HOME
CINEMA NEWS
GALLERY
TV NEWS
REVIEWS
CONTACT US

ಬಿಂಬ ಆ ತೊಂಬತ್ತು ನಿಮಿಷಗಳು
ಹಿರಿಯ ನಿರ್ದೇಶಕ ಜಿ.ಮೂರ್ತಿ, ಅನುಭವಿ ಕಲಾವಿದ ಶ್ರೀನಿವಾಸಪ್ರಭು ಸಾರಥ್ಯದಲ್ಲಿ ‘ಬಿಂಬ’ ಚಿತ್ರವು ಸಿದ್ದಗೊಂಡಿದೆ.ಒಂದೇ ಸ್ಥಳ, ಕಲಾವಿದ, ದೃಶ್ಯಹಾಗೂ ಸಂಗೀತಇರಲಿರುವಕಾರಣಕೊಲ್ಕತ್ತಾದಲ್ಲಿರುವ ‘ಯುಆರ್‍ಎಫ್’ ಸಂಸ್ಥೆಯುಚಿತ್ರವು ಪ್ರಪಂಚದಾಖಲೆಗೆಅರ್ಹಗೊಂಡಿದೆಎಂದುಗುರುತಿಸಿದೆ. ಇದರನ್ವಯ ಪ್ರಮಾಣಪತ್ರ ವಿತರಣೆ ಮಾಡಲು ಸಂಸ್ಥೆಯ ಮುಖ್ಯ ಸಂಪಾದಕ ಸುನಿಲ್‍ಜೋಸಫ್ ಆಗಮಿಸಿದ್ದರು.ಅವರು ಮಾತನಾಡಿ ಮಲೆಯಾಳಂದಲ್ಲಿ ಒಂದೇ ಸ್ಥಳದಲ್ಲಿ 2.10 ಗಂಟೆಯ ಸಿನಿಮಾವೊಂದು ಬಂದಿದ್ದು, ಅದರಲ್ಲಿ ಹಲವು ಕಲಾವಿದರು ಕಾಣಿಸಿಕೊಂಡಿದ್ದರು.ಆದರೆಇದರಲ್ಲಿಒಬ್ಬರೆಇರುವುದರಿಂದದಾಖಲೆಗೆಅರ್ಹಗೊಂಡಿರುವುದಾಗಿ ಸಭೆಯು ನಿರ್ಣಯತೆಗೆದುಕೊಂಡಿದೆ.ಬಿಂಬ ಆ ತೊಂಬತ್ತು ನಿಮಿಷಗಳಲ್ಲಿ ಒಬ್ಬರೆ ಸಂಭಾಷಣೆ ಹೇಳುತ್ತಾ ನಟಿಸುವುದು ಸುಲುಭದ ಕೆಲಸವಲ್ಲ. ಇಂದಿನಿಂದಇವರಿಬ್ಬರುನಮ್ಮ ಸಂಸ್ಥೆಗೆ ಸೇರಿದವರಾಗಿರುತ್ತಾರೆ.ಇಂತಹ ವಿನೂತನ ಪ್ರಯತ್ನಗಳು ಮುಂದುವರೆಯಲಿ ಎಂದರು.

ವಿಗಡ ವಿಕ್ರಮರಾಯನಾಟಕ ನೋಡಿ ಮನೆಗೆ ಬಂದರೂ 15 ದಿವಸ ಕಾಡಿಸಿತು.ಶ್ರೀನಿವಾಸಪ್ರಭುಅವರೊಂದಿಗೆ ಚರ್ಚಿಸಿದಾಗ ಪ್ರಾರಂಭದಲ್ಲಿಇದುಕಷ್ಟವೆಂದು ಹೇಳಿದ್ದರು. ಹಲವು ಸುತ್ತುಚರ್ಚೆ ನಡೆಸಿ ಕೊನೆಗೆ ಸಿನಿಮಾರೂಪ ಪಡೆದುಕೊಂಡಿತು. ಛಾಯಗ್ರಾಹಕ ಪಿ.ಕೆ.ಹೆಚ್.ದಾಸ್‍ಅವರ ಕೆಲಸ ಮರೆಯುವಆಗಿಲ್ಲ. ಎಂಟು ಅಡಿ ಉದ್ದದ ಫ್ಲೂಟ್‍ದಲ್ಲಿ ಪ್ರವೀಣ್‍ಗೋಡ್ಕಂಡಿ ಸಂಗೀತ ಸಂಯೋಜಿಸಿದ್ದಾರೆಂದು ನೆನಪುಗಳನ್ನು ಜಿ.ಮೂರ್ತಿ ಬಿಚ್ಚಿಟ್ಟರು. ಒಬ್ಬನೆಕ್ಯಾಮಾರ ಮುಂದೆ 90 ನಿಮಿಷ ಇರಬೇಕಾದಕಾರಣಅಭಿನಯದಲ್ಲಿ ಹಲವು ರೀತಿಯ ಭಾವನೆಗಳನ್ನು ತೋರಿಸಿದ್ದು, 58 ಪುಟಗಳ ಡೈಲಾಗ್ ಹೇಳಿದ್ದು ಛಾಲೆಂಜಿಂಗ್‍ಆಗಿತ್ತುಎಂಬುದು ಶ್ರೀನಿವಾಸಪ್ರಭುಅನುಭವದಮಾತು.

ಅಂತರರಾಷ್ಟ್ರೀಯ ಮಟ್ಟದಲ್ಲಿ ಮೊದಲುಚಿತ್ರವು ಸದ್ದು ಮಾಡಲುಕಾರಣರಾದ ಲಹರಿವೇಲು, ಮಾಜಿ ನಾಟಕಅಕಾಡಮಿಅಧ್ಯಕ್ಷ ಡಿ.ವಿ.ರಾಜರಾಮ್ ಸಮ್ಮುಖದಲ್ಲಿತಂಡವು ಸುನಿಲ್‍ಜೋಸಫ್‍ಅವರನ್ನು ಸನ್ಮಾನಿಸಿತು. ಮೂರ್ತಿ ಪತ್ನಿ ಎಸ್.ಮಂಜುಳಾ, ಶ್ರೀನಿವಾಸಪ್ರಭುಅರ್ಧಾಂಗಿರಂಜಿನಿಪ್ರಭು ಸಹ ನಿರ್ಮಾಪಕರಾಗಿರುವಚಿತ್ರವುಸದ್ಯದಲ್ಲೆ ಬಿಡುಗಡೆಯಾಗುವ ಸಾದ್ಯತೆಇದೆ.
ಸಿನಿ ಸರ್ಕಲ್.ಇನ್ ನ್ಯೂಸ್
1/09/19

ಶಾಟ್,ಕಲಾವಿದ,ಸ್ಥಳ ಮತ್ತು ಸಂಗೀತ ಎಲ್ಲವು ಒಂದೇ
ಸಿಂಗಲ್ ಶಾಟ್‍ನಲ್ಲಿ ಚಿತ್ರಗಳು ಬಂದಿರುವುದು ಕೇಳಿದ್ದೇವೆ. ಆದರೆ ಒಂದೇ ಸ್ಥಳ, ಕಲಾವಿದ, ಸ್ಥಳ ಹಾಗೂ ಸಂಗೀತ ಇರಲಿರುವ ಸಿನಿಮಾ ಇದೆ ಎಂದರೆ ಅದನ್ನು ನಂಬಲೇ ಬೇಕಾಗಿದೆ. ಅದಕ್ಕೆ ‘ಬಿಂಬ’ ಚಿತ್ರ ಸಾಕ್ಷಿಯಾಗಿದೆ. ಸಾಮಿಯ ಸ್ವಗತ ಎನ್ನುವ ನಾಟಕದಲ್ಲಿ ಹಿರಿಯ ರಂಗಭೂಮಿ ನಟ ಶ್ರೀನಿವಾಸಪ್ರಭು ಒಂದೇ ಪಾತ್ರದಲ್ಲಿ ನಟಿಸಿದ್ದರು. ಅವರು ಹೇಳುವಂತೆ ಸ್ವಾತಂತ್ರಪೂರ್ವ ದಿನಗಳಲ್ಲಿ ಕವಿ ಬ್ರಹ್ಮಚಾರಿ ಸಂಸರು (ಸ್ವಾಮಿ ವೆಂಕಟಾದ್ರಿ ಅಯ್ಯರ್) ಅವರಿಗೊಂದು ಮಾನಸಿಕೆ ಖಾಯಿಲೆ ಇತ್ತು. ಬ್ರಟಿಷರ ಬಗ್ಗೆ ಸಿಟ್ಟು, ಅಸಹ್ಯ ಪಟ್ಟುಕೊಂಡು, ಅವರು ಎಲ್ಲಿ ನನ್ನನ್ನು ಬಂದಿಸುತ್ತಾರೋ, ಶಿಕ್ಷೆ ನೀಡುತ್ತಾರೋ ಎಂದು ತುಮುಲದಲ್ಲಿ ಒಬ್ಬರೆ ಕೊಠಡಿಯಲ್ಲಿ ವೇದನೆ ಅನುಭವಿಸುತ್ತಿದ್ದರು. ಯಾರೇ ಬಂದು ಸಮಧಾನ ಪಡಿಸುತ್ತಿದ್ದರೂ ಕಠೋರ ಮಾತುಗಳಿಂದ ನಿಂದಿಸಿ ಕಳುಹಿಸುತ್ತಿದ್ದರು. ಕೊನೆಗೆ ಯಮಗಂಡಕಾಲ ಮುಗಿಯಲು 90 ನಿಮಿಷ ನಂತರ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಅದಕ್ಕಾಗಿ ಆ 90 ನಿಮಿಷಗಳೆಂದು ಅಡಿಬರಹದಲ್ಲಿ ಬರೆಯಲಾಗಿದ್ದು, ಅದರ ಸಮಯದಲ್ಲಿ ಅವರ ಇಡೀ ಬದುಕನ್ನು ಕನ್ನಡಿ ಮುಂದೆ ನಿಂತು ಸಿಂಹಾವಲೋಕನ ಮಾಡಿಕೊಳ್ಳುವ ಪಾತ್ರವನ್ನು ಮಾಡಲಾಗಿದೆ. ನಾಲ್ಕು ಧ್ವನಿಗಳು ಹೂರತುಪಡಿಸಿ, ಇಡೀ ಸಿನಿಮಾದಲ್ಲಿ 1.43 ಗಂಟೆ ಅಭಿನಯಿಸಿದ್ದು ಖುಷಿ, ಛಾಲೆಜಿಂಗ್ ಅನಿಸಿತ್ತು ಎಂದು ರೋಚಕ ಅನುಭವಗಳನ್ನು ತೆರೆದಿಟ್ಟರು.

ಇದೊಂದು ತಂತ್ರಜ್ಘರ ಸಿನಿಮಾವೆಂದು ಬಣ್ಣಿಸಿಕೊಳ್ಳುತ್ತಾರೆ ನಿರ್ಮಾಪಕ ಮತ್ತು ನಿರ್ದೇಶಕ ಜಿ.ಮೂರ್ತಿ. ನಾಟಕ ನೋಡಿ ಮನೆಗೆ ಬಂದರೂ 15 ದಿವಸ ಕಾಡಿಸಿತು. ಶ್ರೀನಿವಾಸಪ್ರಭು ಅವರೊಂದಿಗೆ ಚರ್ಚಿಸಿದಾಗ ಪ್ರಾರಂಭದಲ್ಲಿ ಇದು ಕಷ್ಟವೆಂದು ಹೇಳಿದ್ದರು. ಹಲವು ಸುತ್ತು ಚರ್ಚೆ ನಡೆಸಿ ಕೊನೆಗೆ ಸಿನಿಮಾರೂಪ ಪಡೆದುಕೊಂಡಿತು. ಛಾಯಗ್ರಾಹಕ ಪಿ.ಕೆ.ಹೆಚ್.ದಾಸ್ ಅವರ ಕೆಲಸ ಮರೆಯುವ ಆಗಿಲ್ಲ. ಗಿನ್ನಿಸ್ ದಾಖಲೆಗೆ ಅರ್ಜಿ ಸಲ್ಲಿಸಲು ದಾಖಲೆಗಳನ್ನು ಸಿದ್ದಪಡಿಸಲಾಗಿದೆ. ಸೌಂಡ್, ಎಫೆಕ್ಟ್ಸ್, ನಟ, ಛಾಯಗ್ರಹಣ ಇವೆಲ್ಲವುಗಳಿಂದ ಬಿಂಬ ಆಗಿದೆ. ಸದ್ಯ ಹಿನ್ನಲೆಸಂಗೀತ ನಡೆಯುತ್ತಿದ್ದು, ಇನ್ನೆರೆಡು ತಿಂಗಳಲ್ಲಿ ಬಿಡುಗಡೆ ಮಾಡಲು ಯೋಜನೆ ಹಾಕಿಕೊಂಡಿದೆ ಎಂದರು. ಮೂರ್ತಿ ಪತ್ನಿ ಎಸ್.ಮಂಜುಳಾ, ಶ್ರೀನಿವಾಸಪ್ರಭು ಅರ್ಧಾಂಗಿ ರಂಜಿನಿಪ್ರಭು ಸಹ ನಿರ್ಮಾಪಕರಾಗಿದ್ದಾರೆ.
ಸಿನಿ ಸರ್ಕಲ್.ಇನ್ ನ್ಯೂಸ್
18/07/18
For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore