಲೂ ಆಬಿನಯದ ಆಸಕ್ತಿ ಇರುವುದರಿಂದ ಅಪ್ಪನಿಗೆ ತಿಳಿದು ಆಸೆಯನ್ನು ನೆರೆವೇರಿಸಿದ್ದಾರೆ. ಅನುಪಮ್‍ಕೇರ್ ತರಭೇತಿ ಶಾಲೆಯಲ್ಲಿ ನಟನೆ ಕಲಿಯಲಾಗಿದೆ. ಓದುತ್ತಾ ಡ್ಯಾನ್ಸ್ ಸ್ಫರ್ಧೆಯಲ್ಲಿ ಭಾಗವಹಿಸಿ ಗೆಲವುವನ್ನು ಕಾಣುತ್ತೆನೆ ಎಂದು ಮುಗ್ದವಾಗಿ ಮಾತನಾಡಿದರು. ಬೆಳಗಾವಿಯ ಶಿಲ್ಪ ನಾಯಕಿಯಾಗಿ ಕಾಣಿಸಿಕೊಂಡರೆ, ರಿಯಲ್ ಅಪ್ಪ ರೀಲ್‍ನಲ್ಲಿ ಅದೇ ರೀತಿ ಇರುತ್ತಾರೆ ಮತ್ತು ಸೋದರ ಖಳನಾಯಕನಾಗಿ ಒಟ್ಟಾರೆ ಇಡೀ ಕುಟುಂಬ ತೆರೆ ಹಂಚಿದಕೊಂಡಿರುವುದು ಖುಷಿ ತಂದಿದೆ ಎಂಬುದು ಅವರ ನುಡಿ.

ಸಂಪ್ರದಾಯಸ್ಥಳಾಗಿ ಮಾಡ್ರನ್ ಹುಡುಗಿಯಾಗಲಿದ್ದು, ನಿಜಜೀವನಕ್ಕೆ ಹತ್ತಿರವಾಗಿದೆ ಎನ್ನುತ್ತಾರೆ ಮಮತರಾವುತ್. ಹುಬ್ಬಳ್ಳಿ ಹುಡುಗ ಕಾರ್ತಿಕ್ ಕಾಮಿಡಿ ರೋಲ್, ಸಾಹಿತಿ ರಂಗನಾಥ್ ಅವಕಾಶ ನೀಡಿದ್ದಕ್ಕೆ ಥ್ಯಾಂಕ್ಸ್ ಎಂದರು. ಇಂಜನಿಯರ್ ಆಗಿದ್ದು ಸದ್ಯ ಒಡವೆ ವ್ಯವಹಾರ ನಡೆಸುತ್ತಿರುವ ಕುಂದಾ ನಗರಿಯ ವಿಜಯ್‍ಅನ್ವೆಕರ್ ಮಕ್ಕಳ ಪಸೆಯನ್ನು ನಿವಾರಿಸಲು ನಿರ್ಮಾಣ ಮಾಡಿರುವುದು ಅಲ್ಲದೆ ಬ್ರಿಗೇಡಿಯರ್ ಆಗಿ ಬಣ್ಣ ಹಚ್ಚಿರುವುದಾಗಿ ಹೇಳಿಕೊಂಡರು. ಅಪ್ಪನ ಸಹಾಯಕ್ಕೆ ಹಿರಿ ಪುತ್ರ ಭೂಷಣ್‍ವಿಜಯ್‍ಅನ್ವೆಕರ್ ಸಹ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ. ನಾಲ್ಕು ಹಾಡುಗಳಿಗೆ ಸಂಗೀತ ಒದಗಿರುವ ವಿನುಮನಸು, ಛಾಯಗ್ರಾಹಕ ಮಾಥ್ಯೂರಾಜ ಬಿಂದಾಸ್ ನಿರ್ಮಾಪಕರೆಂದು ಒಕ್ಕರೂಲ ಹೊಗಳಿಕೆ ಮಾತಾಗಿತ್ತು.
ಸಿನಿ ಸರ್ಕಲ್.ಇನ್ ನ್ಯೂಸ್
15/03/18

For advertisements contact editor
K N Nagesh Kumar, Photo Journalist
Website Desined by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore